ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪ್ರೊ ಕಬಡ್ಡಿ: ಪಿಂಕ್‌ ಪ್ಯಾಂಥರ್ಸ್‌ ಪಂಚ್‌ಗೆ ಬೆಚ್ಚಿಬಿದ್ದ ಯು ಮುಂಬಾ

Pro Kabaddi League 2019: Jaipur Pink Panthers beat U Mumba by 42-23

ಹೈದರಾಬಾದ್‌, ಜುಲೈ 22: ಚೊಚ್ಚಲ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ ಚಾಂಪಿಯನ್ಸ್‌ ಜೈಪುರ್‌ ಪಿಂಕ್‌ ಪ್ಯಾಂಥರ್ಸ್‌ ತಂಡದ ಅಧಿಕಾರಯುತ ಪ್ರದರ್ಶನದ ಎದುರು ತಬ್ಬಿಬ್ಬಾದ ಮಾಜಿ ಚಾಂಪಿಯನ್ಸ್‌ ಯು ಮುಂಬಾ ತಂಡ ಹೀನಾಯ ಸೋಲುಂಡಿದೆ.

ಇಲ್ಲಿನ ಗಚ್ಚಿಬೌಲಿ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಮೊದಲ ಪಂದ್ಯದಲ್ಲಿ ಆಲ್‌ರೌಂಡರ್‌ ದೀಪಕ್‌ ನಿವಾಸ್‌ ಹುಡ್ಡಾ (11) ಅವರ ಮಿಂಚಿನ ರೇಡ್‌ಗಳೊಂದಿಗೆ ಸಂಪೂರ್ಣ ಪ್ರಾಬಲ್ಯ ಮೆರೆದ ಪಿಂಕ್‌ ಪ್ಯಾಂಥರ್ಸ್‌ 42-23 ಅಂಕಗಳಿಂದ ಯು ಮಂಬಾ ಪಡೆಯನ್ನು ಬೇಟೆಯಾಡಿ 7ನೇ ಆವೃತ್ತಿಯ ಪ್ರೊ ಕಬಡ್ಡಿಯಲ್ಲಿ ಶುಭಾರಂಭ ಮಾಡಿತು.

ಪ್ರೊ ಕಬಡ್ಡಿ ಸೀಸನ್‌ 7: ಈ ಬಾರಿ ಮಿಂಚಬಲ್ಲ ಟಾಪ್‌ 5 ರೇಡರ್‌ಗಳು ಇವರುಪ್ರೊ ಕಬಡ್ಡಿ ಸೀಸನ್‌ 7: ಈ ಬಾರಿ ಮಿಂಚಬಲ್ಲ ಟಾಪ್‌ 5 ರೇಡರ್‌ಗಳು ಇವರು

ಕ್ಯಾಪ್ಟನ್‌ ದೀಪಕ್‌ ನಿವಾಸ್‌ಗೆ ಉತ್ತಮ ಸಾಥ್‌ ನೀಡಿದ ನಿತಿನ್‌ ರಾವಲ್‌ (7) ಮತ್ತು ದೀಪಕ್‌ ನರ್ವಾಲ್‌ (6) ಅಂಕಗಳನ್ನು ಕಲೆಹಾಕುವ ಮೂಲಕ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು. ಡಿಫೆನ್ಸ್‌ ವಿಭಾಗದಲ್ಲಿ ತಂಡಕ್ಕೆ ಭದ್ರ ಕೋಟೆಯಾಗಿ ನಿಂತ ಅಮಿತ್‌ ಹುಡ್ಡಾ 7 ಟ್ಯಾಕಲ್‌ ಪ್ರಯತ್ನಗಳಿಂದ 5 ಅಂಕಗಳನ್ನು ಗಳಿಸಿ ಅತ್ಯುತ್ತಮ ಡಿಫೆಂಡರ್‌ ಎನಿಸಿಕೊಂಡರು. ಅವರಿಗೆ ವಿಶಾಲ್‌ (3) ಉತ್ತಮವಾಗಿ ಜೊತೆಯಾದರು.

