ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ICC ಕ್ಯಾಲೆಂಡರ್‌ನಲ್ಲಿ IPLಗೆ ಪ್ರತ್ಯೇಕ ಕಾಲಾವಕಾಶ ನೀಡುವಂತೆ ಬಿಸಿಸಿಐ ಮನವಿ: ಪಾಕ್‌ನ ಅಸಮಾಧಾನ

BCCI vs PCB

ಐಪಿಎಲ್ 2023ರ ಸೀಸನ್‌ಗೆ ಐಸಿಸಿ ಕ್ಯಾಲೆಂಡರ್ ಅವಧಿಯಲ್ಲಿ ಪ್ರತ್ಯೇಕ ಕಾಲಾವಕಾಶ ನೀಡುವಂತೆ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಯೋಜನೆಯನ್ನು ಹೊಂದಿರುವ ಬೆನ್ನಲ್ಲೇ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಸಮಾಧಾನ ವ್ಯಕ್ತಪಡಿಸಿದೆ.

ಬಿಸಿಸಿಐ ವಿಶ್ವದ ಇತರೆ ಕ್ರಿಕೆಟ್ ಬೋರ್ಡ್‌ಗಳ ಜೊತೆ ಹಾಗೂ ಐಸಿಸಿ ಜೊತೆಯಲ್ಲಿ ಮಾತುಕತೆ ನಡೆಸುತ್ತಿದ್ದು, ಐಪಿಎಲ್ 2023ರ ಸೀಸನ್‌ ವೇಳೆಯಲ್ಲಿ ಇತರೆ ಯಾವುದೇ ಸರಣಿಗಳು ನಡೆಯದಂತೆ ಪ್ರತ್ಯೇಕ ಸಮಯವನ್ನು ಕೇಳಲಾಗಿದೆ. ಆದ್ರೆ ಈ ಕುರಿತು ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ತಗಾದೆ ತೆಗೆದಿದೆ.

ಅಂತರಾಷ್ಟ್ರೀಯ ಕ್ರಿಕೆಟ್‌ ಸರಣಿಗಳ ಮೇಲೆ ಪರಿಣಾಮ ಬೀರುತ್ತದೆ: ಪಿಸಿಬಿ

ಅಂತರಾಷ್ಟ್ರೀಯ ಕ್ರಿಕೆಟ್‌ ಸರಣಿಗಳ ಮೇಲೆ ಪರಿಣಾಮ ಬೀರುತ್ತದೆ: ಪಿಸಿಬಿ

ಐಸಿಸಿ ಕ್ಯಾಲೆಂಡರ್‌ನಲ್ಲಿ ಐಪಿಎಲ್‌ಗೆ ಪ್ರತ್ಯೇಕ ವಿಂಡೋ ನೀಡುವುದರಲ್ಲಿ ಅಂತರಾಷ್ಟ್ರೀಯ ಸರಣಿಗಳ ಮೇಲೆ ಪರಿಣಾಮ ಬೀರುವುದು ಎಂಬುದು ಪಿಸಿಬಿ ವಾದವಾಗಿದೆ. ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಈ ಕುರಿತಾಗಿ ಟ್ವೀಟ್ ಮಾಡಿದ್ದು ಎರಡೂವರೆ ತಿಂಗಳು ಐಪಿಎಲ್‌ಗೆ ಪ್ರತ್ಯೇಕ ಸಮಯ ನಿಗಧಿಗೆ ಐಸಿಸಿಯನ್ನು ಕೇಳಿಕೊಳ್ಳಲಾಗುವುದು ಎಂದು ಹೇಳಿಕೆ ನೀಡಿದ್ದರು.

ಇದಾಗಿ ಒಂದು ದಿನದ ಬಳಿಕ ಪಿಸಿಬಿ ಪ್ರತಿಕ್ರಿಯೆ ನೀಡಿದ್ದು, ಪಾಕಿಸ್ತಾನ ಕ್ರಿಕೆಟ್‌ ಬೋರ್ಡ್‌ ಇತರೆ ಕ್ರಿಕೆಟ್ ಮಂಡಳಿ ಜೊತೆಯಲ್ಲಿ ಮಾತುಕತೆ ನಡೆಸಲಿದ್ದು, ಆನಂತರ ಐಸಿಸಿಗೆ ಈ ಕುರಿತು ಮನವರಿಕೆ ಮಾಡಿಕೊಡಲಾಗುವುದು ಎಂದು ಪಿಸಿಬಿ ಅಧ್ಯಕ್ಷ ರಮೀಜ್ ರಾಜಾ ಹೇಳಿದ್ದಾರೆ.

IND vs SA 4ನೇ ಟಿ20: ಈ ಮೈಲಿಗಲ್ಲುಗಳ ಮೇಲೆ ಪಂತ್, ದಿನೇಶ್ ಕಾರ್ತಿಕ್ ಮತ್ತು ಭುವನೇಶ್ವರ್ ಕುಮಾರ್ ಕಣ್ಣು

