ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪಿಎಸ್ಎಲ್ 2022: ಟೂರ್ನಿ ಆರಂಭವಾಗುವುದಕ್ಕೂ ಮುನ್ನವೇ ಹೊರಬಿದ್ದ ಶಾಹಿದ್ ಅಫ್ರಿದಿ

PSL 2022: Star player Shahid Afridi tests positive for Covid 19

ಪಾಕಿಸ್ತಾನ್ ಸೂಪರ್ ಲೀಗ್ ಎಂಟನೇ ಆವೃತ್ತಿ ಇಂದಿನಿಂದ ( ಜನವರಿ 27 ) ಆರಂಭಗೊಂಡಿದೆ. ಈ ಬಾರಿಯ ಪಾಕಿಸ್ತಾನ್ ಸೂಪರ್ ಲೀಗ್ ಟೂರ್ನಿಯ ಪ್ರಥಮ ಪಂದ್ಯ ಕರಾಚಿ ಕಿಂಗ್ಸ್ ಮತ್ತು ಮುಲ್ತಾನ್ ಸುಲ್ತಾನ್ಸ್ ತಂಡಗಳ ನಡುವೆ ನಡೆಯುತ್ತಿದೆ. ಇತ್ತಂಡಗಳ ನಡುವಿನ ಈ ಉದ್ಘಾಟನಾ ಪಂದ್ಯ ಕರಾಚಿಯ ನ್ಯಾಶನಲ್ ಕ್ರೀಡಾಂಗಣದಲ್ಲಿ ಆರಂಭಗೊಂಡಿದ್ದು, ವರ್ಣರಂಜಿತ ಕಾರ್ಯಕ್ರಮಗಳ ಜತೆಗೆ ಸಿಡಿಮದ್ದುಗಳನ್ನು ಸಿಡಿಸಿ ಟೂರ್ನಿಗೆ ಚಾಲನೆಯನ್ನು ನೀಡಲಾಗಿದೆ.

ಹೀಗೆ ಒಂದೆಡೆ ಕರಾಚಿಯ ನ್ಯಾಶನಲ್ ಕ್ರೀಡಾಂಗಣದಲ್ಲಿ ಈ ಬಾರಿಯ ಪಾಕಿಸ್ತಾನ್ ಸೂಪರ್ ಲೀಗ್ ಟೂರ್ನಿಯನ್ನು ವಿಜೃಂಬಣೆಯಿಂದ ಆರಂಭಿಸಿದ್ದರೆ, ಈ ಸಂಭ್ರಮಕ್ಕೂ ಮುನ್ನ ಪಾಕಿಸ್ತಾನ್ ಸೂಪರ್ ಲೀಗ್ ಟೂರ್ನಿಗೆ ಹಿನ್ನಡೆಯಾಗುವಂತಹ ಘಟನೆಗಳು ನಡೆದಿವೆ. ಹೌದು, ಟೂರ್ನಿ ಆರಂಭಕ್ಕೂ ಮುನ್ನ ಪಾಕಿಸ್ತಾನದ ಖ್ಯಾತ ಆಟಗಾರ ಶಾಹಿದ್ ಅಫ್ರಿದಿ ಕೊರೋನಾ ವೈರಸ್ ಸೋಂಕಿಗೆ ಒಳಗಾಗಿದ್ದಾರೆ. ಇದಕ್ಕೂ ಮುನ್ನ ಟೂರ್ನಿಯ ಕೆಲ ಆಟಗಾರರು ಮತ್ತು ಸಿಬ್ಬಂದಿ ವರ್ಗದವರು ಸೇರಿದಂತೆ ಒಟ್ಟು 8 ಜನರಲ್ಲಿ ಕೊರೋನಾವೈರಸ್ ಕಾಣಿಸಿಕೊಂಡು ಆತಂಕವನ್ನು ಮೂಡಿಸಿತ್ತು.

ಧೋನಿಯೇ ಐಪಿಎಲ್‌ನ ಶ್ರೇಷ್ಠ ನಾಯಕ, ನಾನು ಸಿಎಸ್‌ಕೆ ಪರ ಆಡಬೇಕು ಎಂದ ಆರ್‌ಸಿಬಿಯ ಸ್ಟಾರ್ ಆಟಗಾರ!ಧೋನಿಯೇ ಐಪಿಎಲ್‌ನ ಶ್ರೇಷ್ಠ ನಾಯಕ, ನಾನು ಸಿಎಸ್‌ಕೆ ಪರ ಆಡಬೇಕು ಎಂದ ಆರ್‌ಸಿಬಿಯ ಸ್ಟಾರ್ ಆಟಗಾರ!

