ಚೆನ್ನೈ ಪರ ಮೊದಲ ಪಂದ್ಯದಲ್ಲಿ ಮಿಂಚಿ ದಾಖಲೆ ಬರೆದ ಪಿಯೂಷ್ ಚಾವ್ಲಾ

ಅಬುದಾಭಿ, ಸೆ. 20: ಕೊರೊನಾ ಕಾಟದ ನಡುವೆ ಮರಳುಗಾಡಿನಲ್ಲಿ ಕ್ರಿಕೆಟ್ ಪ್ರೇಮಿಗಳ ಪಾಲಿನ ಓಯಸೀಸ್ ಆಗಿ ಐಪಿಎಲ್ ಕಾಣಿಸತೊಡಗಿದೆ. ಅಬುದಾಭಿಯ ಮೈದಾನದಲ್ಲಿ ನಾಲ್ಕು ಬಾರಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ತಂಡವನ್ನು ಮೂರು ಬಾರಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ಸೋಲಿಸಿದೆ. ಹಲವು ಹೊಸ ನಿಯಮ, ದಾಖಲೆಗಳಿಗೆ ಪಂದ್ಯ ಸಾಕ್ಷಿಯಾಯಿತು.

ಚೆನ್ನೈ ಸೂಪರ್ ಕಿಂಗ್ಸ್ ಪರ ಇದೇ ಮೊದಲ ಬಾರಿಗೆ ಆಡಿದ ಲೆಗ್ ಸ್ಪಿನ್ನರ್ ಪಿಯೂಷ್ ಚಾವ್ಲಾ ಅವರು ಇಮ್ರಾನ್ ತಾಹೀರ್ ಅನುಪಸ್ಥಿತಿಯಲ್ಲಿ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದರು. 4 ಓವರ್ ಗಳಲ್ಲಿ 21ರನ್ನಿತ್ತು ಮುಂಬೈ ತಂಡದ ನಾಯಕ ರೋಹಿತ್ ಶರ್ಮ ಅವರ ವಿಕೆಟ್ ಗಳಿಸಿದರು. ರೋಹಿತ್ ವಿಕೆಟ್ ಗಳಿಸುತ್ತಿದ್ದಂತೆ ಐಪಿಎಲ್ ನಲ್ಲಿ ಅತಿ ಹೆಚ್ಚು ವಿಕೆಟ್ ಗಳಿಸಿದ ಬೌಲರ್ ಗಳ ಪೈಕಿ ಮೂರನೇ ಸ್ಥಾನಕ್ಕೇರಿದರು.

ಆರಂಭ ಪಂದ್ಯ ಸೋಲಿನಲ್ಲೂ ದಾಖಲೆ ಬರೆದ ಮುಂಬೈ ಇಂಡಿಯನ್ಸ್

ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮುಂಬೈ ಇಂಡಿಯನ್ಸ್ ನ ಲಸಿತ್ ಮಾಲಿಂಗ ಇದ್ದಾರೆ. 170 ವಿಕೆಟ್ ಗಳಿಸಿದ್ದು, ಸದ್ಯಕ್ಕೆ ಈ ಟೂರ್ನಮೆಂಟ್ ನಿಂದ ಹಿಂದೆ ಸರಿದಿದ್ದಾರೆ. ಎರಡನೇ ಸ್ಥಾನದಲ್ಲಿ ಅಮಿತ್ ಮಿಶ್ರಾ 157 ವಿಕೆಟ್ ಪಡೆದುಕೊಂಡಿದ್ದರೆ, ಹರ್ಭಜನ್ ಸಿಂಗ್ ಹಿಂದಿಕ್ಕಿ ಮೂರನೇ ಸ್ಥಾನಕ್ಕೇರಿದ ಪಿಯೂಷ್ ಚಾವ್ಲಾ151 ವಿಕೆಟ್ ಪಡೆದಿದ್ದಾರೆ. ಹರ್ಭಜನ್ ಸಿಂಗ್ ಕೂಡಾ ಈ ಬಾರಿ ಐಪಿಎಲ್ ನಲ್ಲಿ ಆಡುತ್ತಿಲ್ಲ. ಕೊನೆ ಕ್ಷಣದಲ್ಲಿ ಹಿಂದೆ ಸರಿದಿದ್ದಾರೆ. ಐದನೇ ಸ್ಥಾನದಲ್ಲಿ ವೆಸ್ಟ್ ಇಂಡೀಸ್ ಆಲ್ ರೌಂಡರ್ ಡ್ವಾಯ್ನೆ ಬ್ರಾವೋ ಇದ್ದು, 147 ವಿಕೆಟ್ ಗಳಿಸಿದ್ದಾರೆ.

