ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆಸ್ಟ್ರೇಲಿಯಾ ಗೆದ್ದಿದ್ದು ಸಾಕು, ಕಿವೀಸ್ ಕಪ್ ಗೆದ್ರೆ ತಪ್ಪೇನು?

ಮೆಲ್ಬೋರ್ನ್, ಮಾ.28: 'ನಮ್ಮ ಬೆಂಬಲ ಅಂತೂ ನ್ಯೂಜಿಲೆಂಡ್ ಗಪ್ಪಾ, ಆಸ್ಟ್ರೇಲಿಯಾದವರೂ ಗೆದ್ದಿದ್ದು ಸಾಕು, ಆರಂಭದಿಂದಲೂ ಉತ್ತಮ ಆಟ ನೀಡಿದ ತಂಡಕ್ಕೆ ಕಪ್ ಹೋದರೆ ತಪ್ಪೇನು?' ಇದು ಪ್ರತಿಯೊಬ್ಬ ಭಾರತೀಯ ಕ್ರಿಕೆಟ್ ಅಭಿಮಾನಿಯ ಮನದಲ್ಲಿರುವ ಮಾತು. ಸಾಮಾಜಿಕ ಜಾಲತಾಣಗಳಲ್ಲೂ ಇದೇ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ವಿಶ್ವಕಪ್ ಸೆಣೆಸಾಟ ಅಂತಿಮ ಘಟ್ಟಕ್ಕೆ ಬಂದು ನಿಂತಿದ್ದು ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ತಂಡಗಳು ಚಾಂಪಿಯನ್ ಪಟ್ಟಕ್ಕಾಗಿ ಮಾರ್ಚ್ 29 ರಂದು (ಭಾನುವಾರ) ಕಾದಾಟ ನಡೆಸಲಿವೆ.

ಇದೇ ಮೊದಲ ಬಾರಿಗೆ ಫೈನಲ್ ಆಡುತ್ತಿರುವ ನ್ಯೂಜಿಲೆಂಡ್ ಪ್ರಶಸ್ತಿ ಕನಸು ಕಾಣುತ್ತಿದೆ. 7 ನೇ ಸಾರಿ ಫೈನಲ್ ತಲುಪಿರುವ ಕಾಂಗರೂಗಳು ತಮ್ಮ ಖಾತೆಗೆ ಮತ್ತೊಂದು ವಿಶ್ವಕಪ್ ದಕ್ಕಿಸಿಕೊಳ್ಳುವ ಕಾತರದಲ್ಲಿದ್ದಾರೆ. ವಿಶ್ವಕಪ್ ಅಭಿಯಾನ ಅಂತ್ಯವಾದ ತಕ್ಷಣ ತಿಂಗಳಿಂದ ನಡೆಯುತ್ತಿದ್ದ ಕ್ರಿಕೆಟ್ ಹಬ್ಬಕ್ಕೆ ತೆರೆ ಬೀಳಲಿದೆ.

ಕಿವೀಸ್ ಗೆ ಆತ್ಮವಿಶ್ವಾಸದ ಬಲ

ಕಿವೀಸ್ ಗೆ ಆತ್ಮವಿಶ್ವಾಸದ ಬಲ

ಅಜೇಯವಾಗಿ ಫೈನಲ್ ತಲುಪಿರುವ ನ್ಯೂಜಿಲೆಂಡ್ ಗೆ ಆತ್ಮ ವಿಶ್ವಾಸದ ಬಲವಿದೆ. ತವರು ನೆಲದಲ್ಲಿ ಸಾಮ್ರಾಟನಾಗಿ ಮೆರೆದಿರುವ ಕಿವೀಸ್ ಪಡೆ ಆಸ್ಟ್ರೇಲಿಯಾವನ್ನು ಅದರ ತವರಿನಲ್ಲೇ ಎದುರಿಸಲಿದೆ.

ಕ್ಲಿಕ್ ಆಗುತ್ತಿರುವ ನಾಯಕತ್ವ

ಕ್ಲಿಕ್ ಆಗುತ್ತಿರುವ ನಾಯಕತ್ವ

ಮೆಕ್ ಲಮ್ ನಾಯಕತ್ವ ಕ್ಲಿಕ್ ಆಗುತ್ತಿರುವುದು ನ್ಯೂಜಿಲೆಂಡ್ ಗೆ ಶಕ್ತಿ ತುಂಬಿದೆ. ಆದರೆ ದಕ್ಷಿಣ ಆಫ್ರಿಕಾ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಕೊಂಚ ಎಚ್ಚರ ತಪ್ಪಿದ್ದರೂ ಸೋಲು ಅನುಭವಿಸಬೇಕಾಗಿತ್ತು. ಆರಂಭಿಕ ಆಟಗಾರರ ಸ್ಫೋಟಕ ಆಟ, ಪುಟಿದೇಳುವ ಮಧ್ಯಮ ಕ್ರಮಾಂಕ ಮತ್ತು ನಿಖರ ವೇಗದ ಬೌಲಿಂಗ್ ನ್ಯೂಜಿಲೆಂಡ್ ನ್ನು ಚಾಂಪಿಯನ್ ಪಟ್ಟದ ಸಮೀಪ ಕೊಂಡೊಯ್ದಿದೆ.

