ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೀಮ್ ಇಂಡಿಯಾ ಪ್ರಮುಖ ಆಟಗಾರರ ಬಗ್ಗೆ ಅಮರನಾಥ್ ಅಸಮಾಧಾನ

Players shouldnt be allowed to pick and choose games: amarnath

ಭಾರತ ತಂಡದ ಮಾಜಿ ಕ್ರಿಕೆಟಿಗ ಮೊಹಿಂದರ್ ಅಮರನಾಥ್ ಅವರು ಆಟಗಾರರ ಕೆಲ ನಿರ್ಧಾರಗಳ ಕುರಿತಾಗಿ ಅಸಮಧಾನವನ್ನು ವ್ಯಕ್ತಪಡಿಸಿದ್ದಾರೆ. ಕ್ರಿಕೆಟಿಗರು ಇತ್ತೀಚಿನ ದಿನಗಳಲ್ಲಿ ತಮ್ಮ ಸರಣಿಗಳಲ್ಲಿ ಆಡುವ ನಿರ್ಧಾರವನ್ನು ಅವರೇ ತೆಗೆಕೊಳ್ಳುತ್ತಿದ್ದಾರೆ. ಇದು ಮಾಜಿ ಕ್ರಿಕೆಟಿಗ ಮೊಹಿಂದರ್ ಅಮರನಾಥ್ ಅವರ ಅಸಮಧಾನಕ್ಕೆ ಕಾರಣವಾಗಿದೆ.

ಆಟಗಾರರು ತಾನು ಯಾವ ಸರಣಿಗಳಲ್ಲಿ ಆಡಬೇಕು ಬೇಡ ಎಂಬುದನ್ನು ಅವರೇ ನಿರ್ಧರಿಸುತ್ತಿದ್ದಾರೆ. ಇಂತಾ ಅವಕಾಶವನ್ನು ಆಟಗಾರರಿಗೆ ನೀಡುವುದು ಸರಿಯಲ್ಲ. ಈ ರೀತಿಯ ಆಯ್ಕೆ ಸರಿಯಲ್ಲ ಎಂದು ಮೊಹಿಂದರ್ ಅಮರನಾಥ್ ಅವರು ತಮ್ಮ ಅಸಮಾಧಾನವನ್ನು ಅಂಕಣವೊಂದರಲ್ಲಿ ವ್ಯಕ್ತಪಡಿಸಿದ್ದಾರೆ.

'ರಣಹದ್ದು'ಗಳಿಂದ ಯುವ ಕ್ರಿಕೆಟಿಗರ ರಕ್ಷಿಸಬೇಕಿದೆ: ಪೊಲಾರ್ಡ್ ಹೇಳಿದ್ಯಾರಿಗೆ?!'ರಣಹದ್ದು'ಗಳಿಂದ ಯುವ ಕ್ರಿಕೆಟಿಗರ ರಕ್ಷಿಸಬೇಕಿದೆ: ಪೊಲಾರ್ಡ್ ಹೇಳಿದ್ಯಾರಿಗೆ?!

ಕ್ರಿಕೆಟಿಗರು ಇತ್ತೀಚಿನ ದಿನಗಳಲ್ಲಿ ಕೆಲವೊಂದು ಸರಣಿಗಳಿಂದ ವಿಶ್ರಾಂತಿಯನ್ನು ಪಡೆಯುತ್ತಾರೆ. ಅದರಲ್ಲೂ ಪ್ರಮುಖ ಆಟಗಾರರು ಈ ರೀತಿಯಾಗಿ ನಿರ್ಧಾರವನ್ನು ತೆಗೆದುಕೊಳ್ಳುತ್ತಿರುವುದು ಅನೇಕ ಮಾಜಿ ಆಟಗಾರರ ಅಸಮಾಧಾನಕ್ಕೆ ಕಾರಣವಾಗಿದೆ. ಇದೇ ವಿಚಾರವಾಗಿ ಮೊಹಿಂದರ್ ಅಮರನಾಥ್ ಕೂಡ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ.

ತಮ್ಮ ಆಯ್ಕೆಯ ಕುರಿತಾಗಿ ಯಾವುದೇ ಆಟಗಾರ ಕೂಡ ಆಯ್ಕೆಗಾರರಿಗೆ ನಿರ್ದೇಶನವನ್ನು ನೀಡುವ ಸ್ಥಿತಿಯಿರಬಾರದು. ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸುವ ಮುನ್ನ ಸಾಕಷ್ಟು ದೇಶೀಯ ಪಂದ್ಯಗಳನ್ನು ಆಡಿದ ಅನುಭವಹೊಂದಿರಬೇಕು ಎಂದು ಅಮರನಾಥ್ ಹೇಳಿಕೆ ನೀಡಿದ್ದಾರೆ.

ಆಟದ ವೇಳೆ ಮ್ಯಾಜಿಕ್, ಕರವಸ್ತ್ರವನ್ನು ಕೋಲಾಗಿಸಿದ ಕ್ರಿಕೆಟಿಗ: ವೀಡಿಯೋಆಟದ ವೇಳೆ ಮ್ಯಾಜಿಕ್, ಕರವಸ್ತ್ರವನ್ನು ಕೋಲಾಗಿಸಿದ ಕ್ರಿಕೆಟಿಗ: ವೀಡಿಯೋ

ದೇಶದಲ್ಲಿ ನೂರಾರು ಆಟಗಾರರು ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಲು ಶ್ರಮಿಸುತ್ತಿದ್ದಾರೆ. ಇಂತಾ ಸಂದರ್ಭದಲ್ಲಿ ತಾನು ಯಾವ ಸರಣಿಯಲ್ಲಿ ಆಟಬೇಕು ಯಾವ ಟೂರ್ನಿಯಲ್ಲಿ ಆಡುವುದು ಬೇಡ ಎಂಬ ನಿರ್ಧಾರ ಆಟಗಾರರು ನಿರ್ಧರಿಸಬಾರದು, ಆಯ್ಕೆದಾರರಿಗೆ ಈ ವಿಚಾರವಾಗಿ ಸಂಪೂರ್ಣ ಸ್ವಾತಂತ್ರ್ಯವಿರಬೇಕು. ಆಟಗಾರರ ಸ್ಥಾನಮಾನಗಳು ಇಲ್ಲಿ ಮುಖ್ಯವಾಗಬಾರದು ಎಂದು ಅಮರನಾಥ್ ಅಂಕಣದಲ್ಲಿ ಹೇಳಿದ್ದಾರೆ.

Story first published: Friday, December 6, 2019, 19:05 [IST]
Other articles published on Dec 6, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X