ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್‌: ಚಹಲ್‌ ಯಶಸ್ಸಿನ ಹಿಂದಿರುವ ಗುಟ್ಟೇನೆಂಬುದು ಬಹಿರಂಗ!

ICC World Cup 2019 : ಕ್ರಿಕೆಟ್ ನಲ್ಲಿ ಮಿಂಚಬೇಕು ಅಂದ್ರೆ ಈ ಆಟ ಗೊತ್ತಿರ್ಬೇಕು..! | Oneindia Kannada
Playing chess in past is helping me pre-empt batsmens moves: Yuzvendra Chahal

ಲಂಡನ್‌, ಜೂನ್‌ 06: ಪ್ರಸಕ್ತ ವಿಶ್ವಕಪ್‌ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ಜಯ ತಂದುಕೊಡುವಲ್ಲಿ ಮಹತ್ವದ ಪಾತ್ರ ವಹಿಸಿದ ಲೆಗ್‌ಸ್ಪಿನ್ನರ್‌ ಯುಜ್ವೇಂದ್ರ ಚಹಲ್‌ ತಮ್ಮ ಯಶಸ್ಸಿನ ಹಿಂದಿರುವ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ.

ವಿಶ್ವಕಪ್‌ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ

ತಮ್ಮ ಬಾಲ್ಯದ ದಿನಗಳಲ್ಲಿ ಜೂನಿಯರ್‌ ವಿಭಾಗದಲ್ಲಿ ರಾಷ್ಟ್ರೀಯ ಮಟ್ಟದ ಚೆಸ್‌ ಆಟಗಾರನಾಗಿದ್ದ ಲೆಗ್‌ ಸ್ಪಿನ್ನರ್‌ ಯುಜ್ವೇಂದ್ರ್‌ ಚಹಲ್‌ಗೆ, ಇದೀಗ ಕ್ರಿಕೆಟ್‌ನಲ್ಲಿ ಬ್ಯಾಟ್ಸ್‌ಮನ್‌ಗಳ ಮುಂದಿನ ನಡೆ ಏನೆಂಬುದನ್ನು ಅಂದಾಜಿಸಲು ಚೆಸ್‌ ಆಟ ನೆರವಾಗುತ್ತಿದೆಯಂತೆ. ಟೀಮ್‌ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಕೂಡ ಚಹಲ್‌ ಅವರ ಈ ಸಾಮರ್ಥ್ಯವೇ ಅವರಿಗೆ ಯಶಸ್ಸು ತಂದುಕೊಟ್ಟಿದೆ ಎಂದಿದ್ದಾರೆ.

ಕ್ರಿಕೆಟ್‌: ಭಾರತ vs ದ.ಆಫ್ರಿಕಾ ನಡುವಣ 5 ಅದ್ಭುತ ODI ಪಂದ್ಯಗಳಿವುಕ್ರಿಕೆಟ್‌: ಭಾರತ vs ದ.ಆಫ್ರಿಕಾ ನಡುವಣ 5 ಅದ್ಭುತ ODI ಪಂದ್ಯಗಳಿವು

ಬುಧವಾರ ಬಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಭಾರತ ತಂಡ 6 ವಿಕೆಟ್‌ಗಗಳ ಭರ್ಜರಿ ಜಯ ದಾಖಲಿಸಿತ್ತು. ಪಂದ್ಯದಲ್ಲಿ ಅದ್ಭುತ ಬೌಲಿಂಗ್‌ ದಾಳಿ ಸಂಘಟಿಸಿದ ಚಹಲ್‌ 51ಕ್ಕೆ 4 ವಿಕೆಟ್‌ ಪಡೆದು ಮಿಂಚಿದ್ದರು. ಇದು ವಿಶ್ವಕಪ್‌ಗೆ ಪದಾರ್ಪಣೆ ಮಾಡಿದ ಭಾರತೀಯ ಬೌಲರ್‌ ಒಬ್ಬನ ಎರಡನೇ ಅತ್ಯಂತ ಶ್ರೇಷ್ಠ ಸಾಧನೆ ಆಗಿದೆ.

