ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಗೆಲ್ಲಲೇ ಬೇಕಾದ ಒತ್ತಡದಲ್ಲಿ ಟೀಮ್ ಇಂಡಿಯಾ! ಹೇಗಿರಲಿದೆ ಆಡುವ ಬಳಗ

ವೆಸ್ಟ್‌ ಇಂಡೀಸ್ ವಿರುದ್ಧ ಟೀ್ಮ್ ಇಂಡಿಯಾ ಟಿಟ್ವೆಂಟಿ ಸರಣಿಯನ್ನು ಎರಡೂ ತಂಡಗಳು ತಲಾ ಒಂದು ಪಂದ್ಯಗಳನ್ನು ಗೆದ್ದು ಸರಣಿಯನ್ನು ಸಮ ಮಾಡಿಕೊಂಡಿದೆ. ಈ ಹಿನ್ನೆಲೆಯಲ್ಲಿ ನಾಳೆ ನಡೆಯುವ ಪಂದ್ಯ ಎರಡೂ ತಂಡಗಳಿಗೂ ಅನಿವಾರ್ಯವಾಗಿದೆ.

ಮೊದಲ ಪಂದ್ಯವನ್ನು ಭರ್ಜರಿಯಾಗಿ ಗೆದ್ದ ಟೀಮ್ ಇಂಡಿಯಾ ಎರಡನೇ ಪಂದ್ಯವನ್ನು ಅಷ್ಟೇ ಹೀನಾಯವಾಗಿ ಸೋತಿತು. ಅಂತಿಮ ಐದು ಓವರ್‌ಗಳಲ್ಲಿ ಉತ್ತಮ ರನ್ ಪೇರಿಸಲು ವಿಫಲವಾದರೆ, ಬೌಲಿಂಗ್ ಸಂದರ್ಭದಲ್ಲಿ ಕಳಪೆ ಫೀಲ್ಡಿಂಗ್ ತಂಡದ ಸೋಲಿಗೆ ಪ್ರಮುಖ ಕಾರಣವಾಯಿತು. ಸರಣಿಯನ್ನು ಗೆಲ್ಲಬೇಕಾದರೆ ಈ ವಿಚಾರವಾಗಿ ಟೀಮ್ ಇಂಡಿಯಾ ಗಂಭೀರವಾಗಿ ಗಮನ ನೀಡಲೇ ಬೇಕಾಗಿದೆ.

ಕ್ರಿಕೆಟ್‌ನಿಂದ ದೂರವಿರುವ ಧೋನಿ ಸೈನಿಕರಿಗಾಗಿ ಮಾಡುತ್ತಿರೋದೇನು!ಕ್ರಿಕೆಟ್‌ನಿಂದ ದೂರವಿರುವ ಧೋನಿ ಸೈನಿಕರಿಗಾಗಿ ಮಾಡುತ್ತಿರೋದೇನು!

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಟಿ20ಯ ಅಂತಿಮ ಹಣಾಹಣಿ ನಡೆಯಲಿದೆ. ವಿಂಡಿಸ್ ನಾಯಕ ಕಿರಾನ್ ಪೊಲಾರ್ಡ್ ಐಪಿಎಲ್‌ನಲ್ಲಿ ಮುಂಬೈ ಪರವಾಗಿ ಕಣಕ್ಕಿಳಿಯುವ ಕಾರಣ ಮುಂಬೈ ಪಿಚ್ ಪೊಲಾರ್ಡ್‌ಗೆ ಸಾಕಷ್ಟು ಚಿರಪರಿಚಿತ. ಹೀಗಾಗಿ ಇಡೀ ವಿಂಡೀಸ್ ತಂಡವನ್ನು ಕಟ್ಟಿಹಾಕುವ ಆಟಗಾರರನ್ನು ಕಣಕ್ಕಿಳಿಸಿ ಸರಣಿ ಗೆಲ್ಲಬೇಕಾಗಿದೆ. ಹಾಗಾದರೆ ನಾಳಿನ ಪಂದ್ಯದಲ್ಲಿ ಟೀಮ್ ಇಂಡಿಯಾ ತಂಡ ಹೇಗಿರಬಹುದು ಎಂಬುದನ್ನು ಬನ್ನಿ ನೋಡೋಣ.

ಭಾರತ vs ವಿಂಡೀಸ್ ಸರಣಿ; ಏಕದಿನ ಸರಣಿಯಿಂದಲೂ ಧವನ್ ಔಟ್?ಭಾರತ vs ವಿಂಡೀಸ್ ಸರಣಿ; ಏಕದಿನ ಸರಣಿಯಿಂದಲೂ ಧವನ್ ಔಟ್?

ಬದಲಾವಣೆಯಾಗುತ್ತಾ ಆರಂಭಿಕ ಜೋಡಿ?

ಬದಲಾವಣೆಯಾಗುತ್ತಾ ಆರಂಭಿಕ ಜೋಡಿ?

