ಬದ್ದ ವೈರಿಗಳ ಕಾಳಗ ಎಂದೇ ಖ್ಯಾತಿಯನ್ನು ಪಡೆದಿರುವ ಆ್ಯಶಸ್ ಟೆಸ್ಟ್ ಸರಣಿ ಕಳೆದ ಭಾನುವಾರದಂದು ಮುಕ್ತಾಯಗೊಂಡಿದ್ದು, ಪ್ರವಾಸಿ ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯ ತವರು ನೆಲದಲ್ಲಿ 4-0 ಅಂತರದಿಂದ ಗೆದ್ದು ಬೀಗಿದೆ. ಈ ಪ್ರತಿಷ್ಠಿತ ಸರಣಿಯಲ್ಲಿ ಇಂಗ್ಲೆಂಡ್ ಯಾವುದೇ ಗೆಲುವನ್ನು ಸಾಧಿಸದೇ ಕಾಂಗರೂಗಳಿಗೆ ಶರಣಾಗಿರುವುದು ಸದ್ಯ ಕ್ರಿಕೆಟ್ ಜಗತ್ತಿನಲ್ಲಿ ಭಾರೀ ಟೀಕೆಗಳಿಗೆ ಎಡೆ ಮಾಡಿಕೊಟ್ಟಿದೆ. ಅದರಲ್ಲಿಯೂ ಇಂಗ್ಲೆಂಡ್ ತಂಡ ಟೆಸ್ಟ್ ಕ್ರಿಕೆಟ್ನಲ್ಲಿ ಕಳೆದೊಂದು ವರ್ಷದಿಂದ ಕೆಟ್ಟ ಹಂತವನ್ನು ತಲುಪಿದ್ದು ಸಾಲುಸಾಲು ಪಂದ್ಯಗಳಲ್ಲಿ ಸೋಲನ್ನು ಅನುಭವಿಸುತ್ತಾ ಬಂದಿದೆ.
ಭಾರತ ಟೆಸ್ಟ್ ತಂಡದ ನೂತನ ನಾಯಕ ಫಿಕ್ಸ್: ಉಪನಾಯಕನ ರೇಸ್ನಲ್ಲಿ ಈ ಮೂವರು ಆಟಗಾರರು!
ಸದ್ಯ ಆಸ್ಟ್ರೇಲಿಯಾ ವಿರುದ್ಧ ನಡೆದ ಆ್ಯಶಸ್ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ ಹೀನಾಯವಾಗಿ ಸೋತಿರುವುದು ಇಂಗ್ಲೆಂಡ್ ಕ್ರಿಕೆಟ್ಗೆ ದೊಡ್ಡ ಮಟ್ಟದ ಹಿನ್ನಡೆಯನ್ನು ಉಂಟುಮಾಡಿದ್ದು, ನಾಯಕ ಜೋ ರೂಟ್ ನಾಯಕತ್ವವನ್ನು ತ್ಯಜಿಸಬೇಕು ಎಂದು ಹಲವಾರು ಮಾಜಿ ಕ್ರಿಕೆಟಿಗರು ಹಾಗೂ ಇಂಗ್ಲೆಂಡ್ ಕ್ರಿಕೆಟ್ ತಂಡದ ಅಭಿಮಾನಿಗಳು ರೂಟ್ ವಿರುದ್ಧ ಕಿಡಿಕಾರಿದ್ದರು. ಇನ್ನು ಪಂದ್ಯ ಮುಗಿದ ಬಳಿಕ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ಇಂಗ್ಲೆಂಡ್ ಟೆಸ್ಟ್ ಕ್ರಿಕೆಟ್ನಲ್ಲಿ ಮರಳಿ ಲಯ ಕಂಡುಕೊಳ್ಳುವತ್ತ ಹೆಚ್ಚಿನ ಗಮನಹರಿಸಲಿದ್ದೇವೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದರು. ಹಾಗೂ ಇದೇ ವೇಳೆ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಭಾಗವಹಿಸುತ್ತೀರಾ ಎಂಬ ಪ್ರಶ್ನೆಯನ್ನು ಪತ್ರಕರ್ತರೊಬ್ಬರು ಕೇಳಿದಾಗ ನನ್ನ ಮೊದಲ ಆದ್ಯತೆ ಟೆಸ್ಟ್ ಕ್ರಿಕೆಟ್ಗೆ ಎಂಬ ಹೇಳಿಕೆಯನ್ನು ನೀಡಿ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಭಾಗವಹಿಸುವುದು ಅನುಮಾನ ಎಂಬುದನ್ನು ಪರೋಕ್ಷವಾಗಿ ಜೋ ರೂಟ್ ತಿಳಿಸಿದ್ದರು.
