ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕಳೆದ ಐಪಿಎಲ್ ನಲ್ಲಿ ಖ್ಯಾತ ಸಂಖ್ಯಾ ಶಾಸ್ತ್ರಜ್ಞ ನುಡಿದಿದ್ದ ಭವಿಷ್ಯವೇನು, ಆಗಿದ್ದೇನು?

ಲಾಕ್ ಡೌನ್, ಕೊರೊನಾ ಹಾವಳಿಯಿದ್ದರೂ ಐಪಿಎಲ್ ವೀಕ್ಷಿಸುವವರ ಸಂಖ್ಯೆ ಕಮ್ಮಿಯಾಗಿಲ್ಲ ಎನ್ನುತ್ತದೆ ಟಿವಿ ಮತ್ತು ಇತರ ಫಾರ್ಮ್ಯಾಟ್ ಮೂಲಕ ನೋಡುವವರ ಸಂಖ್ಯೆ. ಕೆಲವೊಂದು ಪಂದ್ಯಗಳು ಸೂಪರ್ ಓವರ್ ಗೆ ಜಾರಿದ ನಂತರ ವೀಕ್ಷಕರ ಸಂಖ್ಯೆ ಹೆಚ್ಚಾಗುತ್ತಿದೆ.

ಕ್ರಿಕೆಟ್ ಇತರ ಕ್ರೀಡೆಗಳಿಗಿಂತ ಭಾರತದಲ್ಲಿ ಹೆಚ್ಚು ಜನಪ್ರಿಯವಾಗಿರುವುದರಿಂದ, ಇದರ ಸುತ್ತಮುತ್ತ ಚರ್ಚೆ, ವಿವಾದ, ಮೇಮ್ಸ್ ಗಳು ಸ್ವಾಭಾವಿಕವಾಗಿ ಹೆಚ್ಚಾಗಿಯೇ ಇರುತ್ತದೆ. ಒಂದು ಪಂದ್ಯದಲ್ಲಿ ಹೀರೋ ಆದ ಆಟಗಾರ, ಇನ್ನೊಂದು ಪಂದ್ಯದಲ್ಲಿ ಝೀರೋ ಆದರೆ, ಸಾಮಾಜಿಕ ತಾಣದಲ್ಲಿ ಅಷ್ಟೇ ವೇಗದಲ್ಲಿ ಆ ಆಟಗಾರನನ್ನು ಪಾತಾಳಕ್ಕೆ ತಳ್ಳಲಾಗುತ್ತದೆ.

ಕೊಹ್ಲಿ ಹೆಸರಿನಲ್ಲಿದ್ದ ಅತಿ ಕೆಟ್ಟ ದಾಖಲೆಯನ್ನು ತನ್ನ ಹೆಸರಿಗೆ ಬರೆದುಕೊಂಡ ರಾಬಿನ್ ಉತ್ತಪ್ಪಕೊಹ್ಲಿ ಹೆಸರಿನಲ್ಲಿದ್ದ ಅತಿ ಕೆಟ್ಟ ದಾಖಲೆಯನ್ನು ತನ್ನ ಹೆಸರಿಗೆ ಬರೆದುಕೊಂಡ ರಾಬಿನ್ ಉತ್ತಪ್ಪ

ಸಾಮಾನ್ಯವಾಗಿ, ರಾಜಕೀಯ ಅಥವಾ ನೈಸರ್ಗಿಕ ವಿಕೋಪದ ಬಗ್ಗೆ ಭವಿಷ್ಯ ನುಡಿಯುವ ಸಂಖ್ಯಾ ಶಾಸ್ತ್ರಜ್ಞರು , ಜ್ಯೋತಿಷಿಗಳು, ಐಪಿಎಲ್ ಗೆ ಇರುವ ಡಿಮಾಂಡ್ ನೋಡಿ, ಈ ವಿಚಾರದಲ್ಲೂ ಭವಿಷ್ಯ ನುಡಿಯುವ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ.

ಈ ಬಾರಿಯ ಐಪಿಎಲ್ ಯಾರಿಗೆ ಒಲಿಯಲಿದೆ ಎನ್ನುವುದರ ಬಗ್ಗೆ ಈಗಾಗಲೇ ಹಲವು ಸಂಖ್ಯಾ ಶಾಸ್ತ್ರಜ್ಞರು ಭವಿಷ್ಯ ನುಡಿದಿದ್ದಾಗಿದೆ. ಕಳೆದ ಅಂದರೆ 2019ರಲ್ಲಿ ಯಾವ ತಂಡ ಜಯಶಾಲಿಯಾಗಲಿದೆ ಎಂದು ಪಂದ್ಯ ಆರಂಭವಾಗುವ ಮುನ್ನವೇ ಒಬ್ಬರು ಭವಿಷ್ಯ ನುಡಿದಿದ್ದರು. ಅದು ಹೀಗಿದೆ:

ರಾಜಸ್ಥಾನ್ ವಿರುದ್ಧ ಕೆಕೆಆರ್ ಪ್ರದರ್ಶನಕ್ಕೆ ಶಾರೂಖ್ ಖಾನ್ ಫುಲ್ ಖುಷ್ರಾಜಸ್ಥಾನ್ ವಿರುದ್ಧ ಕೆಕೆಆರ್ ಪ್ರದರ್ಶನಕ್ಕೆ ಶಾರೂಖ್ ಖಾನ್ ಫುಲ್ ಖುಷ್