ಇನ್ನು ಕೊರೋನಾವೈರಸ್ ಸೋಂಕಿಗೆ ಒಳಗಾಗಿರುವ ಶಾಹಿದ್ ಅಫ್ರಿದಿ ಈ ಬಾರಿಯ ಪಾಕಿಸ್ತಾನ್ ಸೂಪರ್ ಲೀಗ್ ಟೂರ್ನಿಯಲ್ಲಿ ಕ್ವೆಟ್ಟಾ ಗ್ಲೇಡಿಯೇಟರ್ಸ್ ತಂಡದ ಪರ ಕಣಕ್ಕಿಳಿಯಬೇಕಿತ್ತು. ಗುರುವಾರ ಬೆಳಿಗ್ಗೆ ಬೆನ್ನು ನೋವು ಕಾಣಿಸಿಕೊಂಡ ಕಾರಣ ಶಾಹಿದ್ ಅಫ್ರಿದಿ ವೈದ್ಯಕೀಯ ಪರೀಕ್ಷೆಗೆ ಒಳಗಾಗಿದ್ದು, ಈ ಸಂದರ್ಭದಲ್ಲಿ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇನ್ನು ಪಾಕಿಸ್ತಾನ್ ಸೂಪರ್ ಲೀಗ್ ನಿಯಮದ ಪ್ರಕಾರ ಯಾವುದೇ ಆಟಗಾರ ಕೊರೋನಾವೈರಸ್ ಸೋಂಕಿಗೆ ಒಳಗಾದರೆ 7 ದಿನಗಳ ಐಸೋಲೇಷನ್ ನಿಯಮವನ್ನು ಅನುಸರಿಸಬೇಕಾಗಿದ್ದು, ಶಾಹಿದ್ ಅಫ್ರಿದಿ ಕೂಡಾ ಇದೀಗ ಐಸೋಲೇಷನ್ ಅನುಸರಿಸುತ್ತಿದ್ದಾರೆ.

ಲೆಜೆಂಡ್ಸ್ ಲೀಗ್: ಇಂಡಿಯಾ ಮಹಾರಾಜಾಸ್‌ಗೆ ಇವರದ್ದೇ ತಲೆನೋವು; ಫೈನಲ್ ತಲುಪಲು ಇದೊಂದೇ ದಾರಿ!ಲೆಜೆಂಡ್ಸ್ ಲೀಗ್: ಇಂಡಿಯಾ ಮಹಾರಾಜಾಸ್‌ಗೆ ಇವರದ್ದೇ ತಲೆನೋವು; ಫೈನಲ್ ತಲುಪಲು ಇದೊಂದೇ ದಾರಿ!

Sachin ಪ್ರಕಾರ Rohit Sharma ಮತ್ತು Dravid ಮಾಡ್ಬೇಕಾಗಿರೋದೇನು? | Oneindia Kannada

ಅಷ್ಟೇ ಅಲ್ಲದೆ ಐಸೋಲೇಷನ್ ಮುಕ್ತಾಯವಾದ ನಂತರ ಶಾಹಿದ್ ಅಫ್ರಿದಿ ಕೊರೋನಾವೈರಸ್ ನೆಗೆಟಿವ್ ವರದಿ ತಂದರೆ ಮಾತ್ರ ಕ್ವೆಟ್ಟಾ ಗ್ಲಾಡಿಯೇಟರ್ಸ್ ಬಯೋ ಬಬಲ್ ಸೇರ್ಪಡೆಗೆ ಅನುಮತಿ ಸಿಗಲಿದೆ. ಇನ್ನು ಕ್ವೆಟ್ಟಾ ಗ್ಲಾಡಿಯೇಟರ್ಸ್ ಈ ಬಾರಿಯ ಪಾಕಿಸ್ತಾನ್ ಸೂಪರ್ ಲೀಗ್ ಟೂರ್ನಿಯಲ್ಲಿನ ತನ್ನ ಚೊಚ್ಚಲ ಪಂದ್ಯವನ್ನು ಜನವರಿ 28ರಂದು ಪೇಶಾವರ್ ಜಲ್ಮಿ ವಿರುದ್ಧ ಆಡಲಿದ್ದು, ಪೇಶಾವರ್ ಜಲ್ಮಿ ತಂಡದ ಕೆಲ ಆಟಗಾರರು ಕೂಡ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ತಂಡದ ನಾಯಕ ವಹಾಬ್ ರಿಯಾಜ್ ಮತ್ತು ಸ್ಫೋಟಕ ಆಟಗಾರ ಹೈದರ್ ಅಲಿ ಕೊರೊನಾ ಸೋಂಕಿಗೆ ಒಳಗಾಗಿದ್ದು ಚೊಚ್ಚಲ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಹೀಗೆ ಒಂದೆಡೆ ಪಾಕಿಸ್ತಾನ್ ಸೂಪರ್ ಲೀಗ್ ಆರಂಭಕ್ಕೂ ಮುನ್ನವೇ ಕೊರೊನಾ ಸ್ಪೋಟಕ್ಕೆ ನಲುಗಿದ್ದು, ಅತ್ತ ಆಸ್ಟ್ರೇಲಿಯಾದ ಬಿಗ್ ಬ್ಯಾಶ್ ಲೀಗ್ ಕ್ರಿಕೆಟ್ ಟೂರ್ನಮೆಂಟ್ ಕೂಡ ಕೊರೊನಾ ವೈರಸ್ ನಡುವೆಯೇ ಸಾಕಷ್ಟು ಏಳುಬೀಳುಗಳನ್ನು ಕಂಡು ಇದೀಗ ಫೈನಲ್ ಹಂತದವರೆಗೂ ಕೂಡ ಬಂದು ತಲುಪಿದೆ.

Story first published: Thursday, January 27, 2022, 21:39 [IST]
Other articles published on Jan 27, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X