ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ಪೃಥ್ವಿ' ಮೊದಲಲ್ಲ: ಫಸ್ಟ್ ಟೆಸ್ಟ್ ಸಾಲಿನಲ್ಲಿ 15 ಮಂದಿ ಸೆಂಚುರಿ ಸರದಾರರು

Prithvi Shaw and other centurions on Test debut for India

ರಾಜ್ ಕೋಟ್, ಅಕ್ಟೋಬರ್ 4: ಪಾದಾರ್ಪಣೆ ಪಂದ್ಯದಲ್ಲಿ ಪೃಥ್ವಿ ಸೆಂಚುರಿ ಬಾರಿಸಿದ್ದು 15ನೇ ಭಾರತೀಯನಾಗಿ. ಟೆಸ್ಟ್ ಕ್ರಿಕೆಟ್ ಇತಿಹಾಸ ಕೆದಕಿದರೆ ಅಲ್ಲಿ ಮೊದಲ ಅಂತಾರಾಷ್ಟ್ರೀಯ ಪಂದ್ಯದಲ್ಲೇ ಶತಕ ಬಾರಿಸಿದ ಸಾಲು ಸಾಲು ಭಾರತೀಯರು ಸಿಕ್ಕುತ್ತಾರೆ.

ಭಾರತ vs ವೆಸ್ಟ್ ಇಂಡೀಸ್ ಟೆಸ್ಟ್: ಅಂಕಿ ಅಂಶಗಳು ಹೇಳುವುದೇನು?ಭಾರತ vs ವೆಸ್ಟ್ ಇಂಡೀಸ್ ಟೆಸ್ಟ್: ಅಂಕಿ ಅಂಶಗಳು ಹೇಳುವುದೇನು?

ರಾಜ್ ಕೋಟ್ ನಲ್ಲಿ ಅಕ್ಟೋಬರ್ 4ರಂದು ನಡೆದ ಭಾರತ-ವೆಸ್ಟ್ ಇಂಡೀಸ್ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಮೊದಲ ಅಂತಾರಾಷ್ಟ್ರೀಯ ಟೆಸ್ಟ್ ಆಡಿದ್ದ ಭಾರತದ ಪೃಥ್ವಿ ಶಾ, ಚೊಚ್ಚಲ ಶತಕ (134 ರನ್) ಬಾರಿಸಿದ್ದರು. ಈ ಮೂಲಕ ಪೃಥ್ವಿ ಪಾದಾರ್ಪಣೆ ಟೆಸ್ಟ್ ನಲ್ಲಿ ಸೆಂಚುರಿ ಬಾರಿಸಿದ 15ನೇ ಭಾರತೀಯ ಆಟಗಾರನೆನಿಸಿದ್ದರು.

ಭಾರತ vs ವಿಂಡೀಸ್ ದ್ವಿತೀಯ ಏಕದಿನ ಪಂದ್ಯ ವಿಶಾಖಪಟ್ನಂಗೆ ಸ್ಥಳಾಂತರಭಾರತ vs ವಿಂಡೀಸ್ ದ್ವಿತೀಯ ಏಕದಿನ ಪಂದ್ಯ ವಿಶಾಖಪಟ್ನಂಗೆ ಸ್ಥಳಾಂತರ

ಟೆಸ್ಟ್ ಇತಿಹಾಸದಲ್ಲಿ 1933ನೇ ಇಸವಿಯಿಂದಲೇ ಭಾರತೀಯರು ಇಂಥದ್ದೊಂದು ಅಪೂರ್ವ ಕ್ಷಣಗಳಿಗೆ ಕಾರಣರಾಗಿದ್ದಿದೆ. ಟೆಸ್ಟ್ ಕ್ರಿಕೆಟ್ ಪುಟಗಳನ್ನು ತೆರೆದಾಗ ಅದರಲ್ಲಿ ಪೃಥ್ವಿಯನ್ನು ಹೊರತುಪಡಿಸಿ ಇನ್ನೂ 14 ಸಾಧಕರು ಕಾಣಿಸಿದರು. ಅವರೆಲ್ಲರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ..

1. ಲಾಲ ಅಮರ್ ನಾಥ್

1. ಲಾಲ ಅಮರ್ ನಾಥ್

ಪಾದಾರ್ಪಣೆ ಪಂದ್ಯದಲ್ಲೇ ಶತಕ ಬಾರಿಸಿದ ಮೊದಲ ಭಾರತೀಯರಾಗಿ ಲಾಲ ಅಮರನಾಥ್ ಅವರು ಗುರುತಿಸಿಕೊಂಡಿದ್ದಾರೆ. 1933 ಮುಂಬೈಯಲ್ಲಿ ನಡೆದಿದ್ದ ಪಂದ್ಯದಲ್ಲಿ ಅಮರನಾಥ್ ಇಂಗ್ಲೆಂಡ್ ವಿರುದ್ಧ 118 ರನ್ ಬಾರಿಸಿದ್ದರು.

