ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರೆಡ್‌ ಬಾಲ್ vs ಪಿಂಕ್‌ ಬಾಲ್: ಎರಡರ ಮಧ್ಯೆ ಅಂಥದ್ದೇನಿದೆ ವ್ಯತ್ಯಾಸ?

IND vs BAN pink test : Difference between pink and red ball
Pink vs red: SG’s chief ball inspector explains the difference

ಬೆಂಗಳೂರು, ನವೆಂಬರ್ 20: ಸದ್ಯಕ್ಕೆ ಕ್ರಿಕೆಟ್‌ ವಲಯದಲ್ಲಿ ಹೆಚ್ಚಿನ ಮಾತುಕತೆಗಳು ಭಾರತ vs ಬಾಂಗ್ಲಾದೇಶ ನಡುವಿನ ದ್ವಿತೀಯ ಟೆಸ್ಟ್ ಪಂದ್ಯದ ಬಗೆಗೆನೇ ಇದೆ. ಯಾಕೆಂದರೆ ನವೆಂಬರ್ 22ರಿಂದ ಆರಂಭಗೊಳ್ಳುತ್ತಿರುವ ಈ ಪಂದ್ಯ ಭಾರತ ಮತ್ತು ಬಾಂಗ್ಲಾ ಏರಡೂ ತಂಡಗಳ ಪಾಲಿಗೂ ವಿಶಿಷ್ಟವಾದುದೆ.

ಪಿಚ್ ರಿಪೋರ್ಟ್: ಕ್ಯಾಪ್ಟನ್ ಕೊಹ್ಲಿಗೆ ಕ್ಯೂರೇಟರ್ ನೀಡಿದ ಸಲಹೆ ಏನು?ಪಿಚ್ ರಿಪೋರ್ಟ್: ಕ್ಯಾಪ್ಟನ್ ಕೊಹ್ಲಿಗೆ ಕ್ಯೂರೇಟರ್ ನೀಡಿದ ಸಲಹೆ ಏನು?

ಕೋಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ನಡೆಯಲಿರುವ ಇತ್ತಂಡಗಳ ದ್ವಿತೀಯ ಟೆಸ್ಟ್ ಪಂದ್ಯ, ಡೇ-ನೈಟ್ ಟೆಸ್ಟ್ ಪಂದ್ಯವಾಗಿರಲಿದೆ. ಈ ಪಂದ್ಯಕ್ಕೆ ಎಸ್‌ಜಿ ಪಿಂಕ್‌ ಬಾಲ್‌ಗಳನ್ನು ಬಳಸಲಾಗುತ್ತದೆ. ಪಿಂಕ್‌ ಬಾಲ್‌ನಲ್ಲಿ ಆಡಿದ ಅನುಭವ ಎರಡೂ ತಂಡಗಳಿಗೂ ಇಲ್ಲದ್ದೇ ಪಂದ್ಯ ವಿಶೇಷ ಅನ್ನಿಸಲು ಕಾರಣ.

ಕೆಪಿಎಲ್ ಫಿಕ್ಸಿಂಗ್ ಪ್ರಕರಣಕ್ಕೆ ಟ್ವಿಸ್ಟ್, ಮೋಸದಾಟಕೆ ಹೆಣ್ಣಿನಾಸೆ ತಳುಕು!ಕೆಪಿಎಲ್ ಫಿಕ್ಸಿಂಗ್ ಪ್ರಕರಣಕ್ಕೆ ಟ್ವಿಸ್ಟ್, ಮೋಸದಾಟಕೆ ಹೆಣ್ಣಿನಾಸೆ ತಳುಕು!

ಬಾಂಗ್ಲಾ-ಭಾರತ ಎರಡೂ ತಂಡಗಳೂ ಇದೇ ಮೊದಲ ಬಾರಿಗೆ ಚೊಚ್ಚಲ ಬಾರಿಗೆ ಡೇ-ನೈಟ್ ಟೆಸ್ಟ್‌ನಲ್ಲಿ ಆಡುತ್ತಿರುವುದರಿಂದ ಸಾಮಾನ್ಯವಾಗಿ ಟೆಸ್ಟ್‌ನಲ್ಲಿ ಬಳಸಲಾಗುವ ರೆಡ್‌ ಬಾಲ್ ಮತ್ತು ಪಿಂಕ್‌ ಬಾಲ್‌ಗಿರುವ ವ್ಯತ್ಯಾಸ ಇಲ್ಲಿ ವಿವರಿಸಲಾಗಿದೆ.

ಡೇ-ನೈಟ್ ಟೆಸ್ಟ್ ಇದೇ ಮೊದಲು

ಡೇ-ನೈಟ್ ಟೆಸ್ಟ್ ಇದೇ ಮೊದಲು

ಎರಡು ಪಂದ್ಯಗಳ ಈ ಟೆಸ್ಟ್ ಸರಣಿ ಆರಂಭವಾಗುವ ಮೊದಲಿನಿಂದಲೂ ಭಾರತ-ಬಾಂಗ್ಲಾ ಎರಡೂ ತಂಡಗಳ ಆಟಗಾರರು ಪಿಂಕ್‌ ಬಾಲ್ ಬಗ್ಗೆ ತಮ್ಮತಮ್ಮ ಆಲೋಚನೆಗಳನ್ನು ಹಂಚಿಕೊಂಡಿದ್ದಾರೆ. ಡೇ-ನೈಟ್‌ ಟೆಸ್ಟ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಈ ಮೊದಲೇ ಬಂದಿತ್ತಾದರೂ ಭಾರತ ಮತ್ತು ಬಾಂಗ್ಲಾ ತಂಡಗಳು ಡೇ-ನೈಟ್ ಟೆಸ್ಟ್‌ನಲ್ಲಿ ಪಾಲ್ಗೊಳ್ಳುತ್ತಿರುವುದು ಇದೇ ಮೊದಲು.

