ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪೊಲಾರ್ಡ್, ತಾಹೀರ್, ರಶೀದ್ ಐಪಿಎಲ್‌ನಲ್ಲಿ ಮಿಂಚಲಿದ್ದಾರೆ: ಆಶಿಶ್ ನೆಹ್ರಾ

Pollard, Tahir, Rashid Will Benefit from Playing CPL before IPL: Ashish Nehra

ಬೆಂಗಳೂರು, ಆಗಸ್ಟ್ 14: ಆಗಸ್ಟ್ 18ರಿಂದ ಆರಂಭಗೊಳ್ಳಲಿರುವ ಕೆರಿಬಿಯನ್ ಪ್ರಿಮಿಯರ್ ಲೀಗ್ ಸೆಪ್ಟೆಂಬರ್ 10ರಂದು ಕೊನೆಗೊಳ್ಳಲಿದೆ. ಇದಾಗಿ ಸೆಪ್ಟೆಂಬರ್ 19ರಿಂದ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಗೊಳ್ಳಲಿದೆ. ಪ್ರಮುಖ ಟೂರ್ನಿಗಳನ್ನು ಒಂದರ ನಂತರ ಒಂದು ನಡೆಸುವುದರಿಂದ ಅನುಕೂಲವಾಗಲಿದೆ ಎಂದು ಭಾರತದ ಮಾಜಿ ಆಟಗಾರ ಆಶಿಶ್ ನೆಹ್ರಾ ಹೇಳಿದ್ದಾರೆ.

ಆಸ್ಟ್ರೇಲಿಯಾ vs ಇಂಗ್ಲೆಂಡ್: ಏಕದಿನ, ಟಿ20 ಸರಣಿಯ ಸಂಪೂರ್ಣ ವೇಳಾಪಟ್ಟಿಆಸ್ಟ್ರೇಲಿಯಾ vs ಇಂಗ್ಲೆಂಡ್: ಏಕದಿನ, ಟಿ20 ಸರಣಿಯ ಸಂಪೂರ್ಣ ವೇಳಾಪಟ್ಟಿ

ಸಿಪಿಎಲ್ ಮತ್ತು ಐಪಿಎಲ್ ಬಗ್ಗೆ ಮಾತನಾಡಿರುವ ಮಾಜಿ ವೇಗಿ ನೆಹ್ರಾ, ಸಿಪಿಎಲ್ ಬಳಿಕ ಐಪಿಎಲ್ ನಡೆಯುತ್ತಿರುವುದರಿಂದ ಸಿಪಿಎಲ್‌ನಲ್ಲಿ ಪಾಲ್ಗೊಳ್ಳುವ ಆಟಗಾರರಿಗೆ ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಲು ಉತ್ತಮ ಅಭ್ಯಾಸ ದೊರೆಯುತ್ತದೆ ಎಂದಿದ್ದಾರೆ.

ಈ ಐಪಿಎಲ್ ಸೀಸನ್‌ ಆರಂಭದಲ್ಲಿ ಆಸ್ಟ್ರೇಲಿಯಾ, ಇಂಗ್ಲೆಂಡ್ ಆಟಗಾರರು ಆಡಲ್ಲ!ಈ ಐಪಿಎಲ್ ಸೀಸನ್‌ ಆರಂಭದಲ್ಲಿ ಆಸ್ಟ್ರೇಲಿಯಾ, ಇಂಗ್ಲೆಂಡ್ ಆಟಗಾರರು ಆಡಲ್ಲ!

'ಯಾವೆಲ್ಲ ಆಟಗಾರರು ಸಿಪಿಎಲ್‌ನಲ್ಲಿ ಆಡುತ್ತಾರೋ ಅವರೆಲ್ಲರೂ ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಾರೆ ಎನ್ನೋದಕ್ಕೆ ಗ್ಯಾರಂಟಿಯಿಲ್ಲ. ಆದರೆ ಅವರು ಉಳಿದ ಆಟಗಾರರಿಗಿಂತ ಉತ್ತಮ ಪ್ರದರ್ಶನ ನೀಡುತ್ತಾರೆ ಅನ್ನೋದರಲ್ಲಿ ಅನುಮಾನವಿಲ್ಲ,' ಎಂದು ಆಶಿಶ್ ಹೇಳಿದ್ದಾರೆ.

ಸಿಪಿಎಲ್ 2020: ಎದುರಾಳಿಯನ್ನು ಚೆಂಡಾಡಲು ಆ್ಯಂಡ್ರೆ ರಸೆಲ್ ಸಜ್ಜುಸಿಪಿಎಲ್ 2020: ಎದುರಾಳಿಯನ್ನು ಚೆಂಡಾಡಲು ಆ್ಯಂಡ್ರೆ ರಸೆಲ್ ಸಜ್ಜು

'ಒಂದು ತಿಂಗಳ ಕಾಲ ಸಿಪಿಎಲ್ ನಲ್ಲಿ ಆಡಿ ನೀವು ಯುಎಇಗೆ ತಲುಪುವಾಗ ಇದು ನಿಮ್ಮನ್ನು ಖಂಡಿತವಾಗಿಯೂ ಉಳಿದವರಿಗಿಂತ ಭಿನ್ನರನ್ನಾಗಿಸುತ್ತೆ. ಹೀಗಾಗಿ ಕೀರನ್ ಪೊಲಾರ್ಡ್, ಇಮ್ರಾನ್ ತಾಹೀರ್ ಅಥವಾ ರಶೀದ್ ಖಾನ್ ಇಂಥ ಆಟಗಾರರು ಐಪಿಎಲ್‌ನಲ್ಲಿ ಮಿಂಚುತ್ತಾರೆ,' ಎಂದು ನೆಹ್ರಾ ವಿವರಿಸಿದರು.

Story first published: Friday, August 14, 2020, 21:26 [IST]
Other articles published on Aug 14, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X