2. ದೀಪಕ್ ಶೋಧನ್

2. ದೀಪಕ್ ಶೋಧನ್

ಗುಜರಾತ್ ನ ಎಡಗೈ ಬ್ಯಾಟ್ಸ್ಮನ್ ದೀಪಕ್ ಶೋಧನ್ ಅವರು 1952ರಲ್ಲಿ ಕೋಲ್ಕತ್ತಾದಲ್ಲಿ ನಡೆದಿದ್ದ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ 110 ರನ್ ಬಾರಿಸಿ ಕ್ರೀಡಾಭಿಮಾನಿಗಳ ಗಮನ ಸೆಳೆದಿದ್ದರು.

3. ಎಜಿ ಕೃಪಾಲ್ ಸಿಂಗ್

3. ಎಜಿ ಕೃಪಾಲ್ ಸಿಂಗ್

ಮದ್ರಾಸ್ ಮತ್ತು ಹೈದರಾಬಾದ್ ತಂಡಗಳಿಗಾಗಿ ಆಡಿದ್ದ ಎಜಿ ಕೃಪಾಲ್ ಸಿಂಗ್ ಅವರು ತವರು ನೆಲ ಹೈದರಾಬಾದ್ ನಲ್ಲಿ ನಡೆದಿದ್ದ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಭರ್ತಿ ನೂರು ರನ್ ಗಳಿಸಿದ್ದರು.

4. ಅಬ್ಬಾಸ್ ಆಲಿ ಬೇಗ್

4. ಅಬ್ಬಾಸ್ ಆಲಿ ಬೇಗ್

1959ರಲ್ಲಿ ಇಂಗ್ಲೆಂಡ್ ನ ಮ್ಯಾನ್ಚೆಸ್ಟರ್ ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದಿದ್ದ ಪಂದ್ಯದಲ್ಲಿ ಅಬ್ಬಾಸ್ ಆಲಿ ಬೇಗ್ 112 ರನ್ ಬಾರಿಸಿ ಭಾರತೀಯರಿಗೆ ಖುಷಿ ಹಂಚಿದ್ದರು.

5. ಹನುಮಂತ್ ಸಿಂಗ್

5. ಹನುಮಂತ್ ಸಿಂಗ್

ರಾಜಸ್ತಾನದವರಾದ ಹನುಮಂತ್ ಸಿಂಗ್ ಅವರು 1964ರಲ್ಲಿ ದಿಲ್ಲಿಯಲ್ಲಿ ನಡೆದಿದ್ದ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ 105 ರನ್ ಬಾರಿಸಿದ್ದರು.

6. ಜಿಆರ್ ವಿಶ್ವನಾಥ್

6. ಜಿಆರ್ ವಿಶ್ವನಾಥ್

ಕಾನ್ ಪುರದಲ್ಲಿ 1969ರಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದಿದ್ದ ಪಂದ್ಯದಲ್ಲಿ ಜಿಆರ್ ವಿಶ್ವ ನಾಥ್ 137 ರನ್ ಮೂಲಕ ಚೊಚ್ಚಲ ಪಂದ್ಯದಲ್ಲಿ ಶತಕ ಸಾಧನೆ ತೋರಿದ ಸಾಧನೆ ಮೆರೆದಿದ್ದರು.

7. ಸುರೀಂದರ್ ಅಮರ್ ನಾಥ್

7. ಸುರೀಂದರ್ ಅಮರ್ ನಾಥ್

ನ್ಯೂಜಿಲ್ಯಾಂಡ್ ವಿರುದ್ಧ 1976ರಲ್ಲಿ ಅಕ್ ಲ್ಯಾಂಡ್ ನಡೆದಿದ್ದ ಪಂದ್ಯದಲ್ಲಿ ಭಾರತದ ಸುರೀಂದರ್ ಅಮರನಾಥ್ ಅಮರ್ ನಾಥ್ 124 ರನ್ ಪೇರಿಸಿದ್ದರು. ಸುರೀಂದರ್ ಅವರು ಪಾದಾರ್ಪಣೆ ಪಂದ್ಯದಲ್ಲಿ ಮೊದಲು ಶತಕ ಸಾಧನೆ ತೋರಿದ್ದ ಲಾಲ ಅಮರ್ ನಾಥ್ ಅವರ ಪುತ್ರ.