ಬರ್ಮಿಂಗ್‌ ಹ್ಯಾಮ್‌ನಲ್ಲಿ ನಡೆಯಲಿರುವ ಐಸಿಸಿ ಸಭೆಯಲ್ಲಿ ಚರ್ಚೆ

ಬರ್ಮಿಂಗ್‌ ಹ್ಯಾಮ್‌ನಲ್ಲಿ ನಡೆಯಲಿರುವ ಐಸಿಸಿ ಸಭೆಯಲ್ಲಿ ಚರ್ಚೆ

ಐಪಿಎಲ್‌ಗೆ ಪ್ರತ್ಯೇಕ ಅವಧಿ ನೀಡುವ ವಿಷಯದ ಚರ್ಚೆಯ ಅಗತ್ಯವಿದೆ ಎಂದು ಪಾಕಿಸ್ತಾನ ಮಂಡಳಿ ಅಭಿಪ್ರಾಯಪಟ್ಟಿದೆ. ಜುಲೈನಲ್ಲಿ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯಲಿರುವ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಐಸಿಸಿ ಮಂಡಳಿ ಸಭೆ ನಡೆಯಲಿದೆ ಮತ್ತು ಈ ವಿಷಯವನ್ನು ಬಹುಶಃ ಅಲ್ಲಿ ಚರ್ಚಿಸಲಾಗುವುದು ಎಂದು ಪಿಸಿಬಿ ಮೂಲವನ್ನು ಎನ್‌ಡಿಟಿವಿ ಉಲ್ಲೇಖಿಸಿದೆ.

ಕ್ರಿಕೆಟ್‌ಗೆ ಹಣ ಬರುವುದನ್ನು ನೋಡಿ ಪಿಸಿಬಿ ಸಂತೋಷವಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ. ಆದರೆ ಪ್ರತಿ ಆವೃತ್ತಿಯಲ್ಲಿ ಐಪಿಎಲ್‌ಗಾಗಿ ಪ್ರಮುಖ ಅಂತರರಾಷ್ಟ್ರೀಯ ಕ್ರಿಕೆಟಿಗರನ್ನು ಬುಕ್ ಮಾಡುವ ಭಾರತೀಯ ಮಂಡಳಿಯ ಯೋಜನೆಗಳು ಅಂತರರಾಷ್ಟ್ರೀಯ ಸರಣಿಗಳು ಮತ್ತು ಸ್ಪರ್ಧೆಗಳಿಗೆ ಅಡ್ಡಿಯಾಗಬಹುದು ಎಂಬುದು ಪಿಸಿಬಿ ಅಸಮಾಧಾನವಾಗಿದೆ.

ಅಂತಹ ಸಂದರ್ಭ ಎದುರಾದ್ರೆ ಭವಿಷ್ಯದಲ್ಲಿ 2 ಭಾರತೀಯ ತಂಡಗಳು ಕಣಕ್ಕಿಳಿಯಲಿವೆ: ಜಯ್ ಶಾ

ಐಪಿಎಲ್‌ಗೆ ಪ್ರತ್ಯೇಕ ವಿಂಡೋ ನೀಡಲು ಐಸಿಸಿಯೊಂದಿಗೆ ಬಿಸಿಸಿಐ ಚರ್ಚೆ

ಐಪಿಎಲ್‌ಗೆ ಪ್ರತ್ಯೇಕ ವಿಂಡೋ ನೀಡಲು ಐಸಿಸಿಯೊಂದಿಗೆ ಬಿಸಿಸಿಐ ಚರ್ಚೆ

ಐಪಿಎಲ್ 2022ರ ಅವಧಿಯಲ್ಲಿ ಕೆಲವು ಅಂತರಾಷ್ಟ್ರೀಯ ಆಟಗಾರರು ತಮ್ಮ ರಾಷ್ಟ್ರೀಯ ತಂಡದ ಪರ ಆಡುವ ಸಲುವಾಗಿ ಟಿ20 ಲೀಗ್‌ನಲ್ಲಿ ಭಾಗವಹಿಸಲು ಹಿಂದೆ ಸರಿದರು. ಹೀಗಾಗಿ ಐಪಿಎಲ್ ಅವಧಿಯಲ್ಲಿ ಯಾವುದೇ ತೊಂದರೆ ಎದುರಾಗದಂತೆ ನೋಡಲು ಬಿಸಿಸಿಐ ಯೋಜನೆ ರೂಪಿಸಿದ್ದು, ಅಂತರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಜೊತೆಗೆ ಮಾತುಕತೆ ನಡೆಸುತ್ತಿದೆ.

"ಇದು ನಾವು ಕೆಲಸ ಮಾಡಿದ ಒಂದು ಅಂಶವಾಗಿದೆ. ಮುಂದಿನ ಐಸಿಸಿ ಎಫ್‌ಟಿಪಿ ಕ್ಯಾಲೆಂಡರ್‌ನಿಂದ, ಐಪಿಎಲ್ ಅಧಿಕೃತ ಎರಡೂವರೆ ತಿಂಗಳ ಅವಧಿಯನ್ನು ಹೊಂದಿರುತ್ತದೆ, ಇದರಿಂದಾಗಿ ಎಲ್ಲಾ ಉನ್ನತ ಅಂತರರಾಷ್ಟ್ರೀಯ ಕ್ರಿಕೆಟಿಗರು ಭಾಗವಹಿಸಬಹುದು. ನಾವು ವಿವಿಧ ಮಂಡಳಿಗಳು ಮತ್ತು ಐಸಿಸಿಯೊಂದಿಗೆ ಈ ಕುರಿತು ಚರ್ಚೆ ನಡೆಸಿದ್ದೇವೆ, "ಎಂದು ಜಯ್ ಶಾ ಹೇಳಿದ್ದರು.

Story first published: Thursday, June 16, 2022, 14:16 [IST]
Other articles published on Jun 16, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X