ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕ್ರಿಸ್‌ಗೇಲ್‌, ಜಾಂಟಿರೋಡ್ಸ್‌ಗೆ ಗಣರಾಜ್ಯೋತ್ಸವದ ಶುಭಾಶಯ ತಿಳಿಸಿದ ಪ್ರಧಾನಿ ಮೋದಿ

Chris gayle and jonty rhodes

ದೇಶಾದ್ಯಂತ ಇಂದು 73ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ ಜೋರಾಗಿದೆ. ಕೋವಿಡ್-19 ಸಾಂಕ್ರಾಮಿಕದ ಅಡಚಣೆಯ ನಡುವೆ ಗಣರಾಜ್ಯೋತ್ಸವ ನಿಯಮಗಳ ಅನುಸಾರವೇ ನಡೆದಿದೆ. ದೇಶದ ಮೂಲೆ ಮೂಲೆಯಲ್ಲಿ ಚಿಕ್ಕವರಿಂದ ಹಿಡಿದು ದೊಡ್ಡವರವರೆಗೂ ಎಲ್ಲರೂ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ.

ಈ ಹಿನ್ನೆಲೆಯಲ್ಲಿ ಅನೇಕ ವಿದೇಶಿ ಗಣ್ಯರು ಭಾರತದ ಜನತೆಗೆ ಗಣರಾಜ್ಯೋತ್ಸವದ ಶುಭಾಶಯಗಳನ್ನು ಕೋರಿದ್ದಾರೆ. ರಾಜಕೀಯ ನಾಯಕರು, ಕ್ರೀಡಾಪಟುಗಳು ಸೇರಿದಂತೆ ಅನೇಕರು ಭಾರತಕ್ಕೆ ಶುಭಾಶಯ ತಿಳಿಸಿದ್ದಾರೆ. ಇದ್ರಿಂದ ವೆಸ್ಟ್ ಇಂಡೀಸ್ ಲೆಜೆಂಡ್ ಕ್ರಿಕೆಟಿಗ ಮತ್ತು ಯೂನಿವರ್ಸಲ್ ಬಾಸ್ ಕ್ರಿಸ್ ಗೇಲ್ ಕೂಡ ಹೊರತಾಗಿಲ್ಲ ಪ್ರಧಾನಿ ನರೇಂದ್ರ ಮೋದಿ ತಿಳಿಸಿರುವ ವಿಶೇಷ ಶುಭಾಶಯಗಳನ್ನ ತಮ್ಮ ಟ್ವಿಟರ್ ಖಾತೆಯ ಮೂಲಕ ತಿಳಿಸಿರುವ ಗೇಲ್‌ ಭಾರತಕ್ಕೆ 73 ನೇ ಗಣರಾಜ್ಯೋತ್ಸವ ಶುಭಾಶಯಗಳನ್ನು ಕೋರಿದ್ದಾರೆ.

ಪ್ರಧಾನಿ ಮೋದಿ ಸಂದೇಶದೊಂದಿಗೆ ಇಂದು ದಿನ ಪ್ರಾರಂಭ!

ಪ್ರಧಾನಿ ಮೋದಿ ಸಂದೇಶದೊಂದಿಗೆ ಇಂದು ದಿನ ಪ್ರಾರಂಭ!

ಇಂದು ಬೆಳಿಗ್ಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ವೈಯಕ್ತಿಕ ಸಂದೇಶ ಕಳುಹಿಸಿದ್ದಾರೆ ಎಂದು ಕ್ರಿಸ್ ಗೇಲ್ ಹೇಳಿದ್ದಾರೆ.ಈ ಸಂದೇಶದೊಂದಿಗೆ ನಾನು ದಿನದ ಆರಂಭ ಪಡೆದಿದ್ದೇನೆ ಎಂದು ಗೇಲ್ ಹೇಳಿದರು. ಈ ಸಂದರ್ಭದಲ್ಲಿ ಗೇಲ್ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತದ ಜನರೊಂದಿಗೆ ತಮ್ಮ ನಿಕಟ ಸಂಬಂಧವನ್ನು ಸ್ಮರಿಸಿದರು. ಭಾರತದಲ್ಲಿ ಐಪಿಎಲ್‌ನಲ್ಲಿ ಆಡಿದ್ದಲ್ಲದೆ, ಇತರ ಲೀಗ್‌ಗಳಲ್ಲಿ ಭಾರತೀಯ ಆಟಗಾರರೊಂದಿಗೆ ಆಡಿದ್ದೇನೆ ಎಂದು ಅವರು ಹೇಳಿದರು. ಇದಕ್ಕಾಗಿ ನನಗೆ ಗೌರವವಾಗಿದೆ ಎಂದು ಗೇಲ್ ಟ್ವೀಟ್ ಮಾಡಿದ್ದಾರೆ.

