ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಫೈನಲ್ ಪ್ರವೇಶ ನಮ್ಮ ಸಂಪಾದನೆ, ಈಗ ನಮ್ಮ ಗುರಿ ಟ್ರೋಫಿ ಗೆಲ್ಲುವುದು: ಡೆಲ್ಲಿ ಕೋಚ್ ರಿಕಿ ಪಾಂಟಿಂಗ್

Place in final earned, time to lift IPL 2020 trophy now: DC coach Ponting

ಇನ್ನೇನು ಕೆಲವೇ ಗಂಟೆಗಳಲ್ಲಿ ಈ ಬಾರಿಯ ಐಪಿಎಲ್ ಆವೃತ್ತಿಯ ಚಾಂಪಿಯನ್ ಪಟ್ಟಕ್ಕೆ ಕದನ ಆರಂಭವಾಗಲಿದೆ. ಡೆಲ್ಲಿ ಹಾಗೂ ಮುಂಬೈ ತಂಡಗಳು ಈ ಮಹತ್ವದ ಮುಖಾಮಿಖಿಯಲ್ಲಿ ಹೋರಾಟವನ್ನು ನಡೆಸಲಿದೆ. ಈ ಒಂದ್ಯಕ್ಕೂ ಮುನ್ನ ಡೆಲ್ಲಿ ತಂಡದ ಕೋಚ್ ತಂಡದ ಪ್ರದರ್ಶನದ ಬಗ್ಗೆ ಹೆಮ್ಮೆಯನ್ನು ವ್ಯಕ್ತಪಡಿಸಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್‌ನ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ಹಂಚಿಕೊಳ್ಳಲಾಗಿದೆ. ಇದರಲ್ಲಿ ಡೆಲ್ಲಿ ತಂಡದ ಕೋಚ್ ರಿಕಿ ಪಾಂಟಿಂಗ್ ಡೆಲ್ಲಿ ಕ್ಯಾಪಿಟಲ್ಸ್ ತಂಡ ಫೈನಲ್‌ಗೆ ತಾವೇ ಆರ್ಹತೆಯನ್ನು ಪಡೆದುಕೊಂಡಿದೆ. ಈ ಚೊಚ್ಚಲ ಬಾರಿಗೆ ಟ್ರೋಫಿ ಎತ್ತಿ ಹಿಡಿಯುವ ಸಂದರ್ಭ ಎಂದಿದ್ದಾರೆ.

ಮುಂಬೈ vs ಡೆಲ್ಲಿ ಫೈನಲ್‌ ಹಣಾಹಣಿ: 5 ಅಚ್ಚರಿಯ ಸತ್ಯ ಸಂಗತಿಗಳು!ಮುಂಬೈ vs ಡೆಲ್ಲಿ ಫೈನಲ್‌ ಹಣಾಹಣಿ: 5 ಅಚ್ಚರಿಯ ಸತ್ಯ ಸಂಗತಿಗಳು!

"ಇಲ್ಲಿಯವರೆಗೆ ನಾವು ನೀಡಿದ ಪ್ರದರ್ಶನ ಫೈನಲ್‌ಗೆ ಆಡಲು ನಮಗೆ ಹಕ್ಕನ್ನು ನೀಡಿದೆ. ಈಗ ನಾವು ಫೈನಲ್‌ನಲ್ಲಿ ಗೆಲ್ಲುವ ಹಕ್ಕನ್ನು ಪಡೆದುಕೊಳ್ಳಬೇಕಿದೆ" ಎಂದು ರಿಕಿ ಫಾಂಟಿಂಗ್ 'ಡಿಸಿಟಿವಿ'ಗೆ ಹೇಳಿದ್ದಾರೆ. ಈ ಮೂಲಕ ತಂಡದ ಗೆಲುವಿನ ಬಗ್ಗೆ ಭಾರೀ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

ಡೆಲ್ಲಿ ಈ ಬಾರಿಯ ಟೂರ್ನಿಯಲ್ಲಿ ಅದ್ಭುತ ಆರಂಭವನ್ನು ಪಡೆದುಕೊಂಡಿತು. ಆದರೆ ಟೂರ್ನಿಯ ಅಂತಿಮ ಹಂತದಲ್ಲಿ ಮುಗ್ಗರಿಸಲು ಆರಂಭಿಸಿತು. ಕೊನೆಯಲ್ಲಿ ಸತತ ನಾಲ್ಕು ಸೋಲುಗಳನ್ನು ಕಂಡಿತು. ಆದರೆ ಅಂತಿಮ ಪಂದ್ಯದಲ್ಲಿ ತಿರುಗಿ ಬಿದ್ದು ಆರ್‌ಸಿಬಿ ತಂಡಕ್ಕೆ ಸೋಲುಣಿಸಿ ಪ್ಲೇಆಫ್‌ಗೆ ಎರಡನೇ ತಂಡವಾಗಿ ಪ್ರವೇಶ ಪಡೆಯಿತು. ಪ್ಲೇ ಆಫ್‌ನಲ್ಲಿ ಮುಂಬೈ ವಿರುದ್ಧ ಸೋಲು ಕಂಡರೂ ಹೈದರಾಬಾದ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿ ಪೈನಲ್‌ಗೆ ಪ್ರವೇಶ ಪಡೆದಿದೆ.

ನಮಗೆ ಸ್ವಲ್ಪ ಹೆಚ್ಚೇ ಮಾನಸಿಕ ಪ್ರಯೋಜನವಿದೆ: ರೋಹಿತ್ ಶರ್ಮಾನಮಗೆ ಸ್ವಲ್ಪ ಹೆಚ್ಚೇ ಮಾನಸಿಕ ಪ್ರಯೋಜನವಿದೆ: ರೋಹಿತ್ ಶರ್ಮಾ

'ಮುಂಬೈ ವಿರುದ್ಧ ಈ ಹಿಂದಿನ ಪಂದ್ಯಗಳಲ್ಲಿ ಆಡಿದ ಸಂದರ್ಭದಲ್ಲಿ ಉತ್ತಮವಾಗಿ ಪ್ರದರ್ಶನ ನೀಡದ ವಿಭಾಗಗಳತ್ತ ಗಮನ ನೀಡಬೇಕಿದೆ. ಮುಂಬೈ ಬಗ್ಗೆ ಮತ್ತೊಂದು ಸಂಗತಿಯನ್ನು ಹೇಳಬೇಕೆಂದರೆ ಅವರು ನಿರ್ಭೀತವಾಗಿ ಕ್ರಿಕೆಟ್ ಆಡುತ್ತಿದ್ದಾರೆ. ಅವರು ಬ್ಯಾಟಿಂಗ್ ನಡೆಸುವ ಶೈಲಿಯೂ ಹಾಗೆಯೇ ಇದೆ' ಎಂದು ರಿಕಿ ಪಾಂಟಿಂಗ್ ಹೇಳಿದ್ದಾರೆ.

Story first published: Tuesday, November 10, 2020, 8:33 [IST]
Other articles published on Nov 10, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X