ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPL 2022: ಫಾರ್ಮ್‌ಗೆ ಮರಳಲು ಕುಚಿಕು ಗೆಳೆಯನಿಗೆ ಎಬಿಡಿ ಕೊಟ್ಟ ಮಹತ್ವದ ಟಿಪ್ಸ್ ಏನು?

PL 2022: RCB Former Cricketer AB De Villiers Advice To Virat Kohli

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ನಾಯಕ ಹಾಗೂ ಪ್ರಮುಖ ಆಟಗಾರ ವಿರಾಟ್ ಕೊಹ್ಲಿ ಈ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2022ರ ಋತುವಿನಲ್ಲಿ ರನ್‌ಗಳಿಗಾಗಿ ಪರದಾಡುತ್ತಿದ್ದು, ಬ್ಯಾಟಿಂಗ್‌ನಲ್ಲಿ ಮಂಕಾಗಿದ್ದಾರೆ ಎಂದೆನಿಸುತ್ತಿದೆ.

ಕಳೆದ ಕೊನೆಯ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ (ಜಿಟಿ) ತಂಡದ ವಿರುದ್ಧ 58 ಮತ್ತು ಮುಂಬೈ ಇಂಡಿಯನ್ಸ್ (ಎಂಐ) ವಿರುದ್ಧ 48 ರನ್‌ಗಳ ಅತ್ಯಧಿಕ ರನ್ ಹೊರತುಪಡಿಸಿ, ವಿರಾಟ್ ಕೊಹ್ಲಿ ಹೆಚ್ಚಾಗಿ ಫಾರ್ಮ್‌ನಿಂದ ಹೊರಗಿದ್ದಾರೆ.

ಐಪಿಎಲ್ 2022ರಲ್ಲಿ ಈ ಬಲಗೈ ಸ್ಫೋಟಕ ಬ್ಯಾಟ್ಸ್‌ಮನ್ ಇದುವರೆಗೆ 10 ಪಂದ್ಯಗಳಲ್ಲಿ 20.67ರ ಸರಾಸರಿಯಲ್ಲಿ 186 ರನ್ ಗಳಿಸಿದ್ದಾರೆ. ಅಂಕಿಅಂಶಗಳ ಪ್ರಕಾರ, ಮಾಜಿ ಆರ್‌ಸಿಬಿ ಹೊಡಿಬಡಿ ಆಟಗಾರ ಎಬಿ ಡಿವಿಲಿಯರ್ಸ್ ವಿರಾಟ್ ಕೊಹ್ಲಿಗೆ ಕೆಲವೊಂದು ಟಿಪ್ಸ್ ನೀಡಿದ್ದಾರೆ.

 Mr 360 ಎಬಿ ಡಿವಿಲಿಯರ್ಸ್ ಕೊಹ್ಲಿ ವಿಚಾರವಾಗಿ ಹೇಳಿದ್ದೇನು?

Mr 360 ಎಬಿ ಡಿವಿಲಿಯರ್ಸ್ ಕೊಹ್ಲಿ ವಿಚಾರವಾಗಿ ಹೇಳಿದ್ದೇನು?

ಎಬಿ ಡಿವಿಲಿಯರ್ಸ್ ಅವರನ್ನು ತಮ್ಮ ಅತ್ಯುತ್ತಮ ಸ್ಟ್ರೋಕ್‌ನಿಂದಾಗಿ 'Mr 360' ಚುರುಕುಬುದ್ಧಿಯ ಫೀಲ್ಡಿಂಗ್‌ಗಾಗಿ 'ಸೂಪರ್‌ಮ್ಯಾನ್' ಎಂದು ಕರೆಯುತ್ತಾರೆ. ಎಬಿಡಿ ತಮ್ಮ ಅಮೋಘ ಸ್ಟ್ರೈಕ್‌ರೇಟ್‌ನಿಂದಾಗಿ ಹೊಡಿಬಡಿ ಆಟಕ್ಕೆ ಹೆಸರುವಾಸಿ.

ಆದಾಗ್ಯೂ, ಎಬಿಡಿಯವರು ಇಂಡಿಯನ್ ಪ್ರೀಮಿಯರ್ ಲೀಗ್ ಫ್ರಾಂಚೈಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಆಡಿದ ತಮ್ಮ ನಿಕಟ ಸ್ನೇಹಿತ, ಭಾರತೀಯ ಕ್ರಿಕೆಟ್‌ನ ಸೂಪರ್‌ಸ್ಟಾರ್ ವಿರಾಟ್ ಕೊಹ್ಲಿಯವರ ಫಾರ್ಮ್ ವಿಚಾರವಾಗಿ ಸಹಾನುಭೂತಿ ತೋರಿಸಿದ್ದಾರೆ.

