ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಶಾಹಿದ್ ಅಫ್ರಿದಿಗೆ ಕೈ ಮುಗಿದ ಹ್ಯಾರಿಸ್ ರೌಫ್: ವೈರಲ್ ವಿಡಿಯೋ

PSL 2020: Haris Rauf apologises to Shahid Afridi for getting him out for duck

ಕರಾಚಿ: ಭಾನುವಾರ (ನವೆಂಬರ್ 15) ನಡೆದ ಪಾಕಿಸ್ತಾನ್ ಸೂಪರ್ ಲೀಗ್‌ ದ್ವಿತೀಯ ಎಲಿಮಿನೇಟರ್ ಪಂದ್ಯದಲ್ಲಿ ಲಾಹೋರ್ ಕಲಂದರ್‌ ವೇಗಿ ಹ್ಯಾರಿಸ್ ರೌಫ್ ವಿಶೇಷ ನಡೆಗಾಗಿ ಗಮನ ಸೆಳೆದರು. ರೌಫ್ ಅವರು ಪಾಕ್ ಮಾಜಿ ಆಲ್ ರೌಂಡರ್ ಶಾಹಿದ್ ಅಫ್ರಿದಿಗೆ ಕೈ ಮುಗಿದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿದೆ.

ಭಾರತ-ಆಸ್ಟ್ರೇಲಿಯಾ: ಬರಿಗಾಲ ವೃತ್ತ ರಚಿಸಲಿದ್ದಾರೆ ಆಸೀಸ್ ಆಟಗಾರರುಭಾರತ-ಆಸ್ಟ್ರೇಲಿಯಾ: ಬರಿಗಾಲ ವೃತ್ತ ರಚಿಸಲಿದ್ದಾರೆ ಆಸೀಸ್ ಆಟಗಾರರು

ಎಲಿಮಿನೇಟರ್ 2 ಪಂದ್ಯದಲ್ಲಿ ಲಾಹೋರ್ ಕಲಂದರ್ ಮತ್ತು ಮುಲ್ತಾನ್ ಸುಲ್ತಾನ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ವೇಳೆ ಮುಲ್ತಾನ್ ಇನ್ನಿಂಗ್ಸ್‌ನಲ್ಲಿ ಏಳನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಂದಿದ್ದ ಶಾಹಿದ್ ಅಫ್ರಿದಿ, ಕಲಂದರ್ ವೇಗಿ ಹ್ಯಾರಿಸ್ ರೌಫ್ ಎಸೆತಕ್ಕೆ ಡಕ್ ಔಟ್ ಆಗಿ ನಿರ್ಮಿಸಿದರು.

ಟಿ20 ವಿಶ್ವಕಪ್ ಮುಂದೂಡಿಕೆ: ಫುಡ್ ಡೆಲಿವರಿ ಬಾಯ್ ಆಗಿದ್ದಾರೆ ಮೀಕೆರೆನ್ಟಿ20 ವಿಶ್ವಕಪ್ ಮುಂದೂಡಿಕೆ: ಫುಡ್ ಡೆಲಿವರಿ ಬಾಯ್ ಆಗಿದ್ದಾರೆ ಮೀಕೆರೆನ್

ತನ್ನ ಮೊದಲ ಎಸೆತಕ್ಕೆ ಅಫ್ರಿದಿ 0ಗೆ ವಿಕೆಟ್ ಒಪ್ಪಿಸುತ್ತಲೇ ರೌಫ್ ಶಾಹಿದ್‌ಗೆ ಕೈ ಮುಗಿದು ನಗುತ್ತ ಕ್ಷಮಿಸಲು ಕೇಳಿದ್ದರು. ಪಾಕ್ ದಂತಕತೆ ಅಫ್ರಿದಿಯನ್ನು ಮೊದಲ ಎಸೆತಕ್ಕೆ ಔಟ್ ಮಾಡಿದ್ದಕ್ಕೆ ಅಫ್ರಿದಿಗೆ ಮುಖಭಂಗ ಆಗಿರಬಹುದು ಎಂಬ ಕಾರಣಕ್ಕೆ ರೌಫ್ ಕೈ ಮುಗಿದು ಕ್ಷಮೆಯಾಚಿಸುವ ಮೂಲಕ ಪಾಕ್ ದಂತಕತೆಯ ಬಗ್ಗೆ ತನಗಿರುವ ಪ್ರೀತಿ-ಗೌರವ ತೋರಿಕೊಂಡಿದ್ದರು.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಲಾಹೋರ್ ಕಲಂದರ್, ಫಖರ್ ಝಮಾನ್ 46, ತಮೀಮ್ ಇಕ್ಬಾಲ್ 30, ಡೇವಿಡ್ ವೈಸ್ 48 ರನ್‌ನೊಂದಿಗೆ 20 ಓವರ್‌ಗೆ 6 ವಿಕೆಟ್ ಕಳೆದು 182 ರನ್ ಗಳಿಸಿತ್ತು. ಗುರಿ ಬೆನ್ನಟ್ಟಿದ ಮುಲ್ತಾನ್ ಸುಲ್ತಾನ್ಸ್, ಆ್ಯಡಮ್ ಲಿಥ್ 50 ರನ್‌ ಹೊರತಾಗಿಯೂ 19.1 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 157 ರನ್ ಬಾರಿಸಿ ಶರಣಾಯಿತು. ಫೈನಲ್ ಪಂದ್ಯದಲ್ಲಿ ಕರಾಚಿ ಮತ್ತು ಲಾಹೋರ್ ಕಾಡಾಡಲಿವೆ.

Story first published: Tuesday, November 17, 2020, 9:49 [IST]
Other articles published on Nov 17, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X