Team India ಮೊದಲನೇ ದಿನದಾಟದಲ್ಲಿ ಹೆಚ್ಚು ಸದ್ದು ಮಾಡಿದ್ದು ಈತನೇ | Oneindia Kannada
ಸಾಮಾಜಿಕ ಜಾಲತಾಣದ ಜಗತ್ತೇ ಹಾಗೆ, ಸಣ್ಣಪುಟ್ಟ ವಿಷಯಗಳು ಕೂಡ ಸಿಕ್ಕಾಪಟ್ಟೆ ವೈರಲ್ ಆಗಿ ಬಿಡುತ್ತವೆ. ಆ ವಿಷಯ ನಿಜವೋ ಅಥವಾ ಸುಳ್ಳೋ ಎಂಬುದರ ಕುರಿತು ಯಾವುದೇ ರೀತಿಯ ಆಲೋಚನೆಯನ್ನು ಮಾಡದೇ ನೆಟ್ಟಿಗರು ಕಾಮೆಂಟ್ ಮಾಡಿ ಬಿಡುತ್ತಾರೆ. ಹೀಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವ ಮೂಲಕ ಹಲವಾರು ಪ್ರತಿಭಾವಂತ ವ್ಯಕ್ತಿಗಳು ಒಂದೊಳ್ಳೆ ನೆಲೆ ಕಂಡುಕೊಂಡು ಗೆದ್ದರೆ, ಮತ್ತೊಂದಷ್ಟು ಮಂದಿ ಯಾಕಾದರೂ ಕ್ಯಾಮೆರಾ ಕಣ್ಣಿಗೆ ಬಿದ್ದೆನೋ ಎಂದು ಪರಿತಪಿಸಿದ, ಪರಿತಪಿಸುತ್ತಿರುವ ಹಲವಾರು ಉದಾಹರಣೆಗಳೂ ಕೂಡ ಇವೆ.
ಕೊನೆಗೂ ಷರತ್ತನ್ನು ಗೆದ್ದು ತನ್ನ ಕೋಚ್ನ್ನು ಮನೆಗೆ ಆಹ್ವಾನಿಸುವ ಅವಕಾಶ ಪಡೆದ ಶ್ರೇಯಸ್ ಐಯ್ಯರ್
ಹೌದು, ಈ ಹಿಂದೆ ಇಂಗ್ಲೆಂಡ್ ನೆಲದಲ್ಲಿ ನಡೆದ ಏಕದಿನ ವಿಶ್ವಕಪ್ ಟೂರ್ನಿಯ ವೇಳೆ ನಡೆಯುತ್ತಿದ್ದ ಪಾಕಿಸ್ತಾನ ಪಂದ್ಯವೊಂದರಲ್ಲಿ ವ್ಯಕ್ತಿಯೋರ್ವ ಪಾಕಿಸ್ತಾನದ ಆಟಗಾರ ಕ್ಯಾಚ್ ಬಿಟ್ಟಾಗ ವಿಭಿನ್ನವಾಗಿ ಬೇಸರವನ್ನು ವ್ಯಕ್ತಪಡಿಸಿದ್ದ. ಪಾಕಿಸ್ತಾನದ ಆ ಅಭಿಮಾನಿಯ ವಿಡಿಯೋ ಮತ್ತು ಫೋಟೋಗಳು ಕೆಲವೇ ನಿಮಿಷಗಳಲ್ಲಿ ಸಾಮಾಜಿಕ ಜಾಲತಾಣದ ತುಂಬ ಹಬ್ಬಿಬಿಟ್ಟಿದ್ದವು. ಎಷ್ಟರಮಟ್ಟಿಗೆ ಎಂದರೆ ಸೆಲೆಬ್ರಿಟಿಗಳು ಕೂಡಾ ಈತನ ಫೋಟೋ ಮತ್ತು ವಿಡಿಯೋವನ್ನು ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಗಳಲ್ಲಿ ಪೋಸ್ಟ್ ಮಾಡಿದ್ದರು. ಹೀಗೆ ಒಂದೇ ಒಂದು ಪುಟ್ಟ ವಿಡಿಯೋದಿಂದ ಪ್ರಸಿದ್ಧಿ ಪಡೆದುಕೊಂಡ ಈತ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದ ಅನುಯಾಯಿಗಳನ್ನು ಹೊಂದಿದ್ದಾನೆ.
