ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ನ್ಯೂಜಿಲೆಂಡ್: ಪೃಥ್ವಿ ಶಾಗೆ ಕಾಲುನೋವು, ಅಭ್ಯಾಸಕ್ಕೆ ಅಲಭ್ಯ

Prithvi Shaw skips practice with swollen foot, call to be taken on Friday

ಕ್ರಿಸ್ಟ್‌ಚರ್ಚ್, ಫೆಬ್ರವರಿ 27: ಯುವ ಆರಂಭಿಕ ಬ್ಯಾಟ್ಸ್‌ಮನ್ ಪೃಥ್ವಿ ಶಾ ಗುರುವಾರದ (ಫೆಬ್ರವರಿ 27) ಅಭ್ಯಾಸವನ್ನು ತಪ್ಪಿಸಿಕೊಂಡಿದ್ದಾರೆ. ಕಾಲುನೋವಿಗೀಡಾಗಿರುವ ಪೃಥ್ವಿಗೆ ನ್ಯೂಜಿಲೆಂಡ್ ವಿರುದ್ಧದ ದ್ವಿತೀಯ ಟೆಸ್ಟ್‌ಗಾಗಿ ಕ್ರಿಸ್ಟ್‌ಚರ್ಚ್ ಮೈದಾನದಲ್ಲಿ ಅಭ್ಯಾಸ ನಡೆಸಲಾಗಿಲ್ಲ. ಆದರೆ ಪಂದ್ಯದಲ್ಲಿ ಆಡುತ್ತಾರೋ ಇಲ್ಲವೋ ಎನ್ನವ ಬಗ್ಗೆ ಶುಕ್ರವಾರ ಸ್ಪಷ್ಟ ಮಾಹಿತಿ ಲಭಿಸಲಿದೆ.

ಟೆಸ್ಟ್ ರ‍್ಯಾಂಕಿಂಗ್ ಪಟ್ಟಿ: ಮೊದಲ ಸ್ಥಾನ ಕಳೆದುಕೊಂಡ ಕೊಹ್ಲಿ, ಬೂಮ್ರಾಗೂ ಶಾಕ್!ಟೆಸ್ಟ್ ರ‍್ಯಾಂಕಿಂಗ್ ಪಟ್ಟಿ: ಮೊದಲ ಸ್ಥಾನ ಕಳೆದುಕೊಂಡ ಕೊಹ್ಲಿ, ಬೂಮ್ರಾಗೂ ಶಾಕ್!

ಪೃಥ್ವಿಯ ಎಡಗಾಲು ನೋವಿನಿಂದಾಗಿ ಊದಿಕೊಂಡಿದೆ ಎಂದು ತಿಳಿದುಬಂದಿದೆ. ಹೀಗಾಗಿ ಪೃಥ್ವಿ ರಕ್ತ ಪರೀಕ್ಷೆಗೆ ಒಳಗಾಗುವುದರಲ್ಲಿದ್ದಾರೆ. ಒಟ್ಟಿನಲ್ಲಿ ದ್ವಿತೀಯ ಟೆಸ್ಟ್‌ನ ತಯಾರಿಯಲ್ಲಿರುವ ಭಾರತ ತಂಡ ನಿರ್ವಹಣಾ ಸಮಿತಿಗೆ ಆಟಗಾರರ ಈ ಗಾಯದ ಸಮಸ್ಯೆ ತಲೆನೋವಾಗಿದೆ. ಆರಂಭಿಕ ಪಂದ್ಯದಲ್ಲಿ ಆಡಿದ್ದ ಪೃಥ್ವಿ ಕ್ರಮವಾಗಿ 16, 14 ರನ್ ಗಳಿಸಿದ್ದರು.

ಭಾರತೀಯ ಮೂಲದ ಗೆಳತಿಯ ಜೊತೆ ಗ್ಲೆನ್ ಮ್ಯಾಕ್ಸ್‌ವೆಲ್ ನಿಶ್ಚಿತಾರ್ಥಭಾರತೀಯ ಮೂಲದ ಗೆಳತಿಯ ಜೊತೆ ಗ್ಲೆನ್ ಮ್ಯಾಕ್ಸ್‌ವೆಲ್ ನಿಶ್ಚಿತಾರ್ಥ

ಗಾಯದ ಕಾರಣದಿಂದಾಗಿ ಈಗಾಗಲೇ ಟೀಮ್ ಇಂಡಿಯಾದ ಪ್ರಮುಖ ಆಟಗಾರರು ಹೊರಗಿದ್ದಾರೆ. ಶಿಖರ್ ಧವನ್, ರೋಹಿತ್ ಶರ್ಮಾ, ಯುಜುವೇಂದ್ರ ಚಾಹಲ್, ಕೆಎಲ್ ರಾಹುಲ್ ಮೊದಲ ಟೆಸ್ಟ್ ನಲ್ಲಿ ಆಡಿರಲಿಲ್ಲ. ಈ ಪಂದ್ಯದಲ್ಲಿ ಭಾರತ 10 ವಿಕೆಟ್‌ ಸೋಲನುಭವಿಸಿತ್ತು.

'ಆ ಭಾರತೀಯ ಬೌಲರ್‌ನ ಕೆರಿಯರ್ ಅಂತ್ಯವಾಯ್ತು ಅಂದುಕೊಂಡಿದ್ದೆ' : ಮೆಕ್‌ಗ್ರಾಥ್'ಆ ಭಾರತೀಯ ಬೌಲರ್‌ನ ಕೆರಿಯರ್ ಅಂತ್ಯವಾಯ್ತು ಅಂದುಕೊಂಡಿದ್ದೆ' : ಮೆಕ್‌ಗ್ರಾಥ್

ಪೃಥ್ವಿ ಶಾ ರಕ್ತ ಪರೀಕ್ಷೆಯ ಫಲಿತಾಂಶ, ತಂಡದ ಫೇವರ್ ಆಗಿ ಬಂದರೆ ಬಹುಶಃ ಶುಕ್ರವಾರದ ತರಬೇತಿಯಲ್ಲಿ ಶಾ ಪಾಲ್ಗೊಳ್ಳುತ್ತಾರೆ. ಒಂದು ವೇಳೆ ಪೃಥ್ವಿ ಶಾ ತಂಡದಿಂದ ಹೊರಗುಳಿಯಬೇಕಾಗಿ ಬಂದರೆ, ಮಯಾಂಕ್ ಅಗರ್ವಾಲ್ ಜೊತೆ ಶುಬ್‌ಮಾನ್‌ ಗಿಲ್ ಆರಂಭಿಕರಾಗಿ ಆಡುವ ನಿರೀಕ್ಷೆಯಿದೆ.

Story first published: Thursday, February 27, 2020, 11:26 [IST]
Other articles published on Feb 27, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X