ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೊಹ್ಲಿ ಸಾರ್ವಕಾಲಿಕ ಶ್ರೇಷ್ಠ ಏಕದಿನ ಆಟಗಾರ ಎಂದ ಆಸಿಸ್ ಕ್ಯಾಪ್ಟನ್ ಫಿಂಚ್

Probably the best one-day player of all time Aaron Finch on Virat Kohli

ಆಸ್ಟ್ರೇಲಿಯಾ ಹಾಗೂ ಭಾರತ ತಂಡಗಳು ಏಕದಿನ ಸರಣಿಯಲ್ಲಿ ಕಾದಾಡಲು ಇನ್ನು ಕೆಲ ಗಂಟೆಗಳಷ್ಟೇ ಬಾಕಿಯಿದೆ. ಸುದೀರ್ಘ ಮೂರು ತಿಂಗಳ ಕಾಲದ ಈ ಸರಣಿಯಲ್ಲಿ ಮೊದಲಿಗೆ 3 ಪಂದ್ಯಗಳ ಏಕದಿನ ಸರಣಿ ನಡೆಯಲಿದೆ. ಇದರ ಆರಂಭಕ್ಕೂ ಮುನ್ನ ಆಸ್ಟ್ರೇಲಿಯಾದ ನಾಯಕ ಆರೋನ್ ಫಿಂಚ್ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯನ್ನು ಹೊಗಳಿ ಮಾತನಾಡಿದ್ದಾರೆ.

ಇತ್ತೀಚೆಗೆ ನಡೆದ ಐಪಿಎಲ್‌ನಲ್ಲಿ ಆಸ್ಟ್ರಲಿಯಾ ಹಾಗೂ ಟೀಮ್ ಇಂಡಿಯಾ ನಾಯಕರಿಬ್ಬರೂ ಒಂದೇ ತಂಡದಲ್ಲಿದ್ದು ಡ್ರೆಸ್ಸಿಂಗ್ ರೂಮ್ ಹಂಚಿಕೊಂಡಿದ್ದರು. ಈ ಹಾಗಾಗಿ ಈ ಇಬ್ಬರ ನಡುವೆ ಉತ್ತಮ ಬಾಂಧವ್ಯ ಬೆಳೆದಿದೆ. ಏಕದಿನ ಸರಣಿಯ ಆರಂಭಕ್ಕೂ ಮುನ್ನ ಆಸ್ಟ್ರೇಲಿಯಾದ ನಾಯಕ ವಿರಾಟ್ ಕೊಹ್ಲಿಯನ್ನು ಬಹುಶಃ ಆತ ಏಕದಿನ ಕ್ರಿಕೆಟ್‌ನ ಸರ್ವಕಾಲಿಕ ಶ್ರೇಷ್ಠ ಆಟಗಾರ ಎಂದು ಕರೆದಿದ್ದಾರೆ.

ಇಂಡೋ-ಆಸಿಸ್ 1st ODI: ಸಂಭಾವ್ಯ ತಂಡ, ನೇರಪ್ರಸಾರ, ಹವಾಮಾನ ವರದಿ ಹಾಗೂ ಪಿಚ್ ರಿಪೋರ್ಟ್ಇಂಡೋ-ಆಸಿಸ್ 1st ODI: ಸಂಭಾವ್ಯ ತಂಡ, ನೇರಪ್ರಸಾರ, ಹವಾಮಾನ ವರದಿ ಹಾಗೂ ಪಿಚ್ ರಿಪೋರ್ಟ್

"ಆತನ ದಾಖಲೆಯತ್ತ ನೀವು ಕನ್ಣುಹಾಯಿಸಿ. ಆತ ಎರಡನೇ ಸ್ಥಾನದಲ್ಲಿದ್ದಾನೆ. ಅದು ನಿಜಕ್ಕೂ ಅತ್ಯಂತ ಗಮನಾರ್ಹ ಸಂಗತಿ. ಹೀಗಾಗಿ ಈ ಸರಣಿಯಲ್ಲಿ ನಮ್ಮ ತಲೆಯಲ್ಲಿರಬೇಕಾದ ಸಂಗತಿಯೇನೆಂದರೆ ಆತನನ್ನು ನಿರಂತರವಾಗಿ ಔಟ್ ಮಾಡಲು ಪ್ರಯತ್ನಿಸುವುದಾಗಿದೆ" ಎಂದು ಫಿಂಚ್ ಹೇಳಿದ್ದಾರೆ.

"ಯಾವಾಗ ಆತನನ್ನು ಬಿಟ್ಟು ನೀವು ಇತರರತ್ತ ಗಮನ ಹರಿಸಿದರೆ ಆತತನ್ನು ಔಟ್ ಮಾಡುವ ಕೌಶಲ್ಯವನ್ನು ಕಳೆದುಕೊಳ್ಳಲಿದ್ದೀರಿ. ಆತನ ರಕ್ಷಾಕವಚದಲ್ಲಿ ಹೆಚ್ಚಿನ ನ್ಯೂನ್ಯತೆಗಳು ಇಲ್ಲ. ಬಹುಶಃ ಆತ ಸಾರ್ವಕಾಲಿಕ ಶ್ರೇಷ್ಠ ಏಕದಿನ ಆಟಗಾರ" ಎಂದು ಫಿಂಚ್ ಹೇಳಿಕೆಯನ್ನು ನೀಡಿದ್ದಾರೆ.

ನ್ಯೂಜಿಲೆಂಡ್ ವಿರುದ್ಧ ಸರಣಿ: ಪಾಕ್ ತಂಡದ 6 ಆಟಗಾರರಿಗೆ ಕೊರೊನಾ ವೈರಸ್ ದೃಢನ್ಯೂಜಿಲೆಂಡ್ ವಿರುದ್ಧ ಸರಣಿ: ಪಾಕ್ ತಂಡದ 6 ಆಟಗಾರರಿಗೆ ಕೊರೊನಾ ವೈರಸ್ ದೃಢ

ಸಿಡ್ನಿ ಕ್ರಿಕೆಟ್‌ ಗ್ರೌಂಡ್‌ನಲ್ಲಿ ಮೊದಲ ಏಕದಿನ ಪಂದ್ಯ ಶುಕ್ರವಾರ ನಡೆಯಲಿದೆ. ಇದು ಕೊರೊನಾ ವೈರಸ್‌ನಿಂದಾಗಿ ಕ್ರಿಕೆಟ್ ಚಟುವಟಿಕೆ ಸ್ಥಬ್ಧವಾದ ಬಳಿಕ ಟೀಮ್ ಇಂಡಿಯಾದ ಮೊದಲ ಕ್ರಿಕೆಟ್ ಸರಣಿಯೂ ಆಗಿದೆ. ಹೀಗಾಗಿ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಸಾಕಷ್ಟು ನಿರೀಕ್ಷೆಯನ್ನು ಈ ಸರಣಿಯ ಮೇಲೆ ಇಟ್ಟಿದ್ದಾರೆ.

Story first published: Thursday, November 26, 2020, 14:08 [IST]
Other articles published on Nov 26, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X