ರೆಡ್ vs ಪಿಂಕ್‌ಗಿರೋ ವ್ಯತ್ಯಾಸವೇನು?

ರೆಡ್ vs ಪಿಂಕ್‌ಗಿರೋ ವ್ಯತ್ಯಾಸವೇನು?

ರೆಡ್ ಬಾಲ್ ಮತ್ತು ಪಿಂಕ್‌ ಬಾಲ್‌ಗೆ ಮುಖ್ಯ ವ್ಯತ್ಯಾಸವಿರೋದು ಅದರ ಹೊರ ಪದರ ಅಥವಾ ಚರ್ಮದಲ್ಲಿ. ಅದು ಬಿಟ್ಟರೆ ಕಾಟ್ಸ್‌ವೂಲ್ ಮತ್ತು ಕಾರ್ಕ್‌ನಲ್ಲಿ ತಯಾರಿಸಲಾಗುವ ಎರಡೂ ಚೆಂಡಿನ ಒಳಪದರ ಒಂದೇನೆ. ಚೆಂಡನ್ನು ಹೊಲಿಯುವ ರೀತಿಯಲ್ಲೂ ಅಂಥ ವ್ಯತ್ಯಾಸವೇನಿಲ್ಲ. ಆದರೆ ರೆಡ್ ಬಾಲನ್ನು ಬಿಳಿ ದಾರದಿಂದ, ಪಿಂಕ್‌ ಬಾಲನ್ನು ಕಪ್ಪು ದಾರದಿಂದ ಹೊಲಿಯಲಾಗುತ್ತದೆ.

ಮಾಜಿ ಆಟಗಾರನಿಂದ ಮಾಹಿತಿ

ಮಾಜಿ ಆಟಗಾರನಿಂದ ಮಾಹಿತಿ

ಪಿಂಕ್‌-ರೆಡ್‌ ಬಾಲ್‌ಗಿರುವ ವ್ಯಾತ್ಯಾಸದ ಬಗ್ಗೆ ಭಾರತದಲ್ಲಿ ಟೆಸ್ಟ್ ಪಂದ್ಯಗಳಿಗೆ ಚೆಂಡು ಒದಗಿಸುವ ಮೀರತ್ ಮೂಲದ ಸಾನ್ಸ್‌ಪರೀಲ್ ಗ್ರೀನ್‌ಲ್ಯಾಂಡ್ಸ್ (ಎಸ್‌ಜಿ) ಕಂಪನಿಯ ಪ್ರೊಡಕ್ಷನ್ ಡೈರೆಕ್ಟರ್ ವಾಸಿಯುಲ್ಲ ಖಾನ್ ಮಾಹಿತಿ ಒದಗಿಸಿದ್ದಾರೆ. ಖಾನ್, ರಣಜಿ ಟ್ರೋಫಿಯಲ್ಲಿ ಉತ್ತರ ಪ್ರದೇಶವನ್ನು 5 ಪಂದ್ಯಗಳಲ್ಲಿ ಪ್ರತಿನಿಧಿಸಿರುವ ಮಾಜಿ ಪ್ರಥಮದರ್ಜೆ ಆಟಗಾರ.

ಚೆಂಡಿನಲ್ಲಿ ಮೇಣದ ಬಳಕೆ

ಚೆಂಡಿನಲ್ಲಿ ಮೇಣದ ಬಳಕೆ

ಚೆಂಡು ತಯಾರಿಕೆಗೆ ಮೇಣವನ್ನು ಬಳಸಲಾಗುತ್ತದೆ. ಆಟ ಮುಂದುವರಿದಂತೆ ಆಟಗಾರರು ಅದರ ಹೊರಮೈಯನ್ನು ತಿಕ್ಕುವುದರ ಮೂಲಕ ಚೆಂಡನ್ನು ರಿವರ್ಸ್ ಸ್ವಿಂಗ್‌ಗೆ ಬದಲಾಯಿಸಲು ಸಾಧ್ಯವಾಗುತ್ತದೆ. ಮೇಣವೇ ಕೆಂಪು ಚೆಂಡಿಗೆ ಬಣ್ಣವನ್ನು ನೀಡುತ್ತದೆ. ಅಂದರೆ ಚೆಂಡಿಗೆ ಮೇಣವೇ ಚೆರ್ರಿ (ಪಿಂಕ್) ಬಣ್ಣ ನೀಡುತ್ತದೆ. ಪಿಂಕ್‌ ಬಾಲ್‌ಗೆ ವ್ಯಾಕ್ಸ್ ಬಳಸಿದರೆ ಚೆಂಡು ಪಿಂಕ್‌ ಬಾಲ್ ಬ್ಲ್ಯಾಕ್‌ ಆಗಿ ಬದಲಾಗುತ್ತದೆ. ಅಂದ್ಹಾಗೆ ಪಿಂಕ್‌ ಬಾಲ್, ಬ್ಯಾಟ್ಸ್‌ಮನ್‌ಗೆ ಅನುಕೂಲ ಒದಗಿಸುವುದಕ್ಕಿಂತಲೂ 10-15 ಶೇ. ಹೆಚ್ಚು ಬೌಲರ್‌ಗಳಿಗೆ ನೆರವಾಗುತ್ತದೆ.

Story first published: Wednesday, November 20, 2019, 18:12 [IST]
Other articles published on Nov 20, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X