ಕೆಎಲ್ ರಾಹುಲ್ ಯಾವ ಜಾತಿ? ಯಾವ ಧರ್ಮ? FBಯಲ್ಲಿ ಬೇಡದ ಚರ್ಚೆ

ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗದ ವಿಷಯವೇ ಇಲ್ಲ ಎನ್ನಬಹುದು. ಆದರೆ ನೂರರಲ್ಲಿ ಶೇ 90ರಷ್ಟು ಬೇಡದ ವಿಚಾರಗಳು ಬಂದು ಹೋಗುತ್ತಿರುತ್ತವೆ. ಐಪಿಎಲ್ 2020 ನಡೆಯುವಾಗಲೇ ಅನೇಕ ವಿವಾದ, ಸಾಮಾಜಿಕ ಮಾಧ್ಯಮಗಳಲ್ಲಿ ದೋಷಣೆಗಳು ನಡೆದಿವೆ. ಸದ್ಯದ ಬಹು ಚರ್ಚಿತ ವಿಷಯವೆಂದರೆ ಕೆಎಲ್ ರಾಹುಲ್ ಯಾವ ಜಾತಿ? ಯಾವ ಧರ್ಮ?

ಮೊಹಮ್ಮದ್ ಶಮಿ ಪತ್ನಿಗೆ ಫೇಸ್ಬುಕ್ ನಲ್ಲಿ ಬೆದರಿಕೆ, ಆಂಡ್ರೆ ರಸೆಲ್ ಪತ್ನಿ ಕಿಚಾಯಿಸಿದ್ದು, ಧೋನಿ ಮಗುವಿಗೆ ಬೆದರಿಕೆ, ಸ್ಟೋಕ್ಸ್ ,ಸ್ಯಾಮುಯೆಲ್ಸ್ ಟ್ವೀಟ್ ಕೆಸರೆರಚಾಟ ಹೀಗೆ.. ಹಲವು ವಿಷಯಗಳು ಬಂದು ಹೋಗಿವೆ..

ಕೆಎಲ್ ರಾಹುಲ್ : ಮಂಗಳೂರಿನಿಂದ ಮೆಲ್ಬೋರ್ನ್ ತನಕ

ಈಗ ಕರ್ನಾಟಕ ಮೂಲದ ಆಟಗಾರ ಕಿಂಗ್ಸ್ ಎಲೆವನ್ ಪಂಜಾಬ್ ತಂಡದ ನಾಯಕ ಕೆಎಲ್ ರಾಹುಲ್ ಅವರ ಜಾತಿ, ಧರ್ಮದ ಬಗ್ಗೆ ಚರ್ಚೆ ನಡೆದಿದೆ. ಹಾಗೆ ನೋಡಿದರೆ ಇದು ಇದೇ ಮೊದಲ ಬಾರಿಗೆ ಈ ವಿಷ್ಯ ಚರ್ಚೆಗೆ ಬಂದಿದ್ದಲ್ಲ, 2017ರಲ್ಲೇ ಪ್ರಶ್ನೋತ್ತರ ಮೂಲಕ ಮಾಹಿತಿ ನೀಡುವ ಕ್ಯೂರಾದಲ್ಲಿ ಈ ಬಗ್ಗೆ ಪ್ರಶ್ನಿಸಲಾಗಿದೆ. ಉತ್ತರವೂ ಸಿಕ್ಕಿದೆ.

ಈಗ ಏನು ಟ್ರೆಂಡ್ ನಲ್ಲಿದೆ

ಈಗ ಏನು ಟ್ರೆಂಡ್ ನಲ್ಲಿದೆ

ಸದ್ಯದ ಟ್ರೆಂಡ್ ನಂತೆ ಆಸ್ಟ್ರೇಲಿಯಾ ಪ್ರವಾಸಕ್ಕೆ ಉಪ ನಾಯಕರಾಗಿ ಆಯ್ಕೆಯಾಗಿರುವ ಕೆಎಲ್ ರಾಹುಲ್ ಅವರಿಗೆ ಶುಭಕೋರುವ ಪೋಸ್ಟ್ ಇದಾಗಿದೆ. ವೀರಶೈವ-ಲಿಂಗಾಯತ ಪೊಲಿಟಿಕಲ್ ಬ್ರಿಗೇಡ್ ಎಂಬ ಫೇಸ್ಬುಕ್ ಪುಟದಲ್ಲಿ ರಾಹುಲ್ ಅವರು ಅವರು ವೀರಶೈವ-ಲಿಂಗಾಯತ ಸಮಾಜದ ಹೆಮ್ಮೆ ಎಂದು ಶುಭ ಕೋರಲಾಗಿದೆ. ಈ ಪೋಸ್ಟ್ ಗೆ ಕಾಮೆಂಟ್ ಇನ್ನೂ ಬರುತ್ತಲೇ ಇದೆ. ಲಿಂಗಾಯತರು ಹೌದೇ ಅಲ್ಲವೇ ಈ ಬಗ್ಗೆ ಇಲ್ಲಿ ಚರ್ಚೆಯಾಕೆ ಎಂದು ಪ್ರಶ್ನಿಸುತ್ತಿದ್ದಾರೆ.

