ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್: ಹೆಚ್ಚು ಬಾರಿ 500 ಪ್ಲಸ್ ರನ್ ಗಳಿಸಿದ ಕ್ರಿಕೆಟರ್ಸ್

Players scoring 500+ in an IPL season most times

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಅತಿ ಹೆಚ್ಚು ರನ್ ಗಳಿಕೆ ಪಟ್ಟಿಯಲ್ಲಿ ಕಿಂಗ್ಸ್ ಎಲೆವನ್ ಪಂಜಾಬ್ ನಾಯಕ ಕೆಎಲ್ ರಾಹುಲ್ ಅವರು ಎಲ್ಲರಿಗಿಂತ ಮುಂದಿದ್ದಾರೆ. ಆದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಅರ್ಧಶತಕ ಬಾರಿಸಿದ ''ಗಬ್ಬರ್'' ಶಿಖರ್ ಧವನ್ ಅವರು ಆರೆಂಜ್ ಕ್ಯಾಪ್ ರೇಸಿನಲ್ಲಿ 2ನೇ ಸ್ಥಾನಕ್ಕೇರಿದ್ದಾರೆ.

ಈ ಪಂದ್ಯದಲ್ಲಿ 54ರನ್ ಗಳಿಸಿದ ಧವನ್ ಅವರು 14 ಪಂದ್ಯಗಳಿಂದ 525 ರನ್ ಗಳಿಸಿದ್ದಾರೆ. ಇದೇ ಪಂದ್ಯದಲ್ಲಿ ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿ 29ರನ್ ಗಳಿಸಿ 14 ಪಂದ್ಯಗಳಲ್ಲಿ460ರನ್ ಗಳಿಸಿ ಆರೆಂಜ್ ಕ್ಯಾಪ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಆರ್ ಸಿಬಿಯ ಆರಂಭಿಕ ಆಟಗಾರ ದೇವದತ್ ಪಡಿಕ್ಕಲ್ ಅವರು ಅರ್ಧಶತಕ ಗಳಿಸಿ 14 ಪಂದ್ಯಗಳಲ್ಲಿ 472ರನ್ ಗಳಿಸಿ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದ್ದಾರೆ.

ಐಪಿಎಲ್ ಅಂಕಪಟ್ಟಿ: ಸೋತು ಗೆದ್ದ ಬೆಂಗಳೂರು, ಪ್ಲೇ ಆಫ್ ಹಂತಕ್ಕೆ ಅರ್ಹಐಪಿಎಲ್ ಅಂಕಪಟ್ಟಿ: ಸೋತು ಗೆದ್ದ ಬೆಂಗಳೂರು, ಪ್ಲೇ ಆಫ್ ಹಂತಕ್ಕೆ ಅರ್ಹ

ಕೆಎಲ್ ರಾಹುಲ್ ಅವರು 14 ಪಂದ್ಯಗಳಲ್ಲಿ670ರನ್ ಗಳಿಸಿ, ಈಗಲೂ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

ಐಪಿಎಲ್ ನಲ್ಲಿ 500 ಪ್ಲಸ್ ಗಳಿಸಿದ ಆಟಗಾರರ ಪಟ್ಟಿ
ಡೇವಿಡ್ ವಾರ್ನರ್: 5 ಬಾರಿ
ವಿರಾಟ್ ಕೊಹ್ಲಿ: 5 ಬಾರಿ
ಶಿಖರ್ ಧವನ್: 4 ಬಾರಿ
ಕೆಎಲ್ ರಾಹುಲ್, ಕ್ರಿಸ್ ಗೇಲ್, ಸುರೇಶ್ ರೈನಾ, ಗೌತಮ್ ಗಂಭೀರ್ 3 ಬಾರಿ 500ರನ್ ಗಡಿ ದಾಟಿದ್ದಾರೆ.

ಈ ಪೈಕಿ ಕೆಎಲ್ ರಾಹುಲ್ ಅವರು ಸತತವಾಗಿ 3 ಬಾರಿ 500 ಪ್ಲಸ್ ರನ್ ಗಳಿಸಿದ್ದರೆ, ವಾರ್ನರ್ ಸತತ 4 ಬಾರಿ ಈ ಸಾಧನೆ ಮಾಡಿದ್ದಾರೆ.

ಐಪಿಎಲ್: ಅತಿ ಹೆಚ್ಚು ಬಾರಿ ಕೊನೆ ಸ್ಥಾನಕ್ಕೆ ಕುಸಿದ ತಂಡ ಯಾವ್ದು?ಐಪಿಎಲ್: ಅತಿ ಹೆಚ್ಚು ಬಾರಿ ಕೊನೆ ಸ್ಥಾನಕ್ಕೆ ಕುಸಿದ ತಂಡ ಯಾವ್ದು?

ಅಂಕಪಟ್ಟಿ ನವೆಂಬರ್ 02ರಂತೆ: ಬೆಂಗಳೂರು ವಿರುದ್ಧ ಡೆಲ್ಲಿ ಜಯ ದಾಖಲಿಸಿದ ನಂತರ ಶ್ರೇಯರ್ ಅಯ್ಯರ್ ಪಡೆಯು 14 ಪಂದ್ಯಗಳಿಂದ 8 ಗೆಲುವು ದಾಖಲಿಸಿ 16 ಅಂಕ ಗಳಿಸಿ 2ನೇ ಸ್ಥಾನಕ್ಕೇರಿದ್ದು, ಇನ್ನೂ ಪ್ಲೇ ಆಫ್ ಗೆ ಅರ್ಹತೆ ಪಡೆದ ಎರಡನೇ ತಂಡವೆನಿಸಿತು. ಕೊಹ್ಲಿ ಪಡೆ ಈ ಪಂದ್ಯದಲ್ಲಿ ಸೋತ ಬಳಿಕ 14 ಪಂದ್ಯಗಳಲ್ಲಿ 7 ಗೆಲುವು ಸಾಧಿಸಿ 14 ಅಂಕಗಳಿಸಿ 3ನೇ ಸ್ಥಾನಕ್ಕೆ ಕುಸಿದಿದೆ.

Story first published: Wednesday, November 4, 2020, 10:31 [IST]
Other articles published on Nov 4, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X