ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಯಶಸ್ಸಿಗೆ ರಾಹುಲ್ ದ್ರಾವಿಡ್ ಸರ್ ಕಾರಣ; ದ್ರಾವಿಡ್ ಜೊತೆಗಿನ ಹಳೆ ಘಟನೆ ನೆನೆದ ಪೃಥ್ವಿ ಶಾ

Prithvi Shaw credits Rahul Dravid for Vijay Hazare Trophy and IPL 2021 success
Rahul Dravid ಬಗ್ಗೆ Prithvi Shaw ಹೇಳಿದ್ದೇನು | Oneindia Kannada

ಪೃಥ್ವಿ ಶಾ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಕಳಪೆ ಪ್ರದರ್ಶನ ನೀಡಿ ಒಂದೇ ಒಂದು ಪಂದ್ಯದ ನಂತರ ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದರು. ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ತೋರಿದ ಕಳಪೆ ಪ್ರದರ್ಶನದಿಂದ ಕಂಗೆಟ್ಟಿದ್ದ ಪೃಥ್ವಿ ಶಾ ತದನಂತರ ನಡೆದ ವಿಜಯ್ ಹಜಾರೆ ಟ್ರೋಫಿಯಲ್ಲಿ ಅತ್ಯುತ್ತಮ ಆಟವನ್ನಾಡಿ ಟೂರ್ನಿಯಲ್ಲಿ ಅತಿಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡರು.

ಮುಂದಿನ ಐಪಿಎಲ್ ಹರಾಜಿನಲ್ಲಿ ಇಶಾನ್ ಕಿಶನ್‌ರನ್ನು ಖರೀದಿಸಬಹುದಾದ 3 ತಂಡಗಳಿವುಮುಂದಿನ ಐಪಿಎಲ್ ಹರಾಜಿನಲ್ಲಿ ಇಶಾನ್ ಕಿಶನ್‌ರನ್ನು ಖರೀದಿಸಬಹುದಾದ 3 ತಂಡಗಳಿವು

ಇದಾದ ಬಳಿಕ ಶುರುವಾದ 2021ರ ಐಪಿಎಲ್ ಟೂರ್ನಿಯಲ್ಲಿಯೂ ಪೃಥ್ವಿ ಶಾ ಮಿಂಚಿದರು. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಪ್ರಸ್ತುತ ಐಪಿಎಲ್ ಟೂರ್ನಿಯಲ್ಲಿ 8 ಪಂದ್ಯಗಳನ್ನಾಡಿರುವ ಪೃಥ್ವಿ ಶಾ 308 ರನ್ ಗಳಿಸಿ ಮಿಂಚಿದ್ದಾರೆ. ಕಳೆದ ವಿಜಯ್ ಹಜಾರೆ ಟ್ರೋಫಿಯಲ್ಲಿ 8 ಪಂದ್ಯಗಳನ್ನಾಡಿದ್ದ ಪ್ರದೇಶ 827 ರನ್ ಗಳಿಸಿ ಮಿಂಚಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಸರಣಿಯ ಒಂದು ಟೆಸ್ಟ್ ಪಂದ್ಯ ಆಡಿ ಕೇವಲ 4 ರನ್ ಗಳಿಸಿ ಮಂಕಾಗಿದ್ದ ಪೃಥ್ವಿ ಶಾ ಇಷ್ಟು ದೊಡ್ಡ ಮಟ್ಟದಲ್ಲಿ ಪುಟಿದೇಳಲು ರಾಹುಲ್ ದ್ರಾವಿಡ್ ನೀಡಿದ್ದ ಸಲಹೆಗಳೇ ಕಾರಣ ಎಂದಿದ್ದಾರೆ.

ಒಂದು ಔಷಧಿಗೆ 16 ಕೋಟಿ; ಮುಗ್ಧ ಮಗುವಿನ ಜೀವ ಉಳಿಸಿ ಮಾನವೀಯತೆ ಮೆರೆದ ಕಿಂಗ್ ಕೊಹ್ಲಿಒಂದು ಔಷಧಿಗೆ 16 ಕೋಟಿ; ಮುಗ್ಧ ಮಗುವಿನ ಜೀವ ಉಳಿಸಿ ಮಾನವೀಯತೆ ಮೆರೆದ ಕಿಂಗ್ ಕೊಹ್ಲಿ

'ಸುಮಾರು ಎರಡು ಮೂರು ವರ್ಷಗಳ ಕಾಲ ರಾಹುಲ್ ದ್ರಾವಿಡ್ ಸರ್ ತರಬೇತಿಯಲ್ಲಿ ಕ್ರಿಕೆಟ್ ಆಡಿದ್ದೆ. ಆ ಸಮಯದಲ್ಲಿ ರಾಹುಲ್ ದ್ರಾವಿಡ್ ಸರ್ ನನ್ನ ಬ್ಯಾಟಿಂಗ್ ವಿಧಾನದಲ್ಲಿ ಯಾವುದೇ ರೀತಿಯ ಬದಲಾವಣೆಯನ್ನು ಬಯಸುತ್ತಿರಲಿಲ್ಲ. ನೀನು ನಿನ್ನ ಸ್ವಾಭಾವಿಕ ಆಟವನ್ನು ಆಡು, ಮುಂದಿನ ದಿನಗಳಲ್ಲಿಯೂ ಕೂಡ ಬ್ಯಾಟಿಂಗ್ ವೈಖರಿ ಬದಲಾಗಬಾರದು ಸ್ವಾಭಾವಿಕ ಆಟದ ಮೂಲಕವೇ ಕಷ್ಟದ ದಿನಗಳಲ್ಲಿ ಪುಟಿದೇಳಬೇಕು ಎಂದು ರಾಹುಲ್ ದ್ರಾವಿಡ್ ಸರ್ ಸಲಹೆ ನೀಡಿದ್ದರು. ಆ ಸಲಹೆಯೇ ವಿಜಯ್ ಹಜಾರೆ ಟ್ರೋಫಿ ಮತ್ತು ಪ್ರಸ್ತುತ ಐಪಿಎಲ್ ಟೂರ್ನಿಯಲ್ಲಿ ನನ್ನ ಉತ್ತಮ ಪ್ರದರ್ಶನಕ್ಕೆ ಕಾರಣ' ಎಂದು ಪೃಥ್ವಿ ಶಾ ದ್ರಾವಿಡ್ ನೀಡಿದ ಸಲಹೆಯನ್ನು ನೆನಪಿಸಿಕೊಂಡಿದ್ದಾರೆ.

Story first published: Wednesday, May 26, 2021, 9:46 [IST]
Other articles published on May 26, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X