ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

"ಪ್ಲೀಸ್ ರೋಹಿತ್, ಆಸ್ಟ್ರೇಲಿಯಾ ವಿರುದ್ಧ ಬೇಡ" ಎಂದು ಬೇಡಿಕೊಂಡ ಬ್ರೇಟ್‌ ಲೀ

ಟೀಮ್ ಇಂಡಿಯಾದ ಆರಂಭಿಕ ಆಟಗಾರ ರೋಹಿತ್ ಶರ್ಮಾ ಬ್ಯಾಟಿಂಗ್‌ಗೆ ನೆಲ ಕಚ್ಚಿ ನಿಂತರೆ ಎದುರಾಳಿಗಳು ಧೂಳಿಪಟವಾಗುವುದು ನಿಶ್ಚಿತ. ಅದರಲ್ಲೂ ಸೀಮಿತ ಓವರ್‌ಗಳಲ್ಲಿ ರೋಹಿತ್ ಶರ್ಮಾ ಕಂಡರೆ ಎದುರಾಳಿ ಬೌಲರ್‌ಗಳಿಗೆ ಯಾವತ್ತಿಗೂ ಸಿಂಹಸ್ವಪ್ನ. ಟಿ20 ಕ್ರಿಕೆಟ್‌ನಲ್ಲಿ ನಾಲ್ಕು ಶತಕ, ಏಕದಿನ ಕ್ರಿಕೆಟ್‌ನಲ್ಲಿ 3 ದ್ವಿಶತಕ ಈ ದಾಖಲೆಗಳೇ ಹೇಳುತ್ತವೆ ಎದುರಾಳಿಗಳಿಗೆ ರೋಹಿತ್ ಎಷ್ಟು ಅಪಾಯಕಾರಿ ಎಂಬುದನ್ನು.

ರೋಹಿತ್ ಶರ್ಮಾ ಅವರ ಈ ಬ್ಯಾಟಿಂಗ್ ಪರಾಕ್ರಮದ ಬಗ್ಗೆ ಸಾಕಷ್ಟು ಮಾಜಿ ಆಟಗಾರರು ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ. ಆದರೆ ಆಸ್ಟ್ರೇಲಿಯಾದ ಮಾಜಿ ವೇಗದ ಬೌಲರ್ ಬ್ರೇಟ್‌ ಲೀ ಇನ್ನೊಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಆಸ್ಟ್ರೇಲಿಯಾವನ್ನು ಬಿಟ್ಟು ಬಿಡಿ ರೋಹಿತ್ ಶರ್ಮಾ ಎಂದು ಬೇಡಿಕೊಂಡಿದ್ದಾರೆ.

ಭಾರತದಿಂದ ಸಹಾಯ ಪಡೆದು ತಿರುಗಿ ಬಿದ್ದ ಅಫ್ರಿದಿ ವಿರುದ್ಧ ಕೆಂಡ ಕಾರಿದ ಪಾಕ್ ಮಾಜಿ ಸ್ಪಿನ್ನರ್ಭಾರತದಿಂದ ಸಹಾಯ ಪಡೆದು ತಿರುಗಿ ಬಿದ್ದ ಅಫ್ರಿದಿ ವಿರುದ್ಧ ಕೆಂಡ ಕಾರಿದ ಪಾಕ್ ಮಾಜಿ ಸ್ಪಿನ್ನರ್

ರೋಹಿತ್ ಶರ್ಮಾ ಬಗ್ಗೆ ಬ್ರೇಟ್‌ ಲೀ ಏನೆಲ್ಲಾ ಹೇಳಿದ್ದಾರೆ. ಬ್ರೇಟ್ ಲೀ ಬೇಡಿಕೊಂಡ ರೀತಿ ಹೇಗಿತ್ತು? ಮುಂದೆ ಓದಿ..

ದ್ವಿಶತಕಗಳ ಸರದಾರ ರೋಹಿತ್

ದ್ವಿಶತಕಗಳ ಸರದಾರ ರೋಹಿತ್

ಟೀಮ್ ಇಂಡಿಯಾ ಆಟಗಾರ ರೋಹಿತ್ ಶರ್ಮಾ ದೊಡ್ಡ ಇನ್ನಿಂಗ್ಸ್‌ಕಟ್ಟುವುದರಲ್ಲಿ ಪ್ರಖ್ಯಾತರಾಗಿದ್ದಾರೆ. ಅದಕ್ಕೆ ಪೂರಕವಾಗಿ ರೋಹಿತ್ ಹೆಸರಿನಲ್ಲಿ ಮೂರು ದ್ವಿಶತಕಗಳಿವೆ. ಒಂದು ದ್ವಿಶತಕವನ್ನು ಟೆಸ್ಟ್ ಕ್ರಿಕೆಟ್‌ನಲ್ಲಿ ದಾಖಲಿಸಿದ್ದಾರೆ. ಹೀಗಾಗಿ ಸ್ಟಾರ್ ಸ್ಪೋರ್ಟ್ಸ್‌ನ ಕ್ರಿಕೆಟ್ ಕನೆಕ್ಟೆಡ್ ಕಾರ್ಯಕ್ರಮದಲ್ಲಿ ಬ್ರೇಟ್ ಲೀ ರೋಹಿತ್ ಶರ್ಮಾ ಬಳಿ ವಿಶೇಷ ಮನವಿಯನ್ನು ಮಾಡಿಕೊಂಡಿದ್ದಾರೆ.

