ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪಿಯೂಷ್ ಚಾವ್ಲಾ ತಂದೆ ಪ್ರಮೋದ್ ಕುಮಾರ್ ಚಾವ್ಲಾ ಕೊರೊನಾ ವೈರಸ್‌ಗೆ ಬಲಿ

Piyush Chawlas Father Pramod Kumar Chawla Passes Away due to Covid-19

ಭಾರತೀಯ ಕ್ರಿಕೆಟ್‌ನ ಅನುಭವಿ ಸ್ಪಿನ್ನರ್ ಪಿಯೂಷ್ ಚಾವ್ಲಾ ತಮ್ಮ ತಂದೆಯನ್ನು ಕಳೆದುಕೊಂಡಿದ್ದಾರೆ. ಪಿಯೂಷ್ ಚಾವ್ಲಾ ಅವರ ತಂದೆ ಪ್ರಮೀದ್ ಕುಮಾರ್ ಚಾವ್ಲಾ ಕೊರೊನಾ ವೈರಸ್‌ನಿಂದ ಬಳಲುತ್ತಿದ್ದು ಚಿಕಿತ್ಸೆಯನ್ನು ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಸೋಮವಾರ ನಿಧನರಾಗಿದ್ದಾರೆ.

ಈ ದುಃಖದ ಸುದ್ದಿಯನ್ನು ಪಿಯೂಷ್ ಚಾವ್ಲಾ ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ತಂದೆ ಕೊರೊನಾ ವೈರಸ್‌ನಿಂದ ಬಳಲುತ್ತಿದ್ದ ಸಂಗತಿಯನ್ನು ಕೂಡ ಈ ಪೋಸ್ಟ್‌ನಲ್ಲಿ ಪಿಯೂಷ್ ಚಾವ್ಲಾ ತಿಳಿಸಿದ್ದು ಸೋಮವಾರ ಕೊನೆಯುಸಿರು ಎಳೆದಿರುವ ಸುದ್ದಿಯನ್ನು ತಿಳಿಸಿದ್ದಾರೆ.

ವಿಶ್ವಕಪ್ ಮುಂದೂಡಿಕೆಯ ಸಂಭವದ ಬಗ್ಗೆ ಇಯಾನ್ ಚಾಪೆಲ್ ಮಾತುವಿಶ್ವಕಪ್ ಮುಂದೂಡಿಕೆಯ ಸಂಭವದ ಬಗ್ಗೆ ಇಯಾನ್ ಚಾಪೆಲ್ ಮಾತು

"ಬದುಕು ಇವರಿಲ್ಲದೆ ಹಿಂದಿನಂತೆ ಇನ್ನೆಂದೂ ಇರುವುದಿಲ್ಲ. ನನ್ನ ಸಾಮರ್ಥ್ಯದ ಆಧಾರ ಸ್ಥಂಭವನ್ನು ಇಂದು ಕಳೆದುಕೊಂಡಿದ್ದೇನೆ" ಎಂದು ಪಿಯೂಷ್ ಚಾವ್ಲಾ ಸಂದೇಶವನ್ನು ಹಂಚಿಕೊಂಡಿದ್ದಾರೆ. ತಂದೆಯ ಫೋಟೋವನ್ನು ಹಂಚಿಕೊಂಡಿದ್ದು ಅಭಿಮಾನಿಗಳಿಂದ ಪ್ರಾರ್ಥನೆಗಾಗಿ ಕೋರಿದ್ದಾರೆ.

2014ರ ಐಪಿಎಲ್ ಚಾಂಪಿಯನ್ ತಂಡದ ಭಾಗವಾಗಿದ್ದ ಪಿಯೂಷ್ ಚಾವ್ಲಾ ನಂತರ ಸಿಎಸ್‌ಕೆ ತಂಡದಲ್ಲಿದ್ದರು. ಈ ಬಾರಿಯ ಐಪಿಎಲ್ ಆವೃತ್ತಿಗೂ ಮುನ್ನ ನಡೆದ ಹರಾಜು ಪ್ರಕ್ರಿಯೆಯಲ್ಲಿ ಮುಂಬೈ ಇಂಡಿಯನ್ಸ್ ತಂಡದ ಭಾಗವಾಗಿದ್ದರು. ಆದರೆ ಆಡಿದ 7 ಪಂದ್ಯಗಳಲ್ಲಿ ಆಡುವ 11ರ ಬಳಗದಲ್ಲಿ ಕಾಣಿಸಿಕೊಂಡಿರಲಿಲ್ಲ. ಸದ್ಯ ಕೊರಿನಾ ವೈರಸ್‌ನ ಕಾರಣದಿಂದಾಗಿ ಟೂರ್ನಿಯನ್ನು ಮುಂದೂಡಲಾಗಿದೆ.

ಐಪಿಎಲ್ ಮುಂದೂಡಿಕೆ: ಸುರಕ್ಷಿತವಾಗಿ ತವರಿಗೆ ಮರಳಿದ ವೆಸ್ಟ್ ಇಂಡೀಸ್ ಕ್ರಿಕೆಟಿಗರುಐಪಿಎಲ್ ಮುಂದೂಡಿಕೆ: ಸುರಕ್ಷಿತವಾಗಿ ತವರಿಗೆ ಮರಳಿದ ವೆಸ್ಟ್ ಇಂಡೀಸ್ ಕ್ರಿಕೆಟಿಗರು

ಇನ್ನು ಇದಕ್ಕೂ ಮುನ್ನ ರಾಜಸ್ಥಾನ್ ರಾಯಲ್ಸ್ ತಂಡದ ಯುವ ವೇಗಿ ಚೇತನ್ ಸಕಾರಿಯಾ ತಂದೆ ಕೂಡ ಕೊರೊನಾ ವೈರಸ್‌ಗೆ ಬಲಿಯಾಗಿದ್ದರು. ಗುಜರಾತ್‌ನ ಭಾವ್‌ನಗರದಲ್ಲಿ ಚೇತನ್ ಸಕಾರಿಯಾ ತಂದೆ ಕಾಂಜಿ ಭಾಯ್ ಸಕಾರಿಯಾ ಚಿಕಿತ್ಸೆಯನ್ನು ಪಡೆಯುತ್ತಿದ್ದರು. ಆದರೆ ಭಾನುವಾರ ಅವರು ಮೃತಪಟ್ಟಿದ್ದಾರೆ.

Story first published: Monday, May 10, 2021, 14:56 [IST]
Other articles published on May 10, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X