8. ಮೊಹಮ್ಮದ್ ಅಜರುದ್ದೀನ್

8. ಮೊಹಮ್ಮದ್ ಅಜರುದ್ದೀನ್

ಹೈದರಾಬಾದ್ ನ ಸ್ಟೈಲಿಶ್ ಆಟಗಾರ ಮೊಹಮ್ಮದ್ ಅಜಾರುದ್ದೀನ್ ಅವರು 1984ರಲ್ಲಿ ಕೋಲ್ಕತ್ತಾದ ಈಡನ್ ಗಾರ್ಡನ್ ನಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ 110 ರನ್ ಬಾರಿಸಿದ್ದರು.

9. ಪ್ರವೀಣ್ ಅಮ್ರೆ

9. ಪ್ರವೀಣ್ ಅಮ್ರೆ

ಸೌತ್ ಆಫ್ರಿಕಾ ವಿರುದ್ಧ ಡರ್ಬನ್ ನಲ್ಲಿ 1992 ರಲ್ಲಿ ನಡೆದಿದ್ದ ಪಂದ್ಯದಲ್ಲಿ ಭಾರತದ ಪ್ರವೀಣ್ ಆಮ್ರೆ 103 ರನ್ ಪೇರಿಸಿದ್ದರು.

10. ಸೌರವ್ ಗಂಗೂಲಿ

10. ಸೌರವ್ ಗಂಗೂಲಿ

'ಗಾಡ್ ಆಫ್ ಆಫ್ ಸೈಡ್' ಖ್ಯಾತಿಯ ಸೌರವ್ ಗಂಗೂಲಿ ಅವರು 1996ರಲ್ಲಿ ಇಂಗ್ಲೆಂಡ್ ನ ಲಾರ್ಡ್ಸ್ ನಲ್ಲಿ ನಡೆದಿದ್ದ ಇಂಗ್ಲೆಂಡ್ ವಿರುದ್ಧದ ಪಾದಾರ್ಪಣೆ ಪಂದ್ಯದಲ್ಲಿ 131 ರನ್ ಸಿಡಿಸಿದ್ದರು.

11. ವೀರೇಂದ್ರ ಸೆಹ್ವಾಗ್

11. ವೀರೇಂದ್ರ ಸೆಹ್ವಾಗ್

ದೆಹಲಿಯ ಸ್ಫೋಟಕ ಬ್ಯಾಟ್ಸ್ಮನ್ ವೀರೇಂದ್ರ ಸೆಹ್ವಾಗ್ ಕೂಡ ಇಂಥದ್ದೊಂದು ಅಪರೂಪದ ಸಾಧನೆ ಮಾಡಿದ್ದರು. 2001ರಲ್ಲಿ ಬ್ಲೋಮ್ಫಾಂಟೈನ್ ನಲ್ಲಿ ಸೌತ್ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಸೆಹ್ವಾಗ್ 105 ರನ್ ಬಾರಿಸಿದ್ದರು.

12. ಸುರೇಶ್ ರೈನಾ

12. ಸುರೇಶ್ ರೈನಾ

ಎಡಗೈ ಬ್ಯಾಟ್ಸ್ಮನ್ ಸುರೇಶ್ ರೈನಾ ಅವರು ಕೊಲಂಬೋದಲ್ಲಿ 2010ರಲ್ಲಿ ನಡೆದಿದ್ದ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ 120 ರನ್ ನೊಂದಿಗೆ ಚೊಚ್ಚಲ ಅಂತಾರಾಷ್ಟ್ರೀಯ ಶತಕ ಗಳಿಸಿದ್ದರು.

13. ಶಿಖರ್ ಧವನ್

13. ಶಿಖರ್ ಧವನ್

ಏಷ್ಯಾ ಕಪ್ 2018ರಲ್ಲಿನ ಭಾರತದ ಆರಂಭಿಕ ಆಟಗಾರ ಶಿಖರ್ ಧವನ್ ಅವರು ಮೊಹಾಲಿಯಲ್ಲಿ 2013ರಲ್ಲಿ ನಡೆದಿದ್ದ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಭರ್ಜರಿ 187 ಬಾರಿಸಿದ್ದರು.

14. ರೋಹಿತ್ ಶರ್ಮಾ

14. ರೋಹಿತ್ ಶರ್ಮಾ

ಮುಂಬೈಯ ಸ್ಟೈಲಿಷ್ ಬ್ಯಾಟ್ಸ್ಮನ್ ರೋಹಿತ್ ಶರ್ಮಾ ಅವರು 2013ರಲ್ಲಿ ಕೋಲ್ಕತ್ತಾದಲ್ಲಿ ನಡೆದಿದ್ದ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ 127 ರನ್ ಗಳಿಸಿದ್ದರು.

Story first published: Friday, October 5, 2018, 13:05 [IST]
Other articles published on Oct 5, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X