ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ಆಟಗಾರರು ಅವರಲ್ಲೇ ನಂಬಿಕೆಯಿಡುವಂತೆ ಮಾಡೋದಕ್ಕೆ ನನ್ನ ಆದ್ಯತೆ'

Priority was to make the players believe in themselves: Ajinkya Rahane

ನವದೆಹಲಿ: ಆಸ್ಟ್ರೇಲಿಯಾ ಪ್ರವಾಸದಲ್ಲಿ ಟೆಸ್ಟ್ ಸರಣಿಯ ವೇಳೆ ಎಂದಿನ ನಾಯಕ ವಿರಾಟ್ ಕೊಹ್ಲಿ ರಜೆಯಲ್ಲಿದ್ದರಿಂದ ಅಜಿಂಕ್ಯ ರಹಾನೆ ಹಂಗಾಮಿ ನಾಯಕನಾಗಿದ್ದರು. ರಹಾನೆ ತಂಡ ಬಾರ್ಡರ್-ಗವಾಸ್ಕರ್ ಟ್ರೋಫಿ ಗೆದ್ದಿತ್ತು. ಇದರ ಗುಟ್ಟನ್ನು ರಹಾನೆ ಬಿಚ್ಚಿಟ್ಟಿದ್ದಾರೆ. ತಂಡದ ಆಟಗಾರರು ಅವರಲ್ಲೇ ನಂಬಿಕೆಯಿಡುವುದಂತೆ ಮಾಡೋದಕ್ಕೆ ನನ್ನ ಆದ್ಯತೆ. ಇದೇ ಗೆಲುವಿನ ಗುಟ್ಟು ಎಂದು ಅಜಿಂಕ್ಯ ರಹಾನೆ ಹೇಳಿದ್ದಾರೆ.

ODI Super League: ಎರಡಕ್ಕೇರಿದ ಬಾಂಗ್ಲಾದೇಶ, ತಳ ಸೇರಿದ ಭಾರತODI Super League: ಎರಡಕ್ಕೇರಿದ ಬಾಂಗ್ಲಾದೇಶ, ತಳ ಸೇರಿದ ಭಾರತ

ಆಸ್ಟ್ರೇಲಿಯಾ ಪ್ರವಾಸದ ವೇಳೆ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಅಜಿಂಕ್ಯ ರಹಾನೆ ಮುಂದಾಳತ್ವದ ಭಾರತ ತಂಡ 2-1ರ ಗೆಲುವು (ಒಂದು ಪಂದ್ಯ ಡ್ರಾ) ದಾಖಲಿಸಿತ್ತು. ತಂಡದ ಪ್ರಮುಖ ಆಟಗಾರರು ಗಾಯಗೊಂಡು ತಂಡದಿಂದ ಹೊರಗಿದ್ದರೂ ಯುವ ತಂಡ ರೋಚಕ ರೀತಿಯಲ್ಲಿ ಸರಣಿ ಜಯಿಸಿ ವಿಶ್ವದ ಗಮನ ಸೆಳೆದಿತ್ತು.

ಟೈಮ್ಸ್ ಆಫ್ ಇಂಡಿಯಾ ಜೊತೆ ಮಾತನಾಡಿದ ಅಜಿಂಕ್ಯ ರಹಾನೆ, 'ಅವತ್ತು ಏನಾಗಿತ್ತು ಅನ್ನೋದನ್ನು ನಾವು ಈಗ ಮಾತನಾಡಲು ಹೋಗುವುದಿಲ್ಲ. ಏಕೆಂದರೆ, ಪ್ರತಿ ಬಾರಿ ನಾವು ಆ ವಿಷಯವನ್ನು ಹೊರತರುತ್ತಿದ್ದೇವೆ. ನಮ್ಮ ಮೇಲೆ ಒತ್ತಡ ಆಗುವುದಕ್ಕೆ ನಾವು ಅವಕಾಶ ನೀಡಲಿಲ್ಲ. ಗೆಲುವಿಗೆ ಇದೂ ಒಂದು ಕಾರಣ,' ಎಂದು ರಹಾನೆ ಹೇಳಿದ್ದಾರೆ.

ವೇಗಿ ನಟರಾಜನ್ ಕಣ್ಣಲ್ಲಿ ನೀರು ತರಿಸಿತ್ತು ನಾಯಕ ಕೊಹ್ಲಿ ತೋರಿದ ಆ ವರ್ತನೆ!ವೇಗಿ ನಟರಾಜನ್ ಕಣ್ಣಲ್ಲಿ ನೀರು ತರಿಸಿತ್ತು ನಾಯಕ ಕೊಹ್ಲಿ ತೋರಿದ ಆ ವರ್ತನೆ!

'ಆಟಗಾರರಿಗೆ ಅವರ ಸಾಮರ್ಥ್ಯದ ಬಗ್ಗೆ ಅವರಿಗೇ ಅನುಮಾನ ಇರೋದನ್ನು ನಾವು ಬಯಸುವುದಿಲ್ಲ. ಕಡೇ ಪಂದ್ಯದ ಕೊನೇ ಒಂದು ಗಂಟೆಯಲ್ಲಿ ಇದೇ ಕೆಲಸ ಮಾಡಿತು. ಮತ್ತೆ ಪಂದ್ಯದ ಫಲಿತಾಂಶದ ಬಗ್ಗೆ ನಾವು ಹೆಚ್ಚು ತಲೆ ಕೆಡಿಸಿಕೊಳ್ಳದೆ ಒಗ್ಗಟ್ಟಾಗಿ ಒಂದು ತಂಡವಾಗಿ ಆಡುತ್ತೇವೆ. ಇದೇ ಗೆಲುವು ತರುತ್ತದೆ,' ಎಂದು ರಹಾನೆ ವಿವರಿಸಿದ್ದಾರೆ.

Story first published: Tuesday, January 26, 2021, 12:51 [IST]
Other articles published on Jan 26, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X