ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವದ ಬೃಹತ್ ಸ್ಟೇಡಿಯಮ್‌ನಲ್ಲಿ ಕ್ರಿಕೆಟ್ ಆಡಲು ವಿರಾಟ್ ಕೊಹ್ಲಿ ಉತ್ಸುಕ

Proud to have the biggest cricket stadium in India and excited to play there- Virat Kohli

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಮೂರನೇ ಟೆಸ್ಟ್ ಪಂದ್ಯವನ್ನು ಟೀಮ್ ಇಂಡಿಯಾ ಹಾಗೂ ಇಂಗ್ಲೆಂಡ್ ತಂಡಗಳು ಸಜ್ಜಾಗಿದೆ. ಮೂರನೇ ಟೆಸ್ಟ್ ಪಂದ್ಯ ವಿಶ್ವದ ಅತಿ ದೊಡ್ಡ ಕ್ರಿಕೆಟ್ ಸ್ಟೇಡಿಯಮ್ ಎನಿಸಿರುವ ಮೊಟೇರಾ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಬಗ್ಗೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸಂತಸವನ್ನು ವ್ಯಕ್ತಪಡಿಸಿದ್ದಾರೆ.

"ವಿಶ್ವದ ಅತ್ಯಂತ ಬೃಹತ್ ಕ್ರಿಕೆಟ್ ಸ್ಟೇಡಿಯಂ ನಾವು ಹೊಂದಿದ್ದೇವೆ ಎಂಬುದಕ್ಕೆ ಹೆಮ್ಮೆಯೆನಿಸುತ್ತದೆ. ಕ್ರೀಡಾಂಗಣದಲ್ಲಿರುವ ಮೂಲಸೌಕರ್ಯಗಳು ಕೂಡ ಬಹಳ ಅದ್ಭುತವಾಗಿದೆ. ಇಲ್ಲಿ ಆಡುವುದಕ್ಕೆ ನಿಜಕಕ್ಊ ಉತ್ಸುಕನಾಗಿದ್ದೇನೆ" ಎಂದು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

ಆನ್‌ಫೀಲ್ಡ್ ಪ್ರದರ್ಶನ ಹೊರತು ಕ್ರೀಡೆ ಮತ್ತೇನೂ ಗುರುತಿಸಲಾರದು: ಸಚಿನ್ಆನ್‌ಫೀಲ್ಡ್ ಪ್ರದರ್ಶನ ಹೊರತು ಕ್ರೀಡೆ ಮತ್ತೇನೂ ಗುರುತಿಸಲಾರದು: ಸಚಿನ್

ಮೊಟೇರಾ ಕ್ರಿಕೆಟ್ ಸ್ಟೇಡಿಯಮ್ ಎಂದೇ ಖ್ಯಾತವಾಗಿರುವ ಈ ಕ್ರೀಡಾಂಗಣ 1,10,000 ಪ್ರೇಕ್ಷಕರ ಸಾಮರ್ಥ್ಯವನ್ನು ಹೊಂದಿದೆ. ಇದರಲ್ಲಿ ನಾಲ್ಕು ಡ್ರೆಸ್ಸಿಂಗ್ ರೂನ್‌ಗಳು ಇದೆ. ಈ ಹಿಂದೆ ವಿಶ್ವದ ಅತ್ಯಂತ ಬೃಹತ್ ಸ್ಟೇಡಿಯಮ್ ಎಂಬ ಖ್ಯಾತಿ ಮೆಲ್ಬೋರ್ನ್ ಕ್ರಿಕೆಟ್ ಸ್ಟೇಡಿಮ್‌ಗೆ ಇತ್ತು. ಮೆಲ್ಬೋರ್ನ್ ಸ್ಟೇಡಿಯಮ್ ಒಂದು ಲಕ್ಷ ಪ್ರೇಕ್ಷಕರ ಸಾಮರ್ಥ್ಯವನ್ನು ಹೊಂದಿದೆ.

ಇನ್ನು ಮೂರನೇ ಟೆಸ್ಟ್ ಪಂದ್ಯಕ್ಕೂ 50 ಶೇಕಡಾದಷ್ಟು ಪ್ರೇಕ್ಷಕರಿಗೆ ಅವಕಾಶವನ್ನು ನೀಡಲಾಗಿದೆ. ಹೀಗಾಗಿ 55,000ದಷ್ಟು ಪ್ರೇಕ್ಷಕರು ನಿತ್ಯವೂ ಕ್ರಿಕೆಟ್ ವೀಕ್ಷಿಸಲು ಅವಕಾಶವಿದೆ. ಬುಧವಾರ ದಿಂದ ಆರಂಭವಾಗವ ಈ ಪಂದ್ಯ ಅಹರ್ನಿಶಿಯಾಗಿ ನಡೆಯಲಿದೆ.

'ಆರ್ ಅಶ್ವಿನ್ ವೈಟ್ ಬಾಲ್ ಕ್ರಿಕೆಟ್‌ನ ಭಾಗವಾಗದಿರುವುದು ದುರದೃಷ್ಟಕರ''ಆರ್ ಅಶ್ವಿನ್ ವೈಟ್ ಬಾಲ್ ಕ್ರಿಕೆಟ್‌ನ ಭಾಗವಾಗದಿರುವುದು ದುರದೃಷ್ಟಕರ'

ಪ್ರೇಕ್ಷಕರ ಆಗಮನಕ್ಕೂ ವಿರಾಟ್ ಕೊಹ್ಲಿ ಸಂಭ್ರಮವನ್ನು ವ್ಯಕ್ತಡಿಸಿದ್ದಾರೆ. "ಪ್ರೇಕ್ಷಕರ ಹಾಜರಾತಿ ದೊಡ್ಡ ವ್ಯತ್ಯಾಸವನ್ನು ಉಂಟುಮಾಡಲಿದೆ. ವಿದೇಶಗಳಲ್ಲಿ ಆಡುವಾಗ ನಾವು ಒತ್ತಡವನ್ನು ಅನುಭವಿಸಿದ್ದೆವು. ಮುಂಬರುವ ಟೆಸ್ಟ್ ಪಂದ್ಯಗಳಲ್ಲಿ ಉತ್ತಮ ಬೆಂಬಲ ದೊರೆಯುವ ನಿರೀಕ್ಷೆಯಲ್ಲಿದ್ದೇವೆ" ಎಂದಿದ್ದಾರೆ ವಿರಾಟ್ ಕೊಹ್ಲಿ.

Story first published: Wednesday, February 24, 2021, 23:11 [IST]
Other articles published on Feb 24, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X