ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ಜೀವ ಸುರಕ್ಷತಾ' ಪರಿಸರದಲ್ಲಿ ಕ್ರಿಕೆಟ್ ಆಡೋದು ಅವಾಸ್ತವಿಕ: ರಾಹುಲ್ ದ್ರಾವಿಡ್

Playing in bio-secure environment is unrealistic, says Rahul Dravid

ಬೆಂಗಳೂರು, ಮೇ 26: ಕೊರೊನಾವೈರಸ್‌ನಿಂದಾಗಿ ನಿಲುಗಡೆಯಾಗಿದ್ದ ಕ್ರಿಕೆಟ್‌ ಚಟುವಟಿಕೆಗಳನ್ನು ಪುನರಾರಂಭಿಸಲು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಬೋರ್ಡ್ ಮುಂದಾಗಿದೆ. ಜೀವ ಸುರಕ್ಷತಾ ತಾಣಗಳಲ್ಲಿ ಅಂತಾರಾಷ್ಟ್ರೀಯ ಪಂದ್ಯಗಳನ್ನು ನಡೆಸಲು ಇಸಿಬಿ ಯೋಚಿಸಿತ್ತು. ಆದರೆ ಇಸಿಬಿಯ ಈ ಯೋಚನೆ ಸರಿಯಲ್ಲ ಎಂದು ಭಾರತದ ದಂತಕತೆ ರಾಹುಲ್ ದ್ರಾವಿಡ್ ಹೇಳಿದ್ದಾರೆ.

ಆವತ್ತು ನ್ಯೂಜಿಲೆಂಡ್ ತಂಡ ಟೆಸ್ಟ್ ಇತಿಹಾಸದ ಕೆಟ್ಟ ದಾಖಲೆ ನಿರ್ಮಿಸಿತ್ತು!ಆವತ್ತು ನ್ಯೂಜಿಲೆಂಡ್ ತಂಡ ಟೆಸ್ಟ್ ಇತಿಹಾಸದ ಕೆಟ್ಟ ದಾಖಲೆ ನಿರ್ಮಿಸಿತ್ತು!

ಕೋವಿಡ್ 19ನಿಂದಾಗಿ ಆತಂಕಕಾರಿ ಪರಿಸ್ಥಿತಿ ನಿರ್ಮಾಣವಾಗಿರುವುದರಿಂದ ಬಯೋ ಸೆಕ್ಯೂರ್ (ಜೀವ ಸುರಕ್ಷತಾ) ತಾಣಗಳಲ್ಲಿ ಪಾಕಿಸ್ತಾನ ಮತ್ತು ವೆಸ್ಟ್ ಇಂಡೀಸ್ ಸರಣಿಗಳನ್ನು ನಡೆಸುವುದಾಗಿ ಇಸಿಬಿ ಇತ್ತೀಚೆಗೆ ಘೋಷಿಸಿತ್ತು. 'ಬಯೋ ಸೆಕ್ಯೂರ್' ಅಂದರೆ ಮಾರಕ ಅಥವಾ ಹಾನಿಕಾರಕ ಜೀವಿಗಳು ಮತ್ತು ರೋಗಗಳ ಹರಡುವಿಕೆಯಿಂದ ರಕ್ಷಿಸಲು ತೆಗೆದುಕೊಳ್ಳಲಾಗುವ ಮುನ್ನೆಚ್ಚರಿಕೆಗಳು.

ವಿರಾಟ್ ಕೊಹ್ಲಿ ಬದಲಿಗೆ ಸ್ಟೀವ್ ಸ್ಮಿತ್ ಆರಿಸುತ್ತೇನೆ: ಮಾಜಿ ವೇಗಿ ಬ್ರೆಟ್ ಲೀವಿರಾಟ್ ಕೊಹ್ಲಿ ಬದಲಿಗೆ ಸ್ಟೀವ್ ಸ್ಮಿತ್ ಆರಿಸುತ್ತೇನೆ: ಮಾಜಿ ವೇಗಿ ಬ್ರೆಟ್ ಲೀ

'ಇಸಿಬಿ ಹೇಳುವ ಮಟ್ಟದಲ್ಲಿ ವಿಚಾರಗಳು ನಡೆಯಲಿವೆ ಅನ್ನೋದು ಸ್ವಲ್ಪ ಅವಾಸ್ತವಿಕ. ಇಸಿಬಿ ಕ್ರಿಕೆಟ್‌ ಸರಣಿಗಳನ್ನು ಅಂಥ ವಾತಾವರಣಗಳಲ್ಲಿ ನಡೆಸಲಿದೆ ಅನ್ನೋದನ್ನು ನಿಸ್ಸಂಶಯವಾಗಿ ಹೇಳಬಹುದು. ಯಾಕೆಂದರೆ ಅವರಿಗೆ ಬೇರೆ ಕ್ರಿಕೆಟ್ ಪಂದ್ಯಗಳಿಲ್ಲ..,' ಎಂದು ದ್ರಾವಿಡ್ ಹೇಳಿದ್ದಾರೆ.