ಕಿವೀಸ್ ಆಲ್ ರೌಂಡ್ ಪ್ರದರ್ಶನ

ಕಿವೀಸ್ ಆಲ್ ರೌಂಡ್ ಪ್ರದರ್ಶನ

ಮೆಕ್ ಲಮ್ ಬ್ಯಾಟಿಂಗ್ ಆಂಡರ್ ಸನ್, ಗುಪ್ಟಿಲ್ ಆಲ್ರೌಂಡ್ ಆಟ ತಂಡಕ್ಕೆ ಆಧಾರವಾಗಿದೆ. ವಿಲಿಯಂ ಸನ್ ಬ್ಯಾಟ್ ಬೀಸಿದರೆ ರನ್ ಹೊಳೆ ಹರಿಯುವುದ ಖಂಡಿತ. ಬೌಲ್ಟ್ ಮತ್ತು ಸೌದಿ ವೇಗದ ಬೌಲಿಂಗ್, ವೆಟೋರಿ ಅನುಭವ ತಂಡಕ್ಕೆ ಜಯ ತಂದುಕೊಡಲು ನೆರವಾಗುವುದರಲ್ಲಿ ಅನುಮಾನವಿಲ್ಲ

ಆಸೀಸ್ ಗೆ ತವರಿನ ಬಲ

ಆಸೀಸ್ ಗೆ ತವರಿನ ಬಲ

ಎಲ್ಲದಕ್ಕಿಂತ ಮುಖ್ಯವಾಗಿ ಆಸ್ಟ್ರೇಲಿಯಾ ತಂಡ ತವರಿನ ಜನರ ಬೆಂಬಲ ಪಡೆದುಕೊಳ್ಳಲಿದೆ. ಫಾರ್ಮ್ ಗೆ ಮರಳಿರುವ ಸ್ಮಿತ್, ಭಾರತದೊಂದಿನ ಸೆಮಿಫೈನಲ್ ಜಯ ತಂಡದ ಹುರುಪು ಹೆಚ್ಚಿಸಿದೆ. ಜಾನ್ಸನ್ ಮತ್ತು ಸ್ಟಾರ್ಕ್ ಬೌನ್ಸರ್ ಗಳು ನ್ಯೂಜಿಲೆಂಡ್ ಆಟಗಾರರನ್ನು ಕಾಡಿದರೆ ಆಶ್ಚರ್ಯವಿಲ್ಲ. ಆಸ್ಟ್ರೇಲಿಯಾ ಬ್ಯಾಟಿಂಗ್ ನಲ್ಲಿ ಯಾವೊಬ್ಬ ಆಟಗಾರನನ್ನು ನೆಚ್ಚಿಕೊಳ್ಳದೇ ಇರುವುದು ಅದಕ್ಕೆ ಸಕಾರಾತ್ಮಕವಾಗೇ ಪರಿಣಮಿಸಿದೆ.

ಮೈಕಲ್ ಕ್ಲಾರ್ಕ್- ವೆಟೋರಿ

ಮೈಕಲ್ ಕ್ಲಾರ್ಕ್- ವೆಟೋರಿ

ವಿಶ್ವಕಪ್ ಚಾಂಪಿಯನ್ ಪಟ್ಟದ ಮೂಲಕ ಇಬ್ಬರು ಕ್ರಿಕೆಟ್ ದಿಗ್ಗಜರು ನಿವೃತ್ತಿಯನ್ನು ಸ್ಮರಣೀಯವಾಗಿಸಿಕೊಳ್ಳಬೇಕೆಂದಿದ್ದಾರೆ. ಅವರ ತಂಡ ಯಾರನ್ನು ಹೆಗಲ ಮೇಲೆ ಹೊರಲಿದೆ ಎಂಬುದಕ್ಕೆ ಪಂದ್ಯದ ಫಲಿತಾಂಶವೇ ಉತ್ತರ ಹೇಳಬೇಕು.

ಇಬ್ಬರಿಗೂ 50;50 ಅವಕಾಶ

ಇಬ್ಬರಿಗೂ 50;50 ಅವಕಾಶ

ಟೈ ಆದರೆ ಸೂಪರ್ ಓವರ್ ಗೂ ಅವಕಾಶವಿದೆ. ಮಳೆ ಬಂದರೆ ಇನ್ನೊಂದು ಮೀಸಲು ದಿನ ಇದ್ದೇ ಇದೆ. ಒಟ್ಟಿನಲ್ಲಿ ಫೈನಲ್ ಪಂದ್ಯ 50;50 ಅವಕಾಶ ಹೊಂದಿದ್ದು ಭಾರತೀಯ ಅಭಿಮಾನಿಗಳು ಸಹಜವಾಗಿಯೇ ಕೀವೀಸ್ ಬೆಂಬಲಕ್ಕೆ ನಿಂತಿದ್ದಾರೆ.

ಭಾರತೀಯ ಅಭಿಮಾನಿಗಳು

ಭಾರತೀಯ ಅಭಿಮಾನಿಗಳು

ಭಾರತೀಯ ಅಭಿಮಾನಿಗಳ ಹಾರೈಕೆ ಕಿವೀಸ್ ಕಪ್ ಗೆಲ್ಲಲಿ ಎಂಬುದೇ ಆಗಿದೆ. ಸೆಮಿಫೈನಲ್ ನಲ್ಲಿ ಆಸ್ಟ್ರೇಲಿಯಾ ನಮ್ಮನ್ನು ಸೋಲಿಸಿತು ಎಂಬ ಆಕ್ರೋಶಭರಿತ ನೋವು ಒಂದು ಕಡೆಯಾದರೆ, ಇನ್ನೂ ಕಪ್ ಗೆಲ್ಲದವರಿಗೆ ಇದಾದರೂ ದಕ್ಕಲಿ ಎಂಬ ಉದಾರ ಭಾವನೆಯೂ ಇದೆ.

Story first published: Wednesday, January 3, 2018, 10:02 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X