ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ತನ್ನ ಮೂರು ಬೆಸ್ಟ್ ಆಯ್ಕೆಗಳನ್ನು ಹೆಸರಿಸಿದ ಮಾಜಿ ಆಯ್ಕೆದಾರ ಶ್ರೀಕಾಂತ್

Proud That I Picked Kohli, Ashwin & Vijay As Selector: Kris Srikkanth

ಮಾಜಿ ಆಯ್ಕೆ ಸಮಿತಿಯ ಮುಖ್ಯಸ್ಥ ಕೃಷ್ಣಮಾಚಾರಿ ಶ್ರೀಕಾಂತ್ ತನ್ನ ಅವಧಿಯಲ್ಲಿನ ಆಯ್ಕೆಯ ಬಗ್ಗೆ ಮಾತನಾಡಿದ್ದಾರೆ. ಅದರಲ್ಲು ಪ್ರಮುಖವಾಗಿ ತಾನು ಆಯ್ಕೆ ಮಾಡಿದ ಮೂವರು ಆಟಗಾರರು ತನ್ನ ಆಯ್ಕೆಯನ್ನು ಅದ್ಭುತ ರೀತಿಯಲ್ಲಿ ಸಮರ್ಥಿಸಿಕೊಂಡಿದ್ದು ತನಗೆ ಹೆಮ್ಮೆಯನ್ನು ತಂದುಕೊಟ್ಟಿದೆ ಎಂದು ಹೇಳಿದ್ದಾರೆ.

ಶ್ರೀಕಾಂತ್ ಆಯ್ಕೆ ಸಮಿತಿಯ ಮುಖ್ಯಸ್ಥರಾಗಿ ತಮ್ಮ ಉತ್ತಮ ಆಯ್ಕೆಗಳು ಯಾರು ಎಂಬುದನ್ನು ಬಹಿರಂಗಪಡಿಸಿದ್ದಾರೆ. ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟಿಗ ಮುರುಳಿ ವಿಜಯ್ ಮತ್ತು ಸ್ಪಿನ್ನರ್ ಆರ್ ಅಶ್ವಿನ್ ಆಯ್ಕೆ ನನ್ನ ಬೆಸ್ಟ್ ಆಯ್ಕೆಗಳು ಎಂದು ಶ್ರೀಕಾಂತ್ ಹೇಳಿದ್ದಾರೆ.

ಸೆಹ್ವಾಗ್ ಜಿಮ್‌ಗೆ ಹೋಗದಿರಲು ನೀಡುತ್ತಿದ್ದ ತಮಾಷೆಯ ಕಾರಣ ಹೇಳಿದ ಜಾನ್‌ರೈಟ್ಸೆಹ್ವಾಗ್ ಜಿಮ್‌ಗೆ ಹೋಗದಿರಲು ನೀಡುತ್ತಿದ್ದ ತಮಾಷೆಯ ಕಾರಣ ಹೇಳಿದ ಜಾನ್‌ರೈಟ್

ಈ ಮೂವರು ಆಟಗಾರರು ಅದ್ಭುತವಾಗಿ ಪ್ತದರ್ಶನವನ್ನು ನೀಡಿ ಹೆಮ್ಮೆ ತಂದಿದ್ದಾರೆ. ಈ ಆಟಗಾರರು ಬೆಳೆದ ರೋತಿ ಮತ್ತು ಬೆಳೆಯುತ್ತಿರುವ ರೀತಿಯಿಂದ ನಾನು ಸಂತಸಗೊಂಡಿದ್ದೇನೆ ಎಂದು ಶ್ರೀಕಾಂತ್ ಹೇಳಿದ್ದಾರೆ. ಸ್ಟಾರ್ ಸ್ಪೋರ್ಟ್ಸ್‌ನ ಕ್ರಿಕೆಟ್ ಕನೆಕ್ಟೆಡ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಂದರ್ಭದಲ್ಲಿ ಈ ವಿಚಾರಗಳನ್ನು ಅವರು ಹಂಚಿಕೊಂಡಿದ್ದಾರೆ.

ಇತ್ತೀಚೆಗೆ ಇಂಗ್ಲೆಂಡ್ ಕ್ರಿಕೆಟ್‌ನ ಮಾಜಿ ಆಟಗಾರ ಇಯಾನ್ ಬಾಥಮ್ ಟೀಮ್ಇಂಡಿಯಾವನ್ನು ಮುನ್ನಡೆಸಲು ವಿರಾಟ್ ಕೊಹ್ಲಿ ಅತ್ಯಂತ ಸೂಕ್ತವ್ಯಕ್ತಿ ಎಂದಿದ್ದರು. ಮಾತ್ರವಲ್ಲದೆ ಟೀಮ್ ಇಂಡಿಯಾ ನಾಯಕನ ವಿರುದ್ಧ ಆಡಲು ಬಯಸುವುದಾಗಿ ಅವರು ಹೇಳಿಕೊಂಡಿದ್ದರು.

ರೋಹಿತ್‌ಗೆ ಟಿ20 ನಾಯಕನ ಪಟ್ಟ ಕೂಗು: ಈಗ ಬೇಡ ಎಂದ ಚೇತನ್ ಶರ್ಮಾರೋಹಿತ್‌ಗೆ ಟಿ20 ನಾಯಕನ ಪಟ್ಟ ಕೂಗು: ಈಗ ಬೇಡ ಎಂದ ಚೇತನ್ ಶರ್ಮಾ

ತನ್ನ ಆಟಗಾರರ ಪರವಾದ ನಿಲುವುಗಳನ್ನು ವಿರಾಟ್ ತೆಗೆದುಕೊಳ್ಳುತ್ತಾರೆ. ಆ ಮೂಲಕ ಎದುರಾಳಿಗಳಿಂದ ಆಟವನ್ನು ಕಸಿದುಕೊಳ್ಳುತ್ತಾರೆ. ಆತನ ವಿರುದ್ಧವಾಗಿ ಆಟಲು ನಾನು ಇಷ್ಟಪಡುತ್ತೇನೆ. ಭಾರತ ತಂಡವನ್ನು ಮುನ್ನಡೆಸಲು ವಿರಾಟ್ ಸೂಕ್ತ ವ್ಯಕ್ತಿ ಎಂದು ಹೇಳಿಕೆಯನ್ನು ನೀಡಿದ್ದರು.

Story first published: Sunday, May 31, 2020, 13:10 [IST]
Other articles published on May 31, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X