ಟೀಮ್‌ ಇಂಡಿಯಾದ ಬ್ಯಾಟಿಂಗ್‌ ಕೋಚ್‌ ಸ್ಥಾನಕ್ಕೆ ಸ್ಟಾರ್‌ ಕೋಚ್‌ ಅರ್ಜಿ

ಮುಂಬೈ, ಜುಲೈ 29: ವೀರೇಂದ್ರ ಸೆಹ್ವಾಗ್‌, ರೋಹಿತ್‌ ಶರ್ಮಾ, ಗೌತಮ್‌ ಗಂಭೀರ್‌ ಹಾಗೂ ಅಜಿಂಕ್ಯ ರಹಾನೆ ಅವರಂತಹ ಸ್ಟಾರ್‌ ಬ್ಯಾಟ್ಸ್‌ಮನ್‌ಗಳಿಗೆ ಬ್ಯಾಟಿಂಗ್‌ ಮಾರ್ಗದರ್ಶನ ನೀಡಿದ ಖ್ಯಾತಿ ಹೊಂದಿರುವ ಭಾರತ ತಂಡದ ಮಾಜಿ ಆಟಗಾರ ಪ್ರವೀಣ್‌ ಆಮ್ರೆ, ಟೀಮ್‌ ಇಂಡಿಯಾದ ಬ್ಯಾಟಿಂಗ್‌ ಕೋಚ್‌ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ.

50 ವರ್ಷದ ಮುಂಬೈಕರ್‌ ಪ್ರವೀಣ್‌ ಆಮ್ರೆ, ಬ್ಯಾಟಿಂಗ್‌ ಮಾಂತ್ರಿಕ ಸಚಿನ್‌ ತೆಂಡೂಲ್ಕರ್‌ ಅವರ ಕೋಚ್‌ ರಮಾಕಾಂತ್‌ ಅಚ್ರೇಕರ್‌ ಅವರ ಶಿಶ್ಯ. ಟೆಸ್ಟ್‌ ಕ್ರಿಕೆಟ್‌ಗೆ ಭಾರತ ತಂಡದ ಪರ ಪದಾರ್ಪಣೆ ಮಾಡಿದ ಪಂದ್ಯದಲ್ಲೇ ದಕ್ಷಿಣ ಅಫ್ರಿಕಾ ವಿರುದ್ಧ ಶತಕ ಬಾರಿಸಿದ ಖ್ಯಾತಿ ಅವರದ್ದು.

ಕೋಚ್‌ ಆಗಿ ರವಿ ಶಾಸ್ತ್ರಿ ಸಾಧನೆಯೇನು? ಎಂದು ಪ್ರಶ್ನಿಸಿದ ರಾಬಿನ್‌ ಸಿಂಗ್‌

ಆಮ್ರೆ, ಭಾರತ ತಂಡದ ಪರ 11 ಟೆಸ್ಟ್‌ ಪಂದ್ಯಗಳನ್ನು ಆಡಿದ್ದು ಒಂದು ಶತಕ ಮತ್ತು ಮೂರು ಅರ್ಧಶತಕಗಳನ್ನು ಒಳಗೊಂಡ 425 ರನ್‌ಗಳನ್ನು ಗಳಿಸಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲೂ ಭಾರತ ತಂಡದ ಪರ 37 ಪಂದ್ಯಗಳನ್ನು ಆಡಿರುವ ಆಮ್ರೆ, 2 ಅರ್ಧಶತಕಗಳನ್ನು ಒಳಗೊಂಡ 513 ರನ್‌ಗಳನ್ನು ಗಳಿಸಿದ್ದಾರೆ.

ಸದ್ಯ ಅಮೆರಿಕ ಕ್ರಿಕೆಟ್‌ ತಂಡದ ಬ್ಯಾಟಿಂಗ್‌ ಸಲಹೆಗಾರನಾಗಿ ಕಾರ್ಯ ನಿರ್ವಹಿಸುತ್ತಿರುವ ಆಮ್ರೆ, ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟಿ20 ಕ್ರಿಕೆಟ್‌ ಟೂರ್ನಿಯ ಫ್ರಾಂಚೈಸಿ ತಂಡವಾದ ಡೆಲ್ಲಿ ಕ್ಯಾಪಿಟಲ್ಸ್‌ನ ಪ್ರತಿಭಾನ್ವೇಶಣೆ ಕಾರ್ಯಕ್ರಮದ ಮುಖ್ಯಸ್ಥ ಕೂಡ.

