ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ಒಬ್ಬ ಭಾರತೀಯನೂ ಸೇರಿ 3 ದಿಗ್ಗಜರ ವಿಕೆಟ್ ಪಡೆಯೋದು ನನ್ನ ಕನಸು'

Picking Rohit Sharma’s wicket would be a dream come true: Pakistan pacer Naseem Shah

ಇಸ್ಲಮಾಬಾದ್: ಪಾಕಿಸ್ತಾನ ಕ್ರಿಕೆಟ್ ತಂಡದ ಈಗಿನ ಬೌಲಿಂಗ್ ಬಣದಲ್ಲಿ ಟೀನೇಜರ್ ನಸೀಮ್ ಶಾ ಅಪಾಯಕಾರಿ ವೇಗಿಯಾಗಿ ಗುರುತಿಸಿಕೊಂಡಿದ್ದಾರೆ. ಈಗ 17ರ ಹರೆಯದವರಾಗಿರುವ ನಾಸೀಮ್, 16 ವರ್ಷ ವಯಸ್ಸಿನವರಾಗಿದ್ದಾಗ ಟೆಸ್ಟ್‌ನಲ್ಲಿ 5 ವಿಕೆಟ್ ಪಡೆದ ಅತೀ ಕಿರಿಯ ಬೌಲರ್ ಆಗಿ ದಾಖಲೆ ನಿರ್ಮಿಸಿದ್ದರು. ಬಾಂಗ್ಲಾದೇಶ ವಿರುದ್ಧ ನಸೀಮ್ ಈ ದಾಖಲೆ ನಿರ್ಮಿಸಿದ್ದರು. ಟೆಸ್ಟ್ ಪಂದ್ಯವೊಂದರಲ್ಲಿ 5 ವಿಕೆಟ್ ಪಡೆದಿದ್ದಷ್ಟೇ ಅಲ್ಲ, ಇದೇ ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಶಾ ಹ್ಯಾಟ್ರಿಕ್ ವಿಕೆಟ್ ಸಾಧನೆ ಕೂಡ ಮಾಡಿದ್ದರು.

ವೀರೇಂದ್ರ ಸೆಹ್ವಾಗ್ ಆರಂಭಿಕರಾಗಿ ಬಡ್ತಿ ಪಡೆದ ಕುತೂಹಲಕಾರಿ ಕತೆ!ವೀರೇಂದ್ರ ಸೆಹ್ವಾಗ್ ಆರಂಭಿಕರಾಗಿ ಬಡ್ತಿ ಪಡೆದ ಕುತೂಹಲಕಾರಿ ಕತೆ!

ಮುಂದೊಮ್ಮೆ ದೊಡ್ಡ ಬೌಲರ್ ಆಗಬೇಕೆಂದು ಕನಸು ಕಾಣುತ್ತಿರುವ ನಸೀಮ್ ಶಾಗೆ ವೃತ್ತಿ ಜೀವನದಲ್ಲಿ ವಿಶ್ವ ಕ್ರಿಕೆಟ್‌ನಲ್ಲಿ ಸಕ್ರಿಯರಾಗಿರುವ ಮೂವರು ದಂತಕತೆಗಳ ವಿಕೆಟ್ ಮುರಿಯೋ ಮಹದಾಸೆಯಿದೆಯಂತೆ.

ಫೀಫಾ ಪ್ಲೇಯರ್ ರೇಟಿಂಗ್‌ನಲ್ಲಿರುವ ಭಾರತದ ಟಾಪ್ 5 ಕ್ರಿಕೆಟಿಗರು ಇವರುಫೀಫಾ ಪ್ಲೇಯರ್ ರೇಟಿಂಗ್‌ನಲ್ಲಿರುವ ಭಾರತದ ಟಾಪ್ 5 ಕ್ರಿಕೆಟಿಗರು ಇವರು

ಅದರಲ್ಲೂ ಭಾರತದ ಅಪಾಯಕಾರಿ ಬ್ಯಾಟ್ಸ್‌ಮನ್‌ ಒಬ್ಬರ ವಿಕೆಟ್ ಪಡೆಯೋದು ನನ್ನ ಜೀವನದ ದೊಡ್ಡ ಕನಸು ಎಂದು ನಸೀಮ್ ಹೇಳಿಕೊಂಡಿದ್ದಾರೆ.

