ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ದಾಖಲೆ ನಿರ್ಮಿಸಲು ಸಜ್ಜಾಗಿದ್ದಾರೆ ಭಾರತದ ಲೆಗ್ ಸ್ಪಿನ್ನರ್ ಪ್ರವೀಣ್ ತಾಂಬೆ!

Pravin Tambe set to get No Objection Certificate from BCCI to play in CPL

ಮುಂಬೈ: ಮುಂಬೈ ತಂಡದ ಮಾಜಿ ಆಟಗಾರ, ಲೆಗ್‌ ಸ್ಪಿನ್ನರ್ ಪ್ರವೀಣ್ ತಾಂಬೆ ದಾಖಲೆ ನಿರ್ಮಿಸಲು ಸಜ್ಜಾಗುತ್ತಿದ್ದಾರೆ. ಕೆರಿಬಿಯನ್ ಪ್ರೀಮಿಯರ್ ಲೀಗ್‌ (ಸಿಪಿಎಲ್‌) ಆಟಗಾರರ ಪಟ್ಟಿಯಲ್ಲಿ 48ರ ಹರೆಯದ ತಾಂಬೆ ಹೆಸರೂ ಇತ್ತು. ಸೋಮವಾರ ಸಿಪಿಎಲ್ ಫ್ರಾಂಚೈಸಿಗಳಲ್ಲಿ ಒಂದಾದ ಟ್ರಿನ್‌ಬಾಗೊ ನೈಟ್ ರೈಡರ್ಸ್‌, ತಾಂಬೆ ಅವರನ್ನು ತನ್ನ ತಂಡಕ್ಕೆ ಆರಿಸಿಕೊಂಡಿದೆ. ಇದರರ್ಥ ತಾಂಬೆ ಸಿಪಿಎಲ್‌ನಲ್ಲಿ ಆಡೋದು ಖಚಿತವಾಗಿದೆ.

ಐಪಿಎಲ್ 2020 ನಡೆಸಲು ನ್ಯೂಜಿಲೆಂಡ್, ಶ್ರೀಲಂಕಾ, ಯುಎಇ ಮಧ್ಯೆ ಪೈಪೋಟಿ!ಐಪಿಎಲ್ 2020 ನಡೆಸಲು ನ್ಯೂಜಿಲೆಂಡ್, ಶ್ರೀಲಂಕಾ, ಯುಎಇ ಮಧ್ಯೆ ಪೈಪೋಟಿ!

ಪ್ರಥಮದರ್ಜೆ ಕ್ರಿಕೆಟ್‌ನಿಂದ ಪ್ರವೀಣ್ ತಾಂಬೆ ನಿವೃತ್ತಿ ಹೊಂದಿರುವುದರಿಂದ ಸಿಪಿಎಲ್‌ನಲ್ಲಿ ಪಾಲ್ಗೊಳ್ಳಲು ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ)ನಿಂದ ಯಾವುದೇ ಸಮಸ್ಯೆಯಿಲ್ಲ. ಆದರೆ ತಾಂಬೆ ಪಿಸಿಎಲ್‌ನಲ್ಲಿ ಆಡುವುದಾದರೆ ಬಿಸಿಸಿಐನಿಂದ ನೋ ಅಬ್ಜೆಕ್ಷನ್ ಸರ್ಟಿಫಿಕೇಟ್ ಪಡೆಯಬೇಕಾಗುತ್ತದೆ.

ಜುಲೈ 8ರಿಂದ Eng vs WI ಟೆಸ್ಟ್: ತಂಡಗಳು, ನೇರಪ್ರಸಾರ ಸಂಪೂರ್ಣ ಮಾಹಿತಿಜುಲೈ 8ರಿಂದ Eng vs WI ಟೆಸ್ಟ್: ತಂಡಗಳು, ನೇರಪ್ರಸಾರ ಸಂಪೂರ್ಣ ಮಾಹಿತಿ

ಬಿಸಿಸಿಐನಿಂದ ನೋ ಅಬ್ಜೆಕ್ಷನ್ ಸರ್ಟಿಫಿಕೇಟ್ (ಎನ್‌ಒಸಿ) ಪಡೆಯಲು ಪ್ರವೀಣ್ ಈಗಾಗಲೇ ತಯಾರಿ ನಡೆಸುತ್ತಿದ್ದಾರೆ. ತಾಂಬೆಗೆ ಶೀಘ್ರವೇ ಎನ್‌ಒಸಿ ಸಿಗಲಿದೆ.

ದಾಖಲೆ ನಿರ್ಮಿಸಿದ ಪ್ರವೀಣ್

ದಾಖಲೆ ನಿರ್ಮಿಸಿದ ಪ್ರವೀಣ್

ಅಸಲಿಗೆ ಪ್ರವೀಣ್ ಎರಡೆರಡು ದಾಖಲೆ ನಿರ್ಮಿಸಿದಂತಾಗುತ್ತದೆ. ಒಂದು, 48ರ ಹರೆಯದವರಾಗಿದ್ದು ವಿದೇಶಿ ಲೀಗ್‌ನಲ್ಲಿ ಪಾಲ್ಗೊಳ್ಳುತ್ತಿರುವ ಭಾರತದ ಮೊದಲ ಆಟಗಾರನಾಗಿ. ಎರಡು, ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಪಾಲ್ಗೊಳ್ಳುತ್ತಿರುವ ಭಾರತದ ಮೊದಲ ಆಟಗಾರನಾಗಿ ತಾಂಬೆ ದಾಖಲೆ ಬರೆಯುತ್ತಿದ್ದಾರೆ.

ಸಿಪಿಎಲ್‌ನಲ್ಲಿ ಪ್ರಮುಖ ಆಟಗಾರರು

ಸಿಪಿಎಲ್‌ನಲ್ಲಿ ಪ್ರಮುಖ ಆಟಗಾರರು

'ಸಿಪಿಎಲ್‌ಗೆ ಆರು ಫ್ರಾಂಚೈಸಿಗಳು ತಂಡಗಳನ್ನು ಆರಿಸಿವೆ. ರಶೀದ್ ಖಾನ್ (ಅಫ್ಘಾನಿಸ್ತಾನ), ಮಾರ್ಕಸ್ ಸ್ಟೋಯ್ನಿಸ್ (ಆಸ್ಟ್ರೇಲಿಯಾ), ರಾಸ್ ಟೇಲರ್ (ನ್ಯೂಜಿಲೆಂಡ್), ಪ್ರವೀಣ್ ತಾಂಬೆ (ಭಾರತ) ಮತ್ತು ಕಾರ್ಲೋಸ್ ಬ್ರಾತ್‌ವೇಟ್ (ವೆಸ್ಟ್ ಇಂಡೀಸ್) ಸೇರಿದಂತೆ ಕೆರಿಬಿಯನ್‌ನ ಮತ್ತು ವಿದೇಶಿ ಆಟಗಾರರೆಲ್ಲ ಒಪ್ಪಿಗೆ ಸೂಚಿಸಿದ್ದಾರೆ,' ಎಂದು ಸಿಪಿಎಲ್ ಸೋಮವಾರ ತಿಳಿಸಿತ್ತು.

ಟಿಕೆಆರ್, ಕೆಕೆಆರ್ ನಡುವಿನ ನಂಟು

ಟಿಕೆಆರ್, ಕೆಕೆಆರ್ ನಡುವಿನ ನಂಟು

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡುತ್ತಿದ್ದ ಪ್ರವೀಣ್ ತಾಂಬೆ ಈಗ ಸಿಪಿಎಲ್‌ನಲ್ಲಿ ಸೇರಿಕೊಂಡಿರುವ ತಂಡ ಬಾಲಿವುಡ್ ನಟ ಶಾರೂಖ್ ಖಾನ್ ಸಹಮಾಲೀಕತ್ವದ್ದು. ಶಾರೂಖ್ ಸಹಮಾಲೀಕತ್ವದ ನೈಟ್ ರೈಡರ್ಸ್ ಫ್ರಾಂಚೈಸಿ, 2008ರ ಐಪಿಎಲ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಹೆಸರಿನಲ್ಲಿ ಪ್ರಯಾಣ ಆರಂಭಿಸಿತ್ತು. ಇದೇ ನೈಟ್ ರೈಡರ್ಸ್ ಫ್ರಾಂಚೈಸಿ, ಕೆರಿಬಿಯನ್ ರಾಷ್ಟ್ರದಲ್ಲಿ ಟ್ರಿನ್‌ಬಾಗೊ ನೈಟ್ ರೈಡರ್ಸ್ ಹೆಸರಿನಲ್ಲಿ ತಂಡ ನಿರ್ಮಿಸಿದೆ.

