ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

AUS vs NZ, 1ನೇ ಟಿ20: ಆರ್‌ಸಿಬಿ ಆಟಗಾರರ ಪ್ರದರ್ಶನ ಹೇಗಿತ್ತು ಗೊತ್ತಾ!?

Performance of RCB players in first T20I between AUS vs NZ

ಬೆಂಗಳೂರು: ನ್ಯೂಜಿಲೆಂಡ್‌ಗೆ ಪ್ರವಾಸ ಬಂದಿರುವ ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಅತಿಥೇಯರ ವಿರುದ್ಧ 5 ಪಂದ್ಯಗಳ ಟಿ20ಐ ಸರಣಿ ಆಡುತ್ತಿದೆ. ಕ್ರೈಸ್ಟ್ ಚರ್ಚ್‌ನ ಹ್ಯಾಗ್ಲಿ ಓವಲ್‌ನಲ್ಲಿ ಮೊದಲ ಟಿ20ಐ ಪಂದ್ಯ ಮುಗಿಸಿದೆ. ಎರಡೂ ತಂಡಗಳಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್)ನ ಆಕರ್ಷಣೀಯ ಫ್ರಾಂಚೈಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಆಟಗಾರರಿದ್ದಾರೆ.

ವಿಜಯ್ ಹಜಾರೆ ಟ್ರೋಫಿ: ಕೇರಳ ವೇಗಿ ಶ್ರೀಶಾಂತ್ ಅಪರೂಪದ ದಾಖಲೆವಿಜಯ್ ಹಜಾರೆ ಟ್ರೋಫಿ: ಕೇರಳ ವೇಗಿ ಶ್ರೀಶಾಂತ್ ಅಪರೂಪದ ದಾಖಲೆ

2021ರ ಆವೃತ್ತಿಯ ಐಪಿಎಲ್‌ನತ್ತ ಮುನ್ನಡೆಯುತ್ತಿರುವಾಗ ನ್ಯೂಜಿಲೆಂಡ್‌ ಮತ್ತು ಆಸ್ಟ್ರೇಲಿಯಾ ಮೊದಲ ಟಿ20ಐನಲ್ಲಿ ಆರ್‌ಸಿಬಿ ಆಟಗಾರರು ಹೇಗೆ ಪ್ರದರ್ಶನ ನೀಡಿದ್ದಾರೆ ಅನ್ನೋ ಕುತೂಹಲ ಸಹಜವಾಗಿ ಇದ್ದೇ ಇರುತ್ತದೆ. ಬನ್ನಿ ಹಾಗಾದ್ರೆ; ನ್ಯೂಜಿಲೆಂಡ್-ಆಸ್ಟ್ರೇಲಿಯಾ ಮೊದಲನೇ ಟಿ20 ಪಂದ್ಯದಲ್ಲಿ ಆರ್‌ಸಿಬಿ ಆಟಗಾರರ ಪ್ರದರ್ಶನ ಹೇಗಿತ್ತು ನೋಡೋಣ..

