ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮೊದಲ ಟೆಸ್ಟ್ ನಲ್ಲಿ ಶತಕ ಸಿಡಿಸಿದ ಪೃಥ್ವಿ ಸಾಧನೆಯ ಪ್ರಮುಖಾಂಶಗಳು

Profile of Prithvi Shaw, 2nd youngest Indian to reach 100 mark

ರಾಜ್ ಕೋಟ್, ಅಕ್ಟೋಬರ್ 4: ರಾಜ್ ಕೋಟ್ ನಲ್ಲಿ ನಡೆಯುತ್ತಿರುವ ಭಾರತ vs ವೆಸ್ಟ್ ಇಂಡೀಸ್ ಟೆಸ್ಟ್ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಟೆಸ್ಟ್ ಗೆ ಪಾದಾರ್ಪಣೆ ಮಾಡಿದ ಪೃಥ್ವಿ ಶಾ ಚೊಚ್ಚಲ ಪಂದ್ಯದಲ್ಲೇ ಶತಕ ಬಾರಿಸಿದ್ದರು. ಈ ಮೂಲಕ ಪೃಥ್ವಿ ಮೊದಲ ಪಂದ್ಯದಲ್ಲಿ ಶತಕ ಬಾರಿಸಿದ ಮೂರನೇ ಅತೀ ಕಿರಿಯ ಆಟಗಾರ ಹೆಗ್ಗಳಿಕೆ ಪಾತ್ರರಾಗಿದ್ದಾರೆ.

ಪೃಥ್ವಿ ಶಾ ಚೊಚ್ಚಲ ಪಂದ್ಯದಲ್ಲೇ ಶತಕ, ದಾಖಲೆಗಳು ಧ್ವಂಸ!ಪೃಥ್ವಿ ಶಾ ಚೊಚ್ಚಲ ಪಂದ್ಯದಲ್ಲೇ ಶತಕ, ದಾಖಲೆಗಳು ಧ್ವಂಸ!

ದೇಸಿ ಕ್ರಿಕೆಟ್ ನಲ್ಲಿ ಮುಂಬೈ ತಂಡವನ್ನು ಪ್ರತಿನಿಧಿಸಿದ್ದ ಪೃಥ್ವಿ, ಆರಂಭಿರಾಗಿ ಇಳಿದು ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿ ಗಮನ ಸೆಳೆಯುತ್ತಿದ್ದವರು. ಇದೇ ಕಾರಣಕ್ಕೆ ಈ ಪ್ರತಿಭಾವಂತ ಆಟಗಾರನಿಗೆ ಗುಜರಾತ್ ನ ರಾಜ್ ಕೋಟ್ ನಲ್ಲಿ ನಡೆದ ಭಾರತ-ವೆಸ್ಟ್ ಇಂಡೀಸ್ ಆರಂಭಿಕ ಟೆಸ್ಟ್ ನಲ್ಲಿ ಕ್ಯಾಪ್ ನೀಡಿ ಟೀಮ್ ಇಂಡಿಯಾಕ್ಕೆ ಬರ ಮಾಡಿಕೊಳ್ಳಲಾಗಿತ್ತು.

ದೇಸೀ ಕ್ರಿಕೆಟ್ ನಲ್ಲಿ ಮಿಂಚಿದ್ದ ಯುವ ಆಟಗಾರ ಪೃಥ್ವಿ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲೂ ಮಿನುಗುವ ಆಶಾಭಾವನೆ ಮೂಡಿಸಿದ್ದಾರೆ. ಪೃಥ್ವಿ ಆಟ ನೋಡುತ್ತಿದ್ದರೆ ಎಳೆವೆಯಲ್ಲಿ ಕ್ರಿಕೆಟ್ ಅಂಗಣಕ್ಕಿಳಿದು ಭಾರತೀಯರ ಪ್ರೀತಿಗೆ ಪಾತ್ರರಾಗಿದ್ದ ದಿಗ್ಗಜ ಸಚಿನ್ ತೆಂಡೂಲ್ಕರ್, ಸ್ಫೋಟಕ ಬ್ಯಾಟ್ಸ್ಮನ್ ವೀರೇಂದ್ರ ಸೆಹ್ವಾಗ್ ನೆನಪಾಗುತ್ತಿದ್ದರು.

ಎಲ್ಲಾ ತಂಡಗಳಲ್ಲೂ ಮಿಂಚು

ಎಲ್ಲಾ ತಂಡಗಳಲ್ಲೂ ಮಿಂಚು

ಭಾರತ ಎ, ಡೆಲ್ಲಿ ಡೇರ್ ಡೆವಿಲ್ಸ್, ಭಾರತ ಅಂಡರ್ 19, ಮುಂಬೈ ಅಂಡರ್-14, 16, 19 ತಂಡಗಳ ಪರ ಆಡಿದ್ದ ಬಲ ಗೈ ಬ್ಯಾಟ್ಸ್ಮನ್ ಪೃಥ್ವಿ, ಪ್ರತಿನಿಧಿಸಿದ್ದ ಎಲ್ಲಾ ತಂಡಗಳಲ್ಲೂ ಆರಂಭಿಕರಾಗಿ ಮಿಂಚಿದ್ದರು. ಗುಜರಾತ್ ನ ರಾಜ್ ಕೋಟ್ ನಲ್ಲಿ ಪಾದಾರ್ಪಣೆಯ ಅಂತಾರಾಷ್ಟ್ರೀಯ ಟೆಸ್ಟ್ ನಲ್ಲಿ ವಿಂಡೀಸ್ ಎದುರು 134 ರನ್ ಬಾರಿಸಿದ್ದರು.

