ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪೃಥ್ವಿ ಶಾ ಚೊಚ್ಚಲ ಪಂದ್ಯದಲ್ಲೇ ಶತಕ, ದಾಖಲೆಗಳು ಧ್ವಂಸ!

Prithvi Shaw youngest Indian to score a century on Test debut

ರಾಜ್ ಕೋಟ್, ಅಕ್ಟೋಬರ್ 04: ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನದಂದು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಭಾರತ ತಂಡ ಭರ್ಜರಿ ಪ್ರದರ್ಶನ ನೀಡುತ್ತಿದೆ. ಆರಂಭಿಕ ಆಟಗಾರನಾಗಿ ಮೊದಲ ಚೆಂಡು ಎದುರಿಸುವ ಮೂಲಕ ದಾಖಲೆ ಬರೆದ ಪೃಥ್ವಿ ಶಾ ಹಲವು ದಾಖಲೆಗಳನ್ನು ಧ್ವಂಸಗೊಳಿಸಿದ್ದಾರೆ.

18 ವರ್ಷ ವಯಸ್ಸು 329 ದಿನಗಳ ಪೃಥ್ವಿ ಶಾ ಅವರು 99 ಎಸೆತಗಳಲ್ಲಿ ತಮ್ಮ ಚೊಚ್ಚಲ ಶತಕ ಸಿಡಿಸಿದರು. ಇದಕ್ಕೂ ಮುನ್ನ ಅರ್ಧ ಶತಕ ಗಳಿಸಿದಾಗಲೇ ಒಂದು ದಾಖಲೆ ಮುರಿದಿದ್ದರು.

20 ವರ್ಷ 126 ದಿನಗಳ ಅಬ್ಬಾಸ್ ಅಲಿ ಬೇಗ್ ಹಾಗೂ ಗುಂಡಪ್ಪ ವಿಶ್ವನಾಥ್ (20 ವರ್ಷ, 276 ದಿನಗಳು) ಅವರು ಅರ್ಧಶತಕ ಗಳಿಸಿದ್ದ ಅತ್ಯಂತ ಕಿರಿಯ ಆಟಗಾರರಾಗಿದ್ದರು. ಈ ದಾಖಲೆಯನ್ನು ಪೃಥ್ವಿ ಶಾ ಮುರಿದರು. ಇದಾದ ಬಳಿಕ ಶತಕ ಸಿಡಿಸಿದರು.

1
44264

ಈ ಮೂಲಕ ಚೊಚ್ಚಲ ಪಂದ್ಯದಲ್ಲೇ ಶತಕ ಸಿಡಿಸಿದ ಭಾರತದ ಮೊಟ್ಟ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ. ಆರಂಭಿಕ ಆಟಗಾರ ಶಿಖರ್ ಧವನ್ ಅವರ ಅನುಪಸ್ಥಿತಿಯಲ್ಲಿ ಕೆಎಲ್ ರಾಹುಲ್ ಜತೆ ಆರಂಭಿಕ ಆಟಗಾರರಾಗಿ ಪೃಥ್ವಿ ಶಾ ಇಂದು ಕಣಕ್ಕಿಳಿದರು.

ಶಾಲಾ ದಿನಗಳಲ್ಲಿ 546 ರನ್ ಗಳಿಸಿ ದಾಖಲೆ, ದುಲೀಪ್ ಟ್ರೋಫಿ ಚೊಚ್ಚಲ ಪಂದ್ಯದಲ್ಲಿ ಶತಕ ಗಳಿಸಿದ್ದು, ರಣಜಿ ಚೊಚ್ಚಲ ಪಂದ್ಯದಲ್ಲಿ ಶತಕ, ಅಂಡರ್ 19 ವಿಶ್ವಕಪ್ ಗೆದ್ದ ಭಾರತ ತಂಡದ ನಾಯಕತ್ವ ವಹಿಸಿಕೊಂಡಿದ್ದು, ಹೀಗೆ ಪೃಥ್ವಿ ಶಾ ದಾಖಲೆಗಳ ಪಟ್ಟಿ ಬೆಳೆಯುತ್ತದೆ.

ಅತ್ಯಂತ ಕಿರಿಯ ಆಟಗಾರ

ಅತ್ಯಂತ ಕಿರಿಯ ಆಟಗಾರ

2007ರಲ್ಲಿ ಇಶಾಂತ್ ಶರ್ಮ ನಂತರ ಭಾರತದ ಪರ ಆಡಿದ ಅತ್ಯಂತ ಕಿರಿಯ ಆಟಗಾರ ಪೃಥ್ವಿ ಶಾ(18 ವರ್ಷ 329 ದಿನಗಳು). ಒಟ್ಟಾರೆ 13ನೇ ಕಿರಿಯ ಆಟಗಾರ.

ಆರಂಭಿಕ ಆಟಗಾರನಾಗಿ ಮೊದಲ ಚೆಂಡು ಎದುರಿಸುವ ಮೂಲಕ ದಾಖಲೆ ಬರೆದ ಪೃಥ್ವಿ ಶಾ ಹಲವು ದಾಖಲೆಗಳನ್ನು ಧ್ವಂಸಗೊಳಿಸಿದ್ದಾರೆ.