ವಾರ್ನರ್ ಆಯಿತು ಈಗ ರಶೀದ್ ಖಾನ್ ಮತ್ತು ಎಸ್ಆರ್ಎಚ್ ನಡುವೆ ವೈಮನಸ್ಸು; ಕಾರಣ ವಿಲಿಯಮ್ಸನ್!
ಇದರ ಜತೆಗೆ ಪಾಕಿಸ್ತಾನದ ಮತ್ತೋರ್ವ ಕ್ರಿಕೆಟ್ ಅಭಿಮಾನಿ ಕೂಡ ಪಂದ್ಯ ಮುಗಿದ ನಂತರ ಮೀಡಿಯಾ ಮುಂದೆ ಪಾಕಿಸ್ತಾನ ಸೋತಿದ್ದರ ನೋವನ್ನು ಅಳುತ್ತಾ ವಿವರಿಸಿದ್ದ. ಈ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಹೀಗೆ ಕ್ರಿಕೆಟ್ ಪಂದ್ಯಗಳ ವೇಳೆ ಅಭಿಮಾನಿಗಳು ನಡೆದುಕೊಂಡ ರೀತಿಯ ವಿಡಿಯೋಗಳು ಇಂದಿಗೂ ಸಹ ಟ್ರೋಲ್ ಪೇಜ್ಗಳ ಮೀಮ್ಸ್ ಮತ್ತು ಪೋಸ್ಟ್ಗಳಲ್ಲಿ ಬಳಕೆಯಾಗುತ್ತಲೇ ಇವೆ.
ಧೋನಿ vs ಕೊಹ್ಲಿ vs ರೋಹಿತ್: ನಾಯಕತ್ವದ ಸಕ್ಸಸ್ ರೇಟ್ನಲ್ಲಿ ಈ ನಾಯಕನೇ ನಂಬರ್ ಒನ್!
ಇದೇ ರೀತಿಯ ಘಟನೆ ಇದೀಗ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವೆ ನಡೆಯುತ್ತಿರುವ ಕಾನ್ಪುರ ಟೆಸ್ಟ್ ಪಂದ್ಯದ ಮೊದಲನೇ ದಿನದಂದು ಕೂಡ ನಡೆಯಿತು. ಪಂದ್ಯ ವೀಕ್ಷಿಸಲು ಬಂದಿದ್ದ ಅಭಿಮಾನಿಯೋರ್ವ ಫೋನಿನಲ್ಲಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ಛಾಯಾಗ್ರಾಹಕ ಸೆರೆಹಿಡಿದಿದ್ದ. ಹೀಗೆ ಆತ ಫೋನಿನಲ್ಲಿ ಮಾತನಾಡುತ್ತಿದ್ದ ದೃಶ್ಯ ದೂರದರ್ಶನದಲ್ಲಿ ನೇರ ಪ್ರಸಾರವಾದದ್ದೇ ತಡ ಕೆಲವೇ ನಿಮಿಷಗಳಲ್ಲಿ ಆ ವಿಡಿಯೋ ಕಾಳ್ಗಿಚ್ಚಿನಂತೆ ಪಸರಿಸಿತು. ನೆಟ್ಟಿಗರು ಆ ವಿಡಿಯೋವನ್ನು ಭಿನ್ನ ವಿಭಿನ್ನ ಬರಹಗಳನ್ನು ಬರೆದುಕೊಳ್ಳುವ ಮೂಲಕ ವೈರಲ್ ಮಾಡಿಬಿಟ್ಟರು. ಬಹುಶಃ ಆ ವ್ಯಕ್ತಿ ಪಂದ್ಯವನ್ನು ವೀಕ್ಷಿಸಿ ಮನೆಗೆ ತೆರಳುವಷ್ಟರಲ್ಲಿ ಆತ ನೆಲೆಸಿದ್ದ ಪ್ರದೇಶದ ಸುತ್ತಮುತ್ತಲಿನ ಜನರಿಗೂ ಸಾಮಾಜಿಕ ಜಾಲತಾಣಗಳ ಮೂಲಕ ಆ ವಿಡಿಯೋ ತಲುಪಿಬಿಟ್ಟಿತ್ತು ಎನಿಸುತ್ತದೆ. ಅಷ್ಟರಮಟ್ಟಿಗೆ ಆ ವಿಡಿಯೋ ಕೆಲವೇ ಕ್ಷಣಗಳಲ್ಲಿ ವೈರಲ್ ಆಗಿತ್ತು. ಆದರೆ ಹೀಗೆ ವೈರಲ್ ಆದ ಶೋಭಿತ್ ಪಾಂಡೆ ಇದೀಗ ಆ ವಿಡಿಯೋ ಕುರಿತು ಮಾತನಾಡಿದ್ದು ತಾನು ವೈರಲ್ ಆದ ನಂತರ ಎದುರಿಸುತ್ತಿರುವ ಸಮಸ್ಯೆಯ ಕುರಿತು ಈ ಕೆಳಕಂಡಂತೆ ಮನಬಿಚ್ಚಿ ಮಾತನಾಡಿದ್ದಾರೆ..
ನಾನು ಗುಟ್ಕಾವನ್ನು ತಿನ್ನುತ್ತಿರಲಿಲ್ಲ ಎಂದು ಸ್ಪಷ್ಟನೆ ನೀಡಿದ ಶೋಭಿತ್
ಕಾನ್ಪುರದ ಮಹೇಶ್ವರಿ ಮಹಲ್ ನಿವಾಸಿಯಾದ ಶೋಭಿತ್ ಪಾಂಡೆ ತನ್ನ ವೈರಲ್ ವಿಡಿಯೋ ಕುರಿತು ಮಾತನಾಡಿದ್ದು "ನಾನು ಅಂದು ತಿನ್ನುತ್ತಾ ಇದ್ದದ್ದು ಗುಟ್ಕಾ ಅಲ್ಲವೇ ಅಲ್ಲ ಎಂಬುದನ್ನು ಸ್ಪಷ್ಟಪಡಿಸಲು ಇಚ್ಛಿಸುತ್ತೇನೆ. ನಾನು ಆ ಸಮಯದಲ್ಲಿ ಅಡಕೆಯನ್ನು ಜಗಿಯುತ್ತಿದ್ದೆ ಮತ್ತು ಈ ಸಂದರ್ಭದಲ್ಲಿ ನನ್ನ ಜೊತೆ ಪಂದ್ಯ ನೋಡಲು ಬಂದಿದ್ದ ನನ್ನ ಸ್ನೇಹಿತ ಮತ್ತೊಂದು ಕಡೆ ಮೈದಾನದಲ್ಲಿ ಕುಳಿತು ಪಂದ್ಯ ವೀಕ್ಷಿಸುತ್ತಿದ್ದ. ಹೀಗಾಗಿ ಆತನೊಂದಿಗೆ ನಾನು ಕೇವಲ 10 ಸೆಕೆಂಡ್ ಫೋನಿನಲ್ಲಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ವಿಡಿಯೋವನ್ನು ಛಾಯಾಗ್ರಾಹಕ ಚಿತ್ರಿಸಿದ್ದಾನೆ. ಈ ವಿಡಿಯೋ ಕಾಳ್ಗಿಚ್ಚಿನಂತೆ ಕೆಲವೇ ನಿಮಿಷಗಳಲ್ಲಿ ವೈರಲ್ ಆಗಿದೆ. ಹಾಗೂ ಈ ರೀತಿ ನನ್ನ ವಿಡಿಯೋ ವೈರಲ್ ಆಗುತ್ತಿದೆ ಎಂಬ ವಿಷಯವನ್ನು ನನ್ನ ಆ ಸ್ನೇಹಿತನೇ ಮತ್ತೆ ನನಗೆ ಫೋನ್ ಮಾಡಿ ತಿಳಿಸಿದ" ಎಂದು ಸ್ಪಷ್ಟನೆ ನೀಡಿದ್ದಾರೆ.
