ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪಾಪ! ಟೀಂ ಓನರ್ ಪ್ರೀತಿ ಜಿಂಟಾಗೆ ಎಷ್ಟು ಟೆನ್ಶನ್ ಕೊಡ್ತಿರೋ!

Preity Zinta speechless after KXIP’s double Super Over win over MI

ಐಪಿಎಲ್ 2020 ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಒಂದೇ ಪಂದ್ಯದಲ್ಲಿ ಎರಡೆರಡು ಸೂಪರ್ ಓವರ್ ಕಂಡ ಫ್ಯಾನ್ಸ್ ಸಕತ್ ಥ್ರಿಲ್ ಆಗಿದ್ದಂತೂ ನಿಜ. ಆದರೆ, ಪಂಜಾಬ್ ತಂಡದ ಸಹ ಒಡತಿ ಪ್ರೀತಿ ಜಿಂಟಾಗಂತೂ ಜೀವ ಹೋಗಿ ಬಂದಂಥ ಪರಿಸ್ಥಿತಿ ಎಂದರೆ ತಪ್ಪಾಗಲಾರದು. ಪಂದ್ಯದ ನಡುವೆ ಪ್ರೀತಿ ಜಿಂಟಾ ಅವರು ತಮಗಾದ ಅನುಭವವನ್ನು ಟ್ವೀಟ್ ಮಾಡಿ ತಿಳಿಸಿದ್ದಾರೆ.

 ರೋಮಾಂಚಕ ಪಂದ್ಯದಲ್ಲಿ ಕಂಡ ಸೂಪರ್ ಓವರ್ ಗರ್ಲ್ ಯಾರು? ರೋಮಾಂಚಕ ಪಂದ್ಯದಲ್ಲಿ ಕಂಡ ಸೂಪರ್ ಓವರ್ ಗರ್ಲ್ ಯಾರು?

ಈ ಪಂದ್ಯಕ್ಕೂ ಮುನ್ನ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದ ಪಂಜಾಬ್ ವಿರುದ್ಧ ಮುಂಬೈ ಇಂಡಿಯನ್ಸ್ ಸುಲಭ ಜಯ ದಾಖಲಿಸಬಹುದು ಎಂದೇ ಎಲ್ಲರೂ ಎಣಿಕೆ ಮಾಡಿದ್ದರು. ಆದರೆ, ಪಂದ್ಯ ಅತ್ಯಂತ ರೋಚಕವಾಗಿ ಎಲ್ಲರ ಮೆಚ್ಚುಗೆ ಗಳಿಸಿತು.

ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ರೋಮಾಂಚಕ ಪಂದ್ಯದಲ್ಲಿ ಪಂಜಾಬ್ ಸಹ ಒಡತಿ ನಟಿ ಪ್ರೀತಿ ಜಿಂಟಾ ಅವರು ತಮ್ಮ ಜೊತೆಗಿದ್ದ ಕೆಲ ಯುವತಿಯರಂತೆ ತಾವೂ ಕೂಡಾ
ಎರಡು ಸೂಪರ್ ಓವರ್ ಗಳನ್ನು ಕುರ್ಚಿಯ ತುದಿಯಲ್ಲಿ ಕುಳಿತು ಉಗುರು ಕಚ್ಚುತ್ತಾ, ದೇವರಲ್ಲಿ ಪ್ರಾರ್ಥಿಸುತ್ತಾ ಮುಂದೇನಾಗುವುದೋ ಎಂದು ಗೊಂದಲ, ಗಾಬರಿ, ಭಯದಿಂದಲೇ ಪಂದ್ಯವನ್ನು ನೋಡಿದ್ದಾರೆ.

ಕೆಎಲ್ ರಾಹುಲ್ ರನೌಟ್ ಮಾಡಿ ಮೊದಲ ಸೂಪರ್ ಓವರ್ ಟೈ ಮಾಡಿದ ಸಂದರ್ಭ, ಮಯಾಂಕ್ ಅಗರವಾಲ್ ಬೌಂಡರಿ ರನ್ ಸೇವ್ ಮಾಡಿದ್ದು, ಗೇಲ್ ರನ್ ಚೇಸ್ ಮಾಡುವಾಗ ಸಿಕ್ಸ್ ಬಾರಿಸಿದ್ದು ಎಲ್ಲವೂ ಉಸಿರುಗಟ್ಟುವಂತೆ ಮಾಡಿತ್ತು ಎಂದು ಪ್ರೀತಿ ಹೇಳಿಕೊಂಡಿದ್ದಾರೆ. ಈಗಲೂ ಈ ಸನ್ನಿವೇಶ ನೆನಪಿಸಿಕೊಂಡರೆ ಮೈ ನಡುಗುತ್ತೆ, ಮಾತಿಗಿಂತ ಕೃತಿ ಮೇಲು ಎಂಬುದು ಇಲ್ಲಿ ನಿಜವಾಗಿ ಎರಡು ಸೂಪರ್ ಓವರ್, ಎಂಥಾ ಗೆಲುವು, ಎಂಥಾ ಸಂಭ್ರಮ ಥ್ಯಾಂಕು ಎಂದಿದ್ದಾರೆ.

RCB ಡಗೌಟ್: ಅರೆ! ಯಾರಿವಳು ಯಾರಿವಳು ಚಂಗನೆದ್ದು ಕುಣಿವವಳುRCB ಡಗೌಟ್: ಅರೆ! ಯಾರಿವಳು ಯಾರಿವಳು ಚಂಗನೆದ್ದು ಕುಣಿವವಳು

ಇನ್ನು ಪಂದ್ಯದ ವಿಷಯದಕ್ಕೆ ಬಂದರೆ, ಟಾಸ್ ಗೆದ್ದ ಮುಂಬೈ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿ, ನಿಗದಿಪಡಿಸಿದ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 176 ರನ್ ಗಳಿಸಿತು. ನಂತರ ಕಿಂಗ್ಸ್ ಪಂಜಾಬ್ ನಿಗದಿತ ಓವರ್‌ಗಳಲ್ಲಿ 6 ವಿಕೆಟ್‌ಗೆ 176 ರನ್ ಗಳಿಸಿತು. ಕೆಎಲ್ ರಾಹುಲ್ (51 ಎಸೆತಗಳಲ್ಲಿ 7 ಬೌಂಡರಿ ಮತ್ತು 3 ಸಿಕ್ಸರ್‌ಗಳೊಂದಿಗೆ 77) ಅರ್ಧಶತಕ ಬಾರಿಸಿದರು. ನಂತರ ಮೊದಲ ಸೂಪರ್ ಓವರ್‌ನಲ್ಲಿ ಪಂಜಾಬ್, ಮುಂಬೈ ತಲಾ 5 ರನ್ ಗಳಿಸಿದವು. ಎರಡನೇ ಸೂಪರ್ ಓವರ್‌ನಲ್ಲಿ 11 ರನ್ ಗುರಿ ಬೆನ್ನಟ್ಟಿದ ಗೇಲ್ ಮತ್ತು ಮಾಯಾಂಕ್ ನಾಲ್ಕು ಎಸೆತಗಳಲ್ಲಿ ಗುರಿ ಪೂರ್ಣಗೊಳಿಸಿದರು.

Story first published: Tuesday, October 20, 2020, 10:32 [IST]
Other articles published on Oct 20, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X