ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅಮಾನತಿನ ಬಳಿಕ ಮತ್ತೆ ಕ್ರಿಕೆಟ್ ಅಂಗಳಕ್ಕೆ ಮರಳಲಿದ್ದಾರೆ ಪೃಥ್ವಿ ಶಾ

Prithvi Shaw likely to return in Mumbai squad for Syed Mushtaq Ali Trophy

ಮುಂಬೈ, ನವೆಂಬರ್ 8: ಉದ್ದೀಪನ ಮದ್ದು ಸೇವನೆ ನಿಯಮ ಉಲ್ಲಂಘಿಸಿ 8 ತಿಂಗಳ ನಿಷೇಧಕ್ಕೆ ಗುರಿಯಾಗಿರುವ ಯುವ ಬ್ಯಾಟ್ಸ್‌ಮನ್ ಪೃಥ್ವಿ ಶಾ, ಸೈಯ್ಯದ್ ಮುಷ್ತಾಕ್ ಅಲಿ ಟ್ರೋಫಿಗಾಗಿ ಮುಂಬೈ ತಂಡ ಸೇರಿಕೊಳ್ಳಲಿದ್ದಾರೆ. ನವೆಂಬರ್ 8ರಿಂದ ಸೈಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿ ಆರಂಭವಾಗಿದೆ.

ಈ ದಿನಗಳ 'ಸಿಕ್ಸರ್ ಕಿಂಗ್' ರೋಹಿತ್ ಶರ್ಮಾ ಎನ್ನುತ್ತಿವೆ ಅಂಕಿ-ಅಂಶಗಳು!ಈ ದಿನಗಳ 'ಸಿಕ್ಸರ್ ಕಿಂಗ್' ರೋಹಿತ್ ಶರ್ಮಾ ಎನ್ನುತ್ತಿವೆ ಅಂಕಿ-ಅಂಶಗಳು!

'ಅವನು (ಪೃಥ್ವಿ ಶಾ) ನವೆಂಬರ್ 16ರಿಂದ ಆಡಲು ಸ್ವತಂತ್ರನಾಗಲಿದ್ದಾನೆ. ಖಂಡಿತಾ ಆತನನ್ನು ಸೈಯ್ಯದ್ ಮುಷ್ತಾಕ್ ಅಲಿ ಟ್ರೋಫಿಗೆ ಪರಿಗಣಿಸಲು ಅವಕಾಶವಿದೆ. ಆತ ತಂಡದಲ್ಲಿ ಆಡೇ ಆಡುತ್ತಾನೆ ಎನ್ನುವ ಬಗ್ಗೆ ನಾನು ಕಾಮೆಂಟ್ ಮಾಡಲಾರೆ. ಆದರೆ ಆತನ ಆಯ್ಕೆ ಬಗ್ಗೆ ನಾವು ಚರ್ಚಿಸುವುದರಲ್ಲಿದ್ದೇವೆ,' ಎಂದು ಮುಂಬೈ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಮಿಲಿಂದ್ ರೆಗೆ ಹೇಳಿದ್ದಾರೆ.

