ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಚೆನ್ನೈಗೆ ತೆರಳುವಾಗ ತೆಗೆದ ಚೆಪಾಕ್ ಅಂಗಳದ ಸುಂದರ ಫೋಟೋ ಹಂಚಿಕೊಂಡ ಪ್ರಧಾನಿ ಮೋದಿ

PM Narendra Modi shares stunning photo of Chepauk during visit to Chennai

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿ ಸಾಕಷ್ಟು ಕುತೂಹಲವನ್ನು ಮೂಡಿಸಿದೆ. ಈ ಕುತೂಹಲ ದೇಶದ ಪ್ರಧಾನಿ ನರೇಂದ್ರ ಮೋದಿಯನ್ನೂ ಬಿಟ್ಟಿಲ್ಲ. ಇಂದು ಕಾರ್ಯಕ್ರಮದ ಸಲುವಾಗಿ ಚೆನ್ನೈಗೆ ತೆರಳಿದ ನರೇಂದ್ರ ಮೋದಿ ಚೆಪಾಕ್ ಅಂಗಳದ ಸುಂದರ ಫೋಟೋವನ್ನು ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ತಮಿಳುನಾಡಿನಲ್ಲಿ ವಿವಿಧ ಕಾರ್ಯಕ್ರಮಗಳ ಉದ್ಘಾಟನೆಗಾಗಿ ಪ್ರಧಾನಿ ನರೇಂದ್ರ ಮೊದಿ ತೆರಳಿದ್ದರು.

ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗ ತೆಗೆದ ಈ ಫೋಟೋ ಎಂಎ ಚಿದಂಬರಂ ಸ್ಟೇಡಿಯಮ್ ಸಹಿತ ಸುತ್ತ ಮುತ್ತಲಿನ ಪರಿಸರವನ್ನು ಒಳಗೊಂಡಿದೆ. ಹೀಗಾಗಿ ಕ್ರೀಡಾಂಗಣ ಸುಂದರವಾಗಿ ಕಾಣಿಸುತ್ತಿದ್ದು ಪ್ರಧಾನಿ ಈ ಬಗ್ಗೆ ಅಡಿ ಬರಹದೊಂದಿಗೆ ಟ್ವಿಟ್ ಮಾಡಿದ್ದಾರೆ."ಚೆನ್ನೈನಲ್ಲಿ ನಡೆಯುತ್ತಿರುವ ಆಸಕ್ತಿದಾಯಕ ಟೆಸ್ಟ್ ಪಂದ್ಯದ ಕ್ಷಣಿಕ ನೋಟ ಗಮನಸೆಳೆಯಿತು" ಎಂದು ಟ್ವೀಟ್ ಮಾಡಿದ್ದಾರೆ.

 ಭಾರತ vs ಇಂಗ್ಲೆಂಡ್: ರಿಷಭ್ ಪಂತ್ ತಮಾಷೆಯ ವಿಡಿಯೋ ನೋಡಿ! ಭಾರತ vs ಇಂಗ್ಲೆಂಡ್: ರಿಷಭ್ ಪಂತ್ ತಮಾಷೆಯ ವಿಡಿಯೋ ನೋಡಿ!

ಕುತೂಹಲಕಾರಿ ಸಂಗತಿಯೆಂದರೆ ಎರಡನೇ ಟೆಸ್ಟ್ ಪಂದ್ಯದ ಅಂತ್ಯದ ಬಳಿಕ ಮೂರು ಹಾಗೂ ನಾಲ್ಕನೇ ಟೆಸ್ಟ್ ಪಂದ್ಯ ಪ್ರಧಾನಿ ನರೇಂದ್ರ ಮೋದಿಯ ತವರು ರಾಜ್ಯ ಗುಜರಾತ್‌ನ ಅಹ್ಮದಾಬಾದ್‌ನಲ್ಲಿ ನಡೆಯಲಿದೆ. ಅಹ್ಮದಾಬಾದ್‌ನಲ್ಲಿ ನಿರ್ಮಾಣವಾಗಿರುವ ವಿಶ್ವದ ಅತ್ಯಂತ ಬೃಹತ್ ಕ್ರಿಕೆಟ್ ಸ್ಟೇಡಿಯಮ್ ಎಂಬ ಖ್ಯಾತಿಯನ್ನು ಪಡೆದಿರುವ ಮೊಟೆರಾ ಕ್ರೀಡಾಂಗಣದಲ್ಲಿ ಈ ಅಂತಿಮ ಎರಡು ಪಂದ್ಯಗಳು ನಡೆಯಲಿದೆ.

ಇನ್ನು ಭಾರತ ಹಾಗೂ ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯದ ಎರಡನೇ ದಿನವೂ ಭಾರತ ಸಂಪೂರ್ಣ ಬಿಗಿ ಹಿಡಿತವನ್ನು ಸಾಧಿಸಿದೆ. ಮೊದಲ ಇನ್ನಿಂಗ್ಸ್‌ನಲ್ಲಿ 195 ರನ್‌ಗಳ ಭಾರೀ ಮುನ್ನಡೆಯನ್ನು ಪಡೆದುಕೊಂಡು ಎರಡನೇ ಇನ್ನಿಂಗ್ಸ್‌ನಲ್ಲಿ ಮತ್ತೊಮ್ಮೆ ಬ್ಯಾಟಿಂಗ್‌ಗೆ ಟೀಮ್ ಇಂಡಿಯಾ ಇಳಿದಿದೆ.

ಪಾಕಿಸ್ತಾನ ಬ್ಯಾಟ್ಸ್‌ಮನ್ ಇನ್ಝಮಾಮ್ ದಾಖಲೆ ಮುರಿದ ಜೋ ರೂಟ್!ಪಾಕಿಸ್ತಾನ ಬ್ಯಾಟ್ಸ್‌ಮನ್ ಇನ್ಝಮಾಮ್ ದಾಖಲೆ ಮುರಿದ ಜೋ ರೂಟ್!

ಇದಕ್ಕೂ ಮೊದಲು ಮೊದಲ ಇನ್ನಿಂಗ್ಸ್‌ನಲ್ಲಿ ಟೀಮ್ ಇಂಡಿಯಾ 329 ರನ್‌ಗಳಿಗೆ ಆಲೌಟ್ ಆಗಿತ್ತು. ಅದಕ್ಕೆ ಪ್ರತಿಯಾಗಿ ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್ 134 ರನ್ ಗಳಿಸಲಷ್ಟೇ ಶಕ್ತವಾಯಿತು. ಟೀಮ್ ಇಂಡಿಯಾ ಪರವಾಗಿ ಆರ್ ಅಶ್ವಿನ್ 5 ವಿಕೆಟ್ ಪಡೆದು ಮಿಂಚಿದರು.

Story first published: Sunday, February 14, 2021, 18:05 [IST]
Other articles published on Feb 14, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X