ವೆಸ್ಟ್ ಇಂಡೀಸ್ ವಿರುದ್ಧ ಕಣಕ್ಕಿಳಿಯಲಿರುವ ಭಾರತ ಸಂಭಾವ್ಯ ತಂಡ; ಇಬ್ಬರು ಪ್ರಮುಖರು ತಂಡದಿಂದ ಔಟ್!

ಭಾರತದೊಂದಿಗೆ ಉತ್ತಮ ಬಾಂಧವ್ಯ

"73 ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ, ನಾನು ಭಾರತೀಯರಿಗೆ ನನ್ನ ಶುಭಾಶಯಗಳನ್ನು ತಿಳಿಸುತ್ತೇನೆ. ಪ್ರಧಾನಿ ನರೇಂದ್ರ ಮೋದಿಯವರು ವೈಯಕ್ತಿಕವಾಗಿ ನನಗೆ ಕಳುಹಿಸಿದ ಸಂದೇಶದಿಂದ ನಾನು ಇಂದು ಎಚ್ಚರಗೊಂಡಿದ್ದೇನೆ. ನಾನು ವೈಯಕ್ತಿಕವಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತೀಯರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದೇನೆ. ಈ ಯೂನಿವರ್ಸಲ್ ಬಾಸ್‌ನಿಂದ ನಿಮಗೆ ಶುಭಾಶಯಗಳು, "ಎಂದು ಗೇಲ್ ತಮ್ಮ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ವೈರಲ್ ಆಗಿದೆ.

ಐಪಿಎಲ್‌ನ ಸೂಪರ್‌ಸ್ಟಾರ್‌ ಕ್ರಿಸ್‌ಗೇಲ್

ಐಪಿಎಲ್‌ನ ಸೂಪರ್‌ಸ್ಟಾರ್‌ ಕ್ರಿಸ್‌ಗೇಲ್

42ರ ವರ್ಷದ ಕ್ರಿಸ್‌ಗೇಲ್ ಟಿ20 ಕ್ರಿಕೆಟ್‌ನಲ್ಲಿ ಯಾರೂ ಮುಟ್ಟಲಾರದ ಸಾಧನೆ ಮಾಡಿದ್ದಾರೆ. ಅದ್ರಲ್ಲೂ ಐಪಿಎಲ್‌ನಲ್ಲಿ ಈತ ನಿಜವಾದ ಸೂಪರ್‌ಸ್ಟಾರ್ ಭಾರತದಲ್ಲಿ ಪ್ರತಿ ವರ್ಷ ನಡೆಯುವ ಐಪಿಎಲ್ ಮೂಲಕ ಅವರು ಭಾರತೀಯರೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿದ್ದಾರೆ. ಗೇಲ್ ಐಪಿಎಲ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ತಂಡಗಳನ್ನು ಪ್ರತಿನಿಧಿಸಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಸುದೀರ್ಘ ಕಾಲ ಆಡಿದ ಗೇಲ್, ತಂಡದ ಪರ ಅತಿ ಹೆಚ್ಚು ರನ್ ಗಳಿಸಿದ ಮೂರನೇ ಆಟಗಾರ ಎನಿಸಿಕೊಂಡರು. ಗೇಲ್ ತಮ್ಮ ಐಪಿಎಲ್ ಆಟದಿಂದ ಅಭಿಮಾನಿಗಳನ್ನು ಮಂತ್ರಮುಗ್ಧರನ್ನಾಗಿಸುವ ಮೂಲಕ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ.

