ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಆಸ್ಟ್ರೇಲಿಯಾ: ಪಂದ್ಯದ ಆರಂಭಕ್ಕೂ ಮುನ್ನ ತಿಳಿದುಕೊಳ್ಳಲೇಬೇಕಾದ ಅಂಶಗಳು

ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯನ್ನು 2-0 ಅಂತರದಿಂದ ಟೀಮ್ ಇಂಡಿಯಾ ವಶಕ್ಕೆ ಪಡೆದಿದೆ. ಇದೀಗ ಮತ್ತೊಂದು ಅಗ್ನಿ ಪರೀಕ್ಷೆಗೆ ಟೀಮ್ ಇಂಡಿಯಾ ಸಿದ್ಧವಾಗಿದೆ. ಈ ಬಾರಿ ಟೀಮ್ ಇಂಡಿಯಾಗೆ ಆಸ್ಟ್ರೇಲಿಯಾ ತಂಡ ಎದುರಾಳಿಯಾಗಿದ್ದು ಈ ಸರಣಿ ಭಾರತಕ್ಕೆ ಸ್ವಲ್ಪ ಕಠಿಣವಾಗಿರಲಿದೆ.

ಟೀಮ್ ಇಂಡಿಯಾ ವಿರುದ್ಧ ಆಸ್ಟ್ರೇಲಿಯಾ ಭಾರತದ ನೆಲದಲ್ಲಿ ಇತ್ತೀಚೆಗೆ ಆಡಿದ ಮೂರು ಏಕದಿನ ಪಂದ್ಯಗಳನ್ನು ಗೆದ್ದುಕೊಂಡಿದೆ. ತನ್ನ ತವರು ನೆಲದಲ್ಲಿ ಟೀಮ್ ಇಂಡಿಯಾ ಅತ್ಯಂತ ಬಲಿಷ್ಠ ತಂಡ ಎಂಬ ದಾಖಲೆ ಹೊಂದಿರುವ ಟೀಮ್ ಇಂಡಿಯಾಗೆ ಈ ಅಂಕಿಅಂಶ ಸ್ವಲ್ಪ ಆಘಾತ ನೀಡುವಂತಿದೆ.

ಔಟಾ, ನಾಟೌಟಾ?: ಕ್ರಿಕೆಟ್ ನಿಯಮವನ್ನೇ ಪ್ರಶ್ನಿಸೊ ವಿವಾದಾತ್ಮಕ ವೀಡಿಯೋ!ಔಟಾ, ನಾಟೌಟಾ?: ಕ್ರಿಕೆಟ್ ನಿಯಮವನ್ನೇ ಪ್ರಶ್ನಿಸೊ ವಿವಾದಾತ್ಮಕ ವೀಡಿಯೋ!

ಆಸ್ಟ್ರೇಲಿಯಾ ತಂಡ ವಿಶ್ವಕಪ್ ಬಳಿಕ ಯಾವುದೇ ಏಕದಿನ ಸರಣಿಯಲ್ಲಿ ಪಾಲ್ಗೊಂಡಿಲ್ಲ. ಅದಕ್ಕೂ ಮುನ್ನ ಆಸ್ಟ್ರೇಲಿಯಾ ತಂಡದ ಪ್ರಮುಖ ಆಟಗಾರರಾದ ಸ್ಟೀವ್ ಸ್ಮಿತ್ ಹಾಗೂ ಡೇವಿಡ್ ವಾರ್ನರ್ ಒಂದು ವರ್ಷ ನಿಶೇಧಕ್ಕೆ ಗುರಿಯಾದ ಬಳಿಕ ಆಸಿಸ್ ತಂಡ ಅತ್ಯಂತ ಕಠಿಣ ಪರಿಸ್ಥಿತಿಯನ್ನು ಹೊಂದಿತ್ತು. ಆದರೆ ಅದಾದ ಬಳಿಕ ಮತ್ತೆ ತನ್ನ ಹಿಂದಿನ ಲಯಕ್ಕೆ ಮರಳುತ್ತಿದೆ. ಸುಧೀರ್ಘ ಸಮಯದ ಬಳಿಕ ಏಕದಿನ ಕದನದಲ್ಲಿ ಟೀಮ್ ಇಂಡಿಯಾವನ್ನು ಎದುರಿಸಲು ಆಸ್ಟ್ರೇಲಿಯಾ ಸಜ್ಜಾಗಿದೆ.