ಬಹಳಷ್ಟು ದ್ವಿಶತಕ ಗಳಿಸಲು ಸಾಧ್ಯ, ಆದರೆ..

ಬಹಳಷ್ಟು ದ್ವಿಶತಕ ಗಳಿಸಲು ಸಾಧ್ಯ, ಆದರೆ..

ಬ್ರೇಟ್ ಲೀ ಈ ಕಾರ್ಯಕ್ರಮದಲ್ಲಿ ರೋಹಿತ್ ಶರ್ಮಾ ಅವರ ಬಗ್ಗೆ ಮಾತನಾಡುತ್ತಾ, "ಭವಿಷ್ಯದಲ್ಲಿ ಆತ ಇನ್ನೂ ಸಾಕಷ್ಟು ದ್ವಿ ಶತಕಗಳನ್ನು ದಾಖಲಿಸಬಹುದು. ಆದರೆ ದಯವಿಟ್ಟು ಆಸ್ಟ್ರೇಲಿಯಾ ವಿರುದ್ಧ ಬೇಡ. ಬೇರೆ ಯಾವುದೇ ದೇಶವಾಗಿರಬಹುದು ಪಾಕಿಸ್ತಾನ, ವೆಸ್ಟ್ ಇಂಡೀಸ್ ಹೀಗೆ. ಆದರೆ ಆಸ್ಟ್ರೇಲಿಯಾ ವಿರುದ್ಧ ಬೇಡ" ಎಂದು ಬ್ರೇಟ್ ಲೀ ಕಾರ್ಯಕ್ರಮದಲ್ಲಿ ಮನವಿ ಮಾಡಿಕೊಂಡಿದ್ದಾರೆ.

ರೋಹಿತ್ ಮೊದಲ ಏಕದಿನ ದ್ವಿಶತಕ ಆಸಿಸ್ ವಿರುದ್ಧವೇ

ರೋಹಿತ್ ಮೊದಲ ಏಕದಿನ ದ್ವಿಶತಕ ಆಸಿಸ್ ವಿರುದ್ಧವೇ

ಆದರೆ ಕುತೂಹಲಕಾರಿ ಸಂಗತಿಯೇನೆಂದರೆ ರೋಹಿತ್ ಶರ್ಮಾ ತಮ್ಮ ಮೊತ್ತ ಮೊದಲ ದ್ವಿಶತಕವನ್ನು ಆಸ್ಟ್ರೇಲಿಯಾ ವಿರುದ್ಧವೇ ದಾಖಲಿಸಿದ್ದಾರೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಮ್‌ನಲ್ಲಿ 2013ರಲ್ಲಿ ನಡೆದ ಪಂದ್ಯದಲ್ಲಿ ಶರ್ಮಾ 209 ರನ್ ದಾಖಲಿಸಿ ದ್ವಿಶತದ ಸಾಧನೆ ಮಾಡಿದ ಮೂರನೇ ಭಾರತೀಯ ಎನಿಸಿದ್ದರು. ಅದಾದ ಬಳಿಕ ಕೊಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ಶ್ರೀಲಂಕಾ ವಿರುದ್ಧ ಬರೊಬ್ಬರಿ 264 ರನ್ ಸಿಡಿಸಿ ವಿಶ್ವದಾಖಲೆ ನಿರ್ಮಿಸಿದ್ದರು. ಮೂರನೇ ದ್ವಿಶತಕವೂ ಶ್ರೀಲಂಕಾ ವಿರುದ್ಧವೇ ದಾಖಲಾಯಿತು.

ರೋಹಿತ್ ಶರ್ಮಾರ ಮೊದಲ ಆಸಿಸ್ ಪ್ರವಾಸ ಸ್ಮರಿಸಿದ ಆಸಿಸ್ ವೇಗಿ

ರೋಹಿತ್ ಶರ್ಮಾರ ಮೊದಲ ಆಸಿಸ್ ಪ್ರವಾಸ ಸ್ಮರಿಸಿದ ಆಸಿಸ್ ವೇಗಿ

ಕ್ರಿಕೆಟ್ ಕನೆಕ್ಟೆಡ್ ಕಾರ್ಯಕ್ರಮದಲ್ಲಿ ಆಸ್ಟ್ರೇಲಿಯಾದ ಮಾಜಿ ವೇಗಿ ಬ್ರೇಟ್ ಲೀ ರೋಹಿತ್ ಶರ್ಮಾರ ಮೊದಲ ಆಸ್ಟ್ರೇಲಿಯಾ ಪ್ರವಾಸವನ್ನು ನೆನಪಿಸಿಕೊಂಡಿದ್ದಾರೆ. 2007ರಲ್ಲಿ ಮೊದಲ ಬಾರಿಗೆ ರೋಹಿತ್ ಶರ್ಮಾ ಪ್ರವಾಸ ಮಾಡಿದ್ದಾಗ ಬ್ಯಾಟಿಂಗ್ ಗಮನಿಸಿದಾಗ ಅದು ಉಳಿದೆರಿಗಿಂತ ವಿಭಿನ್ನವಾಗಿ ಧ್ವನಿಸಿತ್ತು ಎಂದು ಬ್ರೇಟ್ ಲೀ ಹೇಳಿದ್ದಾರೆ.

Story first published: Tuesday, May 26, 2020, 18:45 [IST]
Other articles published on May 26, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X