ಐಪಿಎಲ್: ಆರ್ಸಿಬಿ ನಾಯಕನ ಮೇಲೆ ಕೆಕೆಆರ್, ಪಂಜಾಬ್ ಕಣ್ಣು; ಈತನ ಮೇಲೆ ಹರಿಯಲಿದೆ ಹಣದ ಹೊಳೆ!
ಹೀಗೆ ಆಸ್ಟ್ರೇಲಿಯಾ ವಿರುದ್ಧದ ಆಶಸ್ ಟೆಸ್ಟ್ ಸರಣಿ ಸೋತ ನಂತರ ಇಂಗ್ಲೆಂಡ್ ಆಟಗಾರರು ಅದರಲ್ಲಿಯೂ ನಾಯಕ ಜೋ ರೂಟ್ ಸಾಕಷ್ಟು ನೋವಿಗೊಳಗಾಗಿ ಚಿಂತಿಸುತ್ತಿದ್ದಾರೆ ಎಂದು ಕ್ರಿಕೆಟ್ ಜಗತ್ತಿನಲ್ಲಿ ಸುದ್ದಿಯಾಗಿತ್ತು. ಆದರೆ, ಜೋ ರೂಟ್ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಹೀನಾಯ ಸೋಲು ಕಂಡದ್ದರ ಬಗ್ಗೆ ಹೆಚ್ಚೇನೂ ತಲೆ ಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಹೌದು, ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ ಮುಗಿದ ಬೆನ್ನಲ್ಲೇ ಆಸ್ಟ್ರೇಲಿಯಾದ ಕೆಲ ಆಟಗಾರರ ಜೊತೆ ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ಆ್ಯಶಸ್ ಟೆಸ್ಟ್ ಪಾರ್ಟಿಯಲ್ಲಿ ಬೆಳಗಿನ ಜಾವದವರೆಗೂ ಕೂಡ ಪಾಲ್ಗೊಂಡಿದ್ದಾರೆ. ಸದ್ಯ ಈ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಪೊಲೀಸರು ಪಾರ್ಟಿ ಮಾಡುತ್ತಿದ್ದ ಸ್ಥಳಕ್ಕೆ ಬಂದು ಪರಿಶೀಲಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ವಿಷಯದ ಕುರಿತಾದ ಮತ್ತಷ್ಟು ಮಾಹಿತಿ ಮುಂದೆ ಇದೆ ಓದಿ..
ಆಸ್ಟ್ರೇಲಿಯಾ ಆಟಗಾರರ ಜತೆ ರೂಟ್, ಆ್ಯಂಡರ್ಸನ್ ನೈಟ್ ಪಾರ್ಟಿ
ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ಜತೆಗೆ ಜೇಮ್ಸ್ ಆ್ಯಂಡರ್ಸನ್ ಕೂಡ ಆಸ್ಟ್ರೇಲಿಯಾ ಆಟಗಾರರ ಜೊತೆ ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು. ಆಸ್ಟ್ರೇಲಿಯಾದ ಟ್ರೆವಿಸ್ ಹೆಡ್, ನಾಥನ್ ಲಿಯೋನ್ ಮತ್ತು ಅಲೆಕ್ಸ್ ಕ್ಯಾರಿ ಜತೆಗೆ ರಾತ್ರಿ ಪೂರ್ತಿ ಜೋ ರೂಟ್ ಮತ್ತು ಜೇಮ್ಸ್ ಆ್ಯಂಡರ್ಸನ್ ಪಾರ್ಟಿಯಲ್ಲಿ ಪಾಲ್ಗೊಂಡಿರುವ ವಿಡಿಯೋ ಹೊರಬಿದ್ದಿದ್ದು, ಇಷ್ಟೂ ಜನ ಆಟಗಾರರು ಪಾರ್ಟಿಯಲ್ಲಿ ಪಾಲ್ಗೊಂಡಿದ್ದನ್ನು ನೀವು ಮೇಲಿನ ಆ ವಿಡಿಯೋದಲ್ಲಿ ಕಾಣಬಹುದು.