ಅನುಭವಿ ಬೌಲರ್ ಪಿಯೂಷ್

ಅನುಭವಿ ಬೌಲರ್ ಪಿಯೂಷ್

ಕಿಂಗ್ಸ್ ಎಲೆವನ್ ಪಂಜಾಬ್ ತಂಡದಿಂದ ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ಈ ಬಾರಿ ಚೆನ್ನೈ ಸೂಪರ್ ಕಿಂಗ್ಸ್ ಲೆಗ್ ಸ್ಪಿನ್ನರ್ ಪಿಯೂಷ್ ಚಾವ್ಲಾ ಐಪಿಎಲ್ ನಲ್ಲಿ ಅನುಭವಿ ಬೌಲರ್. ಎಂಎಸ್ ಧೋನಿ ಅವರು ಮೊದಲ ಪಂದ್ಯಕ್ಕೆ ಚಾವ್ಲಾ ಆಯ್ಕೆ ಮಾಡಲು ಅನುಭವವೇ ಕಾರಣ. ಕಳೆದ ಸೀಸನ್ ನಲ್ಲಿ ಕೆಕೆಆರ್ ಪರ ಅತ್ಯಂತ ದುಬಾರಿ ಬೌಲರ್ ಎನಿಸಿಕೊಂಡಿದ್ದ ಚಾವ್ಲಾರನ್ನು ಸಿಎಸ್ ಕೆಗೆ ಆಯ್ಕೆ ಮಾಡಿದ್ದು ಹಲವರ ಹುಬ್ಬೇರಿಸಿತ್ತು. ಆದರೆ, ಧೋನಿಗೆ ಯಾವುದೇ ಬೌಲರ್ ಕೈಯಲ್ಲಿ ದುಡಿಸಿಕೊಳ್ಳುವ ಚಾಣಕ್ಯತನ ಇರುವುದರಿಂದ ಈ ಬಾರಿ ಚಾವ್ಲಾರಿಂದ ಉತ್ತಮ ಪ್ರದರ್ಶನ ನಿರೀಕ್ಷಿಸಬಹುದು.

ಟಾಪ್ 1 ಬೌಲರ್ ಲಸಿತ್ ಮಾಲಿಂಗ

ಟಾಪ್ 1 ಬೌಲರ್ ಲಸಿತ್ ಮಾಲಿಂಗ

ಶ್ರೀಲಂಕಾದ ವೇಗಿ ಲಸಿತ್ ಮಾಲಿಂಗ 122 ಪಂದ್ಯಗಳನ್ನಾಡಿದ್ದು, 471.1 ಓವರ್ ಗಳಲ್ಲಿ 3,366 ರನ್ ನೀಡಿ, 170 ವಿಕೆಟ್ ಗಳಿಸಿದ್ದಾರೆ. ಸ್ಟ್ರೈಕ್ ರೇಟ್ 16.62 ರಷ್ಟಿದ್ದರೆ, ಎಕಾನಾಮಿ 7.14. 6 ಬಾರಿ ಪಂದ್ಯವೊಂದರಲ್ಲಿ 4 ವಿಕೆಟ್ ಹಾಗೂ ಒಂದು ಬಾರಿ 5 ವಿಕೆಟ್ ಪಡೆದುಕೊಂಡಿದ್ದಾರೆ.

ಈ ಸಲ ಕಪ್ ಈ ತಂಡಕ್ಕೆ-ಕ್ರಿಕೆಟ್ ಬುಕ್ಕಿಗಳ ಭವಿಷ್ಯ ಬಹಿರಂಗ

ಟಾಪ್ 2 ಬೌಲರ್ ಅಮಿತ್ ಮಿಶ್ರಾ

ಟಾಪ್ 2 ಬೌಲರ್ ಅಮಿತ್ ಮಿಶ್ರಾ

ಭಾರತದ ಲೆಗ್ ಸ್ಪಿನ್ನರ್ ಅಮಿತ್ ಮಿಶ್ರಾ ಅವರು 147 ಪಂದ್ಯಗಳನ್ನಾಡಿದ್ದು, 516.5.1 ಓವರ್ ಗಳಲ್ಲಿ 3,799 ರನ್ ನೀಡಿ, 157 ವಿಕೆಟ್ ಗಳಿಸಿದ್ದಾರೆ. ಸ್ಟ್ರೈಕ್ ರೇಟ್ 19.75 ರಷ್ಟಿದ್ದರೆ, ಎಕಾನಾಮಿ 7.35. 3 ಬಾರಿ ಪಂದ್ಯವೊಂದರಲ್ಲಿ 4 ವಿಕೆಟ್ ಹಾಗೂ ಒಂದು ಬಾರಿ 5 ವಿಕೆಟ್ ಪಡೆದುಕೊಂಡಿದ್ದಾರೆ.

