ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ತನ್ನದು ಕೊರೊನಾ ನೆಗೆಟಿವ್ ಎಂದು ಘೋಷಿಸಿದ ಹಫೀಜ್ ವಿರುದ್ಧ ಪಿಸಿಬಿ ಕೆಂಡ

Pcb Miffed With Mohammad Hafeez For Taking Private Covid-19 Test

ಪಾಕಿಸ್ತಾನ ಕ್ರಿಕೆಟ್‌ನ ಹಿರಿಯ ಕ್ರಿಕೆಟಿಗ ಮೊಹಮದ್ ಹಫೀಜ್ ವೈಯಕ್ತಿಕವಾಗಿ ಕುಟುಂಬ ಸಹಿತ ಕೊರೊನಾ ಪರೀಕ್ಷೆಯನ್ನು ನಡೆಸಿದಾಗ ನೆಗೆಟಿವ್ ಬಂದಿದೆ ಎಂದು ಬುಧವಾರ ಹಫೀಜ್ ಟ್ವಿಟ್ಟರ್‌ನಲ್ಲಿ ಲ್ಯಾಬ್‌ನ ವರದಿ ಸಹಿತ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದರು. ಪಾಕಿಸ್ತಾನದ ಈ ಹಿರಿಯ ಆಟಗಾರನ ನಡೆಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಕೆಂಡ ಕಾರಿದೆ.

ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮುಖ್ಯಸ್ಥ ವಾಸಿಮ್ ಖಾನ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು ವೈಯಕ್ತಿಕವಾಗಿ ಪರೀಕ್ಷೆಗೆ ಒಳಪಡುವ ಮುನ್ನ ಮಂಡಳಿಯನ್ನು ಸಂಪರ್ಕಿಸಬೇಕಿತ್ತು. ಆತನ ನಿರ್ಧಾರದಿಂದ ಅಸಮಾಧಾನ ಉಂಟಾಗಿದೆ ಎಂದು ವಾಸಿಮ್ ಖಾನ್ ಹೇಳಿದ್ದಾರೆ.

ಪಿಸಿಬಿ ವರದಿಯಲ್ಲಿ ಕೊರೊನಾ ಪಾಸಿಟಿವ್: ತನ್ನದು ನೆಗೆಟಿವ್ ಎಂದು ಘೋಷಿಸಿಕೊಂಡ ಮೊಹಮ್ಮದ್ ಹಫೀಜ್ಪಿಸಿಬಿ ವರದಿಯಲ್ಲಿ ಕೊರೊನಾ ಪಾಸಿಟಿವ್: ತನ್ನದು ನೆಗೆಟಿವ್ ಎಂದು ಘೋಷಿಸಿಕೊಂಡ ಮೊಹಮ್ಮದ್ ಹಫೀಜ್

ನಾನು ಮೊಹಮದ್ ಹಫೀಜ್ ಜೊತೆಗೆ ಈ ಬಗ್ಗೆ ಮಾತನಾಡಿದ್ದೇನೆ, ನನ್ನ ಅಸಮಾಧಾನವನ್ನು ಆತನೊಂದಿಗೆ ವ್ಯಕ್ತಪಡಿಸಿದ್ದೇನೆ, ಇಡೀ ಪ್ರಕರಣವನ್ನು ಆತ ಸೂಕ್ತ ರೀತಿಯಲ್ಲಿ ನಿಭಾಯಿಸಿಲ್ಲ ಎಂದು ವಾಸಿಮ್ ಖಾನ್ ಯುಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ನೀತಿ ನಿಂಹಿತೆಯ ಪ್ರಜಾರ ಆತ ಪಿಸಿಬಿಯ ಜೊತೆಗೆ ಮೊದಲು ಮಾತುಕತೆಯನ್ನು ನಡೆಸಬೇಕಿತ್ತು ಎಂದಿದ್ದಾರೆ.

ವೈಯಕ್ತಿಕ ನೆಲೆಯಲ್ಲಿ ಹಫೀಜ್‌ಗೆ ಪರೀಕ್ಷೆಗೆ ಒಳಗಾಗುವ ಹಕ್ಕಿ ಇದೆ. ಆದರೆ ಅದರ ಅದಕ್ಕೂ ಮುನ್ನ ಆತ ನಮ್ಮೊಂದಿಗೆ ಮಾತನಾಡಕೊಳ್ಳಬೇಕಿತ್ತು. ಯಾಕೆಂದರೆ ಅದರಿಮದಾಗಿ ನಮಗೆ ತೊಂದರೆಯುಂಟಾಗಿದೆ ಎಂದು ವಾಸಿಮ್ ಖಾನ್ ಹೇಳಿದ್ದಾರೆ. ಈ ವಿಚಾರವಾಗಿ ಶಿಸ್ತಿಕ್ರಮ ತೆಗೆದುಕೊಳ್ಳುವ ಬಗ್ಗೆ ಚಿಂತಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಐಪಿಎಲ್‌ಗಾಗಿ ಏಷ್ಯಾಕಪ್ ರದ್ದಾಗಲ್ಲ, ಶ್ರೀಲಂಕಾ ಇಲ್ಲವೇ ಯುಎಇನಲ್ಲಿ ಟೂರ್ನಿ: ಪಿಸಿಬಿ ಮುಖ್ಯಸ್ಥಐಪಿಎಲ್‌ಗಾಗಿ ಏಷ್ಯಾಕಪ್ ರದ್ದಾಗಲ್ಲ, ಶ್ರೀಲಂಕಾ ಇಲ್ಲವೇ ಯುಎಇನಲ್ಲಿ ಟೂರ್ನಿ: ಪಿಸಿಬಿ ಮುಖ್ಯಸ್ಥ

ಇಂಗ್ಲೆಂಡ್ ಪ್ರವಾಸಕ್ಕೆ ಮುನ್ನ ಪಾಕಿಸ್ತಾನದ ಕ್ರಿಕೆಟಿಗರಿಗೆ ಕೊರೊನಾ ಪರೀಕ್ಷೆಯನ್ನು ನಡೆಸಲಾಗಿತ್ತು. ಇದರಲ್ಲಿ ಪಾಕಿಸ್ತಾನ ಕ್ರಿಕೆಟ್‌ನ ಹತ್ತು ಆಟಗಾರರು ಕೊರೊನಾ ವೈರಸ್‌ಗೆ ತುತ್ತಾಗಿದ್ದಾರೆ ಎಂದು ವರದಿ ಬಂದಿತ್ತು. ಆ ಬಳಿಕ ಪಾಸಿಟಿವ್ ಎಂದು ವರದಿ ಬಂದಿದ್ದ ಮೊಹಮದ್ ಹಫೀಸ್ ವೈಯಕ್ತಿಕವಾಗಿ ಕೊರೊನಾ ವೈರಸ್ ಪರೀಕ್ಷೆಯನ್ನು ನಡೆಸಿದಾಗ ನೆಗೆಟಿವ್ ಎಂದು ಬಂದೆ ಎಂದು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಲ್ಯಾಬ್ ವರದಿಯ ಸಹಿತ ಘೋಷಿಸಿದ್ದರು.

Story first published: Thursday, June 25, 2020, 15:19 [IST]
Other articles published on Jun 25, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X