ವಿಶ್ವಕಪ್‌: ಸೌರವ್‌ ಗಂಗೂಲಿ ದಾಖಲೆ ಮುರಿದ 'ಹಿಟ್‌ಮ್ಯಾನ್‌' ರೋಹಿತ್‌!ವಿಶ್ವಕಪ್‌: ಸೌರವ್‌ ಗಂಗೂಲಿ ದಾಖಲೆ ಮುರಿದ 'ಹಿಟ್‌ಮ್ಯಾನ್‌' ರೋಹಿತ್‌!

"ಚೆಸ್‌ ಆಟ ನನ್ನಲ್ಲಿ ತಾಳ್ಮೆ ತುಂಬಿದೆ. ಚೆಸ್‌ ಆಡುವಾಗ ಮುಂದಿನ 15-16 ನಡೆಗಳನ್ನು ಮೊದಲೇ ಯೋಜಿಸಬೇಕಾಗುತ್ತದೆ. ಇದೇ ರೀತಿ ಫಾಫ್‌ ಡು'ಪ್ಲೆಸಿಸ್‌ ಅವರಂತಹ ಬ್ಯಾಟ್ಸ್‌ಮನ್‌ಗೆ ಬೌಲಿಂಗ್‌ ಮಾಡುವಾಗ ಮೊದಲೇ ಗೂಗ್ಲೀ ಎಸೆಯಬೇಕೆ ಅಥವಾ ಫ್ಲಿಪರ್‌ ಬೌಲ್‌ ಮಾಡಬೇಕೆ ಎಂಬುದನ್ನು ಯೋಜಿಸರಬೇಕು. ಯಾವ ಚೆಂಡನ್ನು ಅವರು ಅರಿಯಬಲ್ಲರು ಯಾವ ಚೆಂಡನ್ನು ಅವರು ಅರಿಯಲಾರರು ಎಂಬುದನ್ನು ಮೊದಲು ಅಂದಾಜಿಸಬೇಕು,'' ಎಂದು ಚಹಲ್‌ ಪಂದ್ಯದ ಬಳಿಕ ಮಾಧ್ಯಮ ಪ್ರತಿನಿಧಿಯೊಬ್ಬರಿಗೆ ಹೇಳಿದ್ದಾರೆ.

ವಿಶ್ವಕಪ್‌: ಆಂಡ್ರೆ ರಸೆಲ್‌ ಫಿಟ್ನೆಸ್‌ ಬಗ್ಗೆ ಮಾತನಾಡಿದ ನಾಯಕ ಹೋಲ್ಡರ್‌ವಿಶ್ವಕಪ್‌: ಆಂಡ್ರೆ ರಸೆಲ್‌ ಫಿಟ್ನೆಸ್‌ ಬಗ್ಗೆ ಮಾತನಾಡಿದ ನಾಯಕ ಹೋಲ್ಡರ್‌

ದಕ್ಷಿಣ ಆಫ್ರಿಕಾದ ಬ್ಯಾಟ್ಸ್‌ಮನ್‌ ಫಾಫ್‌ ಡು'ಪ್ಲೆಸಿಸ್‌ ಅವರ ಬ್ಯಾಟಿಂಗ್‌ ಗಮನಿಸಿ ಯಾವ ರೀತಿಯ ಬೌಲಿಂಗ್‌ ಮಾಡಬೇಕೆಂಬುದನ್ನು ಯೋಜಿಸಿದ್ದಾಗಿ ಚಹಲ್‌ ಇದೇ ವೇಳೆ ಹೇಳಿದ್ದಾರೆ.