ಹೈದರಾಬಾದಿನ ರಾಜೀವ್ ಗಾಂಧಿ ಮೈದಾನ

ಹೈದರಾಬಾದಿನ ರಾಜೀವ್ ಗಾಂಧಿ ಮೈದಾನ

ಕೊರೊನಾ ಹಾವಳಿ ಇಲ್ಲದೇ ಇದ್ದಿದ್ದರಿಂದ ಕಳೆದ ಐಪಿಎಲ್ ಪಂದ್ಯ ಭಾರತದ ವಿವಿಧ ನಗರಗಳಲ್ಲಿ ನಡೆದಿತ್ತು. ನಿರೀಕ್ಷೆಗೂ ಮೀರಿ ಯಶಸ್ಸನ್ನು ಪಡೆದ ಈ ಕ್ರೀಡಾಕೂಟ ಈ ಬಾರಿ ಗಲ್ಫ್ ನಲ್ಲಿ ಆಡುತ್ತಿರುವುದು ಗೊತ್ತಿರುವ ವಿಚಾರ. ಮಾರ್ಚ್ ಒಂದರಿಂದ ಆರಂಭವಾಗಿದ್ದ ಟೂರ್ನಿ, ಮೇ 12ರಂದು ಹೈದರಾಬಾದಿನ ರಾಜೀವ್ ಗಾಂಧಿ ಮೈದಾನದಲ್ಲಿ ಮುಕ್ತಾಯಗೊಂಡಿತ್ತು.

ಕಳೆದ ಬಾರಿ ಐಪಿಎಲ್ ನಲ್ಲಿ

ಕಳೆದ ಬಾರಿ ಐಪಿಎಲ್ ನಲ್ಲಿ

ಆಸ್ಟ್ರಾ ರಾಜ್ ಎನ್ನುವ ಸಂಖ್ಯಾ ಶಾಸ್ತ್ರಜ್ಞ ಕಳೆದ ಬಾರಿ ಐಪಿಎಲ್ ನಲ್ಲಿ ಯಾರು ಗೆಲ್ಲಲಿದ್ದಾರೆ ಎನ್ನುವ ವಿಚಾರದಲ್ಲಿ ನುಡಿದಿದ್ದ ಭವಿಷ್ಯ, ಸಾಮಾಜಿಕ ತಾಣದಲ್ಲಿ ವೈರಲ್ ಆಗಿತ್ತು. ಯಾವ ತಂಡ ಗೆಲ್ಲಲಿದೆ ಎನ್ನುವುದಕ್ಕಿಂತ, ಪ್ರಶಸ್ತಿ ಸುತ್ತಿಗೆ ಯಾವ ತಂಡ ಬರಲಿದೆ ಎಂದು ಅವರು ಹೇಳಿದ್ದರು.

ಬೆಂಗಳೂರು, ರಾಜಸ್ಥಾನ ಮತ್ತು ಪಂಜಾಬ್ ತಂಡ

ಬೆಂಗಳೂರು, ರಾಜಸ್ಥಾನ ಮತ್ತು ಪಂಜಾಬ್ ತಂಡ

ಲೀಗ್ ಪಂದ್ಯದಲ್ಲಿ ಏನಾಗಲಿದೆ ಎನ್ನುವುದನ್ನು ಶೇ.90ರಷ್ಟು ಕರಾರುವಕ್ಕಾಗಿ ನುಡಿದಿದ್ದ ಇವರು, ಐಪಿಎಲ್ ಗಾಗಿ ಹೊಸ ಸಾಫ್ಟವೇರ್ ಅನ್ನು ಸಿದ್ದಪಡಿಸಿದ್ದರು. ಇವರು ನುಡಿದಿದ್ದ ಪ್ರಕಾರ, ಬೆಂಗಳೂರು, ರಾಜಸ್ಥಾನ ಮತ್ತು ಪಂಜಾಬ್ ತಂಡಕ್ಕೆ ಯಾವುದೇ ಚಾನ್ಸ್ ಇಲ್ಲ ಎಂದಿದ್ದರು.

ಮುಂಬೈ ತಂಡ ಚೆನ್ನೈ ತಂಡದ ವಿರುದ್ದ ಒಂದು ರನ್ ನಿಂದ ಗೆಲುವು ಸಾಧಿಸಿತ್ತು

ಮುಂಬೈ ತಂಡ ಚೆನ್ನೈ ತಂಡದ ವಿರುದ್ದ ಒಂದು ರನ್ ನಿಂದ ಗೆಲುವು ಸಾಧಿಸಿತ್ತು

ಆಸ್ಟ್ರೋ ರಾಜ್ ಹೇಳಿದ್ದ ಪ್ರಕಾರ, ಮುಂಬೈ ಇಂಡಿಯನ್ಸ್, ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳ ಪೈಕಿ, ಎರಡು ತಂಡಗಳು ಪ್ರಶಸ್ತಿ ಸುತ್ತಿಗೆ ಸೆಣಸಲಿದೆ ಎಂದು ಹೇಳಿದ್ದರು. ಹೈದರಾಬಾದ್ ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಮುಂಬೈ ತಂಡ ಚೆನ್ನೈ ತಂಡದ ವಿರುದ್ದ ಒಂದು ರನ್ ನಿಂದ ಗೆಲುವು ಸಾಧಿಸಿತ್ತು.

Story first published: Thursday, October 1, 2020, 16:45 [IST]
Other articles published on Oct 1, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X