ಕ್ರಿಸ್ ಗೇಲ್ 1999 ರಲ್ಲಿ ಚೊಚ್ಚಲ ಪಂದ್ಯವನ್ನಾಡಿದ ನಂತರ ಟಿ20 ಕ್ರಿಕೆಟ್‌ನಲ್ಲಿ ಅಷ್ಟೇ ಅಲ್ಲದೆ ಟೆಸ್ಟ್ ಮತ್ತು ಏಕದಿನ ಎರಡರಲ್ಲೂ ಅತ್ಯಂತ ಭಯಾನಕ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾಗಿದ್ದಾರೆ. 10000 ಕ್ಕೂ ಹೆಚ್ಚು ODI ರನ್‌ಗಳನ್ನು ಮತ್ತು ದ್ವಿಶತಕವನ್ನು ಗಳಿಸುವುದರ ಜೊತೆಗೆ, ಅವರು ಎರಡು ಟೆಸ್ಟ್ ತ್ರಿಶತಕಗಳನ್ನು ಹೊಂದಿದ್ದಾರೆ ಮತ್ತು ಹಲವಾರು ಟಿ20 ಶತಕಗಳು ಅವರ ಹೆಸರಿನಲ್ಲಿದೆ.

ಕೊಹ್ಲಿ ವಿಶ್ವದ ಬೆಸ್ಟ್‌ ಬ್ಯಾಟ್ಸ್‌ಮನ್ ಎಂದು ಸಾಭೀತುಪಡಿಸುವ ಸಮಯ ಬಂದಿದೆ: ಶೇನ್ ವಾರ್ನ್‌

ಜಾಂಟಿ ರೋಡ್ಸ್‌ಗೂ ಶುಭಾಶಯ ತಿಳಿಸಿರುವ ಮೋದಿ

ಜಾಂಟಿ ರೋಡ್ಸ್‌ಗೂ ಶುಭಾಶಯ ತಿಳಿಸಿರುವ ಮೋದಿ

ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಜಾಂಟಿ ರೋಡ್ಸ್‌ಗೂ ಕೂಡ ಪ್ರಧಾನಿ ನರೇಂದ್ರ ಮೋದಿ 73ನೇ ಗಣರಾಜ್ಯೋತ್ಸವದ ಶುಭಾಶಯ ಕಳುಹಿಸಿದ್ದಾರೆ. ಭಾರತದೊಂದಿಗೆ ಜಾಂಟಿ ಅವಿನಾಭಾವ ಸಂಬಂಧ ಹೊಂದಿದ್ದು, ಐಪಿಎಲ್‌ ಸೇತುವೆಯಾಗಿ ಜಾಂಟಿಯನ್ನ ಭಾರತೀಯನನ್ನಾಗಿ ಮಾಡಿದೆ.

ಇಂದು ಮುಂಜಾನೆ ಟ್ವಿಟರ್‌ನಲ್ಲಿ ಜಾಂಟಿ ರೋಡ್ಸ್ ಅವರು ಇಡೀ ರಾಷ್ಟ್ರದ ಪರವಾಗಿ ಪ್ರಧಾನಿ ಮೋದಿ ಅವರು ಹೇಗೆ ಶುಭ ಹಾರೈಸಿದರು ಎಂಬುದರ ಕುರಿತಾಗಿ ಟ್ವೀಟ್ ಮಾಡಿದ್ದಾರೆ. ಭಾರತ ಮೇಲಿನ ಪ್ರೀತಿಯ ಸಂಕೇತವಾಗಿ ಜಾಂಟಿ ತಮ್ಮ ಮಗಳಿಗೆ 'ಇಂಡಿಯಾ' ಎಂದು ಹೆಸರಿಟ್ಟಿದ್ದಾರೆ.