ಸೈಯ್ಯದ್ ಮುಷ್ತಾಕ್ ಅಲಿ ಟ್ರೋಫಿ: ಉತ್ತರಖಂಡ ಸದೆಬಡಿದ ಕರ್ನಾಟಕ

'ಮುಂಬೈ ಕ್ರಿಕೆಟ್ ಅಸೋಸಿಯೇಷನ್‌ನಲ್ಲಿ ರಿಜಿಸ್ಟರ್ಡ್‌ ಆಗಿರುವ ಪೃಥ್ವಿ ಶಾ, ಉದ್ದೀಪನ ಮದ್ದು ನೀತಿ ಉಲ್ಲಂಘಿಸಿದ್ದಕ್ಕಾಗಿ ಅಮಾನತಿಗೀಡಾಗಿದ್ದಾರೆ. ನಿಷೇಧಿತ ಅಂಶವುಳ್ಳ ಔಷಧವನ್ನು ಶಾ ತನಗರಿವಿಲ್ಲದಂತೆಯೆ ಸೇವಿಸಿದ್ದಾರೆ. ಕೆಮ್ಮಿನ ಸಿರಪ್‌ನಲ್ಲಿ ಸಾಮಾನ್ಯವಾಗಿ ಕಂಡು ಬರುವ ಅಂಶ ಅವರ ದೇಹದಲ್ಲಿ ಕಂಡುಬಂದಿತ್ತು,' ಎಂದು ಬಿಸಿಸಿಐ ಹೇಳಿಕೆಯಲ್ಲಿ ತಿಳಿಸಿದೆ.

ಏಕದಿನ ಕ್ರಿಕೆಟ್ ನಲ್ಲಿ ತ್ವರಿತವಾಗಿ 2000 ರನ್​ ದಾಖಲಿಸಿದ ಸ್ಮೃತಿಏಕದಿನ ಕ್ರಿಕೆಟ್ ನಲ್ಲಿ ತ್ವರಿತವಾಗಿ 2000 ರನ್​ ದಾಖಲಿಸಿದ ಸ್ಮೃತಿ

ಅಜಾಗರೂಕತೆಯಿಂದ ಕೆಮ್ಮಿನ ಸಿರಪ್‌ ಸೇವಿಸಿದ್ದರಿಂದ ಉದ್ದೀಪನ ಪರೀಕ್ಷೆ ಮಾಡುವಾಗ ಪೃಥ್ವಿ ದೇಹದಲ್ಲಿ ನಿಷೇಧಿತ ಟೆರ್ಬುಟಾಲಿನ್ ಅಂಶ ಕಂಡು ಬಂದಿತ್ತು. ಹೀಗಾಗಿ ಕಳೆದ ಜುಲೈನಲ್ಲಿ (ಹಿಂದಿನ ದಿನಾಂಕ ಪರಿಣಿಸಿ) ಪೃಥ್ವಿ ಶಾ 8 ತಿಂಗಳ ನಿಷೇಧಕ್ಕೆ ಒಳಗಾಗಿದ್ದರು.

ತಂಗಲು ಜಾಗವಿಲ್ಲದೆ ಪರದಾಡಿದ ಎಂಟಡಿ ಎತ್ತರದ ಅಫ್ಘಾನ್ ಕ್ರಿಕೆಟ್ ಅಭಿಮಾನಿ!ತಂಗಲು ಜಾಗವಿಲ್ಲದೆ ಪರದಾಡಿದ ಎಂಟಡಿ ಎತ್ತರದ ಅಫ್ಘಾನ್ ಕ್ರಿಕೆಟ್ ಅಭಿಮಾನಿ!

ಅಂದ್ಹಾಗೆ ಮುಂಬೈ ತಂಡದ ಪ್ರಮುಖ ಆಟಗಾರರಾದ ಶ್ರೇಯಸ್ ಐಯ್ಯರ್, ಶಿವಂ ದೂಬೆ ಮತ್ತು ಶಾರ್ದೂಲ್ ಠಾಕೂರ್ ಸದ್ಯ ಭಾರತ ಪರ ಬಾಂಗ್ಲಾ ವಿರುದ್ಧದ ಟಿ20 ಸರಣಿಯಲ್ಲಿ ಆಡುತ್ತಿದ್ದಾರೆ. ಹೀಗಾಗಿ ಸೈಯ್ಯದ್ ಮುಷ್ತಾಕ್ ಅಲಿ ಟೂರ್ನಿಗಾಗಿ ಮುಂಬೈಗೆ ತಂಡಕ್ಕೆ ಪೃಥ್ವಿ ಶಾ ಅವರಂತ ಆಕರ್ಷಣೀಯ ಆಟಗಾರರ ಅವಶ್ಯಕತೆ ಉಂಟಾಗಿದೆ.

Story first published: Friday, November 8, 2019, 18:05 [IST]
Other articles published on Nov 8, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X