ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪ್ರೇಕ್ಷಕರಿಲ್ಲದೆ ಕ್ರಿಕೆಟ್ ವಧುವಿಲ್ಲದೆ ಮದುವೆಯಾದಂತೆ: ಶೋಯೆಬ್ ಅಖ್ತರ್

Playing Cricket Without Spectators Like Marriage Without Bride: Shoaib Akhtar

ಕೊರೊನಾ ವೈರಸ್ ಕಾರಣದಿಂದಾಗಿ ಖಾಲಿ ಮೈದಾನದಲ್ಲಿ ಕ್ರಿಕೆಟ್ ಪಂದ್ಯ ಆರಂಭಿಸುವ ಮಾತುಗಳು ಕೇಳಿ ಬರುತ್ತಿದೆ. ಕೆಲ ದೇಶಗಳ ಕ್ರಿಕೆಟ್ ಮಂಡಳಿಗಳಂತೂ ಈ ಬಗ್ಗೆ ಮಹತ್ವದ ಹೆಜ್ಜೆಗಳನ್ನೂ ಇಟ್ಟಿದೆ. ಈ ಮಧ್ಯೆ ಕ್ರಿಕೆಟಿಗರು ಖಾಲಿ ಮೈದಾನದಲ್ಲಿ ಕ್ರಿಕೆಟ್ ಆಡುವ ವಿಚಾರವಾಗಿ ತಮ್ಮ ಪ್ರತಿಕ್ರಿಯೆಯನ್ನು ನೀಡುತ್ತಿದ್ದಾರೆ.

ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್ ಕೂಡ ಇದೇ ವಿಚಾರವಾಗಿ ಹೇಳಿಕೆಯನ್ನು ನೀಡಿದ್ದಾರೆ. ಈ ರೀತಿ ಆಡುವುದನ್ನು ಅವರು ಮದುವೆಗೆ ಹೋಲಿಸಿದ್ದಾರೆ. ಖಾಲಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಆಡುವುದು ವಧುವಿಲ್ಲದೆಯೇ ವಿವಾಹವಾದಂತೆ ಇರಲಿದೆ ಎಂದು ಅಖ್ತರ್ ಅಭಿಪ್ರಾಯಪಟ್ಟಿದ್ದಾರೆ.

ಇಂಗ್ಲೆಂಡ್ ಪ್ರವಾಸಕ್ಕೆ ಯಾವ ಆಟಗಾರನನ್ನೂ ಒತ್ತಾಯಿಸುವುದಿಲ್ಲ: ಹೋಲ್ಡರ್ಇಂಗ್ಲೆಂಡ್ ಪ್ರವಾಸಕ್ಕೆ ಯಾವ ಆಟಗಾರನನ್ನೂ ಒತ್ತಾಯಿಸುವುದಿಲ್ಲ: ಹೋಲ್ಡರ್

ಖಾಲಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಆಡಲು ಆಟಗಾರರಿಗೆ ಉತ್ಸಾಹ ಇರುವುದಿಲ್ಲ. ಅಲ್ಲದೆ ಆರ್ಥಿಕ ವಿಚಾರವಾಗಿಯೂ ಜಾಹೀರಾತು ಮಾರುಕಟ್ಟೆ ಸೇರಿ ಇತರೆ ವ್ಯವಹಾರಕ್ಕೆ ಕೂಡ ಕಷ್ಟಕರವಾಗಲಿದೆ ಎಂದು ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್ ಹೇಳಿಕೆಯನ್ನು ನೀಡಿದ್ದಾರೆ.

"ಖಾಲಿ ಕ್ರೀಡಾಂಗಣಗಳಲ್ಲಿ ಕ್ರಿಕೆಟ್ ಆಡುವುದು ಕ್ರಿಕೆಟ್ ಬೋರ್ಡ್‌ಗಳಿಗೆ ಕಾರ್ಯಸಾಧ್ಯ ಮತ್ತು ಸುಲಭ ಎನಿಸಬಹುದು. ಆದರೆ ಈ ರೀತಿ ಪಂದ್ಯ ಹೆಚ್ಚು ಪ್ರಚಾರ ಪಡೆಯಬಹುದೆಂದು ನನಗೆ ಅನಿಸುವುದಿಲ್ಲ. ಆಟಗಾರರಿಗೆ ಪ್ರೇಕ್ಷಕರು ತುಂಬಿದ್ದಾಗ ಆಡಲು ಉತ್ಸಾಹ ಬರುತ್ತದೆ ಎಂದು ಅವರು ಹೇಳಿದ್ದಾರೆ.

ಎಂಜಲು ಬಳಕೆ ನಿಷೇಧಕ್ಕೆ ಕುಂಬ್ಳೆ ಮುಂದಾಳತ್ವದ ಐಸಿಸಿ ಸಮಿತಿ ಶಿಫಾರಸುಎಂಜಲು ಬಳಕೆ ನಿಷೇಧಕ್ಕೆ ಕುಂಬ್ಳೆ ಮುಂದಾಳತ್ವದ ಐಸಿಸಿ ಸಮಿತಿ ಶಿಫಾರಸು

ಇದೇ ಸಂದರ್ಭದಲ್ಲಿ ಅಖ್ತರ್ ಈ ಪರಿಸ್ಥಿತಿ ಸಾಮಾನ್ಯ ಸ್ಥಿತಿಗೆ ಬರಲು ಇನ್ನೂ ಒಂದು ವರ್ಷಗಳ ಸಮಯಾವಕಾಶ ಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಮುಚ್ಚಿದ ಕ್ರೀಡಾಂಗಣದಲ್ಲಿ ಆಡುವ ಬಗ್ಗೆ ಈ ಹಿಂದೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕೂಡ ಹೇಳಿಕೆ ನೀಡಿದ್ದರು. ಮುಚ್ಚಿದ ಕ್ರೀಡಾಂಗಣದಲ್ಲಿ ಆಡುವಾಗ ಈ ಹಿಂದಿನ ಉತ್ಸಾಹವಿರಲು ಸಾಧ್ಯವಿಲ್ಲ ಎಂದಿದ್ದರು.

Story first published: Tuesday, May 19, 2020, 14:01 [IST]
Other articles published on May 19, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X