"ಫಾಫ್‌ ಅವರ ವಿಕೆಟ್‌ ಪಡೆದದದ್ದು ನನಗೆ ವೈಯಕ್ತಿಕವಾಗಿ ಬಹಳ ಪ್ರಿಯವಾದದ್ದು. ಚೆಂಡಿಗೆ ಸಾಮಾನ್ಯವಾಗಿ ತಿರುವು ನೀಡುತ್ತಿದ್ದೆ. ಆದರೆ ಕೊಂಚ ಬದಲಾವಣೆ ತಂದು ಆಫ್‌ಸ್ಫಂಪ್‌ ಕಡೆಗೆ ಬೌಲ್‌ ಮಾಡಿದೆ. ಇದನ್ನು ಅರಿಯುವಲ್ಲಿ ಫಾಫ್‌ ಸಂಪೂರ್ಣ ವಿಫಲರಾದರು,'' ಎಂದು ಚಹಲ್‌ ತಮ್ಮ ಬೌಲಿಂಗ್‌ ತಂತ್ರವನ್ನು ವಿವರಿಸಿದ್ದಾರೆ.

ಆಸ್ಟ್ರೇಲಿಯನ್‌ ಓಪನ್‌ ಬ್ಯಾಡ್ಮಿಂಟನ್‌: 2ನೇ ಸುತ್ತಿನಲ್ಲಿ ಪಿ.ವಿ ಸಿಂಧೂಗೆ ಆಘಾತಆಸ್ಟ್ರೇಲಿಯನ್‌ ಓಪನ್‌ ಬ್ಯಾಡ್ಮಿಂಟನ್‌: 2ನೇ ಸುತ್ತಿನಲ್ಲಿ ಪಿ.ವಿ ಸಿಂಧೂಗೆ ಆಘಾತ

"ಪಂದ್ಯದ ಯಾವುದೇ ಸಂದರ್ಭದಲ್ಲಿ ಬೌಲ್‌ ಮಾಡಲು ಸಜ್ಜಾಗುವ ಬೌಲರ್‌ ಅವರು. ಪವರ್‌ಪ್ಲೇನಲ್ಲಿ 7 ಫೀಲ್ಡರ್‌ಗಳನ್ನು ಸರ್ಕಲ್‌ ಒಳಗೆ ಇರಿಸಿದರೂ ಬೌಲಿಂಗ್‌ ಮಾಡಲು ಸಿದ್ದರಿರುತ್ತಾರೆ. ಅವರ ಆತ್ಮ ವಿಶ್ವಾಸ ನಿಜಕ್ಕೂ ಅದ್ಭುತವಾಗಿದೆ. ಅಲ್ಲದೆ ಪಂದ್ಯವನ್ನು ಉಳಿದೆಲ್ಲಾ ಆಟಗಾರರಿಗಿಂತಲೂ ವಿಭಿನ್ನವಾಗಿ ಅರಿತುಕೊಳ್ಳುತ್ತಾರೆ. ಪಿಚ್‌ ಹೇಗಿದೆ ಅಲ್ಲಿ ಯಾವ ರೀತಿ ಬೌಲ್‌ ಮಾಡಬೇಕೆಂಬುದನ್ನು ಖುದ್ದಾಗಿ ತಿಳಿದುಕೊಳ್ಳುತ್ತಾರೆ. ಇದೇ ಅವರ ಬಲ. ಅವರ ಈವರೆಗಿನ ಸಾಧನೆಯೆಲ್ಲಾ ಅವರ ಸಾಮರ್ಥ್ಯದಿಂದ ಗಳಿಸಿರುವುದಾಗಿದೆ,'' ಎಂದು ಲೆಗ್‌ ಸ್ಪಿನ್ನರ್‌ ಚಹಲ್‌ ಅವರನ್ನು ನಾಯಕ ವಿರಾಟ್‌ ಕೊಹ್ಲಿ ಗುಣಗಾನ ಮಾಡಿದ್ದಾರೆ.

Story first published: Thursday, June 6, 2019, 18:02 [IST]
Other articles published on Jun 6, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X