ಮತ್ತೊಂದೆಡೆ ಇರಾನ್‌ ಆಟಗಾರ ಫಝಲ್‌ ಅತ್ರಾಚಲಿ ಅವರ ಸಾರಥ್ಯದಲ್ಲಿ ಕಣಕ್ಕಿಳಿದ ಮುಂಬಾ ಪಡೆ ತನ್ನ ಖದರ್‌ ಕಳೆದುಕೊಂಡಂತೆ ಕಂಡಿತು. ಎದುರಾಳಿಯ ಆಕ್ರಮಣಕಾರಿ ಆಟದ ಎದುರು ಮುಂಬೈ ತಂಡ ನಿರುತ್ತರವಾಗಿತ್ತು. ಡಿಫೆನ್ಸ್‌ನಲ್ಲಿ ಎತ್ತಿದ ಕೈ ಆಗಿರುವ ಫಝಲ್‌ ಗಳಿಸಿದ್ದು ಕೇವಲ 2 ಅಂಕಗಳನ್ನು ಮಾತ್ರ. ಆದರೂ ಅಲ್ಪ ಹೋರಾಟ ನಡೆಸಿದ ರೇಡರ್‌ ಅಭಿಷೇಕ್‌ ಸಿಂಗ್‌ 7 ಅಂಕಗಳನ್ನು ಗಳಿಸಿದರು. ಕೊರಿಯಾದ ಆಟಗಾರ ಡಾಂಗ್‌ ಲೀ 6 ಅಂಕಗಳ ಕಾಣಿಕೆ ನೀಡಿದರು.

ಟೆನಿಸ್‌ ಬಾಲ್‌ ಕ್ರಿಕೆಟರ್‌ಗೆ ಇಂದು ಟೀಮ್‌ ಇಂಡಿಯಾ ಟಿಕೆಟ್‌!ಟೆನಿಸ್‌ ಬಾಲ್‌ ಕ್ರಿಕೆಟರ್‌ಗೆ ಇಂದು ಟೀಮ್‌ ಇಂಡಿಯಾ ಟಿಕೆಟ್‌!

ಪಂದ್ಯದ ಹಾಫ್‌ ಟೈಮ್‌ಗೆ 22-10 ಅಂಕಗಳಿಂದ ಮೇಲುಗೈ ಸಾಧಿಸಿದ್ದ ಪ್ಯಾಂಥರ್ಸ್‌ ದ್ವಿತೀಯಾರ್ಧದಲ್ಲೂ ಮುನ್ನಡೆ ಕಾಯ್ದುಕೊಳ್ಳುವ ಮೂಲಕ ಸುಲಭವಾಗಿ ಗೆದ್ದು ಅಂಕಪಟ್ಟಿಯಲ್ಲಿ ಖಾತೆ ತೆರೆಯಿತು.

ಬುಧವಾರ ನಡೆಯಲಿರುವ ಪಂದ್ಯಗಳಲ್ಲಿ ಮೊದಲಿಗೆ ಯು.ಪಿ ಯೋಧಾ ಮತ್ತು ಬೆಂಗಾಲ್‌ ವಾರಿಯರ್ಸ್‌ ಮುಖಾಮುಖಿಯಾಗಲಿದ್ದು, ಎರಡನೇ ಪಂದ್ಯದಲ್ಲಿ ಟೆಲುಗು ಟೈಟನ್ಸ್‌ ಮತ್ತು ದಬಾಂಗ್‌ ಡೆಲ್ಲಿ ತಂಡಗಳು ಪೈಪೋಟಿ ನಡೆಸಲಿವೆ.

ಸ್ಟೀಲರ್ಸ್‌ಗೆ ಶರಣಾದ ಪಲ್ಟನ್‌
ಸೋಮವಾರ ನಡೆದ ಎರಡನೇ ಪಂದ್ಯದಲ್ಲಿ ಧರ್ಮರಾಜ್‌ ಚೇರಲಾಥನ್‌ ಅವರ ನಾಯಕತ್ವದಲ್ಲಿ ಭರ್ಜರಿ ಪ್ರದರ್ಶನ ನೀಡಿದ ಹರಿಯಾಣ ಸ್ಟೀಲರ್ಸ್‌ ತಂಡ 34-24 ಅಂಕಗಳ ಅಂತರದಲ್ಲಿ ಅನೂಪ್‌ ಕುಮಾರ್‌ ಮಾರ್ಗದರ್ಶನದ ಪುಣೇರಿ ಪಲ್ಟನ್‌ ತಂಡವನ್ನು ಬಗ್ಗುಬಡಿಯಿತು. ಸ್ಟೀಲರ್ಸ್‌ ಪರ ಯುವ ರೇಡರ್‌ ನವೀನ್‌ ಒಟ್ಟು 12 ಅಂಕಗಳನ್ನು ಗಳಿಸುವ ಮೂಲಕ ಜಯದ ರೂವಾರಿ ಎನಿಸಿದರು. ಈ ಪಂದ್ಯದೊಂದಿಗೆ ಧರ್ಮರಾಜ್‌ ಪ್ರೊ ಕಬಡ್ಡಿ ಲೀಗ್‌ನಲ್ಲಿ 100ನೇ ಪಂದ್ಯವನ್ನಾಡಿದ ಸಾಧನೆ ಮಾಡಿದ್ದಾರೆ.

Story first published: Tuesday, July 23, 2019, 21:11 [IST]
Other articles published on Jul 23, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X