ಕೆ.ಎಲ್ ರಾಹುಲ್ ಬಗ್ಗೆ ನಿಮಗೆ ಗೊತ್ತೇ ಇಲ್ಲದ ಕುತೂಹಲಕರ ಸಂಗತಿಗಳು

ರವಿ ಪಾಳೆಗಾರ ಎಂಬುವವರಿಂದ ಭಾರಿ ಕಾಮೆಂಟ್

ರವಿ ಪಾಳೆಗಾರ ಎಂಬುವವರಿಂದ ಭಾರಿ ಕಾಮೆಂಟ್

ಕೆಎಲ್ ರಾಹುಲ್ ಎರಡು ಕಿವಿ ಮುಚ್ಚಿಕೊಂಡು ಫುಟ್ಬಾಲ್ ಆಟಗಾರರ ರೀತಿ ಈ ಹಿಂದೆ ಶತಕ ಬಾರಿಸಿದ್ದನ್ನು ಸಂಭ್ರಮಿಸಿದ ಫೋಟೊ ಹಾಕಿರುವ ರವಿ ಪಾಳೆಗಾರ ಎಂಬುವರು ಈ ರೀತಿ ಸೆಲೆಬ್ರೇಟ್ ಏಕೆ ಮಾಡುತ್ತಾರೆ ಎಂಬುದು ತಿಳಿಯದೆ, ಮುಸ್ಲಿಮರ ನಮಾಜ್ ರೀತಿ ಎಂದು ಅರ್ಥೈಸಿಕೊಂಡು ಸಿರಾಜೋ, ರಶೀದ್ ಖಾನೊ ಎಂದು ಪ್ರಶ್ನಿಸಿದ್ದಾರೆ. ರಾಹುಲ್ ಬಗ್ಗೆ ಈ ಪುಟದಲ್ಲಿ ಹಾಕಿದ್ದು ಏಕೆ ಎಂದು ಅಡ್ಮಿನ್ ಗೆ ಕೇಳಿದ್ದಾರೆ. ಜೊತೆಗೆ ರಾಹುಲ್ ಬ್ಯಾನ್ ಆಗಲು ಕಾರಣವಾಗಿದ್ದ ಸುದ್ದಿಯ ತುಣುಕು ತಂದು ಹಾಕಿದ್ದಾರೆ.

ರಾಹುಲ್ ಅತ್ಯಂತ ಪ್ರಬುದ್ಧ ಆಟಗಾರ: ಸ್ಯಾಮುಯಲ್

ಪ್ರಶಾಂತ್ ಗೌಡ ಪಾಟೀಲ್ ಉತ್ತರ

ಪ್ರಶಾಂತ್ ಗೌಡ ಪಾಟೀಲ್ ಉತ್ತರ

ಇದು ಲಿಂಗಾಯತರ ಸೋಶಿಯಲ್ ಮೀಡಿಯಾ ಪೇಜ್ ಇದರಲ್ಲಿ ಲಿಂಗಾಯತರ ಬಗ್ಗೆ ಹಾಕದೆ ಮತ್ತೆ ಯಾರ ಬಗ್ಗೆ ಸುದ್ದಿ ಹಾಕಿಬೇಕಿತ್ತು. ರಾಹುಲ್ ಲಿಂಗಾಯತ ಎಂಬುದು ನಮ್ಮ ಹೆಮ್ಮೆ ಎಂದಿದ್ದಾರೆ. ಒಟ್ಟಾರೆ ರಾಹುಲ್ ನಡವಳಿಕೆ, ಜಾತಿ, ಧರ್ಮ, ಇನ್ನೊಂದು ಧರ್ಮದ ಬಗ್ಗೆ ಇರೋ ಗುಂಪಿನ ಸ್ಕ್ರೀನ್ ಶಾಟ್ ಗಳು ಓಡಾಡಿವೆ. ಇಲ್ಲಿ ಕ್ರಿಕೆಟ್ ಆಟ, ರಾಹುಲ್ ಉತ್ತಮ ಪ್ರದರ್ಶನಕ್ಕಿಂತ ಆತನ ಜಾತಿ, ಧರ್ಮವೇ ಇವರುಗಳಿಗೆ ಮುಖ್ಯವಾಗಿ ಬಿಟ್ಟಿದೆ.