ಕೆಕೆಆರ್‌ಗೆ ಮಾರಾಟವಾಗಿದ್ದ ತಾಂಬೆ

ಕೆಕೆಆರ್‌ಗೆ ಮಾರಾಟವಾಗಿದ್ದ ತಾಂಬೆ

2013-14ರಲ್ಲಿ ಮುಂಬೈ ಪ್ರಥಮದರ್ಜೆ ತಂಡದ ಪರ ಆಡುತ್ತಿದ್ದ ಪ್ರತಿಭಾನ್ವಿತ ಆಟಗಾರ ಪ್ರವೀಣ್ ತಾಂಬೆ ಕಳೆದ ಡಿಸೆಂಬರ್‌ನಲ್ಲಿ ನಡೆದಿದ್ದ 2020ರ ಐಪಿಎಲ್‌ ಆಟಗಾರರ ಹರಾಜಿನಲ್ಲಿ ಕೆಕೆಆರ್‌ಗೆ ಮಾರಾಟವಾಗಿದ್ದರು. ಆದರೆ ಅನುಮತಿಯಿಲ್ಲದೆ ಟಿ10 ಲೀಗ್‌ನಲ್ಲಿ ಪಾಲ್ಗೊಂಡಿದ್ದಕ್ಕಾಗಿ ಬಿಸಿಸಿಐಯು ತಾಂಬೆ ಅವರನ್ನು ಅನರ್ಹಗೊಳಿಸಿತ್ತು. ಅಂದ್ಹಾಗೆ 6 ತಂಡಗಳ ನಡುವಿನ ಈ ಸಿಪಿಎಲ್ ಆಗಸ್ಟ್ 18ರಿಂದ ಸೆಪ್ಟೆಂಬರ್ 10ರ ವರೆಗೆ ನಡೆಯಲಿದೆ.

5 ಲಕ್ಷಕ್ಕೆ ಟಿಕೆಆರ್ ಪಾಲು

5 ಲಕ್ಷಕ್ಕೆ ಟಿಕೆಆರ್ ಪಾಲು

ಮುಂಬೈ ಮತ್ತು ರಾಜಸ್ಥಾನ ರಾಯಲ್ಸ್ ಪರ ಆಡುತ್ತಿದ್ದ ತಾಂಬೆ ಅವರನ್ನು ಟ್ರಿನ್‌ಬಾಗೊ ನೈಟ್ ರೈಡರ್ಸ್ ಫ್ರಾಂಚೈಸಿ USD 7,500 (5,61,225 ರೂ.)ಗೆ ಖರೀದಿಸಿದೆ. ಇನ್ನು ಜಿಂಬಾಬ್ವೆ ಆಲ್ ರೌಂಡರ್ ಸಿಕಂದರ್ ರಾಝ (USD 7,500), ಟ್ರಿನಿಡಾಡ್ ಕ್ರಿಕೆಟರ್ ಆಂಡರ್ಸನ್ ಫಿಲಿಪ್ (USD 7,500), ಆಸ್ಟ್ರೇಲಿಯನ್ ಲೆಗ್ ಸ್ಪಿನ್ನರ್ ಫವಾದ್ ಅಹ್ಮದ್ ಕೂಡ ಟಿಕೆಆರ್‌ ಪಾಲಾಗಿದ್ದರೆ.

Story first published: Wednesday, July 8, 2020, 9:57 [IST]
Other articles published on Jul 8, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X