ODI ಕ್ರಿಕೆಟ್‌ನಲ್ಲಿ ಸೊನ್ನೆಗೆ ವಿಕೆಟ್ ಒಪ್ಪಿಸಿದ ಟಾಪ್ 5 ಬ್ಯಾಟ್ಸ್‌ಮನ್‌ಗಳು: ಘಟಾಘಟಿಗಳದ್ದೇ ಸಿಂಹಪಾಲುODI ಕ್ರಿಕೆಟ್‌ನಲ್ಲಿ ಸೊನ್ನೆಗೆ ವಿಕೆಟ್ ಒಪ್ಪಿಸಿದ ಟಾಪ್ 5 ಬ್ಯಾಟ್ಸ್‌ಮನ್‌ಗಳು: ಘಟಾಘಟಿಗಳದ್ದೇ ಸಿಂಹಪಾಲು

'ಬಯೋ ಸೆಕ್ಯೂರ್ ಪರಿಸರದಲ್ಲಿ ಪಂದ್ಯಗಳನ್ನು ನಡೆಸಲು ಇಂಗ್ಲೆಂಡ್ ಸಮರ್ಥರಿರಬಹುದು. ಆದರೆ ಪ್ರವಾಸದ ವೇಳೆ ನೀವು ಮಾಡುವ ಪ್ರಯಾಣ, ಪ್ರವಾಸದಲ್ಲಿ ಪಾಲ್ಗೊಳ್ಳುವ ಮಂದಿಯನ್ನೆಲ್ಲ ಗಣನೆಗೆ ತೆಗೆದುಕೊಂಡರೆ ಎಲ್ಲರಿಗೂ ಆಂಗ್ಲರಂತೆ ಪಂದ್ಯಗಳನ್ನು ಆಯೋಜಿಸಲು ಖಂಡಿತಾ ಸಾಧ್ಯವಿಲ್ಲ,' ಎಂದು ಭಾರತದ ಮಾಜಿ ನಾಯಕ ದ್ರಾವಿಡ್ ವಿವರಿಸಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತ್ಯಧಿಕ ಸಿಕ್ಸ್ ದಾಖಲೆಯ 5 ಬ್ಯಾಟ್ಸ್‌ಮನ್‌ಗಳುಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತ್ಯಧಿಕ ಸಿಕ್ಸ್ ದಾಖಲೆಯ 5 ಬ್ಯಾಟ್ಸ್‌ಮನ್‌ಗಳು

ಕೊರೊನಾ ವಿಶ್ವದಗಲ ವ್ಯಾಪಿಸಿ ಕ್ರೀಡಾ ಚಟುವಟಿಕೆಗಳು ನಿಲುಗಡೆಯಾಗುವ ಮುನ್ನ ದಕ್ಷಿಣ ಆಫ್ರಿಕಾ ತಂಡ ಭಾರತಕ್ಕೆ ಪ್ರವಾಸ ಬಂದಿತ್ತು. ಆದರೆ ಕೊರೊನಾದಿಂದ ಪ್ರವಾಸ ಸರಣಿ ನಡೆಯಲಿಲ್ಲ. ಹೀಗಾಗಿ ಮತ್ತೆ ಪ್ರವಾಸ ಸರಣಿ ನಡೆಸುವುದಾದರೆ ಬಯೋ ಸೆಕ್ಯೂರ್ ತಾಣಗಳಲ್ಲಿ ಪಂದ್ಯ ನಡೆಸುವಂತೆ ದಕ್ಷಿಣ ಆಫ್ರಿಕಾ ಕೂಡ ಭಾರತಕ್ಕೆ ಸಲಹೆ ನೀಡಿತ್ತು. ಆದರೆ ಜೀವ ಸುರಕ್ಷತಾ ತಾಣಗಳಲ್ಲಿ ಪಂದ್ಯ ನಡೆಸೋದು ಎಲ್ಲಾ ದೇಶಗಳಿಗೂ ಸುಲಭ ಸಾಧ್ಯವಿಲ್ಲ ಎಂದು 'ಗ್ರೇಟ್ ವಾಲ್' ದ್ರಾವಿಡ್ ಅಭಿಪ್ರಾಯಿಸಿದ್ದಾರೆ.

Story first published: Tuesday, May 26, 2020, 16:38 [IST]
Other articles published on May 26, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X