ಆಸೀಸ್-ಕಿವೀಸ್‌ ತಂಡಗಳಲ್ಲಿ ಆರ್‌ಸಿಬಿ ಆಟಗಾರರು

ಆಸೀಸ್-ಕಿವೀಸ್‌ ತಂಡಗಳಲ್ಲಿ ಆರ್‌ಸಿಬಿ ಆಟಗಾರರು

ಸೋಮವಾರ (ಫೆಬ್ರವರಿ 22) ಮುಕ್ತಾಯಗೊಂಡ ಆಸ್ಟ್ರೇಲಿಯಾ-ನ್ಯೂಜಿಲೆಂಡ್ ಮೊದಲನೇ ಟಿ20ಐ ಪಂದ್ಯದಲ್ಲಿ ಆರ್‌ಸಿಬಿಯ ಒಟ್ಟು 6 ಆಟಗಾರರು ಮೈದಾನಕ್ಕಿಳಿದಿದ್ದರು. ಇದರಲ್ಲಿ ಬ್ಯಾಟಿಂಗ್‌ ಮತ್ತು ಬೌಲಿಂಗ್ ಎರಡೂ ವಿಭಾಗಗಳಲ್ಲಿ ಆರ್‌ಸಿಬಿ ಆಟಗಾರರು ಅಂಥ ಗಮನಾರ್ಹ ಪ್ರದರ್ಶನ ನೀಡಿಲ್ಲ. ಬೇರೆ ಟೂರ್ನಿಗಳಲ್ಲಿ ಐಪಿಎಲ್ ಆಟಗಾರರಿದ್ದರೆ, ಫ್ರಾಂಚೈಗಳು ಅವರವರ ತಂಡದ ಆಟಗಾರರ ಪ್ರದರ್ಶನ ಮೆಚ್ಚಿ ತಮ್ಮ ಸಾಮಾಜಿಕ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ಗಳನ್ನು ಹಾಕಿಕೊಳ್ಳುತ್ತವೆ. ಆದರೆ ಈ ಬಾರಿ ಆರ್‌ಸಿಬಿಗೆ ಪೋಸ್ಟ್‌ ಹಾಕಲು ಆಟಗಾರಿಂದ ಅಂಥ ಪ್ರದರ್ಶನವೇ ಬಂದಿಲ್ಲ.

ಆರ್‌ಸಿಬಿ ಆಟಗಾರರ ಪ್ರದರ್ಶನ (AUS vs NZ 1ನೇ ಟಿ20)

ಆರ್‌ಸಿಬಿ ಆಟಗಾರರ ಪ್ರದರ್ಶನ (AUS vs NZ 1ನೇ ಟಿ20)

* ಜೋಶುವಾ ಫಿಲಿಪ್ (ಆಸ್ಟ್ರೇಲಿಯಾ), ಆರ್‌ಸಿಬಿ ಉಳಿಸಿಕೊಂಡ ಆಟಗಾರ, 3 ಎಸೆತಕ್ಕೆ 2 ರನ್.
* ಗ್ಲೆನ್ ಮ್ಯಾಕ್ಸ್‌ವೆಲ್ (ಆಸ್ಟ್ರೇಲಿಯಾ), 14.25 ಕೋ.ರೂ.ಗೆ ಖರೀದಿಸಿದ ಆಟಗಾರ, 5 ಎಸೆತಕ್ಕೆ 1 ರನ್, 1 ಓವರ್‌ಗೆ 9 ರನ್, 0 ವಿಕೆಟ್.
* ಆ್ಯಡಂ ಜಂಪಾ (ಆಸ್ಟ್ರೇಲಿಯಾ), ಆರ್‌ಸಿಬಿ ಉಳಿಸಿಕೊಂಡ ಆಟಗಾರ, 8 ಎಸೆತಕ್ಕೆ 13 ರನ್, 3 ಓವರ್‌ಗೆ 20 ರನ್, 0 ವಿಕೆಟ್.
* ಕೇನ್ ರಿಚರ್ಡನ್ (ಆಸ್ಟ್ರೇಲಿಯಾ), ಆರ್‌ಸಬಿ ಉಳಿಸಿಕೊಂಡ ಆಟಗಾರ, 5 ಎಸೆತಕ್ಕೆ 5 ರನ್, 4 ಓವರ್‌ಗೆ 42 ರನ್, 0 ವಿಕೆಟ್.
* ಕೈಲ್ ಜೇಮಿಸನ್ (ನ್ಯೂಜಿಲೆಂಡ್), 15 ಕೋ.ರೂ.ಗೆ ಖರೀದಿಸಿದ ಆಟಗಾರ, 3 ಓವರ್‌ 32 ರನ್, 1 ವಿಕೆಟ್.
* ಡೇನಿಯಲ್ ಸ್ಯಾಮ್ಸ್ (ಆಸ್ಟ್ರೇಲಿಯಾ), ಡೆಲ್ಲಿಯಿಂದ ವ್ಯಾಪಾರ ಮಾಡಿದ ಆಟಗಾರ, 3 ಎಸೆತಕ್ಕೆ 1 ರನ್, 4 ಓವರ್‌ 40 ರನ್, 2 ವಿಕೆಟ್.

