ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮಧ್ಯಮ ವೇಗಿ ಪ್ರವೀಣ್ ಕುಮಾರ್ ಎಲ್ಲಾ ಮಾದರಿಯ ಕ್ರಿಕೆಟ್ ನಿಂದ ನಿವೃತ್ತಿ

ಎಲ್ಲಾ ಮಾದರಿಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ ಪ್ರವೀಣ್ ಕುಮಾರ್ | Oneindia Kannada
Praveen Kumar retires from all forms of cricket

ನವದೆಹಲಿ, ಅಕ್ಟೋಬರ್ 20: ಭಾರತದ ಮಧ್ಯಮ ವೇಗಿ ಪ್ರವೀಣ್ ಕುಮಾರ್ ಅವರು ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ. ಟ್ವಿಟರ್ ಮೂಲಕ ಪ್ರವೀಣ್ ಶನಿವಾರ (ಅಕ್ಟೋಬರ್ 20) ಕ್ರಿಕೆಟ್ ವೃತ್ತಿ ಜೀವನಕ್ಕೆ ವಿದಾಯ ಹೇಳುವ ನಿರ್ಧಾರವನ್ನು ಪ್ರಕಟಿಸಿದರು.

ಭಾರತ-ವೆಸ್ಟ್ ಇಂಡೀಸ್ ಏಕದಿನ ಕದನ: ಪಂದ್ಯ ಎಲ್ಲಿ, ಯಾವಾಗ?ಭಾರತ-ವೆಸ್ಟ್ ಇಂಡೀಸ್ ಏಕದಿನ ಕದನ: ಪಂದ್ಯ ಎಲ್ಲಿ, ಯಾವಾಗ?

ಕ್ರಿಕೆಟ್ ನಿವೃತ್ತಿ ಬಗ್ಗೆ ಟ್ವೀಟ್ ಮಾಡಿರುವ ಉತ್ತರ ಪ್ರದೇಶದ ಆಟಗಾರ ಪ್ರವೀಣ್, 'ಶ್ರೇಷ್ಠ ಪಯಣವಾಗಿ ನನಗೆ ಕ್ರಿಕೆಟ್ ಬದುಕು ಕಂಡಿದೆ. ಭಾವುಕ ಮನಸ್ಸಿನಿಂದಲೇ ನಾನು ನನ್ನ ಮೊದಲ ಲವ್ 'ಕ್ರಿಕೆಟ್'ಗೆ ಗುಡ್ ಬೈ ಹೇಳಲು ಬಯಸಿದ್ದೇನೆ. ಕ್ರಿಕೆಟ್ ಬದುಕಿನಲ್ಲಿ ನನಗೆ ನೆರವಾದ ಬಿಸಿಸಿಐ ಮತ್ತು ಯುಪಿ ಕ್ರಿಕೆಟ್ ಅಸೋಸಿಯೇಷನ್ ಗೆ ಪ್ರೀತಿಯ ಧನ್ಯವಾದಗಳು' ಎಂದು ಬರೆದುಕೊಂಡಿದ್ದಾರೆ.

32ರ ಹರೆಯದ ಪ್ರವೀಣ್ 6 ಟೆಸ್ಟ್, 68 ಏಕದಿನ, 10 ಟಿ20 ಮತ್ತು 119 ಐಪಿಎಲ್ ಪಂದ್ಯಗಳನ್ನು ಆಡಿದ್ದು ಟೆಸ್ಟ್ ನಲ್ಲಿ 697 ರನ್- 27 ವಿಕೆಟ್ಸ್, ಏಕದಿನದಲ್ಲಿ 2774 ರನ್- 77 ವಿಕೆಟ್ ಮತ್ತು ಐಪಿಎಲ್ ನಲ್ಲಿ 3251 ರನ್- 90 ವಿಕೆಟ್ ಸಾಧನೆ ಹೊಂದಿದ್ದಾರೆ.

ಐಪಿಎಲ್ 2019: ಆರ್‌ಸಿಬಿಯಿಂದ ಕ್ವಿಂಟನ್ ಡಿ ಕಾಕ್ ಔಟ್, ಮುಂಬೈ ಇಂಡಿಯನ್ಸ್ ಸೇರ್ಪಡೆಐಪಿಎಲ್ 2019: ಆರ್‌ಸಿಬಿಯಿಂದ ಕ್ವಿಂಟನ್ ಡಿ ಕಾಕ್ ಔಟ್, ಮುಂಬೈ ಇಂಡಿಯನ್ಸ್ ಸೇರ್ಪಡೆ

ಜೈಪುರದಲ್ಲಿ 2007ರಲ್ಲಿ ನಡೆದಿದ್ದ ಪಾಕಿಸ್ತಾನ ವಿರುದ್ಧದ 5ನೇ ಏಕದಿನ ಪಂದ್ಯದಲ್ಲಿ ಪ್ರವೀಣ್ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದರು. ಆ ಪಂದ್ಯದಲ್ಲಿದಲ್ಲಿ ಪ್ರವೀಣ್ ವಿಕೆಟ್ ಪಡೆಯದೆ 10 ಓವರ್ ಎಸೆದಿದ್ದರು ಮತ್ತು 12 ರನ್ ಗಳಿಸಿದ್ದರು.

Story first published: Saturday, October 20, 2018, 15:10 [IST]
Other articles published on Oct 20, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X