ಟೆಸ್ಟ್‌ನಲ್ಲಿ 5 ವಿಕೆಟ್ ದಾಖಲೆ

ಟೆಸ್ಟ್‌ನಲ್ಲಿ 5 ವಿಕೆಟ್ ದಾಖಲೆ

ಕಳೆದ ಫೆಬ್ರವರಿಯಲ್ಲಿ ಪಾಕಿಸ್ತಾನಕ್ಕೆ ಪ್ರವಾಸ ಬಂದಿದ್ದ ಬಾಂಗ್ಲಾದೇಶ ಕ್ರಿಕೆಟ್ ತಂಡ 3 ಟಿ20ಐ, 1 ಏಕದಿನ ಪಂದ್ಯ ಮತ್ತು 2 ಟೆಸ್ಟ್ ಪಂದ್ಯಗಳನ್ನು ಆಡಿತ್ತು. ಈ ವೇಳೆ ಮೊದಲ ಟೆಸ್ಟ್ ಪಂದ್ಯದಲ್ಲಿ ನಸೀಮ್ ಶಾ 5 ವಿಕೆಟ್ ಪಡೆಯುವ ಮೂಲಕ ಟೆಸ್ಟ್‌ನಲ್ಲಿ 5 ವಿಕೆಟ್ ಪಡೆದ ವಿಶ್ವದ ಅತೀ ಕಿರಿಯ ಆಟಗಾರನಾಗಿ (16 ವರ್ಷ) ದಾಖಲೆ ಬರೆದಿದ್ದರು. ಈ ಪಂದ್ಯದಲ್ಲಿ ಪಾಕಿಸ್ತಾನ ಇನ್ನಿಂಗ್ಸ್‌ ಸಹಿತ 44 ರನ್ ಜಯ ಗಳಿಸಿತ್ತು.

ರೋಹಿತ್ ಹೊಗಳಿದ ನಸೀಮ್

ರೋಹಿತ್ ಹೊಗಳಿದ ನಸೀಮ್

'ಶಾರ್ಟ್ ಅಥವಾ ಗುಡ್ ಲೆಂತ್ ಎಸೆತ ಯಾವುದೇ ಇರಲಿ, ಭಾರತದ ರೋಹಿತ್ ಶರ್ಮಾ ಎಲ್ಲಾ ಎಸೆತಗಳಿಗೂ ಬ್ಯಾಟಿಂಗ್ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಅವರ ಬ್ಯಾಟಿಂಗ್ ದಾಖಲೆಗಳೇ ಶರ್ಮಾ ಸಾಧನೆ ಬಗ್ಗೆ ಮಾತಾಡುತ್ತವೆ. ಅವರ ವಿಕೆಟ್ ಪಡೆದರೆ ನನ್ನ ಜೀವನದ ಕನಸು ನನಸಾದಂತೆ,' ಎಂದು Cricingif ಜೊತೆ ನಸೀಮ್ ಹೇಳಿಕೊಂಡಿದ್ದಾರೆ.

ಮೂವರು ಬಲಿಷ್ಠ ಬ್ಯಾಟ್ಸ್‌ಮನ್‌ಗಳು

ಮೂವರು ಬಲಿಷ್ಠ ಬ್ಯಾಟ್ಸ್‌ಮನ್‌ಗಳು

ಬಾಂಗ್ಲಾದೇಶ ವಿರುದ್ಧ ಟೆಸ್ಟ್‌ನಲ್ಲಿ ಹ್ಯಾಟ್ರಿಕ್ ವಿಕೆಟ್ ದಾಖಲೆ (ನಜ್ಮುಲ್ ಹೊಸೈನ್ ಶಾಂತೋ, ತೈಜುಲ್ ಇಸ್ಲಾಂ, ಮಹಮ್ಮದುಲ್ಲಾ) ನಿರ್ಮಿಸಿದ್ದ ನಸೀಮ್ ಶಾಗೆ ಭಾರತದ ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ, ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಮತ್ತು ಇಂಗ್ಲೆಂಡ್ ಟೆಸ್ಟ್‌ ನಾಯಕ ಜೋ ರೂಟ್ ವಿಕೆಟ್ ಪಡೆಯೋ ದೊಡ್ಡ ಕನಸಿದೆ.

ಸ್ಮಿತ್ ಒಬ್ಬ ಚತುರ ಬ್ಯಾಟ್ಸ್‌ಮನ್

ಸ್ಮಿತ್ ಒಬ್ಬ ಚತುರ ಬ್ಯಾಟ್ಸ್‌ಮನ್

'ಸ್ಟೀವ್ ಸ್ಮಿತ್ ಬ್ಯಾಟಿಂಗ್ ತಂತ್ರಗಳು ಅಸಾಂಪ್ರದಾಯಿಕವಾಗಿವೆ. ಅವರೊಬ್ಬರು ಚತುರ ಬ್ಯಾಟ್ಸ್‌ಮನ್. ಸ್ಮಿತ್ ವಿಕೆಟ್ ಪಡೆಯೋದು ನನಗೆ ಖುಷಿ ನೀಡಲಿದೆ. ಮುಂದೊಮ್ಮೆ ಸ್ಟೀವ್ ವಿಕೆಟ್ ಪಡೆಯುವ ಅವಕಾಶ ದೊರೆತರೆ ಅದೊಂದು ಒಳ್ಳೆಯ ಅನುಭವವಾಗಲಿದೆ,' ಎಂದು ಶಾ ಹೇಳಿದ್ದಾರೆ.

Story first published: Friday, July 17, 2020, 15:04 [IST]
Other articles published on Jul 17, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X