'' ಕಳೆದ ಹಲವು ವರ್ಷಗಳಲ್ಲಿ ನೀವು ಭಾರತ ಮತ್ತು ಅದರ ಸಂಸ್ಕೃತಿಯೊಂದಿಗೆ ಆಳವಾದ ಸಂಪರ್ಕವನ್ನು ಬೆಳೆಸಿಕೊಂಡಿದ್ದೀರಿ. ಈ ಮಹಾನ್ ರಾಷ್ಟ್ರದ ಹೆಸರನ್ನು ನಿಮ್ಮ ಮಗಳಿಗೆ ಹೆಸರಿಸಿದಾಗ ಈ ವಿಶೇಷ ಬಂಧವು ನಿಜವಾಗಿಯೂ ಪ್ರತಿಫಲಿಸುತ್ತದೆ. ನೀವು ನಿಜವಾಗಿಯೂ ವಿಶೇಷ. ನಮ್ಮ ರಾಷ್ಟ್ರಗಳ ನಡುವಿನ ಬಲವಾದ ಸಂಬಂಧಗಳ ರಾಯಭಾರಿ." ಎಂದು ಪ್ರಧಾನಿ ನರೇಂದ್ರ ಮೋದಿ ತಮ್ಮ ಪತ್ರದಲ್ಲಿ ಜಾಂಟಿ ರೋಡ್ಸ್‌ಗೆ ತಿಳಿಸಿದ್ದಾರೆ.

ಮೋದಿ ವಿಶೇಷ ಶುಭಾಶಯಕ್ಕೆ ಧನ್ಯವಾದ ಎಂದ ಜಾಂಟಿ

ಪ್ರಧಾನಿ ಮೋದಿಯವರ ಹೃತ್ಪೂರ್ವಕ ಸಂದೇಶಕ್ಕೆ ಪ್ರತ್ಯುತ್ತರ ನೀಡಿದ ಜಾಂಟಿ ರೋಡ್ಸ್, "ನರೇಂದ್ರ ಮೋದಿ ಜಿ ಅವರಿಗೆ ನಿಮ್ಮ ತುಂಬಾ ಒಳ್ಳೆಯ ಮಾತುಗಳಿಗಾಗಿ ಧನ್ಯವಾದಗಳು. ಭಾರತಕ್ಕೆ ಪ್ರತಿ ಭೇಟಿಯಲ್ಲೂ ನಾನು ಒಬ್ಬ ವ್ಯಕ್ತಿಯಾಗಿ ತುಂಬಾ ಬೆಳೆದಿದ್ದೇನೆ. ನನ್ನ ಇಡೀ ಕುಟುಂಬವು ಭಾರತದಾದ್ಯಂತ ಗಣರಾಜ್ಯೋತ್ಸವವನ್ನು ಆಚರಿಸುತ್ತದೆ. ಭಾರತೀಯ ಜನರ ಹಕ್ಕುಗಳನ್ನು ರಕ್ಷಿಸುವ ಸಂವಿಧಾನದ ಮಹತ್ವವನ್ನು ಗೌರವಿಸುತ್ತೇನೆ #ಜೈಹಿಂದ್. ಎಂದು ಜಾಂಟಿ ರೋಡ್ಸ್‌ ಟ್ವೀಟ್ ಮಾಡಿದ್ದಾರೆ.

ಇದೇ ರೀತಿಯಲ್ಲಿ ವಿಂಡೀಸ್ ದಿಗ್ಗಜ ಕ್ರಿಸ್‌ಗೇಲ್ ಕೂಡ ತಮ್ಮ ಶುಭ ಹಾರೈಕೆಯನ್ನ ನರೇಂದ್ರ ಮೋದಿ ಮತ್ತು ಭಾರತದ ಅಭಿಮಾನಿಗಳಿಗೆ ತಿಳಿಸಿದ್ದಾರೆ.

Virat Kohli ಈಗಲೂ ಎಷ್ಟು ವರ್ಷ ಕ್ರಿಕೆಟ್ ಆಡಬಹುದು | Oneindia Kannada

Story first published: Wednesday, January 26, 2022, 18:06 [IST]
Other articles published on Jan 26, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X