ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅದೃಷ್ಟವಿಲ್ಲದ ಅಂಗಳದಲ್ಲಿ ಅದೃಷ್ಟ ಹುಡುಕಲು ಹೊರಟ ಭಾರತ

VIRAT KOHLI, ROHIT SHARMA EYE BIG RECORDS AGAINST AUSSIES | Oneindia News
Poor Rajkot Record A Concern For India Ahead Of 2nd ODI

ಮುಂಬೈನ ವಾಂಖೆಡೆ ಸ್ಟೇಡಿಯಮ್‌ನಲ್ಲಿ ನಡೆದ ಮೊದಲ ಪಂದ್ಯವನ್ನು ಕಳೆದುಕೊಂಡ ಭಾರತ ಎರಡನೇ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಎರಡನೇ ಪಂದ್ಯ ರಾಜ್‌ಕೋಟ್‌ನ ಸೌರಾಷ್ಟ್ರ ಕ್ರಿಕೆಟ್‌ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆಯಲಿದ್ದು ಈಗಾಗಲೇ ಎರಡೂ ತಂಡಗಳ ಸದಸ್ಯರು ರಾಜ್‌ಕೋಟ್‌ಗೆ ಬಂದಿಳಿದಿದ್ದಾರೆ.

ನಾಳೆ(17/01/2020) ನಡೆಯಲಿರುವ ಎರಡನೇ ಪಂದ್ಯ ಟೀಮ್ ಇಂಡಿಯಾ ಪಾಲಿಗೆ ಮಹತ್ವದ್ದಾಗಿದೆ. ಮೂರು ಪಂದ್ಯಗಳ ಸರಣಿಯಲ್ಲಿ ಆಸ್ಟ್ರೇಲಿಯಾ 1-0 ಮುನ್ನಡೆಯನ್ನು ಸಾಧಿಸಿದ್ದು ಭಾರತ ಇಲ್ಲಿ ಗೆದ್ದರಷ್ಟೇ ಸರಣಿ ಜೀವಂತವಾಗಿರಲು ಸಾಧ್ಯ. ಹೀಗಾಘಿ ರಾಜ್‌ಕೋಟ್ ಕ್ರೀಡಾಂಗಣ ಟೀಮ್ ಇಂಡಿಯಾ ಪಾಲಿಗೆ ಅದೃಷ್ಟದ ಅಂಗಳವಾಗುತ್ತಾ ಅನ್ನೋದು ನೋಡಬೇಕಿದೆ.

ಭಾರತ vs ಆಸ್ಟ್ರೇಲಿಯಾ: ದ್ವಿತೀಯ ಏಕದಿನಕ್ಕೆ ಭಾರತ ಸಂಭಾವ್ಯ ತಂಡಭಾರತ vs ಆಸ್ಟ್ರೇಲಿಯಾ: ದ್ವಿತೀಯ ಏಕದಿನಕ್ಕೆ ಭಾರತ ಸಂಭಾವ್ಯ ತಂಡ

ರಾಜ್‌ಕೋಟ್‌ ಕ್ರೀಡಾಂಗಣದ ಇತಿಹಾಸ ನೋಡಿದರೆ ಟೀಮ್ ಇಂಡಿಯಾ ಪಾಲಿಗೆ ಸಿಹಿಗಿಂತ ಕಹಿಯೇ ಹೆಚ್ಚು. ಹಾಗಂತ ಇಲ್ಲಿ ಹೆಚ್ಚಿನ ಪಂದ್ಯವನ್ನೇನು ಆಡಿಲ್ಲ. ರಾಜ್‌ಕೋಟ್‌ ಸ್ಟೇಡಿಯಮ್ ಬೆರಳೆಣಿಕೆಯಷ್ಟು ಅಂತರಾಷ್ಟ್ರೀಯ ಪಂದ್ಯಗಳಿಗಷ್ಟೇ ಆತಿಥ್ಯವನ್ನು ವಹಿಸಿದೆ.

ಸೌರಾಷ್ಟ್ರದ ರಾಜ್‌ಕೋಟ್‌ ಕ್ರೀಡಾಂಗಣದಲ್ಲಿ ಈವರೆಗೆ ಎರಡು ಅಂತರಾಷ್ಟ್ರೀಯ ಏಕದಿನ ಪಂದ್ಯಗಳು ನಡೆದಿವೆ. ಮತ್ತು ಒಂದು ಅಂತರಾಷ್ಟ್ರೀಯ ಟಿ20 ಪಂದ್ಯ ನಡೆದಿದೆ. ಆದರೆ ಆಡಿರುವ ಎರಡು ಏಕದಿನ ಪಂದ್ಯದಲ್ಲೂ ಟೀಮ್ ಇಂಡಿಯಾ ಗೆಲುವಿನ ಖಾತೆಯನ್ನೇ ತೆರೆದಿಲ್ಲ. ಒಂದು ಟಿ20 ಪಂದ್ಯ ಮಾತ್ರ ಇಲ್ಲಿ ಭಾರತ ಗೆದ್ದುಕೊಂಡಿದೆ.

ಕೊಹ್ಲಿ 'ಸ್ಪಿರಿಟ್ ಆಫ್ ಕ್ರಿಕೆಟ್‌' ಪ್ರಶಸ್ತಿ ಪಡೆದ ಬಳಿಕ ಪಾಕ್ ವೇಗಿಯ ಪ್ರತಿಕ್ರಿಯೆಕೊಹ್ಲಿ 'ಸ್ಪಿರಿಟ್ ಆಫ್ ಕ್ರಿಕೆಟ್‌' ಪ್ರಶಸ್ತಿ ಪಡೆದ ಬಳಿಕ ಪಾಕ್ ವೇಗಿಯ ಪ್ರತಿಕ್ರಿಯೆ

ಟೀಮ್ ಇಂಡಿಯಾ ಮೊದಲಿಗೆ 2013ರ ಜನವರಿ11ರಂದು ಇಂಗ್ಲೆಂಡ್ ವಿರುದ್ಧ ಕಣಕ್ಕಿಳಿದಿತ್ತು. ಈ ಪಂದ್ಯವನ್ನು 9ರನ್‌ಗಳಿಂದ ಭಾರತ ತಂಡ ಕಳೆದುಕೊಂಡಿತು. ಬಳಿಕ 2015ರ ಡಿಸೆಂಬರ್ 18ರಂದು ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಪಂದ್ಯವನ್ನೂ ಭಾರತ ಸೋತಿತ್ತು. ಹೀಗಾಗಿ ಏಕದಿನದಲ್ಲಿ ಭಾರತ ತಂಡ ರಾಜ್‌ಕೋಟ್‌ನಲ್ಲಿ ಈವರೆಗೂ ಜಯ ಸಾಧಿಸಿಲ್ಲ. ನಾಳಿನ ಪಂದ್ಯದಲ್ಲಾದರೂ ಗೆಲುವು ಭಾರತದ ಪಾಲಾಗುತ್ತಾ ನೋಡಬೇಕಿದೆ.

Story first published: Thursday, January 16, 2020, 19:04 [IST]
Other articles published on Jan 16, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X