ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅಂಡರ್ 19 ವಿಶ್ವಕಪ್‌ಗಾಗಿ ದ.ಆಫ್ರಿಕಾ ತಲುಪಿದ ಭಾರತ ತಂಡ: ವೀಡಿಯೋ

Under 19 team India departs for the world cup | U19 | INDIA | ONEINDIaA
Priyam Garg-led Indian team leaves for Under-19 World Cup in South Africa

ಕೇಪ್‌ಟೌನ್, ಡಿಸೆಂಬರ್ 21: ಮುಂದಿನ ವರ್ಷ ಜನವರಿಯಿಂದ ಆರಂಭಗೊಳ್ಳಲಿರುವ ಅಂಡರ್ 19 ವಿಶ್ವಕಪ್‌ ಟೂರ್ನಿಗಾಗಿ ಪ್ರಿಯಾಮ್ ಗರ್ಗ್ ನಾಯಕತ್ವದ ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾ ತಲುಪಿದೆ. ಈ ಟೂರ್ನಿ ಜನವರಿ 17ಯಿಂದ ಆರಂಭಗೊಳ್ಳಲಿದೆ. ಅಂಡರ್ 19 ವಿಶ್ವಕಪ್‌ನಲ್ಲಿ ಭಾರತವೇ ಹಾಲಿ ಚಾಂಪಿಯನ್.

ಪ್ಯಾಟ್ ಕಮಿನ್ಸ್ ಅತ್ಯಧಿಕ ಬೆಲೆಗೆ ಮಾರಾಟವಾಗಿದಕ್ಕೆ ಕಾರಣ ಹೇಳಿದ ಗಂಗೂಲಿಪ್ಯಾಟ್ ಕಮಿನ್ಸ್ ಅತ್ಯಧಿಕ ಬೆಲೆಗೆ ಮಾರಾಟವಾಗಿದಕ್ಕೆ ಕಾರಣ ಹೇಳಿದ ಗಂಗೂಲಿ

'ಜನವರಿ 17ಯಿಂದ ಆರಂಭಗೊಳ್ಳಲಿರುವ ಅಂಡರ್ 19 ವಿಶ್ವಕಪ್‌ ತಯಾರಿಗಾಗಿ ನಮ್ಮ ಹುಡುಗರು ಈ ದಿನ ದಕ್ಷಿಣ ಆಫ್ರಿಕಾಕ್ಕೆ ಹೊರಟಿದ್ದಾರೆ,' ಎಂದು ಬಿಸಿಸಿಐ ಶುಭಕೋರಿ ಟ್ವೀಟ್ ಮಾಡಿದೆ. 13ನೇ ಆವೃತ್ತಿಯ ಅಂಡರ್ 19 ವಿಶ್ವಕಪ್‌ನಲ್ಲಿ ಒಟ್ಟ 16 ತಂಡಗಳು 4 ಗುಂಪುಗಳಲ್ಲಿ ಆಡಲಿವೆ.

ಪಾನೀಪೂರಿ ಮಾರಿ ಮಿಲಿಯನೇರ್ ಸಾಲಿಗೆ ಬಂದ ಕ್ರಿಕೆಟಿಗನ ಹಿಸ್ಟರಿ-ಮಿಸ್ಟರಿ!ಪಾನೀಪೂರಿ ಮಾರಿ ಮಿಲಿಯನೇರ್ ಸಾಲಿಗೆ ಬಂದ ಕ್ರಿಕೆಟಿಗನ ಹಿಸ್ಟರಿ-ಮಿಸ್ಟರಿ!

ಹಾಲಿ ಚಾಂಪಿಯನ್ ಭಾರತ ತಂಡ ಗ್ರೂಪ್‌ 'ಎ'ಯಲ್ಲಿದೆ. ಇದೇ ಗ್ರೂಪ್‌ನಲ್ಲಿ ಮೊದಲ ಬಾರಿ ಅರ್ಹತೆ ಗಿಟ್ಟಿಸಿಕೊಂಡಿರುವ ಜಪಾನ್, ನ್ಯೂಜಿಲೆಂಡ್ ಮತ್ತು ಶ್ರೀಲಂಕಾ ತಂಡಗಳಿವೆ. ಟೂರ್ನಿಯಲ್ಲಿ ಟಾಪ್‌ 2ರಲ್ಲಿ ಉಳಿಯುವ ತಂಡಗಳು ಸೂಪರ್ ಲೀಗ್ ಹಂತಕ್ಕೆ ಅರ್ಹತೆ ಪಡೆದುಕೊಳ್ಳಲಿದೆ.

ವಿಶ್ವಕಪ್‌ ನಿಜವಾದ ಸ್ಪರ್ಧೆ ಆರಂಭಕ್ಕೂ ಮುನ್ನ ಭಾರತ ಯುವ ತಂಡ ದಕ್ಷಿಣ ಆಫ್ರಿಕಾ ಅಂಡರ್ 19 ತಂಡದ ವಿರುದ್ಧ 3 ಏಕದಿನ ಪಂದ್ಯಗಳನ್ನಾಡಲಿದೆ. ಅದಾಗಿ ದಕ್ಷಿಣ ಆಫ್ರಿಕಾ ಅಂಡರ್ 19, ಭಾರತ ಅಂಡರ್ 19, ಜಿಂಬಾಬ್ವೆ ಅಂಡರ್ 19, ನ್ಯೂಜಿಲೆಂಡ್ ಅಂಡರ್ 19 ತಂಡಗಳ ನಡುವೆ ಚತುರ್ಭುಜ ಸರಣಿ ನಡೆಯಲಿದೆ.

ಕ್ರಿಕೆಟ್ ಬೇಲ್ಸ್ ಹಿಡಿದು ಹರಾಜುಕೂಗಿದ ವ್ಯಕ್ತಿಯ ಹಿಂದಿನ ಕುತೂಹಲಕಾರಿ ಮಾಹಿತಿಕ್ರಿಕೆಟ್ ಬೇಲ್ಸ್ ಹಿಡಿದು ಹರಾಜುಕೂಗಿದ ವ್ಯಕ್ತಿಯ ಹಿಂದಿನ ಕುತೂಹಲಕಾರಿ ಮಾಹಿತಿ

ಅಂಡರ್ -19 ವಿಶ್ವಕಪ್‌ಗಾಗಿ ಭಾರತೀಯ ತಂಡ: ಪ್ರಿಯಾಮ್ ಗರ್ಗ್ (ನಾಯಕ), ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ದಿವ್ಯಾಂಶ್ ಸಕ್ಸೇನಾ, ಧ್ರುವ್ ಚಂದ್ ಜುರೆಲ್ (ಉಪನಾಯಕ & ವಿಕೆ), ಶಾಶ್ವತ್ ರಾವತ್, ದಿವ್ಯಾಂಶ್ ಜೋಶಿ, ಶುಭಾಂಗ್ ಹೆಗ್ಡೆ, ರವಿ ಬಿಷ್ನೋಯ್, ಆಕಾಶ್ ಸಿಂಗ್ , ಕಾರ್ತಿಕ್ ತ್ಯಾಗಿ, ಅಥರ್ವ ಅಂಕೋಲೆಕರ್, ಕುಮಾರ್ ಕುಶಾಗ್ರಾ (ವಿಕೆ), ಸುಶಾಂತ್ ಮಿಶ್ರಾ, ವಿದ್ಯಾಧರ್ ಪಾಟೀಲ್.

Story first published: Saturday, December 21, 2019, 10:43 [IST]
Other articles published on Dec 21, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X