ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪೃಥ್ವಿ ಶಾ ವನವಾಸ ಅಂತ್ಯ; ಮತ್ತೆ ಮಿಂಚು ಹರಿಸಲು ಸಜ್ಜು

Prithvi Shaw is all set to return to action

ಭರವಸೆಯ ಯುವ ಆಟಗಾರ ಪೃಥ್ವಿ ಶಾ ಮತ್ತೆ ಮಿಂಚಲು ಸಜ್ಜಾಗಿದ್ದಾರೆ. ಡೋಪಿಂಗ್ ಟೆಸ್ಟ್‌ನಲ್ಲಿ ವಿಫಲವಾಗಿದ್ದ ಪೃಥ್ವಿ ಶಾ 8 ತಿಂಗಳ ನಿಷೇಧಕ್ಕೆ ಗುರಿಯಾಗಿದ್ದರು. ಇದು ಕ್ರೀಡಾಭಿಮಾನಿಗಳಿಗೂ ಆಘಾತವನ್ನು ತಂದಿತ್ತು. ಇದೀಗ ನಿಷೇಧ ಮುಗಿಸಿಕೊಂಡು ಮತ್ತೆ ಪ್ರಮುಖ ದೇಸೀ ಟೂರ್ನಿಯಲ್ಲಿ ಪಾಲ್ಗೊಳ್ಳಲು ಸಿದ್ಧರಾಗಿದ್ದಾರೆ.

ತೆಂಡೂಲ್ಕರ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಅಂಗಣಕ್ಕಿಳಿದು ಇಂದಿಗೆ 30 ವರ್ಷ!

ಪೃಥ್ವಿ ಶಾ ನಿಷೇಧ ಇದೇ ತಿಂಗಳ 17ನೇ ತಾರೀಖಿನಂದು ಅಂತ್ಯವಾಗಲಿದೆ. ಹೀಗಾಗಿ ಶಾ ಸೈಯ್ಯದ್ ಮುಶ್ತಾಕ್ ಅಲಿ ಟ್ರೋಪಿಯಲ್ಲಿ ಲೀಗ್‌ನ ಅಂತಿಮ ಎರಡು ಪಂದ್ಯಗಳಿಗೆ ಆಯ್ಕೆಯಾಗಿದ್ದಾರೆ. ಆ ಮೂಲಕ ಮತ್ತೆ ಕ್ರಿಕೆಟ್‌ ಅಂಗಳದಲ್ಲಿ ಸದ್ದು ಮಾಡಲು ಯುವ ಆಟಗಾರ ಕಾತುರರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ನೆಟ್‌ನಲ್ಲಿ ಸಾಕಷ್ಟು ಅಭ್ಯಾಸದಲ್ಲಿ ತೊಡಗಿಸಿಕೊಂಡಿದ್ದಾರೆ ಪೃಥ್ವಿಶಾ.

ಭಾರತ vs ಬಾಂಗ್ಲಾದೇಶ, 1ನೇ ಟೆಸ್ಟ್, Live: ಮಯಾಂಕ್ ಆಕರ್ಷಕ ಶತಕಭಾರತ vs ಬಾಂಗ್ಲಾದೇಶ, 1ನೇ ಟೆಸ್ಟ್, Live: ಮಯಾಂಕ್ ಆಕರ್ಷಕ ಶತಕ

