ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್‌ನಿಂದ ಹೊರ ಬೀಳುತ್ತಿದ್ದಾರೆ ಆಟಗಾರರು, ಟೂರ್ನಿ ನಿಲ್ಲುತ್ತಾ?!

Players withdraw from IPL 2021 as Covid-19 rages in India, BCCI says Tournament will continue

ನವದೆಹಲಿ: ಭಾರತದಲ್ಲಿ ಕೋವಿಡ್-19 ಪ್ರಕರಣಗಳು ಆತಂಕಕಾರಿಯಾಗಿ ಹೆಚ್ಚುತ್ತಿರುವುದರಿಂದ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) 14ನೇ ಆವೃತ್ತಿಯಿಂದ ಕೆಲ ಪ್ರಮುಖ ಆಟಗಾರರ ಹಿಂದೆ ಸರಿಯುತ್ತಿದ್ದಾರೆ. ಹೀಗಾಗಿ ಭಾರತದ ಅದ್ದೂರಿ ಕ್ರಿಕೆಟ್‌ ಟೂರ್ನಿ ತೊಂದರೆಗೆ ಸಿಲುಕಲಿದೆಯಾ ಎಂಬ ಪ್ರಶ್ನೆ ಎದುರಾಗಿದೆ. ಈ ಬಗ್ಗೆ ಬೋರ್ಡ್ ಆಫ್‌ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಸ್ಪಷ್ಟನೆ ನೀಡಿದೆ.

ಐಪಿಎಲ್ 2021: ಚೆನ್ನೈ ವಿರುದ್ಧ ಸೋಲಿನ ಬೆನ್ನಲೇ ವಿರಾಟ್ ಕೊಹ್ಲಿಗೆ ದಂಡದ ಬರೆಐಪಿಎಲ್ 2021: ಚೆನ್ನೈ ವಿರುದ್ಧ ಸೋಲಿನ ಬೆನ್ನಲೇ ವಿರಾಟ್ ಕೊಹ್ಲಿಗೆ ದಂಡದ ಬರೆ

ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಆಡುವ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಈ ಸಂಕಷ್ಟದ ಸಮಯದಲ್ಲಿ ಕುಟುಂಬಸ್ಥರ ಜೊತೆಗಿರಬೇಕಾಗಿದೆ ಎಂಬ ಕಾರಣ ನೀಡಿ ಐಪಿಎಲ್‌ನಿಂದ ದೂರ ಉಳಿಯುವ ನಿರ್ಧಾರ ಪ್ರಕಟಿಸಿದ್ದಾರೆ. ಇನ್ನೂ ಒಂದಿಷ್ಟು ಆಟಗಾರರು ಟೂರ್ನಿ ತೊರೆಯುವ ನಿರ್ಧಾರ ತಾಳಿದ್ದಾರೆ.

ಆಸ್ಟ್ರೇಲಿಯಾದ ಮೂವರು ಹೊರಕ್ಕೆ

ಆಸ್ಟ್ರೇಲಿಯಾದ ಮೂವರು ಹೊರಕ್ಕೆ

ಆಸ್ಟ್ರೇಲಿಯಾದ ಆಟಗಾರರಾದ ಆ್ಯಂಡ್ರ್ಯೂ ಟೈ (ರಾಜಸ್ಥಾನ್ ರಾಯಲ್ಸ್), ಕೇನ್ ರಿಚರ್ಡ್ಸನ್ ಮತ್ತು ಆ್ಯಡಂ ಜಂಪಾ (ಇಬ್ಬರೂ ರಾಯಲ್ ಚಾಲೆಂಜರ್ಸ್ ಬೆಂಗಳೂರು) ಕೂಡ ಐಪಿಎಲ್‌ ತೊರೆಯುವ ನಿರ್ಧಾರ ಪ್ರಕಟಿಸಿದ್ದಾರೆ. ಇವರೆಲ್ಲರೂ ವೈಯಕ್ತಿಕ ಕಾರಣ ನೀಡಿ ಟೂರ್ನಿಯಿಂದ ಹೊರ ಬೀಳುತ್ತಿದ್ದಾರೆ. ಮೂವರೂ ಸ್ಪಷ್ಟ ಕಾರಣ ನೀಡಿಲ್ಲ.

ಐಪಿಎಲ್ ಮುಂದುವರೆಯುವುದಿಲ್ಲವಾ?

ಐಪಿಎಲ್ ಮುಂದುವರೆಯುವುದಿಲ್ಲವಾ?

ಈಗಾಗಲೇ ರಾಜಸ್ಥಾನ್ ರಾಯಲ್ಸ್‌ನ ಬೆನ್ ಸ್ಟೋಕ್ಸ್, ಜೋಫ್ರಾ ಆರ್ಚರ್ ಮತ್ತು ಲಿಯಾಮ್ ಲಿವಿಂಗ್‌ಸ್ಟೋನ್ ಬೇರೆ ಬೇರೆ ಕಾರಣದಿಂದಾಗಿ ಟೂರ್ನಿಯಿಂದ ದೂರ ಉಳಿದ್ದಾರೆ. ಈಗ ಇನ್ನೊಂದಿಷ್ಟು ಆಟಗಾರರು ಐಪಿಎಲ್‌ನಿಂದ ಹೊರ ನಡೆಯುವ ನಿರ್ಧಾರ ಪ್ರಕಟಿಸುತ್ತಿದ್ದಾರೆ. ಹೀಗಾಗಿ ಈಬಾರಿಯ ಟೂರ್ನಿ ಮುಂದುವರೆಯಲಿದೆಯಾ ಇಲ್ಲವಾ ಎಂಬ ಪ್ರಶ್ನೆ ಮೂಡಿದೆ.

ಬಿಸಿಸಿಐ ಅಧಿಕಾರಿ ಸ್ಪಷ್ಟನೆ

ಬಿಸಿಸಿಐ ಅಧಿಕಾರಿ ಸ್ಪಷ್ಟನೆ

ಆಟಗಾರರು ಒಬ್ಬೊಬ್ಬರರಾಗಿ ಟೂರ್ನಿ ತೊರೆಯುತ್ತಿರುವ ಬಗ್ಗೆ ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು ಮಾತನಾಡಿದ್ದಾರೆ. 'ಈಗಿನಂತೆ, ಐಪಿಎಲ್‌ ಮುಂದುವರೆಯಲಿದೆ. ಯಾರಾದರೂ ಟೂರ್ನಿ ತೊರೆಯಲು ಬಯಸಿದರೆ ಖಂಡಿತಾ ಒಳ್ಳೇದು ಏನೂ ಬೇಜಾರಿಲ್ಲ,' ಎಂದು ಪ್ರತಿಕ್ರಿಯಿಸಿದ್ದಾರೆ. ಏಪ್ರಿಲ್ 9ರಿಂದ ಆರಂಭಗೊಂಡಿರುವ ಐಪಿಎಲ್ ಮೇ 30ಕ್ಕೆ ಕೊನೆಗೊಳ್ಳುವುದರಲ್ಲಿದೆ.

Story first published: Monday, April 26, 2021, 15:18 [IST]
Other articles published on Apr 26, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X