1,418 ರನ್

1,418 ರನ್

ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ 14 ಪಂದ್ಯಗಳಲ್ಲಿ 1,418 ಸಾಧನೆ ಹೊಂದಿರುವ ಪೃಥ್ವಿ 188 ಅಧಿಕ ರನ್ ನೊಂದಿಗೆ 76.69 ಬ್ಯಾಟಿಂಗ್ ಸ್ಟೈಕ್ ರೇಟ್ ಹೊಂದಿದ್ದಾರೆ. 7 ಶತಕ, 5 ಅರ್ಧ ಶತಕಗಳನ್ನು ಮಾಡಿದ್ದಾರೆ. ಅದೇ ಟಿ20ಯಲ್ಲಿ 9 ಪಂದ್ಯಗಳಿಂದ 245 ರನ್ ಸಾಧನೆ ಮಾಡಿದ್ದಾರೆ.

18ರಲ್ಲಿ ಐದನೆಯವ

18ರಲ್ಲಿ ಐದನೆಯವ

18ರ ಹರೆಯದವರಾಗಿರುವ ಮಹಾರಾಷ್ಟ್ರದ ಆಟಗಾರ ಪೃಥ್ವಿ, ಟೆಸ್ಟ್ ಶತಕ ಗಳಿಸಿದ ಎರಡನೇ ಕಿರಿಯ ಭಾರತೀಯ ಕೀರ್ತಿಗೂ ಪಾತ್ರರಾಗಿದ್ದಾರೆ. 18ನೇ ಹರೆಯದವರಾಗಿ ಚೊಚ್ಚಲ ಅಂತಾರಾಷ್ಟ್ರೀಯ ಟೆಸ್ಟ್ ಆಡಿದ ಭಾರತದ ಐದನೇ ಬ್ಯಾಟ್ಸ್ಮನ್ ಆಗಿ ಪೃಥ್ವಿ ಗುರುತಿಸಿಕೊಂಡಿದ್ದಾರೆ. ಈ ಸಾಲಿನಲ್ಲಿ ಮಿಲ್ಖಾ ಸಿಂಗ್ (1960), ಬಿಎಸ್ ಚಂದ್ರಶೇಖರ್ (1964), ಇಶಾಂತ್ ಶರ್ಮಾ (2007), ರವಿ ಶಾಸ್ತ್ರಿ (1981), ಚೇತನ್ ಶರ್ಮಾ (1984) ಇದ್ದಾರೆ.

ಭರ್ಜರಿ 261 ರನ್

ಭರ್ಜರಿ 261 ರನ್

ಐಸಿಸಿ ಅಂಡರ್-19 ವರ್ಲ್ಡ್ ಕಪ್ ನಲ್ಲಿ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ 8 ಭರ್ಜರಿ ಜಯ ಸಾಧಿಸಿತ್ತು. ಟೂರ್ನಿಯಲ್ಲಿ ಪೃಥ್ವಿ ಬರೋಬ್ಬರಿ 261 (94, 57, 40, 41, 29) ರನ್ ಕಲೆ ಹಾಕಿದ್ದರು. ಈ ವೇಳೆ ಪೃಥ್ವಿ ಎಲ್ಲಾ ಕ್ರಿಕೆಟ್ ಪ್ರೇಮಿಗಳ ಗಮನ ಸೆಳೆದಿದ್ದರು.

ತಲೆ ಕೆಡಿಸಿಕೊಳ್ಳೋಲ್ಲ

ತಲೆ ಕೆಡಿಸಿಕೊಳ್ಳೋಲ್ಲ

ತನ್ನ ಬ್ಯಾಟಿಂಗ್ ಗುಟ್ಟನ್ನು ಬಿಚ್ಚಿಟ್ಟಿದ್ದ ಪೃಥ್ವಿ, 'ನಾನು ಬ್ಯಾಟಿಂಗ್ ಗೆ ಹೋಗುವಾಗ ಖಾಲಿ ತಲೆಯೊಂದಿಗೆ ಹೋಗುತ್ತೇನೆ. ಯಾವತ್ತೂ ನಾನು ಮುಂಚಿತವಾಗಿ ಯೋಜನೆ ಹಾಕಿಕೊಳ್ಳುವ ಗೋಜಿಗೆ ಹೋಗೋಲ್ಲ. ಆದರೆ ಬ್ಯಾಟ್ ಕೈಗೆತ್ತಿಕೊಂಡ ಮೇಲೆ ವಿಕೆಟ್ ಗಮನಿಸುತ್ತೇನೆ. ಅನಂತರ ಎಸೆತ ಗಮನಿಸಿ ಅದಕ್ಕೆ ತಕ್ಹಾಗೆ ಆಡುತ್ತಾ ಹೋಗುತ್ತೇನೆ' ಎಂದಿದ್ದರು.

Story first published: Thursday, October 4, 2018, 15:40 [IST]
Other articles published on Oct 4, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X