ಅಂಡರ್ 19 ತಂಡದಲ್ಲಿ ನೀಡಿದ ಅಮೋಘ ಪ್ರದರ್ಶನ ಪೃಥ್ವಿಶಾ ಅವರನ್ನು ಬೇಗನೆ ಟೀಮ್ ಇಂಡಿಯಾಗೆ ಆಯ್ಕೆ ಮಾಡುವಲ್ಲಿ ಕಾರಣವಾಗಿತ್ತು. ಅದಕ್ಕೆ ಪೂರಕವಾಗಿ ಟೀಮ್ ಇಂಡಿಯಾದಲ್ಲೂ ಶಾ ಅದ್ಭುತ ಪ್ರದರ್ಶನ ಮುಂದುವರೆಸಿದ್ದರು. ತನ್ನ ಪದಾರ್ಪಣಾ ಪಂದ್ಯದಲ್ಲೇ ಪೃಥ್ವಿಶಾ ವೆಸ್ಟ್‌ ಇಂಡಿಸ್‌ ವಿರುದ್ಧ ಶತಕವನ್ನು ಬಾರಿಸಿದ್ದರು. ಇದು ಶಾ ಮೇಲಿನ ಭರವಸೆಯನ್ನು ಹೆಚ್ಚುವಂತೆ ಮಾಡಿತ್ತು.

ಆದರೆ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ತೀವ್ರ ಮೊಣಕಾಲಿನ ಗಾಯಕ್ಕೆ ಒಳಗಾದರು. ಇದು ಅವರ ಕೆರಿಯರ್‌ಗೆ ಹಿನ್ನೆಡೆಯನ್ನು ಉಂಟುಮಾಡಿತು. ಅದಕ್ಕಾಗಿ ಚಿಕಿತ್ಸೆಗೂ ಒಳಗಾದರು ಪೃಥ್ವಿ ಶಾ. ಈ ಚಿಕಿತ್ಸೆಯ ಸಂಧರ್ಭದಲ್ಲಿ ನಿಶೇಧಿತ ಅಂಶ ಪೃಥ್ವಿ ಶಾ ದೇಹವನ್ನು ಸೇರಿದ್ದು, ಅದೇ ಶಾ ನಿಷೇಧಕ್ಕೂ ಕಾರಣವಾಯಿತು ಎಂದು ಹೇಳಲಾಗುತ್ತಿದೆ. ಈ ವಿಚಾರವನ್ನು ಪೃಥ್ವಿ ಶಾ ನೋವಿನಿಂದ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದರು.

ಕಳೆದ ಐಪಿಎಲ್‌ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು ಪ್ರತಿನಿಧಿಸಿದ್ಧ ಶಾ ಅದಾದ ಬಳಿಕ ಅಂಗಳದಿಂದ ದೂರ ಉಳಿದಿದ್ದರು. ಬಳಿಕ ಜುಲೈ ತಿಂಗಳಲ್ಲಿ ಬಿಸಿಸಿಐನ ಆ್ಯಾಂಟಿ ಡೋಪಿಂಗ್ ಟೆಸ್ಟ್‌ನಲ್ಲಿ ವಿಫಲರಾಗಿದ್ದರು.
ಸೂರ್ಯ ಕುಮಾರ್ ಯಾದವ್ ನೇತೃತ್ವದ ಮುಂಬೈ ತಂಡ ಸೈಯ್ಯದ್ ಮುಶ್ತಾಕ್ ಅಲಿ ಟ್ರೋಪಿಯಲ್ಲಿ ಈಗಾಗಲೇ ಉತ್ತಮ ಪ್ರದರ್ಶನ ನೀಡುತ್ಇದೆ. 5 ಪಂದ್ಯಗಳಲ್ಲಿ ಗೆದ್ದು ಮುನ್ನುಗ್ಗುತ್ತಿದ್ದು ಗ್ರೂಪ್ ಡಿ ವಿಭಾಗದಲ್ಲಿ ಮೊದಲ ಸ್ಥಾನದಲ್ಲಿದೆ. ಇದೀಗ ಪೃಥ್ವಿ ಶಾ ಕೂಡ ಮುಂಬೈ ತಂಡವನ್ನು ಸೇರಿಕೊಳ್ಳುತ್ತಿದ್ದು ಮುಂಬೈ ಮತ್ತಷ್ಟು ಬಲಿಷ್ಠವಾಗಲಿದೆ.

Story first published: Friday, November 15, 2019, 15:16 [IST]
Other articles published on Nov 15, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X