58 ರನ್ ಗಳಿಸುವ ಮೊದಲು ಸತತ ಎರಡು ಗೋಲ್ಡನ್ ಡಕ್ ಔಟ್

58 ರನ್ ಗಳಿಸುವ ಮೊದಲು ಸತತ ಎರಡು ಗೋಲ್ಡನ್ ಡಕ್ ಔಟ್

'ಕಿಂಗ್ ಕೊಹ್ಲಿ' ಅವರು ಕಳೆದ ಶನಿವಾರ 58 ರನ್ ಗಳಿಸುವ ಮೊದಲು ಸತತ ಎರಡು ಗೋಲ್ಡನ್ ಡಕ್‌ಗಳನ್ನು ಒಳಗೊಂಡಂತೆ ಕಳಪೆ ಪ್ರದರ್ಶನ ನೀಡಿ ಪೆವಿಲಿಯನ್‌ಗೆ ಮರಳುತ್ತಿದ್ದರು. ಅಲ್ಲದೆ ಕಳೆದ ಎರಡು ವರ್ಷಗಳಿಂದ ಎಲ್ಲಾ ಮಾದರಿಗಳ 100ಕ್ಕೂ ಹೆಚ್ಚು ಪಂದ್ಯಗಳಲ್ಲಿ ಶತಕ ಬಾರಿಸುವಲ್ಲಿ ವಿಫಲರಾಗಿದ್ದಾರೆ.

"ಬ್ಯಾಟ್ಸ್‌ಮನ್ ಆಗಿ ನೀವು ಕೆಟ್ಟ ಫಾರ್ಮ್‌ನಿಂದ ಹೊರಬರಲು ಕೇವಲ ಒಂದು ಅಥವಾ ಎರಡು ಹೊಡೆತ‌ಗಳ ದೂರದಲ್ಲಿದ್ದೀರಿ,'' ಎಂದು ಎಬಿ ಡಿವಿಲಿಯರ್ಸ್ ಹೇಳಿದರು. ಫಾರ್ಮ್ ನಿಮ್ಮ ಬಳಿಗೆ ಒಮ್ಮೆ ಬಂದರೆ ಮತ್ತೆ ಅದು ಹಿಂತಿರುಗುವುದು ಕಷ್ಟವೆಂದು,'' ಹೇಳಿದ್ದಾರೆ.

 ಸ್ಪಷ್ಟವಾದ ಮನಸ್ಸು ಮತ್ತು ತಾಜಾ ಶಕ್ತಿಯ ಅಗತ್ಯ

ಸ್ಪಷ್ಟವಾದ ಮನಸ್ಸು ಮತ್ತು ತಾಜಾ ಶಕ್ತಿಯ ಅಗತ್ಯ

"ಎಬಿ ಡಿವಿಲಿಯರ್ಸ್ ಸದ್ಯ ವಿರಾಟ್ ಕೊಹ್ಲಿಯೊಂದಿಗೆ ಸಂಪರ್ಕದಲ್ಲಿಲ್ಲ ಎಂದು ಹೇಳುತ್ತಾರೆ, ಆದರೆ ಹೋರಾಟವು ಹೆಚ್ಚಾಗಿ ಮನಸ್ಸಿನಲ್ಲಿದೆ ಎಂದು ಹೇಳುತ್ತಾರೆ. ನಾನು ಅದಕ್ಕೆ ಶೇಕಡಾವಾರು ಹಾಕಲು ಸಾಧ್ಯವಿಲ್ಲ, ಆದರೆ ಇದು ಮನಸ್ಸು ಮತ್ತು ಶಕ್ತಿ ಸೇರಿದ ಮುಖ್ಯ ಯುದ್ಧವಾಗಿದೆ,'' ಎಂದು ಎಬಿಡಿ ಅಭಿಪ್ರಾಯಪಟ್ಟಿದ್ದಾರೆ.

"ನೀವು ರಾತ್ರೋರಾತ್ರಿ ಕೆಟ್ಟ ಆಟಗಾರರಾಗುವುದಿಲ್ಲ. ವಿರಾಟ್ ಇದನ್ನು ತಿಳಿದಿರುತ್ತಾರೆ ಮತ್ತು ನನಗೂ ತಿಳಿದಿದೆ. ಇದು ನೀವು ಯೋಚಿಸುವ ಮತ್ತು ನಿಮ್ಮ ಮನಸ್ಸನ್ನು ಹೊಂದಿಸುವ ರೀತಿ ಎಂದು ನಾನು ಭಾವಿಸುತ್ತೇನೆ. ನೀವು ಆಡಿದಾಗಲೆಲ್ಲಾ ನಿಮಗೆ ಸ್ಪಷ್ಟವಾದ ಮನಸ್ಸು ಮತ್ತು ತಾಜಾ ಶಕ್ತಿಯ ಅಗತ್ಯವಿರುತ್ತದೆ ಮತ್ತು ಅದರ ನಂತರ ನೀವು ಒಂದು ಮಾರ್ಗವನ್ನು ಕಂಡುಕೊಳ್ಳಬಹುದು,'' ಎಂದು ಕಿವಿಮಾತು ಹೇಳಿದ್ದಾರೆ.