ರಾಹುಲ್ ಕುಟುಂಬ ವಿವರ

ರಾಹುಲ್ ಕುಟುಂಬ ವಿವರ

ರಾಮನಗರ ಜಿಲ್ಲೆ ಮಾಗಡಿ ತಾಲೂಕು ಕುದೂರು ಹೋಬಳಿ ಕಣ್ಣೂರು ಕೆ.ಎಲ್ ರಾಹುಲ್ ಅವರ ಊರು. ಮಾಗಡಿ ತಾಲೂಕಿನ ವೀರಶೈವ ಸಮಾಜದ ನಂಜಪ್ಪ ಅವರ ಮೊಮ್ಮಗ ಕೆ.ಎಲ್ ರಾಹುಲ್. ಜನತಾ ಪಕ್ಷದ ಅಧ್ಯಕ್ಷರಾಗಿದ್ದ ನಂಜಪ್ಪ ಅವರು ಸಮಾಜಮುಖಿ, ಸಜ್ಜನ ರಾಜಕಾರಣಿಯಾಗಿ ಗುರುತಿಸಿಕೊಂಡಿದ್ದಾರೆ. ರೈತಾಪಿ ಕುಟುಂಬದಿಂದ ಬಂದಿರುವ ನಂಜಪ್ಪ ಅವರ ಮಗ, ಮಂಗಳೂರಿನಲ್ಲಿ ಪ್ರೊಫೆಸರ್ ಲೋಕೇಶ್, ರಾಜೇಶ್ವರಿ ಅವರ ಪುತ್ರನೇ ರಾಹುಲ್. ಡಾ.ಲೋಕೇಶ್ ಅವರು ಭೂಗರ್ಭವಿಜ್ಞಾನದ ಪ್ರೊಫೆಸರ್(NITK) ಸುರತ್ಕಲ್, ರಾಹುಲ್ ಅವರ ತಾಯಿ ರಾಜೇಶ್ವರಿ ಮಂಗಳೂರು ವಿವಿಯಲ್ಲಿ ಇತಿಹಾಸದ ಪ್ರೊಫೆಸರ್ ಆಗಿದ್ದಾರೆ. ರಾಹುಲ್ ಸೋದರಿ ಹೆಸರು ಭಾವನಾ.

ರಾಹುಲ್ ಚಿಕ್ಕಪ್ಪ ಜಯಶಂಕರ್ ಕಾಂಗ್ರೆಸ್ ಮುಖಂಡರಾಗಿದ್ದು, ಕುದೂರಿನಲ್ಲಿ ವಿದ್ಯಾಸಂಸ್ಥೆ ನಿರ್ವಹಿಸುತ್ತಿದ್ದಾರೆ. ಚಿಕ್ಕಮ್ಮ ಕುಸುಮಾ ಪಂಚಾಯಿತಿ ಅಧ್ಯಕ್ಷೆಯಾಗಿದ್ದರು. ಮತ್ತೊಬ್ಬ ಚಿಕ್ಕಪ್ಪ ಕೆ.ಎನ್ ಪ್ರಕಾಶ್ ವೃತ್ತಿಯಿಂದ ವಕೀಲರು. ರಾಹುಲ್ ಅವರ ಸೋದರತ್ತೆ ಕೆ.ಎನ್ ಪ್ರಮೀಳಾ ಫಾಲನೇತ್ರ ಅವರು ಕವಯತ್ರಿ, ಸರ್ಕಾರಿ ಅಧಿಕಾರಿಯಾಗಿದ್ದಾರೆ.

ಐಪಿಎಲ್ 2020ರಲ್ಲಿ ಮೊದಲ ಶತಕ ಸಿಡಿಸಿ, ರಾಹುಲ್ ಮುರಿದ ದಾಖಲೆಗಳ ಪಟ್ಟಿ

For Quick Alerts
ALLOW NOTIFICATIONS
For Daily Alerts
 

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Thursday, October 29, 2020, 7:22 [IST]
Other articles published on Oct 29, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X