ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪ್ರಚಾರಕ್ಕಾಗಿ ಜನ ಈಗಲೂ ನನ್ನ ಹೆಸರು ಬಳಸ್ತಿದ್ದಾರೆ: ವಾಸಿಮ್ ಅಕ್ರಮ್

people still use my name to promote themselves says Wasim Akram

ಕರಾಚಿ, ಮೇ 8: ಕೆಲ ವ್ಯಕ್ತಿಗಳು ತಮ್ಮನ್ನು ತಾವು ಪ್ರಚಾರ ಮಾಡಿಕೊಳ್ಳುವುದಕ್ಕೋಸ್ಕರ ಈಗಲೂ ನನ್ನ ಹೆಸರನ್ನು ಬಳಸುತ್ತಿದ್ದಾರೆ ಎಂದು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ವಾಸಿಮ್ ಅಕ್ರಮ್ ಹೇಳಿದ್ದಾರೆ. ಪಾಕ್ ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ಅಮೀರ್ ಸೊಹೈಲ್ ಅವರನ್ನುದ್ದೇಶಿಸಿ ವಾಸಿಮ್ ಈ ಹೇಳಿಕೆ ನೀಡಿದ್ದಾರೆ.

ತನ್ನ ನೆಚ್ಚಿನ ಆಲ್‌ ಟೈಮ್ ಐಪಿಎಲ್ ತಂಡ ಪ್ರಕಟಿಸಿದ ಡೇವಿಡ್ ವಾರ್ನರ್ತನ್ನ ನೆಚ್ಚಿನ ಆಲ್‌ ಟೈಮ್ ಐಪಿಎಲ್ ತಂಡ ಪ್ರಕಟಿಸಿದ ಡೇವಿಡ್ ವಾರ್ನರ್

ಅಮೀರ್ ಸೊಹೈಲ್ ಈ ಹಿಂದೆ ವಾಸಿಮ್ ಅಕ್ರಮ್ ಅವರನ್ನು ದೂರಿ ಮಾತನಾಡಿದ್ದರು. 1992ರಿಂದಲೂ ಪಾಕಿಸ್ತಾನ ತಂಡ ವಿಶ್ವಕಪ್ ಗೆಲ್ಲದಿರುವುದಕ್ಕೆ ಮಾಜಿ ವೇಗಿ ಅಕ್ರಮ್ ಕಾರಣ ಎಂದು ಸೊಹೈಲ್ ಹೇಳಿಕೆ ನೀಡಿದ್ದರು. ಇದಕ್ಕೆ ವಾಸಿಮ್ ಪ್ರತಿಕ್ರಿಯಿಸಿದ್ದಾರೆ.

ಬೂಮ್ರಾ ವೇಗದ ಬೌಲಿಂಗ್ ಎದುರಿಸಲು ಇಷ್ಟಪಡುತ್ತೇನೆ ಎಂದ ಪ್ರಿಯಂ ಗಾರ್ಗ್ಬೂಮ್ರಾ ವೇಗದ ಬೌಲಿಂಗ್ ಎದುರಿಸಲು ಇಷ್ಟಪಡುತ್ತೇನೆ ಎಂದ ಪ್ರಿಯಂ ಗಾರ್ಗ್

'ಇಂಥ ನಕಾರಾತ್ಮಕ ವಿಚಾರಗಳನ್ನು ಕೇಳುವಾಗ ನನಗೆ ತುಂಬಾ ಬೇಸರವಾಗುತ್ತದೆ. ನಾನು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿ 17 ವರ್ಷಗಳು ಕಳೆದಿವೆ. ಆದರೂ ಈಗಲೂ ಕೆಲ ಜನ ತಮ್ಮ ಪ್ರಚಾರಕ್ಕಾಗಿ ನನ್ನ ಹೆಸರು ಬಳಸುತ್ತಿದ್ದಾರೆ,' ಎಂದು ವೆಬ್‌ ಶೋ ಒಂದರಲ್ಲಿ ಮಾತನಾಡುತ್ತ ವಾಸಿಮ್ ಹೇಳಿದರು.

ಐಪಿಎಲ್ ಮತ್ತು ವಿಶ್ವಕಪ್‌ನ ಭವಿಷ್ಯ ನುಡಿದ ಟೀಮ್ ಇಂಡಿಯಾ ವೇಗಿ ಶಮಿಐಪಿಎಲ್ ಮತ್ತು ವಿಶ್ವಕಪ್‌ನ ಭವಿಷ್ಯ ನುಡಿದ ಟೀಮ್ ಇಂಡಿಯಾ ವೇಗಿ ಶಮಿ

'ನಾನೂ ಕೂಡ ಇವರೆಲ್ಲರ ಬಗ್ಗೆ ನಕಾರಾತ್ಮಕ ಹೇಳಿಕೆ ನೀಡಬಹುದು. ಆದರೆ ಅದರಿಂದೇನು ಪ್ರಯೋಜನ? ಇದೇ ಕಾರಣಕ್ಕೆ ಇಂಥದ್ದೆಲ್ಲ ಕೇಳಿಯೂ ನಾನು ಸುಮ್ಮನಿರೋದು. 17 ವರ್ಷ ನಿವೃತ್ತಿಯ ಬಳಿಕವೂ ನನ್ನನ್ನು ಪ್ರೀತಿ-ಗೌರವದಿಂದ ಯಾರೆಲ್ಲ ಕಾಣುತ್ತಿದ್ದಾರೋ ಅವರ ಬಗ್ಗೆಯಷ್ಟೇ ನಾನು ಯೋಚಿಸುತ್ತೇನೆ,' ಎಂದು ವಾಸಿಮ್ ನುಡಿದಿದ್ದಾರೆ.

Story first published: Friday, May 8, 2020, 11:51 [IST]
Other articles published on May 8, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X