ಕೊಹ್ಲಿ-ಶಾಸ್ತ್ರಿ ಜೋಡಿ ಬೇರ್ಪಟ್ಟರೆ ಟೀಮ್‌ ಇಂಡಿಯಾಗೆ ಅಪಾಯವಂತೆ!

ಟೀಮ್‌ ಇಂಡಿಯಾದ ಹಾಲಿ ಕೋಚ್‌ ರವಿ ಶಾಸ್ತ್ರಿ ಮತ್ತು ತರಬೇತಿ ಬಳಗದ ಜೊತೆಗಿನ ಒಪ್ಪಂದವು ಇಂಗ್ಲೆಂಡ್‌ ಮತ್ತು ವೇಲ್ಸ್‌ ಆತಿಥ್ಯದಲ್ಲಿ ನಡೆದ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯೊಂದಿಗೆ ಅಂತ್ಯಗೊಂಡಿದೆ. ಆದರೆ, ಭಾರತ ತಂಡ ವೆಸ್ಟ್‌ ಇಂಡೀಸ್‌ ಪ್ರವಾಸ ಕೈಗೊಳ್ಳುತ್ತಿರುವ ಕಾರಣ ತರಬೇತಿ ಬಳಗದ ಜೊತೆಗಿನ ಒಪ್ಪಂದವನ್ನು ಬಿಸಿಸಿಐ 45 ದಿನಗಳ ಕಾಲ ವಿಸ್ತರಿಸಿದೆ. ಆದರೂ, ಜುಲೈ 30ರ ಒಳಗಾಗಿ ಟೀಮ್‌ ಇಂಡಿಯಾದ ಕೋಚ್‌ ಮತ್ತು ತರಬೇತಿ ಸಿಬ್ಬಂದಿ ವರ್ಗದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.

ಟೀಮ್‌ ಇಂಡಿಯಾ ಫೀಲ್ಡಿಂಗ್‌ ಕೋಚ್‌ ಹುದ್ದೆಗೆ ಅರ್ಜಿ ಸಲ್ಲಿಸಿದ ದಿಗ್ಗಜ

ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ತಂಡಕ್ಕೆ ನಾಲ್ಕನೇ ಕ್ರಮಾಂಕದ ಬ್ಯಾಟ್ಸ್‌ಮನ್‌ನ ಕೊರತೆ ಕಾಡಿದ ಹಿನ್ನೆಲೆಯಲ್ಲಿ ಹಾಲಿ ಬ್ಯಾಟಿಂಗ್‌ ಕೋಚ್‌ ಸಂಜಯ್‌ ಬಾಂಗರ್‌ ಮೇಲೆ ಟೀಕೆಗಳ ಸುರಿ ಮಳೆಯೇ ಆಗಿದೆ. ಕಳೆಡದ ನಾಲ್ಕು ವರ್ಷಗಳಿಂದ 4ನೇ ಕ್ರಮಾಂಕದ ಬ್ಯಾಟ್ಸ್‌ಮನ್‌ ಅಭಿವೃದ್ಧಿ ಪಡಿಸುವಲ್ಲಿ ಬಾಂಗರ್‌ ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದೇ ದೂರಲಾಗಿದೆ.

ಟಿ20 ಸರಣಿಯಲ್ಲಿ ಭಾರತಕ್ಕೆ ವಿಂಡೀಸ್‌ನ ಈ ಆಟಗಾರರಿಂದ ಅಪಾಯ!

ಇನ್ನು ತಂಡದ ಮುಖ್ಯ ಕೋಚ್‌ ಹುದ್ದೆಗೆ ಈಗಾಗಲೇ ಶ್ರೀಲಂಕಾದ ಮಹೇಲಾ ಜಯವರ್ಧನೆ, ಆಸ್ಟ್ರೇಲಿಯಾದ ಟಾಮ್‌ ಮೂಡಿ ಮತ್ತು ದಕ್ಷಿಣ ಆಫ್ರಿಕಾದ ಗ್ಯಾರಿ ಕರ್ಸ್ಟನ್‌ ಅವರಂತಹ ಘಟಾನುಘಟಿಗಳು ಅರ್ಜಿ ಸಲ್ಲಿಸಿದ್ದಾರೆ. ಭಾರತದ ಮಾಜಿ ಆಟಗಾರ ರಾಬಿನ್‌ ಸಿಂಗ್‌ ಕೂಡ ಮುಖ್ಯ ಕೋಚ್‌ ಹುದ್ದೆಯ ರೇಸ್‌ನಲ್ಲಿದ್ದಾರೆ.

For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Monday, July 29, 2019, 17:17 [IST]
Other articles published on Jul 29, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X