ಆತನ ಪಕ್ಕದಲ್ಲಿ ಕುಳಿತಿದ್ದ ಯುವತಿ ಆತನ ಪ್ರೇಯಸಿಯೂ ಅಲ್ಲ
ಶೋಭಿತ್ ಪಾಂಡೆಯನ್ನು ಛಾಯಾಗ್ರಾಹಕ ಸೆರೆಹಿಡಿದಿದ್ದ ಸಂದರ್ಭದಲ್ಲಿ ಆತನ ಪಕ್ಕ ಓರ್ವ ಯುವತಿ ಕೂಡ ಇದ್ದಳು. ಆಕೆ ಆತನ ಪ್ರೇಯಸಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬಿಂಬಿಸಲಾಗಿತ್ತು. ಈ ಕುರಿತಾಗಿಯೂ ಕೂಡಾ ಮಾತನಾಡಿರುವ ಶೋಭಿತ್ ಪಾಂಡೆ ಆಕೆ ತನ್ನ ಪ್ರೇಯಸಿ ಅಲ್ಲ ಬದಲಾಗಿ ತನ್ನ ಸ್ವಂತ ಸಹೋದರಿ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.
ಆ ವಿಡಿಯೋ ಕುರಿತು ನಡೆಸುತ್ತಿರುವ ಚರ್ಚೆ ಬೇಸರ ತರುತ್ತಿದೆ ಎಂದ ಶೋಭಿತ್
ಆ ವಿಡಿಯೋ ಕುರಿತು ಇನ್ನೂ ಮುಂದುವರೆದು ಮಾತನಾಡಿರುವ ಶೋಭಿತ್ "ಮೊದಲಿಗೆ ನಾನು ಆ ವೈರಲ್ ವಿಡಿಯೋ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ. ಆದರೆ ಸಮಯ ಕಳೆದಂತೆ ನನ್ನ ಜೊತೆ ಇದ್ದ ನನ್ನ ಸಹೋದರಿ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಅಸಹ್ಯವಾಗಿ ಕಾಮೆಂಟ್ ಮಾಡಲು ಶುರು ಮಾಡಿದ್ದಾರೆ. ಈ ರೀತಿಯ ಕಾಮೆಂಟ್ ನೋಡಿ ತುಂಬಾ ಬೇಸರವಾಯಿತು. ಹಾಗೂ ಈ ವಿಷಯದ ಕುರಿತು ಚರ್ಚಿಸಲು ಹಲವಾರು ಮಾಧ್ಯಮದವರು ಕರೆ ಮಾಡುತ್ತಿದ್ದಾರೆ. ಹೀಗೆ ವೈರಲ್ ಆಗಿರುವ ವಿಡಿಯೋ ಕುರಿತು ಚರ್ಚೆ ನಡೆಸಲು ಸಾಕಷ್ಟು ಕರೆಗಳು ಬರುತ್ತಿರುವುದು ನಿಜಕ್ಕೂ ಬೇಸರ ಮೂಡಿಸುತ್ತಿದೆ" ಎಂದು ಹೇಳಿಕೆ ನೀಡಿದ್ದಾರೆ.
myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ.
Allow Notifications
You have already subscribed