ಪಂದ್ಯದ ಪ್ರಾಥಮಿಕ ಮಾಹಿತಿ

ಪಂದ್ಯದ ಪ್ರಾಥಮಿಕ ಮಾಹಿತಿ

ಆಸ್ಟ್ರೇಲಿಯಾ ಮತ್ತು ಭಾರತ ವಿರುದ್ಧದ ಮೊದಲ ಪಂದ್ಯ ಮಂಗಳವಾರ(14 ಜನವರಿ 2020) ದಂದು ನಡೆಯಲಿದೆ. ಮಧ್ಯಾಹ್ನ 1.30ಕ್ಕೆ ಪಂದ್ಯ ಆರಂಭವಾಗಲಿದೆ. ಮುಂಬೈನ ವಾಂಖೆಡೆ ಸ್ಟೇಡಿಯಮ್ ಮೊದಲ ಪಂದ್ಯದ ಆತಿಥ್ಯವನ್ನು ವಹಿಸಲು ಸಜ್ಜಾಗಿದೆ.

ಹವಾಮಾನ ವರದಿ

ಹವಾಮಾನ ವರದಿ

ಮುಂಬೈನಲ್ಲಿ ಮಂಗಳವಾರ ಮೋಡ ಕವಿದ ವಾತಾವರನವಿರಲಿದೆ. ಸ್ವಲ್ಪ ಗಾಳಿಯೂ ಬೀಸುವ ಸಾಧ್ಯತೆಯಿದೆ. ಆದರೆ ಮಳೆ ಬರುವ ಮುನ್ಸೂಚನೆ ಕಂಡುಬಂದಿಲ್ಲ. ಭಾರತೀಯ ಪಿಚ್‌ಗಳಿಗೆ ಇಬ್ಬನಿ ದೊಡ್ಡ ಸಮಸ್ಯೆ. ಆದರೆ ಮೋಡದ ಕಾರಣಕ್ಕೆ ಇಬ್ಬನಿ ಕಡಿಮೆಯಾಗುವ ಕಾರಣವಾಗುವ ಸಾಧ್ಯತೆಯಿದೆ. ಇನ್ನು ತಾಪಮಾನ ದಿನವಿಡೀ 21 -27 °ಯ ಮಧ್ಯೆಯಿರಲಿದೆ.

ಪಿಚ್ ರಿಪೋರ್ಟ್

ಪಿಚ್ ರಿಪೋರ್ಟ್

ಮುಂಬೈನ ಪಿಚ್ ಭಾರತದ ಅತ್ಯುತ್ತಮ ಪಿಚ್‌ಗಳಲ್ಲಿ ಒಂದು. ಸ್ಪಿನ್‌ ಬೌಲರ್‌ಗಳಿಗೆ ಸಹಕಾರಿಯಾಗುವ ರೀತಿ ಇದು ವರ್ತಿಸುತ್ತದೆ. ಹಾಗಿದ್ದರು ಇದು ಬ್ಯಾಟ್ಸ್‌ಮನ್‌ಗಳಿಗೆ ಸ್ವರ್ಗವೆಂದೇ ಹೇಳಲಾಗುತ್ತದೆ. ಆದರೆ ಗಾತ್ರದಲ್ಲಿ ಅಂಗಳ ಚಿಕ್ಕದಾಗಿರುವ ಕಾರಣ ಮೊದಲು ಬ್ಯಾಟಿಂಗ್ ಮಾಡಿದ ತಂಡಕ್ಕೆ ಗುರಿಯನ್ನು ರಕ್ಷಿಸಿಕೊಳ್ಳುವುದು ಕಷ್ಟಸಾಧ್ಯವಾಗಲಿದೆ. ಹೀಗಾಗಿ ಟಾಸ್ ಗೆಲ್ಲುವ ತಂಡ ಮೊದಲು ಫೀಲ್ಡಿಂಗ್ ಆಯ್ದುಕೊಳ್ಳುವುದು ನಿಶ್ಚಿತ.