ರೋಹಿತ್-ರಾಹುಲ್

ವಿಂಡೀಸ್ ವಿರುದ್ಧದ ಎರಡು ಪಂದ್ಯದಲ್ಲಿ ಟೀಮ್ ಇಂಡಿಯಾ ಆರಂಭಿಕ ಜೋಡಿಯಾದ ರಾಹುಲ್ ಮತ್ತು ರೋಹಿತ್ ಶರ್ಮಾರಿಂದ ಉತ್ತಮ ಪಾರ್ಟ್ನರ್‌ಶಿಪ್ ಬಂದಿಲ್ಲ. ಮೊದಲ ಪಂದ್ಯದಲ್ಲಿ ರಾಹುಲ್ ಮಿಂಚಿದರೂ ಎರಡನೇ ಪಂದ್ಯದಲ್ಲಿ ಬೇಗನೆ ವಿಕೆಟ್ ಒಪ್ಪಿಸಿದರು. ಆದರೆ ರೋಹಿತ್ ಶರ್ಮಾ ಎರಡೂ ಪಂದ್ಯಗಳಲ್ಲಿ ನಿರೀಕ್ಷಿತ ಪ್ರದರ್ಶನ ನೀಡಿಲ್ಲ. ನಾಳಿನ ಪಂದ್ಯದಲ್ಲಿ ಈ ಆರಂಭಿಕ ಜೋಡಿಯಿಂದ ಉತ್ತಮ ಅರಂಭ ದೊರೆಯಲೇ ಬೇಕಿದೆ.

ಮಧ್ಯಮಕ್ರಮಾಂಕ

ಮಧ್ಯಮಕ್ರಮಾಂಕ

ದುಬೆ, ಕೊಹ್ಲಿ, ಅಯ್ಯರ್

ವನ್‌ಡೌನ್‌ ಆಗಿ ಬಂದು ಮಿಂಚಿದ ಶಿವಂ ದುಬೆ ನಾಳಿನ ಪಂದ್ಯದಲ್ಲೂ ಇದೇ ಕ್ರಮಾಂಕದಲ್ಲಿ ಕಣಕ್ಕಿಳಿಯುವ ಸಾಧ್ಯತೆಯಿದೆ. ವಿರಾಟ್ ಕೊಹ್ಲಿ ತಮ್ಮ ಕ್ರಮಾಂಕದಲ್ಲಿ ಹಿಂಬಡ್ತಿಯನ್ನು ಪಡೆದುಕೊಂಡಿದ್ದರು. ಶ್ರೇಯಸ್ ಅಯ್ಯರ್ ಐದನೇ ಕ್ರಮಾಂಕದಲ್ಲಿ ಕಣಕ್ಕಿಳಿಯಲಿದ್ದಾರೆ. ಆದರೆ ವಿರಾಟ್ ಕೊಹ್ಲಿ ಹಾಗೂ ದುಬೆ ಕ್ರಮಾಂಕ ಪರಿಸ್ಥಿತಿಗೆ ಅನುಗುಣವಾಗಿ ಬದಲಾವಣೆಯಾದರೂ ಅಚ್ಚರಿಯಿಲ್ಲ.

ವಿಕೆಟ್ ಕೀಪಿಂಗ್:

ವಿಕೆಟ್ ಕೀಪಿಂಗ್:

ರಿಷಬ್ ಪಂತ್

ಪದೇ ಪದೆ ವಿಫಲವಾಗಿದ್ದರೂ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದ ರಿಷಬ್ ಪಂತ್ ಕಳೆದ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿ ಮಿಂಚಿದ್ದರು. ಹೀಗಾಗಿ ಈ ಸ್ಥಾನದಲ್ಲಿ ಬದಲಾವಣೆ ನಿರೀಕ್ಷಿಸುವುದು ಕಷ್ಟ.

ಬೌಲಿಂಗ್ ವಿಭಾಗ;

ಬೌಲಿಂಗ್ ವಿಭಾಗ;

ಜಡೇಜಾ, ಕುಲ್ದೀಪ್, ಶಮಿ, ಚಹರ್, ಚಾಹಲ್

ಬೌಲಿಂಗ್ ವಿಭಾಗದಲ್ಲಿ ಕಳೆದ ಪಂದ್ಯಕ್ಕೆ ಹೋಲಿಸಿದರೆ ಬದಲಾವಣೆ ನಿರೀಕ್ಷೆಯಿದೆ. ಕಳೆದೆರಡು ಪಂದ್ಯಗಳಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದ ವಾಶಿಂಗ್ಟನ್ ಸುಂದರ್ ಫೀಲ್ಡಿಂಗ್ ನಲ್ಲಿ ಅತ್ಯಂತ ಕಳಪೆಯಾಗಿದ್ದರು. ಇದು ಇಡೀ ಫಲಿತಾಂಶವನ್ನೇ ಬುಡಮೇಲು ಮಾಡಿತ್ತು. ಹೀಗಾಗಿ ಕುಲ್ದೀಪ್ ಯಾದವ್‌ಗೆ ಅವಕಾಶ ಸಿಗುವ ನಿರೀಕ್ಷೆಯಿದೆ. ಭವನೇಶ್ವರ್ ಕುಮಾರ್ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದರಾದರೂ ವಿಕೆಟ್‌ ಪಡೆಯುವಲ್ಲಿ ವಿಫಲರಾಗಿರುವ ಕಾರಣ ಮತ್ತೋರ್ವ ವೇಗಿ ಮೊಹಮ್ ಶಮಿ ಆಯ್ಕೆಯಾಗಬಹುದು. ಇನ್ನು ಜಡೇಜಾ ಹಾಗೂ ಚಾಹಲ್ ಸ್ಥಾನ ಭದ್ರವಾಗಿರಲಿದೆ.

Story first published: Tuesday, December 10, 2019, 18:33 [IST]
Other articles published on Dec 10, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X