ದೇವದತ್ ಪಡಿಕ್ಕಲ್ ಭರ್ಜರಿ ಬ್ಯಾಟಿಂಗ್

ದೇವದತ್ ಪಡಿಕ್ಕಲ್ ಭರ್ಜರಿ ಬ್ಯಾಟಿಂಗ್

ನ್ಯೂಜಿಲೆಂಡ್-ಆಸ್ಟ್ರೇಲಿಯಾ ಮೊದಲ ಟಿ20ಯ ಫಲಿತಾಂಶ ಏನಾಯ್ತು ಅಂತ ನೀವು ಕೇಳಿದರೆ; ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ನ್ಯೂಜಿಲೆಂಡ್ 20 ಓವರ್‌ಗೆ 5 ವಿಕೆಟ್ ಕಳೆದು 184 ರನ್ ಗಳಿಸಿತ್ತು. ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ 17.3 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 131 ರನ್ ಗಳಿಸಿ 53 ರನ್‌ನಿಂದ ಶರಣಾಯ್ತು. ಆದರೆ ಖುಷಿಯ ಸಂಗತಿಯಂದ್ರೆ ವಿಜಯ್ ಹಜಾರೆ ಟ್ರೋಫಿಯಲ್ಲಿ ಆರ್‌ಸಿಬಿ ಆಟಗಾರ ದೇವದತ್ ಪಡಿಕ್ಕಲ್ ಅವರು ಬಿಹಾರ ವಿರುದ್ಧ 98 ಎಸೆತಗಳಲ್ಲಿ 97 ರನ್ ಬಾರಿಸಿದ್ದಾರೆ. ಪಂದ್ಯದಲ್ಲಿ ಕರ್ನಾಟಕ ಗೆದ್ದಿದೆ.

ಹರಾಜಿನ ಬಳಿಕ ಆರ್‌ಸಿಬಿ ಸಂಪೂರ್ಣ ತಂಡ

ಹರಾಜಿನ ಬಳಿಕ ಆರ್‌ಸಿಬಿ ಸಂಪೂರ್ಣ ತಂಡ

ಉಳಿಸಿಕೊಂಡ ಆಟಗಾರರು: ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್, ಯುಜ್ವೇಂದ್ರ ಚಾಹಲ್, ದೇವದುತ್ ಪಡಿಕ್ಕಲ್, ನವದೀಪ್ ಸೈನಿ, ವಾಷಿಂಗ್ಟನ್ ಸುಂದರ್, ಮೊಹಮ್ಮದ್ ಸಿರಾಜ್, ಕೇನ್ ರಿಚರ್ಡ್ಸನ್, ಆಡಮ್ ಜಂಪಾ, ಜೋಶ್ ಫಿಲಿಪ್, ಶಹಬಾಜ್ ಅಹ್ಮದ್, ಪವನ್ ದೇಶಪಾಂಡೆ, ಡೇನಿಯಲ್ ಸ್ಯಾಮ್ಸ್ (ಡೆಲ್ಲಿಯಿಂದ ವ್ಯಾಪಾರ).
ಖರೀದಿಸಲ್ಪಟ್ಟ ಆಟಗಾರರು: ಕೈಲ್ ಜೇಮಿಸನ್ (15 ಕೋಟಿ), ಗ್ಲೆನ್ ಮ್ಯಾಕ್ಸ್ ವೆಲ್ (14.25 ಕೋಟಿ), ಡಾನ್ ಕ್ರಿಶ್ಚಿಯನ್ (4.8 ಕೋಟಿ), ಸಚಿನ್ ಬೇಬಿ (20 ಲಕ್ಷ), ರಜತ್ ಪಾಟಿದಾರ್ (20 ಲಕ್ಷ), ಮೊಹಮ್ಮದ್ ಅಜರುದ್ದೀನ್ (20 ಲಕ್ಷ), ಸುಯಾಶ್ ಪ್ರಭುದೇಸಾಯ್ (20 ಲಕ್ಷ), ಕೆ.ಎಸ್. ಭರತ್ (20 ಲಕ್ಷ).

Story first published: Monday, February 22, 2021, 16:53 [IST]
Other articles published on Feb 22, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X