2023ರ ವಿಶ್ವಕಪ್‌ವರೆಗೂ ಗಂಗೂಲಿ ಬಿಸಿಸಿಐ ಅಧ್ಯಕ್ಷನಾಗಿರಲಿ ಎಂದ ಗವಾಸ್ಕರ್

ದಿಗ್ಗಜ ಕ್ರಿಕೆಟಿಗ ಸುನೀಲ್ ಗವಾಸ್ಕರ್ ಸೌರವ್ ಗಂಗೂಲಿಗೆ ಬಿಸಿಸಿಐ ಅಧ್ಯಕ್ಷನಾಗಿ ಸುದೀರ್ಘ ಅವಧಿಗೆ ಮುಂದುವರಿಯುವ ಅವಕಾಶ ದೊರೆಯಲಿ ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಬಿಸಿಸಿಐ ಆಡಳಿತವನ್ನು ಪುನರುಜ್ಜೀವನಗೊಳಿಸುವ ಸಾಮರ್ಥ್ಯ ಗಂಗೂಲಿಗೆ ಇದೆ ಎಂದು ಗವಾಸ್ಕರ್ ಹೇಳಿದ್ದಾರೆ.

ಈ ಶತಮಾನದ ಆರಂಭದಲ್ಲಿ ಭಾರತದಲ್ಲಿ ಕ್ರಿಕೆಟ್ ಮರುಹುಟ್ಟು ಪಡೆಯಲು ಸೌರವ್ ಗಂಗೂಲಿ ಕಾರಣರಾಗಿದ್ದರು. ಟೀಮ್ ಇಂಡಿಯಾದ ಸಂಕಷ್ಟದ ಸಂದರ್ಭದಲ್ಲಿ ನಾಯಕನಾಗಿ ಸೌರವ್ ಗಂಗೂಲಿ ಅಭಿಮಾನಿಗಳಲ್ಲಿ ಭರವಸೆ ಹುಟ್ಟಲು ಕಾರಣರಾಗಿದ್ದರು ಎಂದು ಸುನಿಲ್ ಗವಾಸ್ಕರ್ ಹೇಳಿಕೆಯನ್ನು ನೀಡಿದ್ದಾರೆ.

ವೈರಲ್ ಆಯ್ತು ಐಪಿಎಲ್ 2020 ವೇಳಾಪಟ್ಟಿ: ಅನುಮಾನಕ್ಕೆ 3 ಕಾರಣಗಳು

ಬಿಸಿಸಿಐ ಅಧ್ಯಕ್ಷನಾಗಿ ಸೌರವ್ ಗಂಗೂಲಿ ಹಾಗೂ ಕಾರ್ಯದರ್ಶಿಯಾಗಿ ಜಯ್ ಶಾ ಇಬ್ಬರ ಅಧಿಕಾರಾವಧಿಯೂ 2023ರ ವಿಶ್ವಕಪ್‌ನ ನಂತರವೇ ಅಧಿಕೃತವಾಗಿ ಅಂತ್ಯವಾಗಲಿ ಎಂದು ಸುನಿಲ್ ಗವಾಸ್ಕರ್ ಆಶಯವನ್ನು ವ್ಯಕಜಕ್ತಪಡಿಸಿದರು. ಆ ಸ್ಥಾನದಲ್ಲಿ ಮುಂದುವರಿಯಲು ಇಬ್ಬರೂ ಅರ್ಹರಾಗಿದ್ದಾರೆ ಎಂದು ಗವಾಸ್ಕರ್ ಹೇಳಿದ್ದಾರೆ.

ಸೌರವ್ ಗಂಗೂಲಿ ಈ ಹಿಂದೆ ಭಾರತ ತಂಡವನ್ನು ಮೇಲೆತ್ತಿದಂತೆಯೇ ಅಭಿಮಾನಿಗಳಲ್ಲಿ ಭರವಸೆಯನ್ನು ಮೂಡಿಸಿದಂತೆಯೆ ಬಿಸಿಸಿಐ ಆಡಳಿತದಲ್ಲಿಯೂ ಬದಲಾವಣೆ ತರಲು ಸಮರ್ಥರಾಗಿದ್ದಾರೆ. ಹಾಗಾಗಿ ಅವರು ಮುಖ್ಯಸ್ಥರಾಗಿ ಮುಂದುವರಿಯುವುದನ್ನು ನಾನು ಬಯಸುತ್ತೇನೆ ಎಂದು ಗವಾಸ್ಕರ್ ಸಂಡೇ ಮಿಡ್‌ಡೇ ಪತ್ರಿಕೆಯ ತಮ್ಮ ಅಂಕಣದಲ್ಲಿ ಅಭಿಪ್ರಾಯವನ್ನು ವ್ಯಕ್ತಡಿಸಿದ್ದಾರೆ.

ದಕ್ಷಿಣ ಆಫ್ರಿಕಾ ತಂಡದ ವೆಸ್ಟ್ ಇಂಡೀಸ್ ಪ್ರವಾಸ ಸರಣಿಗೆ ಐಪಿಎಲ್ ಅಡ್ಡಿ?!

ಸೌರವ್ ಗಂಗೂಲಿ ಹಾಗೂ ಜಯ್ ಶಾ ಕ್ರಿಕೆಟ್ ಆಡಳಿತದಲ್ಲಿ ಆರು ವರ್ಷಗಳನ್ನು ಪೂರೈಸಿದ ಕಾರಣದಿಂದಾಗಿ (ರಾಜ್ಯ ಕ್ರಿಕೆಟ್ ಮಂಡಳಿ ಹಾಗೂ ಬಿಸಿಸಿಐ) ಲೋಧಾ ಸಮಿತಿಯ ನಿಯಮದಂತೆ ಮುಂದಿನ 3೦ ವರ್ಷಗಳ ಕಾಲ ಕ್ರಿಕೆಟ್‌ಗೆ ಸಮಬಂಧಿಸಿದ ಯಾವುದೇ ಹುದ್ದೆಯನ್ನೂ ಅಲಂಕರಿಸುವಂತಿಲ್ಲ. ಈ ನಿಯಮದಲ್ಲಿ ಬದಲಾವಣೆಯನ್ನು ತರಲು ಬಿಸಿಸಿಐ ಸುಪ್ರೀಮ್ ಕೋರ್ಟ್ ಮೊರೆಹೋಗಿದ್ದು ಆಗಸ್ಟ್ 17ಕ್ಕೆ ಇದರ ವಿಚಾರಣೆ ನಡೆಯಲಿದೆ.

For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Sunday, July 26, 2020, 12:44 [IST]
Other articles published on Jul 26, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X