ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪ್ರಿಯಾಮ್ ಶತಕ, ದ.ಆಫ್ರಿಕಾ ಯು-19 ವಿರುದ್ಧ ಭಾರತ ಯು-19ಗೆ ಜಯ

Priyam’s 110 sets up India U-19 team’s 66-run win over SA

ಡರ್ಬನ್, ಜನವರಿ 4: ಪ್ರಿಯಾಮ್ ಗರ್ಗ್ ನಾಯಕನ ಆಟದ ನೆರವಿನಿಂದ ದಕ್ಷಿಣ ಆಫ್ರಿಕಾ ಅಂಡರ್ 19 ವಿರುದ್ಧದ ಚತುರ್ಭುಜ ಏಕದಿನ ಸರಣಿಯಲ್ಲಿ ಭಾರತ ಅಂಡರ್ 19 ತಂಡ 66 ರನ್ ಜಯ ಗಳಿಸಿದೆ. ಪ್ರಿಯಾಮ್ ಶತಕ ಬಾರಿಸಿ ಬ್ಯಾಟಿಂಗ್‌ನಲ್ಲಿ ಬೆಂಬಲವಿತ್ತರೆ, ಸುಶಾಂತ್ ಮಿಶ್ರಾ 4 ವಿಕೆಟ್‌ಗಳನ್ನು ಉರುಳಿಸಿ ಬೌಲಿಂಗ್ ವಿಭಾಗದಲ್ಲಿ ಬಲವಾಗಿ ನಿಂತರು.

ಮೊದಲ ರನ್‌ಗೆ 45 ನಿಮಿಷ,39 ಎಸೆತ; ಪ್ರೇಕ್ಷಕರಿಂದ ಎದ್ದುನಿಂತು ಚಪ್ಪಾಳೆ ಗಿಟ್ಟಿಸಿದ ಸ್ಟೀವ್ ಸ್ಮಿತ್ಮೊದಲ ರನ್‌ಗೆ 45 ನಿಮಿಷ,39 ಎಸೆತ; ಪ್ರೇಕ್ಷಕರಿಂದ ಎದ್ದುನಿಂತು ಚಪ್ಪಾಳೆ ಗಿಟ್ಟಿಸಿದ ಸ್ಟೀವ್ ಸ್ಮಿತ್

ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿದ ಭಾರತ ಅಂಡರ್ 19 ತಂಡದಿಂದ ಯಶಸ್ವಿ ಜೈಸ್ವಾಲ್ 13, ತಿಲಕ್ ವರ್ಮಾ 42, ಪ್ರಿಯಾಮ್ ಗರ್ಗ್ 110 (103 ಎಸೆತ), ಧೃವ್ ಜುರೇಲ್ 65, ಶಾಶ್ವತ್ ರಾವತ್ 14 ರನ್‌ ಕೊಡುಗೆಯಿತ್ತಿದ್ದರಿಂದ ಭಾರತ 50 ಓವರ್‌ ಮುಕ್ತಾಯಕ್ಕೆ 5 ವಿಕೆಟ್ ನಷ್ಟದಲ್ಲಿ 264 ರನ್ ಮಾಡಿತು.

ರಣಜಿ ಟ್ರೋಫಿಯಲ್ಲಿ ಅಂಪೈರ್ ನಿಂದಿಸಿ ಗುಲ್ಲೆಬ್ಬಿಸಿದ ಶುಬ್‌ಮಾನ್ ಗಿಲ್!ರಣಜಿ ಟ್ರೋಫಿಯಲ್ಲಿ ಅಂಪೈರ್ ನಿಂದಿಸಿ ಗುಲ್ಲೆಬ್ಬಿಸಿದ ಶುಬ್‌ಮಾನ್ ಗಿಲ್!

ಗುರಿ ಬೆನ್ನತ್ತಿದ್ದ ದಕ್ಷಿಣ ಆಫ್ರಿಕಾ ಅಂಡರ್ 19 ತಂಡದಿಂದ ಮಂಜೆ ಲಿವರ್ಟ್ 13, ಆಂಡ್ರ್ಯೂ ಲೌ 45, ಜೋನಾಥನ್ ಬರ್ಡ್ 22, ಖಾನ್ಯ ಕೊಟಾನಿ 13, ನಾಯಕ ಬ್ರೈಸ್ ಪಾರ್ಸನ್ಸ್ 57, ಅಚಿಲ್ಲೆ ಕ್ಲೋಟೆ 11, ಮೊಂಡ್ಲಿ ಖುಮಾಲೊ 10 ರನ್‌ ಸೇರ್ಪಡೆಯೊಂದಿಗೆ 50 ಓವರ್ ಮುಕ್ತಾಯಕ್ಕೆ 9 ವಿಕೆಟ್ ನಷ್ಟದಲ್ಲಿ 198 ರನ್ ಪೇರಿಸಲಷ್ಟೇ ಶಕ್ತವಾಯ್ತು.

2004ರ ಪಾಕಿಸ್ತಾನ ವಿರುದ್ಧದ ಐತಿಹಾಸಿಕ ಸರಣಿಗೆ ಗಂಗೂಲಿಯೇ ಕಾರಣ; ರಶೀದ್ ಲತೀಫ್2004ರ ಪಾಕಿಸ್ತಾನ ವಿರುದ್ಧದ ಐತಿಹಾಸಿಕ ಸರಣಿಗೆ ಗಂಗೂಲಿಯೇ ಕಾರಣ; ರಶೀದ್ ಲತೀಫ್

ಭಾರತದ ಇನ್ನಿಂಗ್ಸ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡದ ಮೊಂಡ್ಲಿ ಖುಮಾಲೊ 53 ರನ್‌ಗೆ 4, ಅಚಿಲ್ಲೆ ಕ್ಲೋಟೆ 1 ವಿಕೆಟ್ ಪಡೆದು ಗಮನ ಸೆಳೆದರೆ, ದಕ್ಷಿಣ ಆಫ್ರಿಕಾ ಇನ್ನಿಂಗ್ಸ್‌ನಲ್ಲಿ ಭಾರತದ ಸುಶಾಂತ್ ಮಿಶ್ರಾ 48ಕ್ಕೆ 4, ರವಿ ಬಿಷ್ಣೋಯ್ 2, ಕಾರ್ತಿಕ್ ತ್ಯಾಗಿ, ಅಥರ್ವ ಅಂಕೋಲೆಕರ್, ತಿಲಕ್ ವರ್ಮಾ ತಲಾ 1 ವಿಕೆಟ್ ಪಡೆದರು. ಪ್ರಿಯಾಮ್ ಗರ್ಗ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.

Story first published: Saturday, January 4, 2020, 10:51 [IST]
Other articles published on Jan 4, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X