ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇಂಗ್ಲೆಂಡ್ vs ಭಾರತ 5ನೇ ಟೆಸ್ಟ್ ನಲ್ಲಿ ರಾಹುಲ್ ಬದಲು ಪೃಥ್ವಿಗೆ ಸ್ಥಾನ?

Prithvi Shaw likely to replace KL Rahul for the final Test

ಲಂಡನ್, ಸೆಪ್ಟೆಂಬರ್ 4: ಇಂಗ್ಲೆಂಡ್ ಪ್ರವಾಸದಲ್ಲಿರುವ ಭಾರತ ಆಂಗ್ಲರೆದುರು 5 ಪಂದ್ಯಗಳ ಟೆಸ್ಟ್ ಸರಣಿಯನ್ನು 3-1ರಿಂದ ಕಳೆದುಕೊಂಡಿದೆ. ಆದರೆ ಉಳಿದಿರುವ ಕೊನೆಯ ಟೆಸ್ಟನಲ್ಲಿ ಕೆಎಲ್ ರಾಹುಲ್ ಬದಲು ಮತ್ತೊಬ್ಬ ಯುವ ಆಟಗಾರ ಪೃಥ್ವಿ ಶಾ ಅವರಿಗೆ ಸ್ಥಾನ ಲಭಿಸುವ ಸಾಧ್ಯತೆಗಳು ಹೆಚ್ಚಿವೆ.

ಕೊಹ್ಲಿ ಇಸ್ ಕಿಂಗ್ : ಐಸಿಸಿ ಶ್ರೇಯಾಂಕದಲ್ಲಿ ಅಗ್ರಸ್ಥಾನ, ದಾಖಲೆ ಅಂಕ ಗಳಿಕೆಕೊಹ್ಲಿ ಇಸ್ ಕಿಂಗ್ : ಐಸಿಸಿ ಶ್ರೇಯಾಂಕದಲ್ಲಿ ಅಗ್ರಸ್ಥಾನ, ದಾಖಲೆ ಅಂಕ ಗಳಿಕೆ

ಟೆಸ್ಟ್ ತಂಡಕ್ಕೆ ಆಟಗಾರರ ಆಯ್ಕೆ ನಡೆಯುವಾಗ ಪೃಥ್ವಿ ಕೂಡ ರೇಸ್ ನಲ್ಲಿದ್ದರು. ಆದರೆ ಅದೃಷ್ಟ ಪರೀಕ್ಷೆಯ ಅವಕಾಶ ರಾಹುಲ್ ಗೆ ಲಭಿಸಿತ್ತು. ರಾಹುಲ್ ಅವರು ಟೆಸ್ಟ್ ಸರಣಿಯ 4 ಪಂದ್ಯಗಳಲ್ಲಿ ಪಾಲ್ಗೊಂಡರೂ ನಿರಾಸೆಯ ಪ್ರದರ್ಶನ ನೀಡಿದ್ದು, ಮುಂದಿನ ಟೆಸ್ಟ್ ನಲ್ಲಿ ರಾಹುಲ್ ಸ್ಥಾನದಲ್ಲಿ ಬದಲಾವಣೆಯಾಗುವ ಸಾಧ್ಯತೆಯಿದೆ.

ಬೌಲರ್ ಅಶ್ವಿನ್ ಅವರೂ 5ನೇ ಟೆಸ್ಟ್ ನಲ್ಲಿ ತಂಡದಲ್ಲಿ ಸ್ಥಾನ ಕಳೆದುಕೊಳ್ಳುವ ಸಾಧ್ಯತೆಯಿದೆ. ಕೆನ್ನಿಂಗ್ಟನ್ ಓವಲ್ ನಲ್ಲಿ ನಡೆಯಲಿರುವ 5ನೇ ಟೆಸ್ಟ್ ನಲ್ಲಿ ಅಶ್ವಿನ್ ಬದಲು ಸ್ಪಿನ್ನರ್ ಕಮ್ ಬ್ಯಾಟ್ಸ್ಮನ್ ರವೀಂದ್ರ ಜಡೇಜ ಅವರು ತಂಡ ಸೇರಿಕೊಳ್ಳುವುದು ಬಹುತೇಕ ಖಚಿತ.

ತಂಡ ಸೇರಿಕೊಂಡ ರಾಹುಲ್ ಅವರಿಂದ ಅಂಥ ಅನುಕೂಲವೇನೂ ಆಗಲಿಲ್ಲ. ಅದರಲ್ಲೂ ಟೆಸ್ಟ್ ಸರಣಿಯಲ್ಲಿ ನಿರ್ಣಾಯಕವೆನಿಸಿದ್ದ 4ನೇ ಟೆಸ್ಟ್ ಪಂದ್ಯದಲ್ಲಿ ರಾಹುಲ್ ಮೇಲಿನ ಭರವಸೆ ನೆಲಕ್ಕಿಳಿದಿತ್ತು. ರಾಹುಲ್ 4ನೇ ಟೆಸ್ಟ್ ನ ಮೊದಲ ಇನ್ನಿಂಗ್ಸ್ ನಲ್ಲಿ 19, ದ್ವಿತೀಯ ಇನ್ನಿಂಗ್ಸ್ ನಲ್ಲಿ ಸೊನ್ನೆ ಸುತ್ತಿದ್ದರು.

ಮಾಹಿತಿ ಪ್ರಕಾರ ಟೆಸ್ಟ್ ಸರಣಿಯ 8 ಇನ್ನಿಂಗ್ಸ್ ನಲ್ಲಿ ರಾಹುಲ್ ಕಲೆ ಹಾಕಿದ್ದು ಕೇವಲ 113 ರನ್. ಪಂದ್ಯದಿಂದ ಪಂದ್ಯಕ್ಕೆ ಪ್ರದರ್ಶನ ಮಂಕಾದರೆ ಸಹಜವಾಗೇ ಆ ಆಟಗಾರ ತಂಡದಿಂದ ಹೊರಬೀಳುವ ಸಾಧ್ಯತೆ ಹೆಚ್ಚು. ಇನ್ನೊಂದೆಡೆ ಇನ್ನೊಬ್ಬ ಪ್ರತಿಭಾನ್ವಿತ ಆಟಗಾರ ಅವಕಾಶಕ್ಕಾಗಿ ಎದುರು ನೋಡುತ್ತಿರುವುದರಿಂದ ಮುಂದಿನ ಔಪಚಾರಿಕ ಟೆಸ್ಟ್ ನಲ್ಲಿ ತಂಡದಲ್ಲಿ ಪೃಥ್ವಿ ಶಾ ಅವರನ್ನು ನಾವು ನೀರೀಕ್ಷಿಸಬಹುದು.

Story first published: Tuesday, September 4, 2018, 16:27 [IST]
Other articles published on Sep 4, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X