ಮುಂಜಾನೆವರೆಗೂ ಪಾರ್ಟಿ, ಪೊಲೀಸರಿಗೆ ಹೋಗಿತ್ತು ಮೌಖಿಕ ದೂರು
ಇನ್ನು ಹೊಬಾರ್ಟ್ ನಗರದ ಹೋಟೆಲ್ ಒಂದರಲ್ಲಿ ಈ ಮೇಲ್ಕಂಡ ಆಟಗಾರರು ಭಾನುವಾರ ರಾತ್ರಿಯಿಂದ ಸೋಮವಾರ ಬೆಳಗ್ಗಿನ ಜಾವದವರೆಗೂ ಪಾರ್ಟಿಯಲ್ಲಿ ತೊಡಗಿದ್ದರು. ಹೀಗೆ ಈ ಆಟಗಾರರು ಪಾರ್ಟಿ ನಡೆಸುತ್ತಿದ್ದ ಸ್ಥಳಕ್ಕೆ ಬಂದ ಪೊಲೀಸರು ವಿಷಯದ ಕುರಿತಾಗಿ ಮೌಖಿಕ ದೂರು ಬಂದ ವಿಷಯವನ್ನು ತಿಳಿಸಿದರು. ಹೀಗೆ ಪೊಲೀಸರು ಆ ಆಟಗಾರರ ಜತೆ ಚರ್ಚೆ ನಡೆಸಿ ಅಲ್ಲಿಂದ ತೆರಳುವಂತೆ ಮಾತುಕತೆಯನ್ನು ನಡೆಸಿದ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಹಾಗೂ ಈ ದೃಶ್ಯದಲ್ಲಿ ಆಟಗಾರರ ಮುಂದಿರುವ ಟೇಬಲ್ ಮೇಲೆ ಮದ್ಯದ ಬಾಟಲಿಗಳು ಇರುವುದನ್ನೂ ಸಹ ಗಮನಿಸಬಹುದು.
ಜೆರ್ಸಿ ಬದಲಿಸದೇ ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ಅಲೆಕ್ಸ್ ಕ್ಯಾರಿ ಮತ್ತು ನಾಥನ್ ಲಿಯಾನ್
ಇನ್ನು ಈ ವಿಡಿಯೋದಲ್ಲಿ ಆಸ್ಟ್ರೇಲಿಯಾ ತಂಡದ ಆಟಗಾರರಾದ ಅಲೆಕ್ಸ್ ಕ್ಯಾರಿ ಮತ್ತು ನಾಥನ್ ಲಿಯಾನ್ ಆಸ್ಟ್ರೇಲಿಯಾದ ಟೆಸ್ಟ್ ಜೆರ್ಸಿಯಲ್ಲಿಯೇ ಇರುವುದನ್ನು ಕಾಣಬಹುದು. ಪಂದ್ಯ ಮುಗಿದ ಬೆನ್ನಲ್ಲೇ ಜೆರ್ಸಿಯನ್ನು ಕೂಡಾ ಬದಲಾಯಿಸದ ಈ ಆಟಗಾರರು ರಾತ್ರಿ ಪೂರ್ತಿ ಕುಡಿದು ಪಾರ್ಟಿ ಮಾಡಿರುವುದರ ಕುರಿತಾಗಿ ಸದ್ಯ ಕ್ರಿಕೆಟ್ ಅಭಿಮಾನಿಗಳಿಂದ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿವೆ.
myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ.
Allow Notifications
You have already subscribed