ಶತಕ ಸಿಡಿಸಿ ಬರೆದ ದಾಖಲೆಗಳು

* ಚೊಚ್ಚಲ ಪಂದ್ಯದಲ್ಲೇ ಶತಕ ಸಿಡಿಸಿದ ಭಾರತದ ಅತ್ಯಂತ ಕಿರಿಯ ಆಟಗಾರ.
* ಟೆಸ್ಟ್ ಇತಿಹಾಸದಲ್ಲಿ ತ್ವರಿತ ಗತಿಯಲ್ಲಿ ಶತಕ ಬಾರಿಸಿದ ಆಟಗಾರರ ಪೈಕಿ ಮೂರನೇ ಸ್ಥಾನ.
* ಭಾರತದ ಪರ ಆರಂಭಿಕನಾಗಿ ಕಣಕ್ಕಿಳಿದ ಎರಡನೇ ಅತ್ಯಂತ ಕಿರಿಯ ಆಟಗಾರ.
* ಮೊದಲ ಟೆಸ್ಟ್ ಪಂದ್ಯದಲ್ಲೇ ಶತಕ ಬಾರಿಸಿದ 15ನೇ ಭಾರತೀಯ ಆಟಗಾರ.

ತ್ವರಿತಗತಿ ಶತಕ ಚೊಚ್ಚಲ ಪಂದ್ಯ

ಮೊದಲ ಪಂದ್ಯದಲ್ಲೇ ಅತಿ ಕಡಿಮೆ ಎಸೆತಗಳಲ್ಲಿ ಶತಕ ಗಳಿಸಿದ ಆಟಗಾರರ ಪೈಕಿ ಭಾರತದ ಶಿಖರ್ ಧವನ್ ಈಗಲೂ ಅಗ್ರಸ್ಥಾನದಲ್ಲಿದ್ದಾರೆ. ಧವನ್ 85 ಎಸೆತಗಳಲ್ಲಿ ಶತಕ ಸಿಡಿಸಿದ್ದರು.
* 85 ಎಸೆತಗಳು : ಶಿಖರ್ ಧವನ್
* 93 ಡ್ವಾಯ್ನೆ ಸ್ಮಿತ್
* 99 ಪೃಥ್ವಿ ಶಾ

ವಿಜಯ್ ಮೆಹ್ರಾ ಭಾರತದ ಪರ ಕಿರಿಯ ಆಟಗಾರ

17 ವರ್ಷ 265ದಿನಗಳಾಗಿದ್ದ ವಿಜಯ್ ಮೆಹ್ರಾ ಅವರು ನ್ಯೂಜಿಲೆಂಡ್ ವಿರುದ್ಧ ಆಡುವ ಮೂಲಕ ಭಾರತದ ಪರ ಟೆಸ್ಟ್ ಆಡಿದ ಕಿರಿಯ ಆಟಗಾರ ಎನಿಸಿಕೊಂಡಿದ್ದರು. ಈಗ ಪೃಥ್ವಿ ಶಾ ಅವರು ಎರಡನೇ ಅತ್ಯಂತ ಕಿರಿಯ ಆಟಗಾರರಾದರು.

ಚೊಚ್ಚಲ ಪಂದ್ಯ ಶತಕ

ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಶತಕ ಬಾರಿಸಿದ್ದಾರೆ. ರಣಜಿ ಟ್ರೋಫಿ, ದುಲೀಪ್ ಟ್ರೋಫಿಯ ಮೊದಲ ಪಂದ್ಯದಲ್ಲೂ ಪೃಥ್ವಿ ಶಾ ಶತಕ ಬಾರಿಸಿದ್ದಾರೆ. ಗುಂಡಪ್ಪ ವಿಶ್ವನಾಥ್ ಈ ದಾಖಲೆ ಮಾಡಿದ್ದಾರೆ. ಸೆಹ್ವಾಗ್ ಅವರು ರಣಜಿ ಎರಡನೇ ಟೆಸ್ಟ್ ಪಂದ್ಯದಲ್ಲಿ ಶತಕ ಗಳಿಸಿದ್ದರು.

ಇನ್ನಷ್ಟು ದಾಖಲೆಗಳು

* ಟೆಸ್ಟ್ ಶತಕ ಗಳಿಸಿದ 2ನೇ ಅತ್ಯಂತ ಕಿರಿಯ ಭಾರತೀಯ ಆಟಗಾರ.
* ಚೊಚ್ಚಲ ಪಂದ್ಯದಲ್ಲಿ ಶತಕ ಗಳಿಸಿದವರ ಪೈಕಿ 3ನೇ ತ್ವರಿತಗತಿ ಶತಕ.
* ಚೊಚ್ಚಲ ಪಂದ್ಯದಲ್ಲಿ ಶತಕ ಗಳಿಸಿದ ಮೂರನೇ ಮುಂಬೈ ಬ್ಯಾಟ್ಸ್ ಮನ್.
* ಮೊದಲ ಪಂದ್ಯದಲ್ಲಿ ಶತಕ ಗಳಿಸಿದ ನಾಲ್ಕನೇ ಕಿರಿಯ ಆಟಗಾರ

Story first published: Thursday, October 4, 2018, 13:39 [IST]
Other articles published on Oct 4, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X