ಎಬಿ ಡಿವಿಲಿಯರ್ಸ್ ಟಿ20 ಸ್ವರೂಪದಿಂದ ಸಾಕಷ್ಟು ಹಣವನ್ನು ಗಳಿಸಿದ್ದರೂ ಅವರು ಟೆಸ್ಟ್ ಆಟದ ಬಗ್ಗೆ ದೃಢವಾದ ನಿಲುವು ಹೊಂದಿದ್ದಾರೆ. 2004 ಮತ್ತು 2018ರ ನಡುವೆ 114 ಟೆಸ್ಟ್‌ಗಳಲ್ಲಿ ಅವರು ದಕ್ಷಿಣ ಆಫ್ರಿಕಾಕ್ಕಾಗಿ 8,765 ರನ್‌ಗಳನ್ನು ಪೇರಿಸಿದ್ದು, 50ಕ್ಕಿಂತ ಹೆಚ್ಚು ಸರಾಸರಿ ಹೊಂದಿದ್ದಾರೆ.

Dhoni ಹಾಗು Faf ನಡುವೆ ಟಾಸ್‌ನಲ್ಲಿ ನಡೆದಿದ್ದೇನು | Oneindia Kannada
 ಟೆಸ್ಟ್ ಕ್ರಿಕೆಟ್ ಇಲ್ಲದಿದ್ದಲ್ಲಿ ನಾನು ಕ್ರಿಕೆಟ್ ನೋಡುವುದನ್ನು ನಿಲ್ಲಿಸುತ್ತೇನೆ

ಟೆಸ್ಟ್ ಕ್ರಿಕೆಟ್ ಇಲ್ಲದಿದ್ದಲ್ಲಿ ನಾನು ಕ್ರಿಕೆಟ್ ನೋಡುವುದನ್ನು ನಿಲ್ಲಿಸುತ್ತೇನೆ

ಟೆಸ್ಟ್ ಕ್ರಿಕೆಟ್ ನನ್ನ ನಂಬರ್ ಒನ್ ಫಾರ್ಮ್ಯಾಟ್ ಎಂದ ಎಬಿ ಡಿವಿಲಿಯರ್ಸ್, "ಹೆಚ್ಚಿನ ಆಟಗಾರರು ಹಾಗೆ ಭಾವಿಸುತ್ತಾರೆ ಎಂದು ನಾನು ಭಾವಿಸುತ್ತೇನೆ. ನಿಮ್ಮ ತಂಡದೊಂದಿಗೆ ಐದು ದಿನಗಳ ಕಾಲ ಅಲ್ಲಿ ನಿಲ್ಲುವುದಕ್ಕಿಂತ ಹೆಚ್ಚು ಲಾಭದಾಯಕವಾದುದೇನೂ ಇಲ್ಲವೆಂದರು".

"ಇದು ಅಂತಿಮ ಸವಾಲು. ಕಠಿಣ ಸ್ವರೂಪಗಳಲ್ಲಿ ಆ ಸವಾಲನ್ನು ಅವರು ಬಯಸುವುದಿಲ್ಲ ಎಂದು ಯಾರಾದರೂ ಏಕೆ ಹೇಳುತ್ತಾರೆಂದು ನನಗೆ ತಿಳಿದಿಲ್ಲ. ಟೆಸ್ಟ್ ಕ್ರಿಕೆಟ್ ಇಲ್ಲದಿದ್ದಲ್ಲಿ ನಾನು ಕ್ರಿಕೆಟ್ ನೋಡುವುದನ್ನು ನಿಲ್ಲಿಸುತ್ತೇನೆ," ಎಂದು ಅಚ್ಚರಿಯ ಹೇಳಿಕೆ ನೀಡಿದರು.

ಅದು ಏನೇ ಇರಲಿ, ತನ್ನ ನೆಚ್ಚಿನ ಗೆಳೆಯನ ಪ್ರಸ್ತುತ ಆಟದ ಬಗ್ಗೆ ಮಾತನಾಡಿರುವ ಎಬಿಡಿ, ವಿರಾಟ್ ಕೊಹ್ಲಿ ತನ್ನ ಹಳೆಯ ಫಾರ್ಮ್‌ಗೆ ಮರಳಲು ತನ್ನದೇ ಶೈಲಿಯಲ್ಲಿ ಸಲಹೆ ನೀಡಿದ್ದಾರೆ. ಆರ್‌ಸಿಬಿ ಬುಧವಾರ ನಡೆಯಲಿರುವ ಚೆನ್ನೈ ಸೂಪರ್ ಕಿಂಗ್ಸ್‌ನ ವಿರುದ್ಧದ ಪಂದ್ಯದಲ್ಲಿ ಜಯಗಳಿಸಲೇಬೇಕಾಗಿದೆ. ಇಲ್ಲದಿದ್ದರೆ ಮುಂದಿನ ಪ್ಲೇಆಫ್ ಹೋರಾಟ ಮತ್ತಷ್ಟು ಕಠಿಣವೆನಿಸಲಿದೆ.

Story first published: Wednesday, May 4, 2022, 17:32 [IST]
Other articles published on May 4, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X