ಟಾಪ್ 3 ಬೌಲರ್ ಪಿಯೂಷ್ ಚಾವ್ಲಾ

ಟಾಪ್ 3 ಬೌಲರ್ ಪಿಯೂಷ್ ಚಾವ್ಲಾ

ಭಾರತದ ಲೆಗ್ ಸ್ಪಿನ್ನರ್ ಪಿಯೂಷ್ ಚಾವ್ಲಾ 158ಪಂದ್ಯಗಳನ್ನಾಡಿದ್ದು, 524.4.1 ಓವರ್ ಗಳಲ್ಲಿ 4093 ರನ್ ನೀಡಿ, 151 ವಿಕೆಟ್ ಗಳಿಸಿದ್ದಾರೆ. ಸ್ಟ್ರೈಕ್ ರೇಟ್ 20.84 ರಷ್ಟಿದ್ದರೆ, ಎಕಾನಾಮಿ 7.80. 2 ಬಾರಿ ಪಂದ್ಯವೊಂದರಲ್ಲಿ 4 ವಿಕೆಟ್ ಹಾಗೂ ಒಂದು ಬಾರಿಯೂ 5 ವಿಕೆಟ್ ಪಡೆದುಕೊಂಡಿಲ್ಲ.

ಇದೇನ್ ಗುರು! ಐಪಿಎಲ್ 13 ಆಟದ ನಡುವೆ ನಕಲಿ ಸೌಂಡು

ಟಾಪ್ 4 ಬೌಲರ್ ಹರ್ಭಜನ್ ಸಿಂಗ್

ಟಾಪ್ 4 ಬೌಲರ್ ಹರ್ಭಜನ್ ಸಿಂಗ್

ಭಾರತದ ಅಫ್ ಸ್ಪಿನ್ನರ್ ಹರ್ಭಜನ್ ಸಿಂಗ್ 160 ಪಂದ್ಯಗಳನ್ನಾಡಿದ್ದು, 562.2 ಓವರ್ ಗಳಲ್ಲಿ 3,967 ರನ್ ನೀಡಿ, 150 ವಿಕೆಟ್ ಗಳಿಸಿದ್ದಾರೆ. ಸ್ಟ್ರೈಕ್ ರೇಟ್ 22.49 ರಷ್ಟಿದ್ದರೆ, ಎಕಾನಾಮಿ 7.05. 1 ಬಾರಿ ಪಂದ್ಯವೊಂದರಲ್ಲಿ 4 ವಿಕೆಟ್ ಹಾಗೂ ಒಂದು ಬಾರಿ 5 ವಿಕೆಟ್ ಪಡೆದುಕೊಂಡಿದ್ದಾರೆ.

ಟಾಪ್ 5 ಬೌಲರ್ ಡ್ವಾಯ್ನೆ ಬ್ರಾವೋ

ಟಾಪ್ 5 ಬೌಲರ್ ಡ್ವಾಯ್ನೆ ಬ್ರಾವೋ

ವೆಸ್ಟ್ ಇಂಡೀಸ್ ವೇಗಿ ಡ್ವಾಯ್ನೆ ಬ್ರಾವೋ 134 ಪಂದ್ಯಗಳನ್ನಾಡಿದ್ದು, 431 ಓವರ್ ಗಳಲ್ಲಿ 3,617 ರನ್ ನೀಡಿ, 147 ವಿಕೆಟ್ ಗಳಿಸಿದ್ದಾರೆ. ಸ್ಟ್ರೈಕ್ ರೇಟ್ 17.59 ರಷ್ಟಿದ್ದರೆ, ಎಕಾನಮಿ 8.39. 2 ಬಾರಿ ಪಂದ್ಯವೊಂದರಲ್ಲಿ 4 ವಿಕೆಟ್ ಹಾಗೂ ಒಂದು ಬಾರಿಯೂ 5 ವಿಕೆಟ್ ಪಡೆದುಕೊಂಡಿಲ್ಲ.

For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Sunday, September 20, 2020, 14:06 [IST]
Other articles published on Sep 20, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X