ಸಂಭಾವ್ಯ ತಂಡಗಳು

ಸಂಭಾವ್ಯ ತಂಡಗಳು

ಟೀಮ್ ಇಂಡಿಯಾ ಸಂಭಾವ್ಯXI: ಶಿಖರ್ ಧವನ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ (ನಾಯಕ), ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿಕೆಟ್ ಕೀಪರ್), ಕೇದಾರ್ ಜಾಧವ್, ರವೀಂದ್ರ ಜಡೇಜಾ, ಶಾರ್ದುಲ್ ಠಾಕೂರ್, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ

India vs Sri Lanka: ರಿಕಿ ಪಾಂಟಿಂಗ್ ವಿಶ್ವದಾಖಲೆ ಮುರಿದ ವಿರಾಟ್ ಕೊಹ್ಲಿ!

ಆಸ್ಟ್ರೇಲಿಯಾ ಸಂಭಾವ್ಯXI: ಆರನ್ ಫಿಂಚ್ (ನಾಯಕ), ಡೇವಿಡ್ ವಾರ್ನರ್, ಮಾರ್ನಸ್ ಲ್ಯಾಬುಸ್ಚಾಗ್ನೆ, ಸ್ಟೀವ್ ಸ್ಮಿತ್, ಅಲೆಕ್ಸ್ ಕ್ಯಾರಿ, ಆಷ್ಟನ್ ಟರ್ನರ್, ಆಷ್ಟನ್ ಅಗರ್, ಪ್ಯಾಟ್ ಕಮ್ಮಿನ್ಸ್ (ವಿಕೆಟ್ ಕೀಪರ್), ಮಿಚೆಲ್ ಸ್ಟಾರ್ಕ್, ಕೇನ್ ರಿಚರ್ಡ್ಸನ್, ಆಡಮ್ ಜಂಪಾ

ಫಲಿತಾಂಶದ ನಿರೀಕ್ಷೆ

ಫಲಿತಾಂಶದ ನಿರೀಕ್ಷೆ

ಮುಂಬೈನ ವಾಂಖೆಡೆ ಸ್ಟೇಡಿಯಮ್‌ನಲ್ಲಿ ನಡೆಯಲಿರುವ ಮೊದ ಏಕದಿನ ಪಂದ್ಯ ಸಮಬಲದ ಹೋರಾಟವಾಗುವ ನಿರೀಕ್ಷೆಯಿದೆ. ಎರಡೂ ತಮಡಗಳು ಕೂಡ ಬಲಿಷ್ಠ ತಂಡವನ್ನು ಹೊಂದಿದ್ದು, ಹುಮ್ಮಸ್ಸಿನಿಂದಿದೆ. ಆದರೆ ಭಾರತದಲ್ಲಿ ಟೀಮ್ ಇಂಡಿಯಾ ಒಂದು ಕೈ ಮೇಲಾಗುವ ಸಾಧ್ಯತೆಯೇ ಹೆಚ್ಚಾಗಿದೆ. ಹೀಗಾಗಿ ಟೀಮ್ ಇಂಡಿಯಾ ಆಟಗಾರರು ಮೊದಲ ಪಂದ್ಯವನ್ನು 1-0 ಅಂತರದಿಂದ ಮುನ್ನಡೆ ಪಡೆಯುವ ನಿರೀಕ್ಷೆಯಿದೆ.

Story first published: Monday, January 13, 2020, 18:39 [IST]
Other articles published on Jan 13, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X